Homeಮುಖಪುಟರೈತರು ಈ ದೇಶದ ಹೆಮ್ಮೆ, ಅವರನ್ನು ಬಿಜೆಪಿಯವರು ಅವಮಾನಿಸಬೇಡಿ: ಅಖಿಲೇಶ್ ಯಾದವ್

ರೈತರು ಈ ದೇಶದ ಹೆಮ್ಮೆ, ಅವರನ್ನು ಬಿಜೆಪಿಯವರು ಅವಮಾನಿಸಬೇಡಿ: ಅಖಿಲೇಶ್ ಯಾದವ್

"ಬಿಜೆಪಿ ಆಡಳಿತದಲ್ಲಿ ರೈತರು ಇಂದು ಬೀದಿಯಲ್ಲಿ ಕುಳಿತು ‘ರೈತರ ದಿನ‘ವನ್ನು ಆಚರಿಸುವಂತಾಗಿದೆ"

- Advertisement -
- Advertisement -

ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ಇಂದು ರೈತ ದಿನವನ್ನು ಆಚರಿಸಲಾಗುತ್ತದೆ. ಇದರ ಪ್ರಯುಕ್ತ ಟ್ವೀಟ್ ಮಾಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌, “ರೈತರು ದೇಶದ ಹೆಮ್ಮೆ. ಬಿಜೆಪಿಯವರು ಪ್ರತಿಭಟನಾ ನಿರತ ರೈತರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದ್ದಾರೆ.

“ರೈತರ ದಿನ”ವೂ (ಕಿಸಾನ್ ದಿವಸ್‌) ಆಗಿರುವ ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುತ್ತಾ ಅಖಿಲೇಶ್ ಯಾದವ್ ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿ, “ಬಿಜೆಪಿ ಆಡಳಿತದಲ್ಲಿ ರೈತರು ಬೀದಿಯಲ್ಲಿ ಕುಳಿತು ‘ರೈತರ ದಿನ‘ವನ್ನು ಆಚರಿಸುವಂತಾಗಿದೆ. ಹೋರಾಟಕ್ಕೆ ಇಳಿದಿರುವ ರೈತರನ್ನು ಬಿಜೆಪಿ ಅವಮಾನಿಸುವುದನ್ನು ನಿಲ್ಲಿಸಬೇಕು. ಏಕೆಂದರೆ, ರೈತರು ಭಾರತದ ಹೆಮ್ಮೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಾತ್ರಿ ಕರ್ಫ್ಯೂ: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಇದನ್ನೂ ಓದಿ: ನುಡಿ ನಮನ: ಕೋಮು ಗಲಭೆಯಲ್ಲಿ ತಂದೆಯನ್ನು ಕಳೆದುಕೊಂಡರೂ ಜಾತ್ಯಾತೀತ ಮೌಲ್ಯಗಳನ್ನು ಉಳಿಸಿಕೊಂಡಿದ್ದ ದೇವೇಂದ್ರ ಸಿಂಗ್…

ಉತ್ತರ ಪ್ರದೇಶದ ಮೀರತ್‌ನಲ್ಲಿ 1902ರಲ್ಲಿ ಜನಿಸಿದ ಚರಣ್ ಸಿಂಗ್‌ ಅವರು, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ರೈತ ನಾಯಕರಾಗಿ ಹೊರ ಹೊಮ್ಮಿದರು. ಹಲವಾರು ಕೃಷಿ ಸ್ನೇಹಿ ನೀತಿಗಳನ್ನು ರೂಪಿಸಿದ ಸಿಂಗ್ ಅವರು 1987ರಲ್ಲಿ ನಿಧನರಾದರು.

ಭಾರತದ 5 ನೇ ಪ್ರಧಾನಿಯಾಗಿದ್ದ ಇವರ ಜನ್ಮದಿನದ ಅಂಗವಾಗಿ ಇಂದು ದೇಶದಾದ್ಯಂತ ಉಪವಾಸ ಸತ್ಯಾಗ್ರಹ ಆಚರಿಸಲು ಕರೆ ನೀಡಲಾಗಿತ್ತು.


ಇದನ್ನೂ ಓದಿ: ಕರ್ತವ್ಯದ ನಡುವೆ ಮದ್ಯ ಸೇವಿಸಿದ್ದ ಪೊಲೀಸರ ವೀಡಿಯೋ ವೈರಲ್: ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...