ಒಂದು ಕೆ.ಜಿ. ಟೊಮಟೊ ಬೆಲೆ 110 ರೂಪಾಯಿ ದಾಟಿದೆ. ಕೆಲವು ಕಡೆ 130 ದಾಟಿದೆ. ಸಾಮಾನ್ಯವಾಗಿ ಯಾವುದೇ ಬೆಲೆ ಏರಿಕೆಯಾದಾಗಲೂ ಸಾಮಾಜಿಕ ಮಾಧ್ಯಮಗಳಲ್ಲಿ ‘ಟ್ರಾಲ್‌’ಗಳಾಗುತ್ತವೆ. ಈಗ ಟೊಮಟೊ ಟ್ರಾಲ್‌‌ಗೆ ಗುರಿಯಾಗಿದ್ದು, ಜನರು ತರಹೇವಾರಿ ಮೀಮ್ಸ್‌‌ ಮಾಡಿದ್ದಾರೆ.

ಟೊಮಟೊ ಬೆಲೆಯು ಪೆಟ್ರೋಲ್‌, ಡೀಸೆಲ್‌‌ ಬೆಲೆಯನ್ನು ಹಿಂದಿಕ್ಕಿದೆ ಎಂಬ ಟ್ರೋಲ್‌ನಿಂದ ಹಿಡಿದು, ನಿತ್ಯದ ಬದುಕಿನಿಂದ ಟೊಮಟೊ ದೂರವಾಗುತ್ತಿದೆ ಎಂಬುವವರೆಗೂ ಟ್ರಾಲ್‌‌ಗಳು ಹಬ್ಬಿವೆ.

ಇಂಡಿಯಾ ಟುಡೇ ವಾಹಿನಿಯು ‘ಟೊಮಟೊ ಲೋನ್‌’ ಎಂಬ ಕಾಮಿಕ್‌ ಸೃಷ್ಟಿಸಿದ್ದು, ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಪೆಟ್ರೋಲ್‌, ಡೀಸೆಲ್‌ಗಿಂತ ಟೊಮಟೊ ಬೆಲೆ ಹೆಚ್ಚಾಗಿದೆ ಎಂಬುದನ್ನು ಬಿಂಬಿಸುವ ಹಲವು ಮೀಮ್‌‌ಗಳು ಹರಿದಾಡಿವೆ. ಅದರಲ್ಲಿ ಕೆಲವು ಹೀಗಿವೆ:

ಈ ಹಿಂದೆ ಈರುಳ್ಳಿ ಬೆಲೆ ಏರಿಕೆಯಾದಾಗ ಅರ್ಥಸಚಿವೆ ನಿರ್ಮಲಾ ಸೀತರಾಮನ್‌ ಅವರು, ‘ನಾನು ಈರುಳ್ಳಿ ಬಳಸುವುದಿಲ್ಲ’ ಎಂದಿದ್ದನ್ನು ಈಗ ಮೀಮ್‌ಗೆ ಬಳಸಲಾಗಿದೆ. “ನಾನು ಬಳಸುವುದಿಲ್ಲ ಟೊಮಟೊ, ನನ್ನ ಊಟವನ್ನು ಆರ್ಡರ್‌ ಮಾಡಲಿಕ್ಕಿದೆ ಝೊಮೊಟೊ’ ಎಂದು ಟ್ರಾಲ್‌ ಮಾಡಲಾಗಿದೆ.

ಟೊಮಟೊ ಬೆಲೆ ಗಗನಕ್ಕೇರಿದೆ ಎಂಬುದನ್ನು, ‘ಜ್ಯುವೆಲರಿ’ಗಳಿಗೆ ಹೋಲಿಕೆ ಮಾಡಲಾಗಿದೆ. ‘ಬೆಸ್ಟ್‌ ಪ್ರಪೊಸಲ್‌ ರಿಂಗ್‌’, ‘ಅತ್ಯಂತ ಬೆಲೆಬಾಳುವ ವೆಡ್ಡಿಂಗ್ ರಿಂಗ್‌’ ಎಂದೆಲ್ಲ ಬಿಂಬಿಸಲಾಗಿದೆ.

‘ಧೂಮ್’ ಚಿತ್ರದಲ್ಲಿ ರಿತ್ವಿಕ್‌ ರೋಷನ್‌ ಡೈಮಂಡ್ ಕದಿಯುವುದನ್ನು, ಟೊಮೊಟೊ ಕದಿಯುತ್ತಿರುವಂತೆ ಮೀಮ್‌ ಮಾಡಲಾಗಿದೆ.

ಫೇಸ್‌ಬುಕ್‌ ಬಳಕೆದಾರ, ಸಿನಿಮಾ ವಿಮರ್ಶಕ ಎಲ್‌.ಎಂ.ಸಂತೋಷ್‌ಕುಮಾರ್‌‌ ಅವರು ಸರಣಿಯಾಗಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

“ಪ್ರತಿಷ್ಟಿತ ಬಡಾವಣೆಯಮನೆಯೊಂದರ ಮೇಲೆ ಐಟಿ ಇಲಾಖೆ ದಾಳಿ, ಅಕ್ರಮವಾಗಿಕುಂಡಗಳಲ್ಲಿ ಟೊಮೆಟೋ ಬೆಳೆದುಮಾರುತ್ತಿದ್ದವರ ಬಂಧನ….(ಈ ಥರಾನೂ ಇನ್ನು ಮುಂದೆ ಸುದ್ದಿ ಬರಬಹುದು)”

“ಇಷ್ಟು ದಿನ… ಮನೆಯಲ್ಲೇ ಕುಂಡಗಳಲ್ಲಿ ಟೊಮೆಟೋ ಬೆಳೆಯುವುದು ಹೇಗೆ? ಅಂತ ವೀಡಿಯೋ ಕಾಣಿಸ್ತಿದ್ವು. ಇನ್ನು ಮೇಲೆ.. ಕುಂಡಗಳಲ್ಲಿ ಬಿಟ್ಟಿರುವ ಟೊಮೆಟೋ ಅನ್ನುಕಳುವಾಗದಿರುವಂತೆ ನೋಡಿಕೊಳ್ಳುವುದು ಹೇಗೆ? ಅಂತಲೂ ವೀಡಿಯೋಗಳು ಬರಬಹುದು”

“ಏನು ಅಡುಗೆ ಹಬ್ಬಕ್ಕೆ? ಏನಿಲ್ಲಪ್ಪ…. ಒಬ್ಬಟ್ಟು, ಕೋಸಂಬರಿ, ಅನ್ನ, ಸಾರು, ಹಪ್ಪಳ ಇನ್ನೇನು ಸ್ಪೆಷಲ್ಲು? !ಟೊಮ್ಯಾಟೊ ಗೊಜ್ಜು!! ಟೊಮ್ಯಾಟೊ ಗೊಜ್ಜಾ?”

“ಎಲ್ಲ ಅಂಗಡಿಗಳಲ್ಲಿ ಮಾಮೂಲಿ ತಗೊತಾ ಬರ್ತಿರ್ತಾನೆ ಒಬ್ಬ ಪೊಲೀಸು….ತರಕಾರಿ ಅಂಗಡಿ ಬಂದಾಗ ಎಂದಿನಂತೆ….. “ಟೊಮೆಟೋ ಹಾಕ್ಬಿಡಮ್ಮ” ಅಂತಾನೆ. ತರಕಾರಿ ಅಂಗಡಿಯವಳು: ಸ್ವಾಮಿ….. ಬೇಕಿದ್ರೆ ದುಡ್ಡು ಕೇಳಿ… ಕೊಟ್ಬಿಡ್ತೀನಿ.. ಟೊಮೆಟೋ ಕೇಳಿ ನಮ್ಮ‌ಹೊಟ್ಟೆ ಮೇಲೆ ಹೊಡೀಬೇಡಿ!!

– ಹೀಗೆ ಸಂತೋಷ್‌ ಕುಮಾರ್‌ ಎಲ್.ಎಂ. ಜೋಕ್‌ಗಳನ್ನು ಬರೆದಿದ್ದಾರೆ.

ಮೂರು ವರ್ಷಗಳ ಹಿಂದೆ ಬೆಲೆ ಏರಿಕೆಯಾದಾಗ ಮಾಡಿದ ಮೀಮ್‌ಅನ್ನು ‘ಇತಿಹಾಸ ಮರುಕಳಿಸಿತು’ ಎಂದು ಪ್ರಶಾಂತ್‌ ಸಾಗರ ಎಂಬವರು ಹಂಚಿಕೊಂಡಿದ್ದಾರೆ.

ಲಕ್ಷ್ಮಣ್‌ ಎಂಬವರು ಹೀಗೆ ಪೋಸ್ಟ್‌ ಮಾಡಿದ್ದಾರೆ: “ಲೋ ಬ್ಯಾಚುಲರ್ಗಳಾ, ಮನೆಗೆ ಪ್ರತಿದಿನ ಎರಡೆರೆಡು ಕೇಜಿ ಟೊಮ್ಯಾಟೋ ತಗಂಡೋಗ್ರಿ, ನಮ್ಮ ಹುಡುಗನಿಗೆ ಜವಾಬ್ದಾರಿ ಬಂದೈತೆ ಅಂತಾ ತಿಳ್ಕಂಡ್ ನಿಮ್ಗೆ ಮದುವೆ ಮಾಡ್ಬೋದ್”


ಇದನ್ನೂ ಓದಿರಿ: ಗದಗ: ಜಂಟಿ ಕೃಷಿ ನಿರ್ದೇಶಕರ ಮನೆ ಮೇಲೆ ಎಸಿಬಿ ದಾಳಿ, 3.5 ಕೋಟಿ ಮೌಲ್ಯದ ಚಿನ್ನ ವಶ

LEAVE A REPLY

Please enter your comment!
Please enter your name here