ಈ ದಸರಾದಲ್ಲಿ ಇಂಧನ ಬೆಲೆಗಳನ್ನು ರಾವಣ ಎಂದು ಸುಡಲಾಗುತ್ತದೆ. ಆದರೆ, 2024ಕ್ಕೆ ರಾವಣನನ್ನು ಸಂಪೂರ್ಣವಾಗಿ ಸುಡುತ್ತೇವೆ ಎಂದು ಶಿವಸೇನಾ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪೆಟ್ರೋಲ್ ಮತ್ತು ಡೀಸೆಲ್ (ಬೆಲೆಗಳು) ಎಂಬ ರಾವಣನನ್ನು ಸುಡುವ ಪ್ರಕ್ರಿಯೆ ನಾಳೆಯಿಂದ ಅಂದರೆ ದಸರಾದಂದು ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
“ಪೆಟ್ರೋಲ್ ಮತ್ತು ಡೀಸೆಲ್ ರಾಕ್ಷಸನನ್ನು (ರಾವಣ) ಸುಡುವ ಪ್ರಕ್ರಿಯೆ ನಾಳೆಯಿಂದ ಆರಂಭವಾಗುತ್ತದೆ. ದಸರಾ ದಿನದಂದು ನಾವು ಒಬ್ಬ ರಾವಣನನ್ನು ಸುಡುತ್ತೇವೆ. ಆದರೆ, 2024 ರಲ್ಲಿ ರಾವಣನನ್ನು ಸಂಪೂರ್ಣವಾಗಿ ಸುಡಲಾಗುವುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಯುಪಿ ಸರ್ಕಾರದ ದಬ್ಬಾಳಿಕೆ ತಡೆಯಲು ಜಂಟಿ ವಿರೋಧದ ಅವಶ್ಯಕತೆಯಿದೆ- ಸಂಜಯ್ ರಾವತ್
2024 ರಲ್ಲಿ ರಾಷ್ಟ್ರೀಯ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳು ಮಾತ್ರ ನಡೆಯಲಿವೆ. ಈ ಹಿನ್ನೆಲೆ ಚುನಾವಣೆಯನ್ನು ಉದ್ದೇಶಿಸಿ ರಾವತ್ ಈ ಮಾತುಗಳನ್ನು ಹೇಳಿದ್ದಾರೆ ಎನ್ನಬಹುದು.
ಗುರುವಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತೆ ಏರಿಸಲಾಗಿದೆ. ಮುಂಬೈನಲ್ಲಿ, ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 0.34 ಪೈಸೆ ಏರಿಸಿದ್ದು, ಲೀಟರ್‌ಗೆ 110.75 ರೂಪಾಯಿಯಾಗಿದೆ. ಡೀಸೆಲ್ ದರವನ್ನು 0.37 ಪೈಸೆ ಏರಿಸಲಾಗಿದ್ದು, ಪ್ರತಿ ಲೀಟರ್‌ಗೆ 101.4 ರೂಪಾಯಿಯಾಗಿದೆ.
ಇದನ್ನೂ ಓದಿ: ನೀವೇಕೆ ನೆಹರೂರನ್ನು ಇಷ್ಟೊಂದು ದ್ವೇಷಿಸುತ್ತೀರಿ?: ಬಿಜೆಪಿಗೆ ಸಂಜಯ್ ರಾವತ್ ಪ್ರಶ್ನೆ


