Homeಕರೋನಾ ತಲ್ಲಣಪ್ರಯೋಗ ಪೂರೈಸದ ಲಸಿಕೆಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆಯೆ?: ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ಆರ್‌ಟಿಐ ಕಾರ್ಯಕರ್ತ

ಪ್ರಯೋಗ ಪೂರೈಸದ ಲಸಿಕೆಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆಯೆ?: ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ಆರ್‌ಟಿಐ ಕಾರ್ಯಕರ್ತ

ಮಾಹಿತಿಗಳನ್ನು ಬಹಿರಂಗಪಡಿಸುವಲ್ಲಿ ತೋರುತ್ತಿರುವ ಹಿಂಜರಿಕೆಯು ಬಹಳ ದೊಡ್ಡ ಅಪಾಯವನ್ನು ಸೂಚಿಸುತ್ತಿದೆ ಎಂದು ಉಲ್ಲೇಖಿಸಿದ್ದಾರೆ

- Advertisement -
- Advertisement -

ಕೊರೊನಾ ಸಾಂಕ್ರಮಿಕ ವಿರುದ್ಧ ತುರ್ತು ಬಳಕೆಗಾಗಿ ಭಾರತೀಯ ಔಷಧೀಯ ನಿಯಂತ್ರಕ ಕೊವಿಶೀಲ್ಡ್‌, ಕೊವ್ಯಾಕ್ಸಿನ್‌ ಲಸಿಕೆಗಳಿಗೆ ಅನುಮತಿ ನೀಡಿದೆ. ಜೊತೆಗೆ ಇನ್ನೂ ಎರಡು ಲಸಿಕೆಗಳು ಅನುಮತಿಗಾಗಿ ಸರತಿಯಲ್ಲಿವೆ. ಆದರೆ ಅನುಮತಿ ಪಡೆದಿರುವ ಭಾರತ್‌ ಬಯೋಟೆಕ್‌ ತಯಾರಿಸುತ್ತಿರುವ ಕೊವ್ಯಾಕ್ಸಿನ್ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಲಸಿಕೆಯ ಮೂರನೇ ಹಂತದ ಪ್ರಯೋಗದ ವರದಿ ಇನ್ನೂ ಬಂದಿಲ್ಲ ಹಾಗಾಗಿ ಅದು ಸುರಕ್ಷಿತವಲ್ಲ ಎಂದು ಅವರ ಅನುಮಾನಕ್ಕೆ ಕಾರಣ. ಇದೀಗ ಆರ್‌ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ಕೊವ್ಯಾಕ್ಸಿನ್ ಕುರಿತು ಅಘಾತಕಾರಿ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ.

ಸಾಕೇತ್‌ ಗೋಖಲೆ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಕೊವ್ಯಾಕ್ಸಿನ್ ಕುರಿತ ಹಲವು ಮಾಹಿತಿಗಳನ್ನು ಸಾಕ್ಷಿ ಸಹಿತ ಬಿಚ್ಚಿಟ್ಟಿದ್ದಾರೆ. ಈ ಮಾಹಿತಿಯು ನಿಮ್ಮ ಜೀವಕ್ಕೆ ಸಂಬಂಧ ಪಟ್ಟಿದ್ದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ: ‘ಇದು ಪ್ರಯೋಗ’ ಎಂದು ಹೇಳದೆ ಸಾರ್ವಜನಿಕರಿಗೆ ಲಸಿಕೆ ನೀಡಿದ ಖಾಸಗಿ ಆಸ್ಪತ್ರೆ!

“ಭಾರತ್ ಬಯೋಟೆಕ್‌ನ ಹಂತ 1 ಮತ್ತು 2 ಕೊರೊನಾ ಲಸಿಕೆ ಪ್ರಯೋಗಗಳ ರಹಸ್ಯ” ಎಂದು ಅವರು ತಮ್ಮ ಬರಹವನ್ನು ಪ್ರಾರಂಭಿಸಿದ್ದಾರೆ. “ಭಾರತ್‌ ಬಯೋಟೆಕ್‌ನ ಪಾಲುದಾರನೂ ಆಗಿರುವ ಭಾರತದ ಕ್ಲಿನಿಕಲ್‌ ಟ್ರಯಲ್ಸ್‌ ರಿಜಿಸ್ಟರ್(CTR)ನ ಐಸಿಎಂಆರ್‌‌ನ ಒಂದು ಘಟಕದಲ್ಲಿ ಕೊವ್ಯಾಕ್ಸಿನ್‌ ಲಸಿಕೆಯ 1 ನೇ ಮತ್ತು 2 ನೇ ಹಂತದ ಪ್ರಯೋಗಗಳಿಗಾಗಿ ಭಾರತ್‌ ಬಯೋಟೆಕ್ ನೋಂದಣಿ ಮಾಡಿತ್ತು‌.

ಜುಲೈ 1, 2020 ಕ್ಕೆ 1 ನೇ ಹಂತದ ಪ್ರಯೋಗಗಳ ಮಾಹಿತಿಗಳನ್ನು ಭಾರತ್ ಬಯೋಟೆಕ್ ರಿಜಿಸ್ಟರ್‌ ಮಾಡಿತ್ತು. ಅದಕ್ಕಾಗಿ ಲಸಿಕೆಗಳ ಮಾದರಿ‌‌‌ಗಳನ್ನು ಪಡೆದುಕೊಳ್ಳಲು ಒಟ್ಟು 1125 ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದಿರುವ ಅವರು, “ನೆನಪಿಡಿ, ಇದೇ ಸಮಯದಲ್ಲಿ ನರೇಂದ್ರ ಮೋದಿಯ ವರ್ಚಸ್ಸು ಹೆಚ್ಚಾಗಲೆಂದು ’ಲಸಿಕೆಯು ಸ್ವಾತಂತ್ರ್ಯ ದಿನದೊಳಗೆ ತಯಾರಾಗಬೇಕು’ ಎಂದು ಎಂಸಿಆರ್‌ ಆಘಾತಕಾರಿ ಪತ್ರ ರವಾನಿತ್ತು” ಎಂದು ಅವರು ನೆನಪಿಸಿದ್ದಾರೆ.

ಇದನ್ನೂ ಓದಿ: ‘ಲಸಿಕೆಯಲ್ಲಿ ಹಂದಿ ಮಾಂಸವಿಲ್ಲ’ – ಆಧಾರರಹಿತ ಸುದ್ದಿ ಕಡೆಗಣಿಸಲು ಮುಸ್ಲಿಂ ವಿದ್ವಾಂಸರ ಕರೆ

“ಲಸಿಕೆಯ 2 ನೇ ಹಂತದ ಮಾಹಿತಿಗಳನ್ನು ಸೆಪ್ಟೆಂಬರ್ 8, 2020 ರಲ್ಲಿ ರಿಜಿಸ್ಟರ್‌ ಮಾಡಲಾಗಿತ್ತು. ಇದು 1 ನೇ ಹಂತದ ಪ್ರಯೋಗ ರಿಜಿಸ್ಟರ್ ಮಾಡಿದ ಕೇವಲ 2 ತಿಂಗಳೊಳಗೆ ನಡೆದಿತ್ತು. ಅಂದರೆ, 1 ನೇ ಪ್ರಯೋಗ ಪೂರ್ಣಗೊಳ್ಳುವ ಮುನ್ನವೇ 2 ನೇ ಪ್ರಯೋಗವನ್ನು ಅನ್ನು ರಿಜಿಸ್ಟರ್ ಮಾಡಲಾಗಿತ್ತು. ಅದಲ್ಲದೆ 2 ನೇ ಪ್ರಯೋಗದಲ್ಲಿ ಕೇವಲ 124 ಸ್ವಯಂಸೇವಕರು ಮಾತ್ರ ಭಾಗವಹಿಸಿದ್ದರು” ಎಂದು ಸಾಕೇತ್‌ ಹೇಳಿದ್ದಾರೆ.

ಇದನ್ನೂ ಓದಿ: ಲಸಿಕೆ ಸಂಭ್ರಮದ ಮಧ್ಯೆ ಕುಸಿಯುತ್ತಿರುವ ಆರ್ಥಿಕತೆ ಬಗ್ಗೆ ಮರೆಯದಿರಿ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ

“ಜುಲೈ 2020 ರಲ್ಲಿ ರಿಜಿಸ್ಟರ್ ಮಾಡಲಾಗಿದ್ದ 1ನೇ ಹಂತದ ಪ್ರಯೋಗವು ಮಾರ್ಚ್‌ 2021 ರೊಳಗೆ ಪೂರ್ತಿಗೊಳ್ಳಬೇಕಿತ್ತು. 2 ನೇ ಹಂತದ ಪ್ರಯೋಗ ಸೆಪ್ಟೆಂಬರ್‌ 8, 2020 ರಲ್ಲಿ ರಿಜಿಸ್ಟರ್ ಮಾಡಿದ್ದು, ಇದರ ಪ್ರಯೋಗವು ಒಂದು ವರ್ಷ ಹಾಗೂ 3 ತಿಂಗಳು ಅಂದರೆ 2021 ರ ಡಿಸೆಂಬರ್‌‌ವರೆಗೆ ನಡೆಯಬೇಕಿತ್ತು. 3 ನೇ ಹಂತದ ಪ್ರಯೋಗ‌ ನವೆಂಬರ್‌ 9 2020 ರಂದು ರಿಜಿಸ್ಟರ್ ಮಾಡಲಾಗಿದ್ದು, ಇದರ ಪ್ರಯೋಗವನ್ನು 25,800 ಮಂದಿಯನ್ನು ಬಳಸಿ ನಡೆಸಲಾಗುವುದು ಎಂದು ಇದರಲ್ಲಿ ಉಲ್ಲೇಖಿಸಲಾಗಿತ್ತು” ಎಂದು ಅವರು ಹೇಳಿದ್ದಾರೆ.

ಮೂರನೇ ಹಂತದ ಪ್ರಯೋಗಕ್ಕೆ ಒಂದು ವರ್ಷವನ್ನು ನಿಗದಿಪಡಿಸಲಾಗಿತ್ತು. ಆದರೆ, ಮೊದಲ ಹಂತದ ಪ್ರಯೋಗಗಳು ಮುಗಿಯುವ ಮೊದಲೇ 2 ಮತ್ತು 3 ನೇ ಹಂತದ ಪ್ರಯೋಗಗಳನ್ನು ರಿಜಿಸ್ಟರ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

“ಒಟ್ಟಾರೆಯಾಗಿ 1 ನೇ ಹಂತ ಮಾರ್ಚ್ 2021 ರೊಳಗೆ ಪೂರ್ಣಗೊಳ್ಳಬೇಕಿತ್ತು. 2 ನೇ ಹಂತವು ಡಿಸೆಂಬರ್ 2021 ರೊಳಗೆ ಪೂರ್ಣಗೊಳ್ಳಬೇಕಿತ್ತು. 3 ನೇ ಹಂತವು ನವೆಂಬರ್ 2021 ರೊಳಗೆ ಪೂರ್ಣಗೊಳ್ಳಬೇಕಿತ್ತು” ಎಂದು ಅವರು ಸೂಚಿಸಿದ್ದಾರೆ. ಆದರೆ ಭಾರತ್ ಬಯೋಟೆಕ್‍ನ ಕೊವ್ಯಾಕ್ಸಿನ್ ಲಸಿಕೆಗೆ ಭಾರತ ಸರಕಾರವು ಜನವರಿ 2021 ರಲ್ಲೇ ಅನುಮತಿ ನೀಡಿದೆ.

ಇದನ್ನೂ ಓದಿ: ಕೋವಿಡ್ ಲಸಿಕೆ ಮೂರನೇ ಹಂತದ ಪರಿಣಾಮಕಾರಿತ್ವದ ಡೇಟಾ ಮಿಸ್ಸಿಂಗ್!: ವಿಜ್ಞಾನಿಗಳ ಕಳವಳ

ತಮ್ಮ ಮಾಹಿತಿಯಲ್ಲಿ ಸಾಕೇತ್ ಗೋಖಲೆ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

  • ಭಾರತ್ ಬಯೋಟೆಕ್‍ನ ಸ್ವತಃ ರಿಜಿಸ್ಟ್ರೇಶನ್ ದಾಖಲೆಗಳಲ್ಲಿರುವಂತಹ 1 ನೇ ಪ್ರಯೋಗ ಪೂರ್ಣಗೊಳ್ಳುವಿಕೆಗೆ ಇನ್ನೂ 3 ತಿಂಗಳುಗಳಿರುವಾಗ ಯಾವ ಆಧಾರದಲ್ಲಿ ಲಸಿಕೆ ಅನುಮತಿ ನೀಡಲಾಗಿದೆ?
  • ಈ ಕಾರಣಕ್ಕಾಗಿಯೇ ಭಾರತ್ ಬಯೋಟೆಕ್‍ನ 1 ನೇ ಹಂತ ಮತ್ತು 2 ನೇ ಹಂತದ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ಮೋದಿ ಸರರ್ಕಾರ ಹಿಂಜರಿಯುತ್ತಿದೆಯೆ?
  • ಲಸಿಕೆಯ 1 ನೇ ಮತ್ತು 2 ನೇ ಹಂತದ ಸ್ವಯಂ ಸೇವಕರ ಸಂಖ್ಯೆ ಕೇವಲ 1249. 130 ಕೋಟಿಯಷ್ಟು ಜನಸಂಖ್ಯೆಯಿರುವ ಭಾರತದಲ್ಲಿ ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
  • ಪರಿಸ್ಥಿತಿ ಹೀಗಿರುವಾಗ ಈ ಲಸಿಕೆಯು 110% ಸುರಕ್ಷಿತ ಎಂದು ಹೇಗೆ ಹೇಳುತ್ತೀರಿ?
  • ಅಲ್ಲದೆ ರೂಪಾಂತರಿ ಕೊರೊನಾ ವೈರಸ್‌ ವಿರುದ್ಧ ಇದು ಕೆಲಸ ನಿರ್ವಹಿಸುತ್ತದೆ ಎಂದು ಯಾವ ಆಧಾರದಲ್ಲಿ ಹೇಳುತ್ತೀರಿ?
  • ಇದನ್ನೆಲ್ಲಾ ಸಾಬೀತುಪಡಿಸಲು 1 ನೇ ಹಾಗೂ 2 ನೇ ಹಂತದ ಅಂಕಿ ಅಂಶಗಳು ಎಲ್ಲಿವೆ? ಎಂದು ಪ್ರಶ್ನಿಸಿದ್ದಾರೆ.

“ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಪ್ರಯೋಗಗಳ 1ನೇ ಹಾಗೂ 2 ನೇ ಹಂತದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಬೇಕು. ಒಂದೂವರೆ ವರ್ಷದಲ್ಲಿ ಮಗಿಯಬೇಕಿದ್ದ ಪ್ರಯೋಗಗಳು ಕೇವಲ 5 ತಿಂಗಳಿನಲ್ಲಿ ಹೇಗೆ ಮುಗಿಯಿತು ಅನ್ನುವುದನ್ನು ವಿವರಿಸಬೇಕು. ಮಾಹಿತಿಗಳನ್ನು ಬಹಿರಂಗಪಡಿಸುವಲ್ಲಿ ತೋರುತ್ತಿರುವ ಹಿಂಜರಿಕೆಯು ಬಹಳ ದೊಡ್ಡ ಅಪಾಯವನ್ನು ಸೂಚಿಸುತ್ತಿದೆ” ಎಂದು ಅವರು ಮಾಹಿತಿ ಬಿಡುಗಡೆಗೆ ಮೋದಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇಷ್ಟೇ ಅಲ್ಲದೆ ಸಾಖೇತ್‌ ಗೋಖಲೆ ತಾವು ಬರೆದ ಎಲ್ಲಾ ವಿಚಾರಗಳಿಗೂ ದಾಖಲೆಗಳನ್ನೂ ನೀಡಿದ್ದಾರೆ.

ಇದನ್ನೂ ಓದಿ: ಲಸಿಕೆಯ ಲಗುಬಗೆಯ ಲೋ ಪಾಲಿಟಿಕ್ಸ್? – ಏಕೈಕ ’ದೇಸಿ’ ಲಸಿಕೆ ಕೊವಾಕ್ಸಿನ್ ಎಷ್ಟು ಸುರಕ್ಷಿತ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....