Homeಮುಖಪುಟಹಿನ್ನೋಟ 2020: ಕೊರೊನಾ ನಿಯಂತ್ರಣದ ನಡುವೆಯೂ ಪ್ರತಿಭಟಿಸಿದ ಜಗತ್ತು

ಹಿನ್ನೋಟ 2020: ಕೊರೊನಾ ನಿಯಂತ್ರಣದ ನಡುವೆಯೂ ಪ್ರತಿಭಟಿಸಿದ ಜಗತ್ತು

- Advertisement -
- Advertisement -

2020 ಇನ್ನೇನು ಮುಗಿಯಲಿದೆ. ಜಗತ್ತಿಗೆ ಇದು ಐತಿಹಾಸಿಕ ಸಂಗತಿಯಾಗಿ ಉಳಿದುಕೊಳ್ಳಲಿದೆ. ಅನ್ಯಾಯಯುತ ಕಾಯ್ದೆಗಳ ವಿರುದ್ಧದ ಪ್ರತಿಭಟನೆಗಳು ನಮ್ಮ ರಾಜಕೀಯ ಕಲ್ಪನೆಯನ್ನು ಪ್ರಭಾವಿಸುತ್ತಿರುವ ಈ ಸಂದರ್ಭದಲ್ಲಿ ನಾವು ಭಾರತೀಯರು ಪೂರ್ತಿ ಒಂದು ಸುತ್ತು ಹಾಕಿ ಅಲ್ಲಿಗೇ ಬಂದು ನಿಂತಿದ್ದೇವೆ. ಈ ಹೋರಾಟಗಳಲ್ಲಿ ನಾವು ಏಕಾಂಗಿಯಲ್ಲ. ವಿವಿಧ ಹೋರಾಟಗಳಲ್ಲಿ ನಿರತವಾಗಿರುವ ಜಾಗತಿಕ ಸಮುದಾಯದ ಭಾಗವಾಗಿದ್ದೇವೆ ನಾವು.

ಅರಬ್ ಹೋರಾಟದಿಂದ (ಅರಬ್ ವಸಂತದಿಂದ) 2019ರವರೆಗೆ ಜಗತ್ತು ಹೊಸ ತಲೆಮಾರಿನ ಅನೇಕ ಹೋರಾಟಗಳಿಗೆ ಸಾಕ್ಷಿಯಾಗಿತ್ತು. ಬದಲಾವಣೆಗೆ ಆಗ್ರಹಿಸುವ ಮತ್ತು ಪ್ರಭುತ್ವಕ್ಕೆ ಪ್ರತಿಕ್ರಿಯಿಸುವ ಈ ಹೋರಾಟಗಳು ಸ್ವಯಂಪ್ರೇರಿತವಾಗಿದ್ದು, ನಾಯಕರಹಿತ ಆದರೆ ಸಾಮೂಹಿಕ ನಾಯಕತ್ವದ ಗುಣಲಕ್ಷಣಗಳನ್ನು ಹೊಂದಿರುವುದು ಇವುಗಳ ಸಾಮಾನ್ಯ ಲಕ್ಷಣವಾಗಿದೆ. ಸಂಪತ್ತಿನ ಅಸಮಾನತೆ, ಕಲ್ಯಾಣ ಕಾರ್ಯಕ್ರಮಗಳ ಹಿಂತೆಗೆತ, ಪ್ರಭುತ್ವದ ಭ್ರಷ್ಟಾಚಾರ, ಪ್ರಜಾತಾಂತ್ರಿಕ ಹೊಣೆಗಾರಿಕೆಯ ಕೊರತೆ ಈ ಹೋರಾಟ-ಪ್ರತಿಭಟನೆಗಳ ಕೇಂದ್ರ ವಿಷಯಗಳಾಗಿದ್ದು, ನಡೆದದ್ದೇ ಮಾರ್ಗ ಎಂಬುದಕ್ಕೆ ತಡೆಯಾಗಿದೆ. ಸಾಕಷ್ಟು ವೈವಿಧ್ಯಮಯವಾದ ಒಂದು ಹೊಸ ಬಗೆಯ ರಾಜಕೀಯ ಪ್ರಜ್ಞೆಯು ಜಾಗೃತಗೊಳ್ಳುತ್ತಿರುವುದನ್ನು ಈ ಪ್ರತಿಭಟನೆಗಳು ಪ್ರತಿನಿಧಿಸುತ್ತವೆ. ಇವುಗಳಲ್ಲಿ ಕೆಲವು ಪ್ರತಿಗಾಮಿಯಾಗಿದ್ದರೆ, ಹೆಚ್ಚು ಪ್ರಗತಿಶೀಲವಾಗಿದ್ದವು. ಕೆಲವು ಪ್ರತಿಭಟನೆಗಳು ಕಾಯ್ದೆಗಳ ರದ್ದತಿಗಾಗಿ ಆಗ್ರಹಿಸಿದ್ದರೆ, ಇನ್ನು ಕೆಲವು ದೇಶದ ಸಂವಿಧಾನವನ್ನು ಕಿತ್ತು ಹಾಕುವುದಕ್ಕಾಗಿ-ಬದಲಿಸುವುದಕ್ಕಾಗಿ ನಡೆದವು. ಇನ್ನು ಕೆಲವು, ದೇಶ ಸಾಗುತ್ತಿರುವ ದಿಕ್ಕಿನ ವಿರುದ್ಧದ ನಿರಾಶೆಯ ಅಭಿವ್ಯಕ್ತಿಯಾಗಿದ್ದವು.

2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಈ ಹೋರಾಟಗಳು ಹೊಸ ಸವಾಲುಗಳನ್ನು ಎದುರಿಸಿದವು. ಸಾರ್ವಜನಿಕ ಸಭೆಗಳ ನಿಷೇಧವು, ಪ್ರತಿಭಟನೆಗಳನ್ನು ತಡೆಯಲು ಪ್ರಭುತ್ವಕ್ಕೆ ಪರವಾನಗಿ ನೀಡಿದಂತಾಗಿತ್ತು. ಸಾಂಕ್ರಾಮಿಕದ ಮೊದಲ ಅಲೆಯ ಸಂದರ್ಭದಲ್ಲಿ, ಜಗತ್ತಿನಾದ್ಯಂತ ಚಳವಳಿಗಳು ಆನ್‌ಲೈನ್ ಸಭೆ, ಟ್ವಿಟರ್ ಕ್ಯಾಂಪೇನ್ ಮತ್ತು ವೆಬಿನಾರ್‌ಗಳಂತಹ ಆನ್‌ಲೈನ್ ಸ್ವರೂಪಕ್ಕೆ ಬದಲಿಸಿಕೊಂಡು ಮುಂದುವರೆದವು.

ನಿಕರಾಗುವಾ ಮತ್ತು ಲೆಬನಾನ್‌ನಂತಹ ದೇಶಗಳಲ್ಲಿ, ಕಲ್ಯಾಣ ಕಾರ್ಯಕ್ರಮಗಳ ಕೊರತೆಯು ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿತು. ನೈಜೀರಿಯಾ, ಅಮೆರಿಕ ಮತ್ತು ಕೊಲಂಬಿಯಾದಂತಹ ದೇಶಗಳಲ್ಲಿ, ಸಾಂಕ್ರಾಮಿಕದ ಸಂದರ್ಭದಲ್ಲೂ ಅನಿಯಂತ್ರಿತ ಪೊಲೀಸ್ ಬಲಪ್ರಯೋಗ ಪ್ರತಿಭಟನೆಗಳ ಕೇಂದ್ರ ವಸ್ತುವಾಗಿತ್ತು. ಸುಡಾನ್, ಚಿಲಿ ಮತ್ತು ಅಲ್ಜಿರಿಯಾದಂತಹ ದೇಶಗಳಲ್ಲಿ ಸಂವಿಧಾನ ಬದಲಾವಣೆಯ ವಿಷಯವಾಗಿ ಪ್ರತಿಭಟನೆಗಳು ನಡೆದವು. ಬೊಲಿವಿಯಾ, ಕಿರ್ಗಿಸ್ತಾನ್ ಮತ್ತು ಪೆರುನಂತಹ ದೇಶಗಳಲ್ಲಿ ಚುನಾವಣಾ ಪ್ರಕ್ರಿಯೆಯನ್ನು ತಿರುಚುವುದರ ವಿರುದ್ಧ ಪ್ರತಿಭಟನೆಗಳು ನಡೆದವು. ನೈಜಿರಿಯಾ, ಭಾರತ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿ ಸಾಂಕ್ರಾಮಿಕದ ಸಂದರ್ಭದಲ್ಲಿ ಜನವಿರೋಧಿ ಕಾನೂನುಗಳಿಗೆ ಅಂಗೀಕಾರ ಮಾಡಿದ್ದರ ವಿರುದ್ಧ ಚಳವಳಿಗಳು ನಡೆಯುತ್ತಿವೆ.

ಬಹುಪಾಲು ಸಾಮೂಹಿಕ ಪ್ರತಿಭಟನೆಗಳು ಪ್ರಭುತ್ವಕ್ಕೆ ನೀಡಿದ ಪ್ರತಿಕ್ರಿಯೆಯಾಗಿದ್ದವು. ಕೆಲವು ಪ್ರತಿಗಾಮಿಯಾಗಿದ್ದವು, ಕೆಲವು ಪ್ರಗತಿಶೀಲವಾಗಿದ್ದವು, ಆದರೆ ಎಲ್ಲವೂ ಪ್ರಭುತ್ವದೊಂದಿಗಿನ ಅಸಮಾಧಾನದ ಅಭಿವ್ಯಕ್ತಿಯೇ ಆಗಿದ್ದವು. ಉಗ್ರ ರಾಷ್ಟ್ರೀಯವಾದದ ಬೆಳವಣಿಗೆಯ ಜೊತೆಜೊತೆಗೇ ಪ್ರಭುತ್ವದ ಮೇಲಿನ ಅಸಮಾಧಾನವು ಹೊರಹೊಮ್ಮಿತು. ಮೂಲದಲ್ಲಿ ಜನರು ಮತ್ತು ಪ್ರಭುತ್ವದ ನಡುವೆ ಸಾಮಾಜಿಕ ಒಪ್ಪಂದವನ್ನು ಪ್ರತಿನಿಧಿಸುವ ರಾಷ್ಟ್ರೀಯತೆಯು ಜಗತ್ತಿನ ಜನತೆಯನ್ನು ನಿರಾಶೆಗೊಳಿಸುತ್ತಿದೆ. ಪರ್ಯಾಯದ ಸಾಧ್ಯತೆ ಗೋಚರಿಸದ ಕಾರಣ ಜನರು ಈ ಬಗೆಯ ಪ್ರತಿಭಟನೆಗಳಲ್ಲಿ ತೊಡಗಿದ್ದಾರೆ. ಪ್ರಭುತ್ವವು ಜನರನ್ನು ವಿಫಲಗೊಳಿಸುತ್ತಿದೆ ಎಂದು ಹೇಳುತ್ತಿರುವ ಜನರು, ತಮ್ಮ ದೇಶದ ಜೊತೆಗಿನ ಸಾಮಾಜಿಕ ಒಪ್ಪಂದದ ಮಾದರಿಗಳನ್ನು ಪ್ರಶ್ನಿಸುತ್ತಿದ್ದಾರೆ. ರಾಷ್ಟ್ರ-ಪ್ರಭುತ್ವವು ತಮ್ಮ ಸಾಮಾಜಿಕ ವ್ಯವಸ್ಥೆಯನ್ನು ಒತ್ತಾಯಪೂರ್ವಕವಾಗಿ ಜಾರಿಗೊಳಿಸಬೇಕೆಂದು ಪ್ರತಿಗಾಮಿಗಳು ಒತ್ತಾಯಿಸಿದರೆ, ಪ್ರಗತಿಪರರು ಪ್ರಭುತ್ವದಿಂದ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವಕ್ಕಾಗಿ ಆಗ್ರಹಿಸುತ್ತಿದ್ದಾರೆ. ಬಹುಪಾಲು ದೇಶಗಳಲ್ಲಿ ಇವುಗಳ ನಡುವಿನ ಗೆರೆ ಮಸುಕಾಗಿದೆ.

ಇದೇ ಸಂದರ್ಭದಲ್ಲಿ, 2020ರಲ್ಲಿನ ಪ್ರತಿಭಟನೆಗಳ ಕುರಿತ ಪ್ರಶ್ನೆಗಳು ನಮ್ಮನ್ನು ಕಾಡತೊಡಗುತ್ತವೆ. ಪ್ರತಿಭಟನೆಗಳು ಕೆಲವೊಮ್ಮೆ ಪ್ರತಿಗಾಮಿಯಾಗಿರಬಹುದು ಆದರೆ ಬಹುತೇಕ ಕಡೆಗಳಲ್ಲಿ ಜನಪರವಾದ ಪ್ರತಿಭಟನೆಗಳೇ ನಡೆದಿರುವುದು ಮುಖ್ಯವಾಗಿದೆ. ಅಮೆರಿಕದಲ್ಲಿ ಜನಾಂಗೀಯ ಹಿಂಸೆಯ ವಿರುದ್ಧ ಸಾಮೂಹಿಕ ಪ್ರತಿಭಟನೆಗಳು ನಡೆದವು. ಸಾಂಕ್ರಾಮಿಕದ ಸಂದರ್ಭದಲ್ಲಿ ಬಡವರ ಸುರಕ್ಷತೆಗಾಗಿ ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳ ಜಾರಿಗೆ ಒತ್ತಾಯಿಸಿಯೂ ಪ್ರತಿಭಟನೆಗಳು ನಡೆದವು. ಬೊಲಿವಿಯದಂತಹ ದೇಶಗಳಲ್ಲಿ ಆಡಳಿತವನ್ನು ಕಿತ್ತೆಸೆದಿದ್ದನ್ನು ನಾವು ನೋಡಿದ್ದೇವೆ. ಪ್ರತಿಭಟನೆಗಳು, ಅದರಲ್ಲೂ ಮುಖ್ಯವಾಗಿ, ಭ್ರಷ್ಟಾಚಾರದ ವಿರುದ್ಧ ವೃತ್ತಿಪರ ಮಧ್ಯಮವರ್ಗಗಳು ನಡೆಸುತ್ತಿರುವ ಪ್ರತಿಭಟನೆಗಳು ಸಂಶಯಾಸ್ಪದವಾಗಿವೆ. ಅವು ಸಾಮಾನ್ಯವಾಗಿ ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟ ದುರ್ಬಲ ಸಮುದಾಯಗಳ ವಿರೋಧಿಯಾಗಿವೆ. ಇನ್ನು ವಿವಿಧ ದೇಶಗಳಲ್ಲಿ ಅಲ್ಲಿನ ಗಣ್ಯರ ಮತ್ತು ಸಿರಿವಂತರ ಹಿತಾಸಕ್ತಿಗಳನ್ನು ಕಾಪಾಡಲು ಪ್ರತಿಭಟನೆಗಳ ಕವರೇಜ್ ಮಾಡಲಾಗುತ್ತಿದೆ. ವಿವಿಧ ದೇಶಗಳ ತುಳಿತಕ್ಕೊಳಗಾದ ಜನರು ಒಂದು ಸಮಾನ ಹೋರಾಟವನ್ನು ಕಾಣಲು ಇದು ಸಾಕಷ್ಟು ಅವಕಾಶವನ್ನು ನೀಡಲಾರದು. ಆದರೆ ಇದು ಈ ಪ್ರತಿಭಟನೆಗಳ ಸಾರ್ಥಕತೆಯ ಬಗ್ಗೆ ನಾವು ಸಂಶಯಿಸಲು ಕಾರಣವಾಗಬಾರದು. ಪ್ರಗತಿಶೀಲ ಹೋರಾಟಗಳ ಮೂಲಕ ಪ್ರತಿಗಾಮಿ ಪ್ರತಿಭಟನೆಗಳನ್ನು ಯಶಸ್ವಿಯಾಗಿ ಎದುರಿಸಬಹುದು.

2021ಕ್ಕೆ ಕಾಲಿಡುತ್ತಿದ್ದರೂ ಇನ್ನೂ ಸಾಂಕ್ರಾಮಿಕ ಪಿಡುಗು ತೊಲಗಿಲ್ಲ. ಕೋವಿಡ್‌ನ ಹೊಸ ಸ್ವರೂಪ ಮತ್ತು ಹೊಸ ಅಲೆಗಳ ಬಗ್ಗೆ ಆತಂಕಗಳಿವೆ. ಜಗತ್ತಿನಾದ್ಯಂತ ಪ್ರತಿಭಟನೆಗಳು ಈ ಅಪಾಯಕ್ಕೆ ಹೊಂದಿಕೊಳ್ಳುವ ಸಾಹಸ ಮಾಡುತ್ತಿವೆ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳಿದ್ದರೆ, ಪ್ರತಿಭಟನೆಗಳು ಸಾಂಕ್ರಾಮಿಕ ಹರಡುವಿಕೆಗೆ ಕಾರಣವಾಗುವುದಿಲ್ಲ ಎಂದು ಅಮೆರಿಕದಲ್ಲಿ ಅಧ್ಯಯನವೊಂದು ದೃಢೀಕರಿಸಿದೆ. ಹೀಗಿದ್ದೂ, ಸಾರ್ವಜನಿಕ ಸಭೆಗಳನ್ನು ತಡೆಯಲು ಪ್ರಭುತ್ವವು ಈಗಲೂ ಒಂದು ನೈತಿಕ ನ್ಯಾಯಸಮ್ಮತತೆಯನ್ನು ಹೊಂದಿದೆ ಎಂಬಂತೆ ನಡೆದುಕೊಳ್ಳುತ್ತಿದೆ.

2021ರ ಆಗಮನವನ್ನು ನಿರೀಕ್ಷಿಸುತ್ತಿರುವಂತೆಯೇ, ಹೊಸ ಪ್ರಜಾತಾಂತ್ರಿಕ ಪ್ರಕ್ರಿಯೆಯ ಬಹುಮುಖ್ಯ ಭಾಗವಾಗಿ ಪ್ರತಿಭಟನೆಗಳು ಇನ್ನಷ್ಟು ಹೆಚ್ಚಲಿವೆ. ನಾವು ಮುಂದಕ್ಕೆ ಚಲಿಸಿದಂತೆ, ಯಾರಿಗಾಗಿ ಪ್ರತಿಭಟನೆಗಳು, ಪ್ರತಿಭಟನೆ ಮಾಡಲು ಯಾರಿಗೆ ಸಮ್ಮತಿಸಬೇಕು, ಯಾವುದಕ್ಕಾಗಿ ಪ್ರತಿಭಟಿಸಲು ನಮಗೆ ಅನುಮತಿಯಿದೆ- ಇಂತಹ ಪ್ರಶ್ನೆ ಗಳನ್ನು ಕೇಳಲು ಆರಂಭಿಸಬಹುದು. ಆದರೆ, ಪ್ರಭುತ್ವದ ಅಧಿಕಾರದ ಮೇಲೆ ನಿಗಾ ಇಡಲು, ಪ್ರತಿರೋಧ ತೋರಲು ಈ ಪ್ರತಿಭಟನೆಗಳು ಬಹುಮುಖ್ಯ ಎಂಬುದನ್ನು ಇನ್ನು ಮುಂದೆ ಪ್ರಶ್ನಿಸಲಾಗದು.

ಅನುವಾದ: ಮಲ್ಲನಗೌಡರ್

ಕಿಶೋರ್ ಗೋವಿಂದ

ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಕಂಗಾನಾ ಮುಂಬೈಗೆ ಮರಳಿದ್ದಾರೆಂದು ಎನ್‌‌ಸಿಬಿಗೆ ನೆನಪಿಸಿದ ಕಾಂಗ್ರೆಸ್- ಕಾರಣವೇನು ಗೊತ್ತೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...