Homeಮುಖಪುಟಕಾನ್ಪುರದ 256 ಪಾನ್, ಸಮೋಸ, ಚಾಟ್ ಮಾರಾಟಗಾರರು ಕೋಟ್ಯಾಧಿಪತಿಗಳು!

ಕಾನ್ಪುರದ 256 ಪಾನ್, ಸಮೋಸ, ಚಾಟ್ ಮಾರಾಟಗಾರರು ಕೋಟ್ಯಾಧಿಪತಿಗಳು!

- Advertisement -
- Advertisement -

ಬೀದಿ ಬದಿಯಲ್ಲಿ ಪಾನ್ ಮಸಾಲಾ, ಚಾಟ್ಸ್, ಸಮೋಸಾ ಮಾರಾಟಗಾರರು ಇನ್ನೇಷ್ಟು ದುಡಿಯಲು ಸಾಧ್ಯ ಎಂದುಕೊಂಡಿರುವ ಜನರಿಗೆ ಆದಾಯ ತೆರಿಗೆ ಇಲಾಖೆಯ ತನಿಖೆ ನಿಜಕ್ಕೂ ಆಶ್ಚರ್ಯಕ್ಕೆ ನೂಕುತ್ತದೆ. ಕಾನ್ಪುರದ 256 ಮಂದಿ ಪಾನ್, ಸಮೋಸ, ಚಾಟ್ ಮಾರಾಟಗಾರರು ಕೋಟ್ಯಾಧಿಪತಿಗಳು!

ಉತ್ತರ ಪ್ರದೇಶದ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ನಡೆಸಿದ ತನಿಖೆಯ ಪ್ರಕಾರ, ಕಾನ್ಪುರ ನಗರದ ಪಾನ್, ಸಮೋಸಾ ಮತ್ತು ಚಾಟ್ ಮಾರಾಟಗಾರರು ಕೋಟ್ಯಾಧಿಪತಿಗಳು ಎಂದು ತಿಳಿದುಬಂದಿದೆ. ರಸ್ತೆಬದಿಯ ತಿಂಡಿಗಳು ಮತ್ತು ತಿನ್ನಬಹುದಾದ ವಸ್ತುಗಳನ್ನು ಮಾರಾಟ ಮಾಡುವ 256 ಜನರು ಕೋಟ್ಯಾಧಿಪತಿಗಳು ಎಂದು ವರದಿ ತಿಳಿಸಿದೆ.

ಅಧ್ಯಯನದ ಪ್ರಕಾರ, ರಸ್ತೆ ಬದಿಯಲ್ಲಿ, ಕಸದ ಗುಡ್ಡೆಗಳಲ್ಲಿ ಚಿಂದಿ ಆಯುವವರಾಗಿ ಕೆಲಸ ಮಾಡುವ ಜನರು ಪ್ರತಿ ವ್ಯಕ್ತಿಗೆ ಮೂರು ಕಾರುಗಳಿಗಿಂತ ಹೆಚ್ಚಿನ ವಾಹನಗಳನ್ನು ಹೊಂದಿರುವುದು ಇದೇ ವರದಿಯಲ್ಲಿ ಕಂಡುಬಂದಿದೆ.

ಡೇಟಾ ಸಾಫ್ಟ್‌ವೇರ್ ಮತ್ತು ಇತರ ತಾಂತ್ರಿಕ ಪರಿಕರಗಳ ಸಹಾಯದಿಂದ ನಡೆಸಿದ ಈ ಸಮೀಕ್ಷೆಯಲ್ಲಿ 256 ಮಂದಿ ಕೋಟ್ಯಾಧಿಪತಿಗಳು ಆದಾಯ ತೆರಿಗೆಯ ಹೆಸರಿನಲ್ಲಿ ತೆರಿಗೆಯನ್ನು ಪಾವತಿಸುವುದಿಲ್ಲ. ಜೊತೆಗೆ ಜಿಎಸ್‌ಟಿಯನ್ನು ನೀಡುವುದಿಲ್ಲ, ನೀಡಿಲ್ಲ ಎಂಬುದು ವರದಿಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: ನಾಯಿ, ಆಮೆಗಳನ್ನು ವರದಕ್ಷಿಣೆ ಕೇಳಿದ ವರ: ಜೈಲಿಗೆ ತಳ್ಳಿದ ಪೊಲೀಸರು

ವರದಿಗಳ ಪ್ರಕಾರ, ಚಿಂದಿ ವ್ಯಾಪಾರಿಯೊಬ್ಬರು ಎರಡು ವರ್ಷಗಳಲ್ಲಿ 10 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಮೂರು ಆಸ್ತಿಗಳನ್ನು ಖರೀದಿಸಿದ್ದಾರೆ. ಆರ್ಯನಗರದ ಎರಡು ಪಾನ್ ಅಂಗಡಿಗಳ ಮಾಲೀಕರು, ಸ್ವರೂಪ್ ನಗರದಲ್ಲಿ ಒಂದು ಮತ್ತು ಬಿರ್ಹಾನಾ ರಸ್ತೆಯಲ್ಲಿ 5 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಕೋವಿಡ್ ಅವಧಿಯಲ್ಲಿ ಖರೀದಿಸಿದ್ದಾರೆ.

ಬಾಡಿಗೆ ವಾಹನಗಳಲ್ಲಿ ಇಲ್ಲಿ ವ್ಯವಹಾರವನ್ನು ನಡೆಸುವವರು ಪ್ರತಿದಿನ ಬಾಡಿಗೆ ಕಟ್ಟಲು ಹೆಣಗಾಡುತ್ತಿದ್ದಾರೆ ಎಂದು ಭಾವಿಸಿದರೆ ಖಂಡಿತ ಅದು ನಮ್ಮ ತಪ್ಪು ಕಲ್ಪನೆ. ಮಾಲ್ ರಸ್ತೆಯಲ್ಲಿ ತಿಂಡಿ ಮಾರಾಟ ಮಾಡುವ ವ್ಯಕ್ತಿಯೊಬ್ಬರು ಪ್ರತಿ ತಿಂಗಳು ವಿವಿಧ ವಾಹನಗಳಿಗೆ 1.25 ಲಕ್ಷ ರೂಪಾಯಿ ಬಾಡಿಗೆಗೆ ಪಾವತಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮತ್ತಷ್ಟು ಚಾಟ್ ಮಾರಾಟಗಾರರು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ರಿಯಲ್ ಎಸ್ಟೇಟ್‌ನಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ ಎಂಬುದು ವರದಿಯಿಂದ ಬಹಿರಂಗವಾಗಿದೆ.


ಇದನ್ನೂ ಓದಿ: ಕೇಂದ್ರ ಸಂಪುಟ: 78 ಸಚಿವರಲ್ಲಿ 33 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ- ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...