Homeಅಂಕಣಗಳುಭೈರಪ್ಪನವರ ಕೃತಿಗಳಿಗೆ ಒಳ್ಳೆ ವಿಮರ್ಶೆ ಬಂದಿಲ್ಲ!

ಭೈರಪ್ಪನವರ ಕೃತಿಗಳಿಗೆ ಒಳ್ಳೆ ವಿಮರ್ಶೆ ಬಂದಿಲ್ಲ!

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀವಹತ್ಯೆಗಳು ನಡೆಯುತ್ತಿವೆ. ಪ್ರವೀಣ್ ಹತ್ಯೆ, ಭಯೋತ್ಪಾದನೆ ಬಳಸಿ ತಮ್ಮ ತಂಟೆಗೆ ಬರದಂತೆ ಎಚ್ಚರಿಸುವ ಹತ್ಯೆ ಅನ್ನುವುದಾದರೆ, ಪಾಝಿಲ್ ಹತ್ಯೆ ಪ್ರತೀಕಾರವಾಗಿ ಭಯೋತ್ಪಾದನಾ ಹತ್ಯೆಯಾಗಿಯೇ ಕಾಣುತ್ತಿದೆ. ಆದರೆ ಇವರಿಬ್ಬರೂ ಮನುಷ್ಯ ಜೀವಿಗಳು. ಈ ಹತ್ಯೆಯನ್ನು ಖಂಡಿಸುವುದರಲ್ಲಿ ತಾರತಮ್ಯ ಇರಬಾರದು. ಮನುಷ್ಯನ ಜೀವ ಯಾವಯಾವುದಕ್ಕೋ ಬಲಿಯಾಗಬಹುದು, ಆದರೆ ಮನುಷ್ಯ ಮನುಷ್ಯನನ್ನ ಕೊಲ್ಲುವುದು ಎಲ್ಲರನ್ನ ಭಯದಲ್ಲಿ ಮುಳುಗಿಸುವ ಕ್ರಿಯೆ. ರಾಜ್ಯದ ಮುಖ್ಯಮಂತ್ರಿಯಾದವರು ಎಲ್ಲ ಹತ್ಯೆಗಳನ್ನು ಖಂಡಿಸುತ್ತಾರೆ, ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಾರೆ. ಆದರೆ ಕರ್ನಾಟಕವನ್ನಾಳುತ್ತಿರುವ ಸದ್ಯದ ನಾಯಕ ಕ್ರಿಯೆಗೆ ಪ್ರತಿಕ್ರಿಯೆಯಲ್ಲಿ ನಂಬಿಕೆ ಇಟ್ಟವರು. ಆದ್ದರಿಂದ ತಾರತಮ್ಯವೆಸಗಿದ್ದಾರೆ. ಸತ್ತವರ ಕುಟುಂಬಕ್ಕಾಗಲಿ ಪರಿಹಾರ ನೀಡುವ ವಿಷಯಕ್ಕಾಗಲಿ ಅವರು ತಾನು ಬಿಜೆಪಿ ಜನರ ರಕ್ಷಕನೇ ಹೊರತು ಇನ್ನಾರಿಗೂ ನಾಯಕನಲ್ಲ ಎಂಬುದನ್ನ ಸಾಬೀತುಪಡಿಸಿದ್ದಾರೆ. ಇದು ಈ ನಾಡಿಗೆ ಅವಮಾನ. ಚಿಂತಕ ಎಂ.ಎನ್ ರಾಯ್‌ರವರ ವಿದ್ವತ್ತಿನ ಅನುಯಾಯಿಯಾಗಿದ್ದ ಎಸ್.ಆರ್ ಬೊಮ್ಮಾಯಿಯವರ ಮಗನಿಂದ ತಂದೆಗೆ ಅವಮಾನವಾಗಿದೆ. ಅಷ್ಟಕ್ಕೂ ಈ ಬೊಮ್ಮಾಯಿಯವರು, ಸ್ವಪ್ರತಿಭೆ ಮತ್ತು ಸ್ವಪ್ರಯತ್ನದಿಂದ ಮುಖ್ಯಮಂತ್ರಿಯಾದವರಲ್ಲ; ಯಾವುದೋ ಮತಾಂದ ಕಂಪನಿ ನೇಮಿಸಿದ ಮೇನೇಜರ್. ’ನೀನು ಸುಮ್ಮನಿರು ಉಳಿದುದನ್ನ ನಾವು ನೋಡಿಕೊಳ್ಳುತ್ತೇವೆ’ ಎಂಬ ಆದೇಶ ಅವರು ನೇಮಕವಾದಾಗಿನಿಂದ ಚಾಲ್ತಿಯಲ್ಲಿದೆ. ಇವರ ಮನಸ್ಸಿಗೂ ಕಾಳಿ ಸ್ವಾಮಿ ಮನಸ್ಸಿಗೂ ಏನಾದರೂ ಸಂಬಂಧವಿದೆಯೇ ಎಂದು ಕರ್ನಾಟಕದ ಜನ ಚಿಂತೆಗೀಡಾಗಿದ್ದಾರಂತಲ್ಲಾ, ಥೂತ್ತೇರಿ..

*****

ಈ ರಾಜಕೀಯ ಹತ್ಯಾಕಾಂಡದಲ್ಲಿ ಒಬ್ಬನೇಒಬ್ಬ ಆರೆಸ್ಸೆಸ್ಸಿಗನಾಗಾಲಿ ಬಿಜೆಪಿ ಮುಖಂಡನಾಗಲೀ ಹತ್ಯೆಯಾದ ಉದಾಹರಣೆಯಿಲ್ಲ. ಏಕೆಂದರೆ ಅವರ ಜೀವ ದೇವನೂರರು ಹೇಳುವಂತೆ ಸಪ್ತ ಸಮುದ್ರದಾಚೆಯಿರುವ ಕಾಡಿನ ಮರದ ಪೊಟರೆಯಲ್ಲಿರುವ ಗಿಳಿಯ ದೇಹದಲ್ಲಿ ಸುರಕ್ಷಿತವಾಗಿದೆ. ಅದನ್ನ ರಕ್ಷಿಸುವ ಹೂಣೆ ಈ ಶೂದ್ರ ಜಾತಿ ಹುಡುಗರ-ಕಾರ್ಯಕರ್ತರ ಕರ್ತವ್ಯ. ಸಂಘಿಗಳ ಪ್ರಕಾರ ಯಾವುದು ಶಕ್ತಿವಂತ ಸಮೂಹವೊ ಅದು ಶಕ್ತಿಯಿಲ್ಲದ್ದನ್ನ ಜಯಿಸಿ ಅರಗಿಸಿಕೊಳ್ಳುತ್ತದಂತೆ. ಮುಸ್ಲಿಮರನ್ನ ಹೊಡೆದು ಓಡಿಸಿ ಎಂಬ ಸಂದೇಶವನ್ನ ಗೋಳವಲಕರನೇ ನೀಡಿ ಹೋಗಿದ್ದಾರೆ. ಸರಿಯಾದ ಜನಗಣತಿ ನಡೆದರೆ ಮುಸ್ಲಿಮರು ಮುವತ್ತು ಕೋಟಿ ದಾಟಬಲ್ಲರು. ಪ್ರಪಂಚದ ಯಾವ ದೇಶದಲ್ಲೂ ಇಷ್ಟ ಸಂಖ್ಯೆಯಲ್ಲಿ ಮುಸ್ಲಿಮರು ಇರಲಾರರು. ದಾಳಿಯಿಂದ ಭಾರತಕ್ಕೆ ಬಂದ ಮುಸ್ಲಿಮರಲ್ಲಿ ಬಂದವರು ಬರೀ ಸೈನಿಕರೇ ಹೊರತು ಅವರು ಹೆಂಡತಿ ಮಕ್ಕಳೊಂದಿಗೆ ಬಂದವರಲ್ಲ. ಕುಟುಂಬವನ್ನ ಇಲ್ಲೇ ಸಂಪಾದಿಸಿಕೊಂಡರು. ಹಿಂದೂ ಧರ್ಮದ ಜಾತೀಯತೆ ಮತ್ತು ಅಸ್ಪೃಶ್ಯತೆಯ ಅವಮಾನದಿಂದ ನೊಂದವರು ಹಾಗೂ ಅಮಿಷಕ್ಕೆ ಬಲಿಯಾದವರೆಲ್ಲಾ ಮುಸ್ಲಿಮರಾದರು. ಈಗ ಮುಸ್ಲಿಮರಾಗಿದ್ದರೂ ಅವರಿಗೆ ನೆಮ್ಮದಿಯಿಲ್ಲ. ಆದರೂ ಅವರಿಲ್ಲೇ ಇರುತ್ತಾರೆ. ಅವರು ಕೂಡ ಇಲ್ಲಿನ ದೇಶವಾಸಿಗಳೆಂಬುದನ್ನ ಅರ್ಥಪಡಿಸುತ್ತಿದ್ದಾರೆ. ಅವರ ಅಭದ್ರ ಸ್ಥಿತಿಯೇ ಅವರಲ್ಲಿ ದೈತ್ಯ ಶಕ್ತಿಯನ್ನ ಮೂಡಿಸುತ್ತದೆ. ಜನಾಂಗೀಯವಾದಿಗಳಿಗೆ ಇದು ಅರ್ಥವೇ ಆಗುತ್ತಿಲ್ಲವಂತಲ್ಲಾ, ಥೂತ್ತೇರಿ.

*****

ರಾಷ್ಟ್ರೋತ್ಥಾನ ಸಾಹಿತ್ಯದ ಅಗ್ರಲೇಖಕರಾದ ಎಸ್.ಎಲ್ ಭೈರಪ್ಪನವರು, ಕೆಲ ಲೇಖಕರು ಉತ್ತಮ ಕೃತಿಗಳನ್ನ ರಚಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಆಪಾದನೆಯನ್ನ ಬರೀ ಬ್ರೇಮಿನ್ ವಿಮರ್ಶಕರೇ ಹೆಚ್ಚಿರುವಾಗ ಮಾಡಿದ್ದಾರಂತಲ್ಲಾ. ಹಾಗೆ ನೋಡಿದರೆ ಕನ್ನಡ ವಿಮರ್ಶಕರ ಕಟು ಟೀಕೆಯನ್ನ ಭೈರಪ್ಪನವರು ಸಕಾರಣವಾಗಿಯೇ ಎದುರಿಸಿದ್ದಾರೆ. ಅದರಲ್ಲೂ ನವ್ಯರ ಹೊಡೆತಗಳ ಎದುರು ಭೈರಪ್ಪನವರು ಮಂಕಾಗಿ ಹೋಗಿದ್ದರು. ಏಕೆಂದರೆ ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಶಾಂತಿನಾಥ ದೇಸಾಯಿ ಇವರೆಲ್ಲಾ ಭೈರಪ್ಪನವರ ಅಗ್ರಹಾರದ ಕಾಯಿಗಳನ್ನ ಅನಾವರಣ ಮಾಡಿ ಸರಿಮಾಡಿಕೊಳ್ಳಿ ಎಂದಿದ್ದರು. ಅದರಲ್ಲೂ ನವ್ಯದಲ್ಲಿ ಹೆಚ್ಚು ದಿನ ಇರದ ತೇಜಸ್ವಿಯವರಂತೂ ಭೈರಪ್ಪನ ಆವರಣ ಕೃತಿಗೆ ಒಂದು ಸಾಲಿನ ವಿಮರ್ಶೆ ಮಾಡಿ, ’ಹೊಟ್ಟಿಗೆ ಅನ್ನ ತಿನ್ನುವವರಾರು ಇಂತಹ ಕೃತಿ ಬರೆಯಲಾರ’ ಎಂದಿದ್ದರು. ಹೀಗೆ ಭೈರಪ್ಪನವರ ಅಪಾಯಕಾರಿ ಕೃತಿಗಳ ಬಗ್ಗೆ ಎಚ್ಚರಿಸಿ ಹೋಗಿದಾರೆ. ಸರಿಯಾದ ವಿಮರ್ಶಕರಿದ್ದರೆ, ಭೈರಪ್ಪನವರ ಮಾತು ಅವರ ಹಲವು ಕಾದಂಬರಿಗಳಿಗೇ ಅನ್ವಯಿಸುತ್ತದೆಂತಲ್ಲಾ, ಥೂತ್ತೇರಿ.

******

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಕುಮಾರಣ್ಣ ಮತ್ತು ರೇವಣ್ಣ ಅಳುವುದನ್ನ ನೋಡಿದ ಜನ ದಂಗಾಗಿ ಹೋದರಂತಲ್ಲಾ. ಜನ ಸಂಘಟನಾ ಸಭೆಗಳನ್ನ ತಮ್ಮ ಜೀವಮಾನದುದ್ದಕ್ಕೂ ಮಾಡಿಕೊಂಡು ಬಂದ ದೇವೇಗೌಡರು, ತಾವೇ ರೂಪಿಸಿಕೊಂಡ ವೈರಿಗಳನ್ನ ಹತ್ತಿಕ್ಕುವ ಸಭೆಗೆ ಮೊದಲಬಾರಿಗೆ ಬರಲಾಗಲಿಲ್ಲ. ದೇವೇಗೌಡರಿಗೆ ತಮ್ಮ ಮಕ್ಕಳನ್ನ ದಾರಿ ತಪ್ಪಿಸಿದವರ ಪೈಕಿ ಚಲುವರಾಯಸ್ವಾಮಿ, ಬಾಲಕೃಷ್ಣ, ಜಮೀರ್ ಇತ್ಯಾದಿಗಳನ್ನ ಸರ್ವನಾಶಮಾಡದ ಹೊರತು ನೆಮ್ಮದಿಯಿಲ್ಲಾ. ಈಚೆಗೆ ಆ ಪಟ್ಟಿಗೆ ಕೆ.ಆರ್ ಪೇಟೆ ನಾರಾಯಣಗೌಡರು ಸೇರಿಕೊಂಡಿದ್ದಾರೆ. ಈ ನಾರಾಯಣಗೌಡರ ಕ್ಷೇತ್ರಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ. ಇವರನ್ನ ಹೀನಾಯವಾಗಿ ನಡೆಸಿಕೊಂಡ ಕಾರಣವಾಗಿ ಕೆ.ಆರ್ ಪೇಟೆಯಲ್ಲಿ ಬಿಜೆಪಿ ಕಾಲೂರಿತು. ಇದರ ಜಾಡನ್ನೇ ಹಿಡಿದು ನೋಡುತ್ತಾ ಹೋದರೆ ಜೆಡಿಎಸ್ ಪಾರ್ಟಿ ಕರ್ನಾಟಕದಲ್ಲಿ ಬಿಜೆಪಿ ಕಾಲೂರುವಂತೆ ಮಾಡಲು ಬಹಳ ಶ್ರಮವಹಿಸುತ್ತಿರುವುದು ಎದ್ದು ಕಾಣುತ್ತಿದೆಯಲ್ಲಾ. ಕರ್ನಾಟಕದಲ್ಲಿ ಮೂರನೇ ಪಾರ್ಟಿಯೊಂದು ಇರಲೇಬೇಕೆಂದು, ಅದಕ್ಕಾಗಿ ಶ್ರಮಿಸಿದ್ದವರೆಲ್ಲಾ ಒಬ್ಬೊಬ್ಬರೇ ಹಲ್ಲುಕಳಚಿದಂತೆ ಬಿದ್ದುಹೋಗುತ್ತಿರುವ ಬಗ್ಗೆ ಯೋಚಿಸಿ ಕಣ್ಣೀರು ಹಾಕಬೇಕಿತ್ತು. ಅದರ ಬದಲು ಚಲುವರಾಯಸ್ವಾಮಿಯನ್ನ ಸೋಲಿಸಲೋಸ್ಕರ ಜನರನ್ನ ಭಾವುಕರನ್ನಾಗಿಸಲು ಕಣ್ಣೀರು ಹಾಕಬಾರದಿತ್ತು. ರೇವಣ್ಣ ಕುಮಾರಣ್ಣ ಅಳುವುದನ್ನ ನೋಡಿದ ನಾಗಮಂಗಲದ ಜನರು, ರೇವಣ್ಣ ಕಣ್ಣೀರು ಹಾಕಿದವರಲ್ಲ, ಅಂತಹ ಮನುಷ್ಯ ಅಳುತ್ತಿರಬೇಕಾದರೆ ಏನೋ ಭಾರಿ ಕುಟುಂಬ ಸಮಸ್ಯೆ ಇರಬೇಕೆಲ್ಲ, ಎಂದು ಗಾಬರಿ ಮುಖದಲ್ಲಿ ಚರ್ಚಿಸುತ್ತಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: “ನಮ್ಮ ರೈಲ್ವೆ ಬೋಗಿಗಳನ್ನ ನೋಡಿದ್ದೀರಾ!”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...