ಕೊರೊನಾ ಲಸಿಕೆಯನ್ನು ದೇಶದ ಜನರಿಗೆ ಉಚಿತವಾಗಿ ನೀಡುವುದಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಘೋಷಿಸಿದ ಬೆನ್ನಲ್ಲೇ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ‘ನಾವು ಕೊರೊನಾ ಲಸಿಕೆ ತೆಗೆದುಕೊಳ್ಳುವುದಿಲ್ಲ, ನನಗೆ ಬಿಜೆಪಿ ಮೇಲೆ ನಂಬಿಕೆ ಇಲ್ಲ’ ಎಂದಿದ್ದಾರೆ.
ಶನಿವಾರ ದೇಶದ 116 ಜಿಲ್ಲೆಗಳಲ್ಲಿ ಎರಡನೇ ಹಂತದ ಕೊರೊನಾ ಲಸಿಕೆ ಡ್ರೈ ರನ್ ನಡೆಯುತ್ತಿದೆ. ಶುಕ್ರವಾರ ಆಕ್ಸ್‌ಫರ್ಡ್ ಕೊರೊನಾ ಲಸಿಕೆಗೆ ತಜ್ಞರ ಸಮಿತಿ ಹಸಿರು ನಿಶಾನೆ ನಿಡಿದೆ. ಈ ಸಮಯದಲ್ಲಿ ಅಖಿಲೇಶ್ ಯಾದವ್ ಅವರ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ರೈತರು ಈ ದೇಶದ ಹೆಮ್ಮೆ, ಅವರನ್ನು ಬಿಜೆಪಿಯವರು ಅವಮಾನಿಸಬೇಡಿ: ಅಖಿಲೇಶ್ ಯಾದವ್
I am not going to get vaccinated for now. How can I trust BJP's vaccine, when our government will be formed everyone will get free vaccine. We cannot take BJP's vaccine: Samajwadi Party chief Akhilesh Yadav#COVID19 pic.twitter.com/qnmGENzUBH
— ANI UP (@ANINewsUP) January 2, 2021
ನಾನು ಸದ್ಯಕ್ಕೆ ಲಸಿಕೆ ತೆಗೆದುಕೊಳ್ಳಲು ಹೋಗುತ್ತಿಲ್ಲ. ಬಿಜೆಪಿಯ ಲಸಿಕೆಯನ್ನು ನಾನು ಹೇಗೆ ನಂಬಲಿ ಎಂದು ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ. ನಮ್ಮ ಸರ್ಕಾರ ರಚನೆಯಾದಾಗ ಎಲ್ಲರಿಗೂ ಉಚಿತ ಲಸಿಕೆ ಸಿಗುತ್ತದೆ. ನಾವು ಬಿಜೆಪಿಯ ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ, ಇಷ್ಟು ದಿನ ಚಪ್ಪಾಳೆ ಹೊಡೆಯಿರಿ, ಗಂಟೆ ಬಾರಿಸಿ ಎನ್ನುತ್ತಿದ್ದವರು ಈಗ ಲಸಿಕೆ ವಿತರಣೆಗಾಗಿ ಇಷ್ಟೊಂದು ಕಷ್ಟ ಪಡುತ್ತಿರುವುದು ಏತಕ್ಕೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿ ಗಮನ ಸೆಳೆದ ಹೋರಾಟಗಾರರು
ಮುಂದುವರಿದು, ಚಪ್ಪಾಳೆ ಮತ್ತು ತಟ್ಟೆ ಬಾರಿಸಿ ಕೊರೊನಾ ಓಡಿಸಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಅಖಿಲೇಶ್ ವ್ಯಂಗ್ಯವಾಡಿದ್ದಾರೆ.
ವಿವಾದಿತ ಕೃಷಿ ಮಸೂದೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿರುವ ಅಖಿಲೇಶ್ ಯಾದವ್, “ರೈತರು ದೇಶದ ಹೆಮ್ಮೆ. ಬಿಜೆಪಿಯವರು ಪ್ರತಿಭಟನಾ ನಿರತ ರೈತರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದ್ದರು.
“ಬಿಜೆಪಿ ಆಡಳಿತದಲ್ಲಿ ರೈತರು ಬೀದಿಯಲ್ಲಿ ಕುಳಿತು ‘ರೈತರ ದಿನ‘ವನ್ನು ಆಚರಿಸುವಂತಾಗಿದೆ. ಹೋರಾಟಕ್ಕೆ ಇಳಿದಿರುವ ರೈತರನ್ನು ಬಿಜೆಪಿ ಅವಮಾನಿಸುವುದನ್ನು ನಿಲ್ಲಿಸಬೇಕು. ಏಕೆಂದರೆ, ರೈತರು ಭಾರತದ ಹೆಮ್ಮೆ” ಎಂದು ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ: 2022ರ ಯುಪಿ ಚುನಾವಣೆಯಲ್ಲಿ ಎಸ್‌ಪಿ 351 ಸ್ಥಾನಗಳನ್ನು ಗೆಲ್ಲುತ್ತದೆ ’: ಅಖಿಲೇಶ್ ಯಾದವ್


