Homeಕರ್ನಾಟಕಮಕ್ಕಳಿಗೆ ಮೊಟ್ಟೆ ಬೇಡ ಎನ್ನುವ ವರದಿ ಹಿಂಪಡೆಯಿರಿ: ತಜ್ಞ ವೈದ್ಯರ ಆಗ್ರಹ

ಮಕ್ಕಳಿಗೆ ಮೊಟ್ಟೆ ಬೇಡ ಎನ್ನುವ ವರದಿ ಹಿಂಪಡೆಯಿರಿ: ತಜ್ಞ ವೈದ್ಯರ ಆಗ್ರಹ

ಎನ್‌ಇಪಿ ಜಾರಿ ಕಾರ್ಯಪಡೆಯ ಮುಖ್ಯಸ್ಥರಾಗಿರುವ ಮದನ ಗೋಪಾಲ್ ಅವರು ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದಾಗ ಸಲ್ಲಿಸಿರುವ ಮಕ್ಕಳ ಸಮೀಕ್ಷೆಯನ್ನು ವೈದ್ಯರು ಪ್ರಸ್ತಾಪಿಸಿದ್ದಾರೆ.

- Advertisement -
- Advertisement -

ಮಕ್ಕಳ ಆರೋಗ್ಯದ ಬಗ್ಗೆ ನೀಡಲಾಗಿರುವ ತಜ್ಞರ ಸಲಹಾ ವರದಿಯನ್ನು ಕೂಡಲೇ ಹಿಂಪಡೆಯಬೇಕು, ನಿಮ್ಹಾನ್ಸ್ ಅನ್ನು ಉಳಿಸಬೇಕು ಎಂದು ವೈದ್ಯರು ಹಾಗೂ ಶಿಕ್ಷಣ ತಜ್ಞರು ಆಗ್ರಹಿಸಿದ್ದಾರೆ.

ಮಕ್ಕಳಿಗೆ ಮೊಟ್ಟೆ ನೀಡಬಾರದು ಎಂದು ಎನ್‌ಇಪಿ ಪೊಸಿಷನ್‌ ಪೇಪರ್‌ ಅಪ್‌ಲೋಡ್ ಮಾಡಲಾಗಿದ್ದು, ತಜ್ಞರೆನಿಸಿಕೊಂಡವರು ವರದಿಯಲ್ಲಿ ಬರೆದಿರುವ ಸುಳ್ಳುಗಳನ್ನು ಖ್ಯಾತ ವೈದ್ಯರು, ನಿಮಾನ್ಸ್‌ನಲ್ಲಿ ಕಲಿತವರು ಪ್ರಶ್ನಿಸಿದ್ದಾರೆ.

ಎನ್‌ಇಪಿ ಪಠ್ಯಕ್ರಮ ರೂಪಿಸುವ ಭಾಗವಾಗಿ ಎನ್‌ಸಿಇಆರ್‌ಟಿಗೆ ಸಲ್ಲಿಸಿರುವ ವರದಿಗೆ ಸಂಬಂಧಿಸಿದಂತೆ ಮಂಗಳೂರಿನ ಖ್ಯಾತ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಬಳ್ಳಾರಿಯ ಮಕ್ಕಳ ತಜ್ಞರಾದ ಡಾ. ಯೋಗಾನಂದ ರೆಡ್ಡಿ, ಉಡುಪಿಯ ಮನೋವೈದ್ಯಕೀಯ ತಜ್ಞರಾದ ಡಾ.ಪಿ.ವಿ.ಭಂಡಾರಿ, ಬೆಂಗಳೂರಿನ ಮನೋವೈದ್ಯಕೀಯ ತಜ್ಞರಾದ ಡಾ.ಶಶಿಧರ ಬೀಳಗಿ, ದಾವಣಗೆರೆ ನೇತ್ರತಜ್ಞರಾದ ಡಾ. ವಸುಧೇಂದ್ರ ಎನ್, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ರೇಡಿಯೋಲಜಿಸ್ಟ್‌ ಆಗಿರುವ ಡಾ. ರಾಜೇಶ್ ಪಂಪಾಪತಿ, ಅಭಿವೃದ್ಧಿ ಶಿಕ್ಷಣ ತಜ್ಞರು ಹಾಗೂ ಎಸ್ ಡಿಎಂಸಿ ಸಮನ್ವಯ ವೇದಿಕೆಯ ಮಹಾ ಪೋಷಕರಾದ ಡಾ.ವಿ.ಪಿ.ನಿರಂಜನಾರಾಧ್ಯ ಪತ್ರ ಬರೆದಿದ್ದು, ವರದಿಯಲ್ಲಿನ ಮಿಥ್ಯೆಗಳನ್ನು ಬಯಲಿಗೆಳೆದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವೈದ್ಯರು ಹಾಗೂ ಶಿಕ್ಷಣ ತಜ್ಞರು ಬರೆದ ಪತ್ರದಲ್ಲೇನಿದೆ?

ರಾಷ್ಟ್ರೀಯ ಶಿಕ್ಷಣ ನೀತಿ 2020 ಹಾಗೂ ರಾಷ್ಟ್ರೀಯ ಪಠ್ಯ ಕ್ರಮ ಸಿದ್ಧತೆಗಳಿಗಾಗಿ ಕರ್ನಾಟಕದ ಡಿಎಸ್ಇಆರ್‌‌ಟಿ ಸಲ್ಲಿಸಿರುವ ಮಕ್ಕಳ ಆರೋಗ್ಯ ಹಾಗೂ ಕ್ಷೇಮಗಳ ಬಗೆಗಿನ ತಜ್ಞರ ಸಲಹಾ ವರದಿಯು ಹಳಸಾಗಿ, ಅವೈಜ್ಞಾನಿಕವಾಗಿ, ಅತಿರೇಕದ್ದಾಗಿ, ಬಾಲಿಶವಾಗಿದ್ದು ಅದನ್ನು ಕೂಡಲೇ ಸಂಪೂರ್ಣವಾಗಿ ಹಿಂಪಡೆಯಬೇಕಾಗಿದೆ.

ಇಂಥದ್ದೊಂದು ಕೀಳಾದ, ಬೇಜವಾಬ್ದಾರಿಯ ವರದಿಯಲ್ಲಿ ನರಮಾನಸಿಕ ವಿಜ್ಞಾನದಲ್ಲಿ ಅಂತರರಾಷ್ಟ್ರೀಯ ಮನ್ನಣೆಯನ್ನೂ, ಖ್ಯಾತಿಯನ್ನೂ ಪಡೆದಿರುವ, ನಮ್ಮ ದೇಶದ ಅತ್ಯುನ್ನತವಾದ, ಗೌರವಾರ್ಹವಾದ ನಿಮ್ಹಾನ್ಸ್ ಸಂಸ್ಥೆಯ ಮಕ್ಕಳ ಹಾಗೂ ಹದಿಹರೆಯದ ಮನೋರೋಗ ವಿಭಾಗದ ಮುಖ್ಯಸ್ಥರಾದ ಡಾ. ಜಾನ್ ವಿಜಯ್ ಸಾಗರ್ ಅವರ ಹೆಸರನ್ನು ತಜ್ಞರ ಸಮಿತಿಯ ಅಧ್ಯಕ್ಷನೆಂದು ನೀಡಿರುವುದನ್ನು ಕಂಡು ಆ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದ ನಮಗೆ ಅತೀವ ಆಘಾತವೂ, ಬೇಸರವೂ ಆಗಿದೆ. ಮಕ್ಕಳ ಆರೋಗ್ಯದ ಬಗೆಗಿನ ಈ ತಜ್ಞರ ಸಮಿತಿಯಲ್ಲಿ ಒಬ್ಬರೇ ಒಬ್ಬ ಮಕ್ಕಳ ತಜ್ಞ ಇಲ್ಲದಿರುವುದು ಕಳವಳಕಾರಿಯಾಗಿದೆ.

ಇದನ್ನೂ ಓದಿರಿ: NEP| ಮೊಟ್ಟೆ ನೀಡಿದರೆ ಮಕ್ಕಳಲ್ಲಿ ತಾರತಮ್ಯ ವೃದ್ಧಿ: ಎನ್‌‌ಸಿಇಆರ್‌ಟಿಗೆ ರಾಜ್ಯ ಸರ್ಕಾರದ ಸಮಿತಿ ಪ್ರಸ್ತಾವನೆ

ಈ ವರದಿಯನ್ನು ಆಯುರ್ವೇದ ಹಾಗೂ ಯೋಗ ತಜ್ಞರೆಂದುಕೊಳ್ಳುವವರೇ ಬರೆದಿರುವಂತೆ ಕಾಣುತ್ತಿದ್ದು, ಅನೇಕ ಆಧಾರರಹಿತವಾದ, ಅಪಾಯಕಾರಿಯಾದ ವಿಚಾರಗಳನ್ನೇ ತುಂಬಿಸಲಾಗಿದೆ. ಆದ್ದರಿಂದ ನಿಮ್ಹಾನ್ಸ್‌ನ ನಿರ್ದೇಶಕರು ಈ ಕೂಡಲೇ ತಮ್ಮ ಸಂಸ್ಥೆಯನ್ನು ಈ ವರದಿಗೆ ತಳುಕು ಹಾಕಿರುವುದನ್ನು ಕೊನೆಗೊಳಿಸಬೇಕು ಹಾಗೂ ಡಾ. ಜಾನ್ ವಿ ಸಾಗರ್ ಅವರು ತಜ್ಞರ ಸಮಿತಿಯ ಅಧ್ಯಕ್ಷತೆಗೆ ರಾಜೀನಾಮೆ ನೀಡಿ ಈ ವರದಿಯೊಡನೆ ತಮಗೆ ಸಂಬಂಧವಿಲ್ಲವೆಂದು ಸ್ಪಷ್ಟ ಪಡಿಸಬೇಕು. ನಿಮ್ಹಾನ್ಸ್‌ನ ಎಲ್ಲಾ ತಜ್ಞರು ಹಾಗೂ ವಿದ್ಯಾರ್ಥಿಗಳು ಕೂಡ ತಮ್ಮ ಮೇರು ಸಂಸ್ಥೆಯ ಹೆಸರನ್ನು ಹೀಗೆ ದುರ್ಬಳಕೆ ಮಾಡಿ ಅವಮಾನಿಸುವುದನ್ನು ವಿರೋಧಿಸಬೇಕು.

ಮನುಷ್ಯರ ಆತ್ಮದ ಸುತ್ತಲೂ ಐದು ಕೋಶಗಳಿವೆ ಎಂದು ಈ ವರದಿಯಲ್ಲಿ ಹೇಳಲಾಗಿದ್ದು, ನಿಮ್ಹಾನ್ಸ್ ನಿರ್ದೇಶಕರು ಹಾಗೂ ಸಮಿತಿಯ ಅಧ್ಯಕ್ಷರಾಗಿದ್ದವರು ಈ ಐದು ಕೋಶಗಳ ಇರುವಿಕೆಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಈ ಕೂಡಲೇ ಒದಗಿಸಬೇಕು, ಇಲ್ಲವಾದರೆ ಈ ವರದಿಯನ್ನೇ ಹಿಂಪಡೆಯಬೇಕು.

ಯೋಗಾಭ್ಯಾಸದಿಂದ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ಎಂದು ಯಾವುದೇ ದೃಢವಾದ ಆಧಾರಗಳಿಲ್ಲದೆಯೇ ಈ ವರದಿಯಲ್ಲಿ ಹೇಳಲಾಗಿದೆ. ನಿಮ್ಹಾನ್ಸ್ ನಿರ್ದೇಶಕರು ಹಾಗೂ ಸಮಿತಿಯ ಅಧ್ಯಕ್ಷರು ಈ ಹೇಳಿಕೆಗಳಿಗೆ ದೃಢವಾದ ಸಾಕ್ಷ್ಯಾಧಾರಗಳನ್ನು ಈ ಕೂಡಲೇ ಒದಗಿಸಬೇಕು, ಇಲ್ಲವಾದರೆ ಈ ವರದಿಯನ್ನು ಹಿಂಪಡೆಯಬೇಕು. ಹಾಗೆ ಮಾಡದಿದ್ದರೆ ಮಕ್ಕಳ ಮಾನಸಿಕ ಆರೋಗ್ಯ ರಕ್ಷಣೆಗೆ ಸಾಕ್ಷ್ಯಾಧಾರಿತ ವಿಧಾನಗಳನ್ನು ನಿರಾಕರಿಸಿದಂತಾಗಿ ತೊಂದರೆಯಾಗಬಹುದು. ಅದೇ ವರದಿಯಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಪಾಲನೆಯ ಬಗ್ಗೆ ಯುನಿಸೆಫ್ 2021ರಲ್ಲಿ ಪ್ರಕಟಿಸಿರುವ ವರದಿಯನ್ನು ಹೆಸರಿಸಲಾಗಿದ್ದರೂ, ಅದರಲ್ಲಿ ಯೋಗ ಅಥವಾ ಆಯುರ್ವೇದ ಎಂಬ ಪದಗಳೇ ಕಾಣಸಿಗುವುದಿಲ್ಲ, ಅದೇ ಕಾರಣಕ್ಕೆ ಆ ವರದಿಯ ಸಲಹೆಗಳನ್ನು ಈ ವರದಿಯಲ್ಲಿ ಕಡೆಗಣಿಸಿ ಆಧಾರವಿಲ್ಲದ ಯೋಗ ಇತ್ಯಾದಿಗಳನ್ನು ತುರುಕಲಾಗಿದೆ.

ಇದನ್ನೂ ಓದಿರಿ: ಸಮಾನ ವೇತನ ಕಾನೂನು ಮಾಡಿ ಅಂದರೆ ಮೊಟ್ಟೆ, ಮಾಂಸ ತಿನ್ನಬೇಡಿ ಅಂತ ಕಾನೂನು ಮಾಡ್ತಾರೆ: ಬಾಲನ್‌

ಈ ವರದಿಯಲ್ಲಿ ಜೀವ ತಳಿಗೆ ತಕ್ಕ ಆಹಾರ, ಭಾರತೀಯರಿಗೆ ಸಸ್ಯಾಹಾರವೇ ಸೂಕ್ತ, ಅದುವೇ ಅತ್ಯುತ್ತಮ, ಭಾರತೀಯ ಆಹಾರವೇ ಶ್ರೇಷ್ಠ ಎಂಬಿತ್ಯಾದಿಯಾಗಿ ಅನೇಕ ಆಧಾರ ರಹಿತವಾದ, ಬಾಲಿಶವಾದ ಹೇಳಿಕೆಗಳಿವೆ. ವಾಸ್ತವವು ಇವೆಲ್ಲಕ್ಕೆ ವ್ಯತಿರಿಕ್ತವಾಗಿದ್ದು, 16 ದೇಶಗಳ 37 ತಜ್ಞರ ಈಟ್-ಲಾನ್ಸೆಟ್ ಆಯೋಗದ ಮಾನದಂಡಕ್ಕೆ ಹೋಲಿಸಿದರೆ ಭಾರತೀಯ ಆಹಾರವು ಅನಾರೋಗ್ಯಕರವಾಗಿದೆ ಹಾಗೂ ಭಾರತೀಯರು ಧಾನ್ಯಗಳನ್ನೇ ಹೆಚ್ಚಾಗಿ ಅವಲಂಬಿಸಿಕೊಂಡು ಸಾಕಷ್ಟು ಪ್ರೋಟೀನುಗಳನ್ನು ತಿನ್ನುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮಾತ್ರವಲ್ಲ, ಶೇ.63-79ರಷ್ಟು ಭಾರತೀಯರು, ಅದರಲ್ಲೂ ಗ್ರಾಮೀಣವಾಸಿಗಳು, ಪೌಷ್ಠಿಕ ಆಹಾರವನ್ನು ಕೊಳ್ಳಲು ಶಕ್ತರಾಗಿಲ್ಲ ಎನ್ನುವುದೂ ವರದಿಯಾಗಿದೆ. ಭಾರತದಲ್ಲಿ ಅಪೌಷ್ಠಿಕತೆಯ ಪ್ರಮಾಣವು 38.4% ದಿಂದ 2022ರ ವೇಳೆಗೆ 25%ಗೆ ಇಳಿದಿದೆ ಎಂಬ ಇನ್ನೊಂದು ಸುಳ್ಳನ್ನು ಈ ವರದಿಯಲ್ಲಿ ಹೇಳಲಾಗಿದೆ.

ಆದರೆ ವಾಸ್ತವದಲ್ಲಿ, 5ನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯನುಸಾರ 707 ಜಿಲ್ಲೆಗಳ ಪೈಕಿ 341 ಜಿಲ್ಲೆಗಳಲ್ಲಿ 2016ರಿಂದ 2021ರ ನಡುವೆ 5 ವರ್ಷದೊಳಗಿನ ಮಕ್ಕಳಲ್ಲಿ ತೀವ್ರ ಕುಪೋಷಣೆಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಇದರ ಜೊತೆಗೆ, ಕೋವಿಡ್ ನೆಪದಲ್ಲಿ ಮಾಡಲಾದ ಲಾಕ್ ಡೌನ್ ಹಾಗೂ ಶಾಲೆಗಳ ಮುಚ್ಚುವಿಕೆಯಿಂದ ಮಕ್ಕಳ ಪೋಷಣೆಯು ಇನ್ನಷ್ಟು ಕುಂಠಿತವೇ ಆಗಿದೆ.

ಈ ತಜ್ಞರೆಂಬವರ ವರದಿಯು ಜೀವನ ಶೈಲಿಯ ರೋಗಗಳಿಗೆ ಮೊಟ್ಟೆ ಹಾಗೂ ಮಾಂಸಗಳನ್ನು ದೂರಿದೆಯಾದರೂ, ಅದಕ್ಕೆ ಯಾವುದೇ ಆಧಾರಗಳನ್ನು ಒದಗಿಸಿಲ್ಲ. ಅತ್ತ, ವಿವಿಧ ಬಗೆಯ ಶರ್ಕರಗಳ, ಉದಾಹರಣೆಗೆ ಹಣ್ಣಿನ ಸಕ್ಕರೆ ಫ್ರಕ್ಟೋಸ್, ಧಾನ್ಯಗಳ ಸಕ್ಕರೆ ಗ್ಲೂಕೋಸ್, ಅತಿ ಸೇವನೆಯೇ ಬೊಜ್ಜು, ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ ಮತ್ತಿತರ ಕಾಯಿಲೆಗಳಿಗೆ ಕಾರಣವೆನ್ನುವುದಕ್ಕೆ ಬೆಟ್ಟದಷ್ಟು ಸಾಕ್ಷ್ಯಾಧಾರಗಳೀಗ ಲಭ್ಯವಿವೆ; ಮಾತ್ರವಲ್ಲ, ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಕಂಡುಬರುವ ಎಡಿಎಚ್‌ಡಿ, ಖಿನ್ನತೆ, ಆತಂಕ ಮತ್ತಿತರ ಮಾನಸಿಕ ಸಮಸ್ಯೆಗಳಿಗೂ ಇವೇ ಆಹಾರಗಳೊಂದಿಗೆ ಸಂಬಂಧ ಕಲ್ಪಿಸುವ ವರದಿಗಳೂ ಬರುತ್ತಲೇ ಇವೆ. ಇದಕ್ಕಿದಿರಾಗಿ, ಮೊಟ್ಟೆ ಹಾಗೂ ಮಾಂಸಗಳ ಸೇವನೆಯು ಬೊಜ್ಜು ಮತ್ತಿತರ ಸೋಂಕಲ್ಲದ ಕಾಯಿಲೆಗಳನ್ನು ತಡೆಯಲು ನೆರವಾಗುತ್ತವೆ ಎನ್ನುವುದಕ್ಕೂ ಸಾಕಷ್ಟು ಆಧಾರಗಳಿವೆ.

ಜೊತೆಗೆ, ಕರ್ನಾಟಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತಿ ರಾಜ್ ವಿಶ್ವವಿದ್ಯಾಲಯವು ಯಾದಗಿರಿ ಹಾಗೂ ಗದಗ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಪ್ರಯೋಜನಗಳ ಬಗ್ಗೆ ಕಳೆದ ವರ್ಷವಷ್ಟೇ ನಡೆಸಿದ ಅಧ್ಯಯನದಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆಗಳನ್ನು ಪಡೆದ ಯಾದಗಿರಿ ಜಿಲ್ಲೆಯ ಮಕ್ಕಳು ತಮ್ಮ ದೇಹದ ತೂಕ ಹಾಗೂ ಸೌಷ್ಟವವನ್ನು ಗಣನೀಯವಾಗಿ ಹೆಚ್ಚಿಸಿಕೊಂಡರೆನ್ನುವುದು ಸಾಬೀತಾಗಿದೆ. ಇದನ್ನು ಪರಿಗಣಿಸಿಯೇ ಈಗ ರಾಜ್ಯ ಹಾಗೂ ಕೇಂದ್ರ ಸರಕಾರಗಳೆರಡೂ ಹಿಂದುಳಿದ 7 ಜಿಲ್ಲೆಗಳಲ್ಲಿ ಮೊಟ್ಟೆ ನೀಡುವುದನ್ನು ಮುಂದುವರಿಸುವುದಷ್ಟೇ ಅಲ್ಲದೆ, ಇಡೀ ರಾಜ್ಯದಲ್ಲಿ 46 ದಿನ ಅದನ್ನು ನೀಡುವುದಕ್ಕೆ ಮುಂದಾಗಿವೆ. ಹಾಗಿರುವಾಗ ಈ ಸಮಿತಿಯ ವರದಿಯು ಕರ್ನಾಟಕ ಸರಕಾರದ ನಿರ್ಧಾರಕ್ಕೇ ವಿರುದ್ಧವಾಗಿದೆ. ಆದ್ದರಿಂದ, ಸರಕಾರವು ಮಕ್ಕಳಿಗೆ ಮೊಟ್ಟೆ ನೀಡುವುದನ್ನು ಕನಿಷ್ಠ 150 ದಿನಗಳಿಗೆ ವಿಸ್ತರಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.

ಇದನ್ನೂ ಓದಿರಿ: ಮಕ್ಕಳಿಗೆ ಮೊಟ್ಟೆ ಬೇಡ ಎನ್ನುವವರು ರಾಜ್ಯದ ‘ಅಪೌಷ್ಟಿಕತೆ’ ತಿಳಿದಿಲ್ಲವೇ? ಬಸವಣ್ಣನವರ ವಚನ ಓದಿಲ್ಲವೇ?

ಈ ವರದಿಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ತಪ್ಪಿಸುವುದಕ್ಕಾಗಿ ಅವರಲ್ಲಿ ಸಮಾನತೆಯಿರಬೇಕು, ಪಂಕ್ತಿ ಭೇದವಿರಬಾರದು, ಧರ್ಮಪಾಲನೆಯಾಗಬೇಕು ಎಂದೆಲ್ಲ ಹೇಳಲಾಗಿದೆ. ಮೇಲೆ ಹೇಳಲಾದ ಅಧ್ಯಯನದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಕೇವಲ ಶೇ. 4ರಷ್ಟು ಮಕ್ಕಳು ಮಾತ್ರವೇ ಮೊಟ್ಟೆಯ ಬದಲು ಬಾಳೆಹಣ್ಣನ್ನು ಆಯ್ಕೆ ಮಾಡಿದ್ದರು ಮತ್ತು ಈ 4% ಮಕ್ಕಳು ಯಾವುದೇ ತಾರತಮ್ಯ ಅಥವಾ ಮಾನಸಿಕ ವೇದನೆಗೆ ತುತ್ತಾಗಲಿಲ್ಲ. ಇದಕ್ಕೂ ಮೊದಲು 2006ರಲ್ಲಿ, ಈಗ ಮೊಟ್ಟೆ ಕೊಡಬಾರದೆನ್ನುವ ಎನ್‌ಇಪಿ ಸಮಿತಿಗಳ ಕಾರ್ಯಪಡೆಯ ಮುಖ್ಯಸ್ಥರಾಗಿರುವ ಮದನ ಗೋಪಾಲ್ ಅವರೇ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದಾಗ, ನಡೆಸಿದ್ದ ಸಮೀಕ್ಷೆಯಲ್ಲಿ ಆಗ ರಾಜ್ಯದಲ್ಲಿ ಕಲಿಯುತ್ತಿದ್ದ 58 ಲಕ್ಷ ಮಕ್ಕಳಲ್ಲಿ 50 ಲಕ್ಷ ಮಕ್ಕಳು ಬಿಸಿಯೂಟದಲ್ಲಿ ಮೊಟ್ಟೆಯನ್ನೇ ಬಯಸಿದ್ದರು. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ಮತ್ತಿತರ ಎಲ್ಲಾ ಸಮೀಕ್ಷೆಗಳಲ್ಲಿ ರಾಜ್ಯದ 86-96% ಜನರು ಮತ್ತು ಮಕ್ಕಳು ಮೊಟ್ಟೆ-ಮಾಂಸಾಹಾರವನ್ನೇ ಸೇವಿಸುವವರು ಎಂಬುದು ಸಾಬೀತಾಗಿರುವಾಗ ಇನ್ನುಳಿದ 4-14% ಮಂದಿಯ ನೆಪದಲ್ಲಿ ಇವರೆಲ್ಲ ಮಕ್ಕಳಿಗೆ ಮೊಟ್ಟೆಯಿಲ್ಲದಂತೆ ಮಾಡುವುದು ಕ್ರೂರವೂ, ಅಪ್ರಜಾಸತ್ತಾತ್ಮಕವೂ ಆಗುತ್ತದೆ. ಆದ್ದರಿಂದ ಈ ವರದಿಯ ಲೇಖಕರು ನಿಜಕ್ಕೂ ಪಂಕ್ತಿ ಭೇದ ನಿವಾರಣೆ, ಧರ್ಮಪಾಲನೆಗಳ ಬಗ್ಗೆ ಆಸಕ್ತರಾಗಿದ್ದಲ್ಲಿ ಈ ಬಹುಸಂಖ್ಯಾತ ಮಕ್ಕಳಿಗೆ ಮೊಟ್ಟೆಯನ್ನು ಒದಗಿಸಬೇಕು ಮತ್ತು ಇನ್ನುಳಿದ ಮಕ್ಕಳಿಗೆ ಅವರಿಷ್ಟದ ಆಹಾರವನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕು.

ಜೈಮಿನೀಯ ಬ್ರಾಹ್ಮಣ, ಆಯುರ್ವೇದ ಮತ್ತಿತರ ಪ್ರಾಚೀನ ಗ್ರಂಥಗಳ ಬಗ್ಗೆ ಬಹಳಷ್ಟು ಆಸ್ಥೆಯನ್ನು ತೋರಿಸಿರುವ ಈ ಸಮಿತಿಯ ಸದಸ್ಯರು ಮಾಂಸಾಹಾರಗಳನ್ನು ಪಟ್ಟಿ ಮಾಡಿ ಅವುಗಳ ಸದ್ಗುಣಗಳನ್ನು ಹೊಗಳಿ, ಅದಕ್ಕೆ ಆಧ್ಯಾತ್ಮಿಕ ಸಮರ್ಥನೆಗಳನ್ನೂ ಒದಗಿಸಿರುವ ಶತಪಥ ಬ್ರಾಹ್ಮಣ (11.7.1.3 ಮತ್ತು 12.9.1.1), ಜೈಮಿನೀಯ ಬ್ರಾಹ್ಮಣ (1.42-44), ಮನು ಸ್ಮೃತಿ (5:28-33), ಚರಕ ಸಂಹಿತೆ (ಶರೀರ ಸ್ಥಾನ 4:36-40 ಮತ್ತು 8:16, ಸೂತ್ರ ಸ್ಥಾನ 27), ಅಷ್ಟಾಂಗ ಹೃದಯ (ಸೂತ್ರ ಸ್ಥಾನ 6) ಮತ್ತು ಭಗವತ್ ಗೀತೆ (17:8-10) ಗಳನ್ನೆಲ್ಲ ಓದಿಕೊಳ್ಳಬೇಕೆಂದು ನಾವು ಸಲಹೆ ನೀಡುತ್ತಿದ್ದೇವೆ. ಹಾಗೆಯೇ, ನಮ್ಮ ನಾಡಿನ ಅತ್ಯಂತ ಗೌರವಾನ್ವಿತರಾದ, ದಾರ್ಶನಿಕ ತತ್ವಜ್ಞಾನಿಗಳಾದ, ಬುದ್ಧ ಹಾಗೂ ಬಸವಣ್ಣನವರ ಬೋಧನೆಗಳನ್ನೂ, ವಚನಗಳನ್ನೂ ಮನದಟ್ಟು ಮಾಡಿಕೊಳ್ಳಬೇಕು. ಹಾಗಾಗಿ, ಆಧುನಿಕ ವಿಜ್ಞಾನದ ಬಗ್ಗೆಯಾಗಲೀ, ಪ್ರಾಚೀನ ಗ್ರಂಥಗಳ ಬಗ್ಗೆಯಾಗಲೀ ಯಾವುದೇ ಅರಿವಿಲ್ಲದಂತೆ ಬರೆಯಲಾಗಿರುವ ಈ ಸಮಿತಿಯ ವರದಿಯನ್ನು ಈ ಕೂಡಲೇ ಸಂಪೂರ್ಣವಾಗಿ ಹಿಂಪಡೆಯಲೇಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...

ದಟ್ಟಾರಣ್ಯದೊಳಗೆ ಮೂರು ದಿನಗಳನ್ನು ಕಳೆದಿದ್ದು ಹೇಗೆ..ದಾರಿ ತಪ್ಪಿದ ಬಳಿಕ ಏನಾಯ್ತು? ನಾಪತ್ತೆ ವಿಚಾರ ಬಿಚ್ಚಿಟ್ಟ ಶರಣ್ಯ

ಕಳೆದ ಗುರುವಾರ (ಏಪ್ರಿಲ್ 2, 2026) ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ, ಮೂರು ದಿನಗಳ ಬಳಿಕ, ಅಂದರೆ ನಾಪತ್ತೆಯಾದ ನಾಲ್ಕನೇ ದಿನ ಭಾನುವಾರ (ಏಪ್ರಿಲ್ 4,...

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...