Homeಕರ್ನಾಟಕಖ್ಯಾತ ಫೋಟೊಗ್ರಾಫರ್‌‌ ಎ.ಎನ್‌. ಮುಕುಂದ (67) ನಿಧನ

ಖ್ಯಾತ ಫೋಟೊಗ್ರಾಫರ್‌‌ ಎ.ಎನ್‌. ಮುಕುಂದ (67) ನಿಧನ

- Advertisement -
- Advertisement -

ನಾಡಿನ ಖ್ಯಾತ ಫೋಟೊಗ್ರಾಫರ್‌‌ ಎ.ಎನ್‌. ಮುಕುಂದ ಅವರು ಕೊರೊನಾ ಸೋಂಕಿನಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನ ಹೊಂದಿದ್ದಾರೆ. ಸೋಂಕಿನಿಂದಾಗಿ ಅವರು ಕಳೆದ ಐದು ದಿನಗಳಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.

1955ರ ಏಪ್ರಿಲ್ 22 ರಂದು ಜನಿಸಿದ ಎ.ಎನ್.ಮುಕುಂದ ಅವರು, ಕರ್ನಾಟಕದ ಉತ್ತಮ ಫೋಟೊಗ್ರಾಫರ್‌ಗಳಲ್ಲಿ ಒಬ್ಬರು. ದಾವಣಗೆರೆಯಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮತ್ತು ಬೆಂಗಳೂರಿನ ಬಿ.ಎಮ್.ಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದರು. ವಿದ್ಯಾಭ್ಯಾಸದ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ 30 ವರ್ಷದ ಸೇವೆ ಸಲ್ಲಿಸಿದ್ದ ಅವರು 2008ರಲ್ಲಿ ಸ್ವಯಂ ನಿವೃತ್ತಿ ಪಡೆದು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವೃತ್ತಿಯಲ್ಲಿ ಇಂಜಿನಿಯರ್ ಅಗಿದ್ದ ಅವರು, ಸಾಹಿತ್ಯ ಮತ್ತು ಸಾಸ್ಕೃತಿಕ ಚಟುವಟಿಕೆಗಳ ಜೊತೆಗೆ ಗುರುತಿಸಿಕೊಂಡಿದ್ದು, ಛಾಯಾಗ್ರಾಹಕರಾಗಿ ಸಾಹಿತ್ಯಕ್ಕೆ ಪೂರಕವಾದ ಸಾಹಿತಿಗಳ ಭಾವಚಿತ್ರ, ವಿಶೇಷ ಚಿತ್ರಗಳನ್ನು ಅವರು ಕ್ಲಿಕ್ಕಿಸಿದ್ದಾರೆ.

ಇದನ್ನೂ ಓದಿ: ‘ಕೊಲುವೆನೆಂಬ ಭಾಶೆ’ ಕೃತಿ ಪರಿಚಯ: ಉಳಿಸುವ ನುಡಿಯ ಹುಡುಕುತ್ತಾ…

‘ಮುಖಮುದ್ರೆ’ ಎಂಬುದು ಎ.ಎನ್. ಮುಕುಂದ ಅವರ ವಿಶಿಷ್ಟ ಕೃತಿಯಾಗಿದ್ದು, ಅದರಲ್ಲಿ ಅವರು ಕನ್ನಡ ಸಾಹಿತ್ಯ ಲೋಕದ 50 ಮಂದಿ ಅಗ್ರಮಾನ್ಯ ಲೇಖಕರ ಸುಂದರ ಭಾವಚಿತ್ರಗಳನ್ನು ದಾಖಲಿಸಿದ್ದಾರೆ. ಕಳೆದ ಸುಮಾರು ಎರಡೂವರೆ ದಶಕಗಳಲ್ಲಿ ಅವರು ತೆಗೆದ ಸಾಹಿತಿಗಳ, ಸಂಗೀತಗಾರರ, ರಾಜಕಾರಣಿಗಳ, ಮಕ್ಕಳ ಭಾವಚಿತ್ರಗಳು ರಾಜ್ಯದ ಪ್ರತಿಷ್ಠಿತ ಕನ್ನಡ ಮತ್ತು ಇಂಗ್ಲಿಷ್‌ ನಿಯತಕಾಲಿಕೆಗಳಲ್ಲಿ, ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗಿವೆ.

ಎ.ಎನ್. ಮುಕುಂದ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೈಸೂರಿನ ಮಹಾರಾಣಿ ಕಾಲೇಜಿನ ಸಹಾಯಕ ಪ್ರೊಫೆಸರ್‌ ಜಯಶಂಕರ್‌ ಹಲಗೂರು ಅವರು ಮುಕುಂದ ಅವರೊಂದಿಗೆ ಕಳೆದ ಕ್ಷಣಗಳನ್ನು ನೆನೆದುಕೊಂಡಿದ್ದು, ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಲೇಖಕರು ಮತ್ತು ಪ್ರಕಾಶಕರಾದ ಜಿ.ಎನ್. ಮೋಹನ್ ಅವರು, “ಅವರಿಗೆ ಖಂಡಿತಾ ಧಣಿವಾಗಿರಲಿಲ್ಲ. ಆದರೆ ಅವರು ಹೊರಟೇ ಹೋದರು. ದಣಿವು ಎನ್ನುವ ಶಬ್ದಕ್ಕೂ ಎಎನ್ ಮುಕುಂದರಿಗೂ ಆರ್ಥಾತ್ ಸಂಬಂಧ ಇರಲಿಲ್ಲ. ನಮ್ಮೊಳಗೇ ಒಂದು ಸುಸ್ತು ಆವರಿಸಿದರೂ ಅವರೊಳಗಿನ ಚೈತನ್ಯ, ಮುಖದ ತುಂಬಾ ಹರಡಿಕೊಳ್ಳುತ್ತಿದ್ದ ನಗು ಎರಡಕ್ಕೂ ಕೊನೆ ಇರಲಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ತ್ಯಾಗ -ಸ್ಪೂರ್ತಿಯ ಸಂಕೇತ ಮಾತೆ ರಮಾಬಾಯಿ ಅಂಬೇಡ್ಕರ್

ಯುವ ಕವಿ ರಾಜೇಂದ್ರ ಪ್ರಸಾದ್ ಅವರು, “ಹುಷಾರಾಗಿ ಬಂದುಬಿಡ್ತಾರೆ ಅನ್ನುವ ನನ್ನ ನಂಬುಗೆ ಹುಸಿಯಾಗಿ ಬಿಡ್ತು. ನಾಕ್ಲೈದು ದಿನಗಳಿಂದ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿದ್ದರು.. ಮುಕುಂದ್ ಅಂಕಲ್ ತೋರುತ್ತಿದ್ದ ಪ್ರೀತಿ, ವಿಶ್ವಾಸ, ಕಾಳಜಿಗಳು ದೊಡ್ಡವು. ಮಾತು-ಮನಸುಗಳಿಗೆ ಏನೂ ತೋಚುತ್ತಿಲ್ಲ” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...