Homeಕರ್ನಾಟಕಝೀರೋ‌ ಟ್ರಾಫಿಕ್ ಬೇಡವೆಂದ ಮುಖ್ಯಮಂತ್ರಿ ಒಂದೆಡೆ... ಒಂದಿಡೀ ಊರಿಗೆ ಬೀಗ ಹಾಕಿಸಿದ ಮಂತ್ರಿ ಇನ್ನೊಂದೆಡೆ...!!

ಝೀರೋ‌ ಟ್ರಾಫಿಕ್ ಬೇಡವೆಂದ ಮುಖ್ಯಮಂತ್ರಿ ಒಂದೆಡೆ… ಒಂದಿಡೀ ಊರಿಗೆ ಬೀಗ ಹಾಕಿಸಿದ ಮಂತ್ರಿ ಇನ್ನೊಂದೆಡೆ…!!

- Advertisement -
- Advertisement -

ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ತನಗೆ ಝೀರೋ‌ ಟ್ರಾಫಿಕ್ ಬೇಡವೆಂದು ಜನತೆಯ ಪ್ರಶಂಸೆಗೆ ಪಾತ್ರವಾಗಿದ್ದರು. ಆ ಬಳಿಕ ಯಾವುದೋ ಒಂದು ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ತನ್ನನ್ನು ತಾನು Common Man (CM) ಎಂದು ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.‌ ಅದು ಗಿಮಿಕ್ಕೋ, ಇನ್ನೇನೋ ಎನ್ನಿ.. ಆದರೂ ಅವರ ಮಾತಿಗೆ ಅವರ ಅಧಿಕಾರಾವಧಿ ಮುಗಿಯುವವರೆಗೆ ಬದ್ಧರಾಗಿದ್ದರೆ ಅವರು ಆ ವಿಷಯದಲ್ಲಿ ಗೌರವಾರ್ಹರಾಗಿಯೇ ಉಳಿಯುತ್ತಾರೆ.

ನಮ್ಮ ದೇಶದಲ್ಲಿ ಮಾತ್ರ ಆಡಳಿತದಲ್ಲಿರುವವರು More equal than the common man. ಕೆನಡಾ, ಉರುಗ್ವೆ, ಲ್ಯಾಟಿನ್‌ ಅಮೆರಿಕಾದ ಅನೇಕ ದೇಶಗಳಲ್ಲಿ ಅಲ್ಲಿನ ಅಧ್ಯಕ್ಷರು, ಪ್ರಧಾನಿಗಳು ಕಾಮನ್ ಮ್ಯಾನ್‌ನಂತೆಯೇ ಜೀವಿಸುತ್ತಾರೆ. ಉರುಗ್ವೆ ದೇಶದ ಅಧ್ಯಕ್ಷರಾಗಿದ್ದ ಹೊಸೈ ಮುಕ್ಸಿಕ ತನ್ನ ತೋಟದಲ್ಲಿ ಸ್ವಯಂ ದುಡಿಯುತ್ತಿದ್ದರು. ತನ್ನ ಕಾರನ್ನು ತಾನೇ ಚಲಾಯಿಸುತ್ತಾ ಅಧ್ಯಕ್ಷರ ಕಚೇರಿಗೆ ಯಾವುದೇ ಬೆಂಗಾವಲು ವಾಹನವಿಲ್ಲದೇ ಹೋಗುತ್ತಿದ್ದರು. ಅವರೆಲ್ಲರ ಪ್ರಕಾರ ಝೀರೋ‌ ಟ್ರಾಫಿಕ್, ಹತ್ತಾರು ಬೆಂಗಾವಲು ವಾಹನ, ಕೈಗೊಂದು ಕಾಲಿಗೊಂದು ಆಳು ಎಂದರೆ ಅದು ನ್ಯಾಶನಲ್ ವೇಸ್ಟ್.. ಅದು ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ ಕೂಡಾ.

ಝೀರೋ‌ ಟ್ರಾಫಿಕನ್ನು, (ನ)ಗಣ್ಯ ವ್ಯಕ್ತಿ ಭೇಟಿ‌ ಕೊಡುವ ಊರಿಗೆ ಬೀಗ ಹಾಕುವುದನ್ನು ಜನರು ತಮ್ಮ ಬೇಡಿಕೆ ಈಡೇರಿಕೆಗಾಗಿ, ತಮ್ಮ ಅಸಮಾಧಾನ ತೋರ್ಪಡಿಕೆಗಾಗಿ ಪ್ರತಿಭಟಿಸುವ ಕಾರಣ ಮುಂದಿಟ್ಟು ಸಮರ್ಥಿಸುತ್ತಾರೆ. ಅಧಿಕಾರದಲ್ಲಿ‌ ಕೂತವ ಟೀಕೆ, ಪ್ರತಿಭಟನೆಗಳನ್ನು ಎದುರಿಸಲು ಸದಾ ತಯಾರಿರಬೇಕು. ಯಾಕೆಂದರೆ ಅವರು ನಮ್ಮಿಂದ ಆಯ್ಕೆಗೊಂಡವರು. ನಮ್ಮ ಹಕ್ಕುಗಳನ್ನು ಕೇಳುವ, ಅದಕ್ಕಾಗಿ‌ ಪ್ರತಿಭಟಿಸುವ ಹಕ್ಕು ನಮಗೆ ನಮ್ಮ ಸಂವಿಧಾನವೇ ಕೊಟ್ಟಿದೆ. ಪ್ರತಿಭಟನೆಗಳನ್ನು ದಮನಿಸುವುದು ಪ್ರಜಾತಂತ್ರಕ್ಕೆಸಗುವ ಅಪಚಾರ.
ಇರಲಿ ವಿಷಯಕ್ಕೆ ಬರುತ್ತೇನೆ.

ಇದನ್ನೂ ಓದಿ: ಗಂಗಾವತಿ: ಮಾದಿಗ ಸಮುದಾಯದ ಮೇಲೆ ಹಲ್ಲೆ ಪ್ರಕರಣ- ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು ಎಂದ ಹೋರಾಟಗಾರರು

ಇಂದು ನಮ್ಮ ಪಕ್ಕದೂರು ಕೊಣಾಜೆಯಲ್ಲಿರುವ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಆಗಮಿಸಿದ್ದಾರೆ. ಅದಕ್ಕಾಗಿ ಇಡೀ ಕೊಣಾಜೆಗೆ ಪೋಲೀಸರು ಬೇಲಿ ಹಾಕಿದ್ದಾರೆ. ನನ್ನೂರು ಪಜೀರಿಗೆ ಹೋಗಬೇಕೆಂದರೆ ನಮಗೆ ಸುಲಭ ಮಾರ್ಗ ಯುನಿವರ್ಸಿಟಿ ಕ್ಯಾಂಪಸ್‌ನ ಮಧ್ಯೆ ಹಾದು ಹೋಗುವ ರಸ್ತೆ. ಇಂದು ಬೆಳಗ್ಗೆ ಬಂದ್ ಮಾಡಿದ ಆ ರಸ್ತೆಯನ್ನು ಈ ಬರಹ ಬರೆಯುತ್ತಿರುವವರೆಗೂ ತೆರೆಯಲಾಗಿಲ್ಲ. ಯಾಕೆಂದರೆ ಅಶ್ವಥ್ ನಾರಾಯಣ್ ಯುನಿವರ್ಸಿಟಿಯಲ್ಲಿ‌ ಕಾರ್ಯಕ್ರಮವೊಂದಕ್ಕೆ ಬಂದಿದ್ದಾರೆ. ಕಾರ್ಯಕ್ರಮ ಯಾವತ್ತೋ ಮುಗಿದಾಗಿದೆ. ಆದರೆ ಅವರು ಯುನಿವರ್ಸಿಟಿಯ ಗೆಸ್ಟ್ ಹೌಸ್‌ನಲ್ಲಿ ಮೀಟಿಂಗ್‌ನಲ್ಲಿದ್ದಾರೆ ಎಂಬ ಕಾರಣ ನೀಡಿ ಇನ್ನೂ ಊರಿನ ಬೀಗ ತೆರೆದಿಲ್ಲ.

ಇದರಿಂದಾಗಿ ನಾವು ಪಜೀರಿಗರು ಮೂರು ಕಿಲೋ‌ಮೀಟರ್ ಸುತ್ತಿ ಬಳಸಿ ನಮ್ಮೂರಿಗೆ ಹೋಗಬೇಕು. ಇನ್ನು ಕೊಣಾಜೆಯ ಮತ್ತು ಯುನಿವರ್ಸಿಟಿಯ ಸುತ್ತ ಮುತ್ತಲಿರುವ ಹಳ್ಳಿಗರಿಗೆ ಇಂದು ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಊರಿಂದ ಹೊರ ಹೋಗದಂತೆ ಪೋಲೀಸರು ತಡೆಯುತ್ತಿದ್ದಾರೆ. ಹೊರಗಡೆ ಕೆಲಸಕ್ಕೆ ಹೋದವರು ಮಧ್ಯಾಹ್ನ ತಮ್ಮ ಕೆಲಸ ಮುಗಿಸಿ ಬಂದಿದ್ದರೆ ಅವರು ಅವರ ಮನೆಗೂ ಹೋಗುವಂತಿಲ್ಲ.. ಇದೆಂತಹ ನ್ಯಾಯ ಸ್ವಾಮೀ…? ಅಸೈಗೋಳಿಯಲ್ಲಿ ಇಳಿದು ಆಟೋದಲ್ಲಿ ಹೋಗಲೂ ಅಲ್ಲಿನ ಜನರಿಗೆ ಪೋಲೀಸರು ಬಿಡುತ್ತಿಲ್ಲ. ಇಲ್ಲಿಗೇ ಮುಗಿಯಲಿಲ್ಲ.. ಇನ್ನು ಆ ಮಾರ್ಗವಾಗಿ ಹರೇಕಳ, ಪಾವೂರು, ಇನೋಳಿ, ಮಲಾರ್, ಗ್ರಾಮಚಾವಡಿ ಮುಂತಾದ ಊರುಗಳಿಗೆ ಹೋಗುವ ಬಸ್‌ಗಳು ಮೂರು ಕಿಲೋ ಮೀಟರ್ ಸುತ್ತು ಹೊಡೆದು ನಡುಪದವು ಕ್ರಾಸ್, ಕಂಬಳಪದವು, ಪಜೀರು ದಾರಿಯಾಗಿ ಹೋಗಬೇಕು. ಸ್ವಂತ ವಾಹನವಿರುವವರು, ಬಸ್ಸಲ್ಲಿ ಹೋಗುವವರು ಹೇಗೂ ಸುತ್ತಿ ಬಳಸಿ ಹೋಗುತ್ತಾರೆ.

ಆದರೆ, ಪೋಲೀಸರು ಬೀಗ ಹಾಕಿದ ಊರಿನ ವೃದ್ಧರು, ರೋಗಿಗಳು ನಡೆದುಕೊಂಡೇ ಹೋಗಬೇಕು.. ಆಕಸ್ಮಾತ್ ಯಾರಾದರೂ, ಗರ್ಬಿಣಿಯರನ್ನು, ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯಬೇಕಾದರೆ ಅವರನ್ನು ಹೊತ್ತುಕೊಂಡೇ ಹೋಗಬೇಕಷ್ಟೇ..?

ತನ್ನನ್ನು ತಾನು ಕಾಮನ್ ಮ್ಯಾನ್ ಎಂದು ಘೋಷಿಸಿದ, ಝೀರೋ ಟ್ರಾಫಿಕ್ ಬೇಡವೆಂದ ಮುಖ್ಯಮಂತ್ರಿ ತನ್ನ ಕೈ ಕೆಳಗಿನ ಮಂತ್ರಿಯ ಈ ಘನಂದಾರಿ ಕೆಲಸಕ್ಕೇನೆನ್ನುತ್ತಾರೆ…? ನಮ್ಮೂರಲ್ಲಿ ನಾನು ಹುಟ್ಟಿದಂದಿನಿಂದಲೂ ಯುನಿವರ್ಸಿಟಿ ಇರುವುದರಿಂದ ನಮ್ಮೂರಿಗೆ ಮಂತ್ರಿಗಳು, ಮುಖ್ಯಮಂತ್ರಿಗಳು, ರಾಜ್ಯಪಾಲರು ಬರುವುದು ಸಾಮಾನ್ಯ. ನಾನು ನನ್ನ ಈವರೆಗಿನ ಬದುಕಲ್ಲಿ ಯಾವೊಬ್ಬ ಮಂತ್ರಿಯಾಗಲೀ, ಮುಖ್ಯಮಂತ್ರಿಯಾಗಲೀ, ರಾಜ್ಯಪಾಲನಾಗಲೀ ಊರಿಗೆ ಬೀಗ ಹಾಕಿಸಿದ್ದನ್ನು ನೋಡಿಲ್ಲ. ಯುನಿವರ್ಸಿಟಿ ಕ್ಯಾಂಪಸ್ ಒಳಗಡೆ ಈ ಹಿಂದೆಯೂ ಮಂತ್ರಿಗಳು ಬಂದಾಗ ವಿದ್ಯಾರ್ಥಿಗಳು ತಮ್ಮ ಬೇಡಿಕೆ ಮುಂದಿಟ್ಟು ಪ್ರತಿಭಟಿಸಿದ್ದಾರೆ. ಇಂದು ಕ್ಯಾಂಪಸ್ ಫ್ರಂಟ್‌ನ ಹುಡುಗರು ಪ್ರತಿಭಟಿಸಿದ್ದು ಮೊದಲಲ್ಲ. ಪ್ರಜಾಪ್ರಭುತ್ವದಲ್ಲಿ ಅಧಿಕಾರದಲ್ಲಿ‌ ಕೂತವನು ಪ್ರತಿಭಟನಾಕಾರರ ಅಹವಾಲು ಆಲಿಸಬೇಕೇ ಹೊರತು ಹೇಡಿಯಂತೆ ಊರಿಗೆ ಬೀಗ ಹಾಕುವುದಲ್ಲ.
ಹಿಂದೆಲ್ಲಾ ಗಣ್ಯ ವ್ಯಕ್ತಿಗಳು ಕ್ಯಾಂಪಸ್‌ಗೆ ಬರುವುದಕ್ಕಿಂತ ಐದು ನಿಮಿಷ ಮುಂಚೆ ವಾಹನಗಳನ್ನು ತಡೆಯುತ್ತಿದ್ದರು.. ಈ ರೀತಿ ಊರಿಗೇ ಬೀಗ ಹಾಕಿದ ಮೊದಲ ಮಂತ್ರಿ ನಮ್ಮ ಸನ್ಮಾನ್ಯ ಅಶ್ವಥ್ ನಾರಾಯಣರೊಬ್ಬರೇ.. ಇದನ್ನು ಹೀಗೇ ಮುಂದುವರಿಯಲು ಬಿಟ್ಟರೆ ಇನ್ನು ಈ ಪರಿಪಾಠವನ್ನು ಎಲ್ಲರೂ ಮುಂದುವರಿಸುತ್ತಾರೆ.

ಇಸ್ಮತ್ ಪಜೀರ್


ಇದನ್ನೂ ಓದಿ: ಬೆಳಗಾವಿ: ಪಾಲಿಕೆ ಚುನಾವಣೆಗೆ ಉಚಿತ ಶವಸಂಸ್ಕಾರದ ಭರವಸೆ ನೀಡಿದ ಬಿಜೆಪಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನಮ್ಮ ಶಾಸಕರು, ಮಂತ್ರಿಗಳು ರಾಜಮಹಾರಾಜರನ್ನು ಮೀರಿಸುವಂತೆ ದರ್ಬಾರು ನಡೆಸುತ್ತಿದ್ದಾರೆ. ಇದನ್ನು ಮುಸ್ಲಿಮರು ವಿರೋದಿಸಿದರೆ, ಅವರು ತಾಲಿಬಾನ್! ಈ ರೀತಿಯ ಮೂರ್ಕರ ಬೋಪರಾಕಿನಿಂದ ಈ ದೇಶ ಇಂದು ಅದೋಗತಿಗೆ ಇಳಿದಿದೆ.

LEAVE A REPLY

Please enter your comment!
Please enter your name here

- Advertisment -

ವಾಂಗ್‌ಚುಕ್ ಬಂಧನ ಕಾನೂನುಬಾಹಿರ; ಹಾಗಾಗಿ ಸರ್ಕಾರ ವಿಚಾರಣೆ ಮುಂದೂಡುವಂತೆ ಮಾಡುತ್ತಿದೆ: ಪತ್ನಿ ಗೀತಾಂಜಲಿ ಆಂಗ್ಮೋ ಆರೋಪ

"ಪರಿಸರವಾದಿ, ಲಡಾಖ್ ಹೋರಾಟಗಾರ ಸೋನಮ್ ವಾಂಗ್‌ಚುಕ್ ಬಂಧನವು ಕಾನೂನುಬಾಹಿರವಾಗಿ ನಡೆದಿದೆ. ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬುವುದು ಈಗಾಗಲೇ ಸರ್ಕಾರದ (ಸಾಲಿಸಿಟರ್ ಜನರಲ್) ಗಮನಕ್ಕೆ ಬಂದಿದೆ. ಆದ್ದರಿಂದ ಪ್ರತಿ ಸಲ ಹೊಸ ದಿನಾಂಕ...

ಬಹುಮತವಿಲ್ಲದ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಹೇಗೆ? ಕೇಸರಿ ಪಕ್ಷದ ತಂತ್ರ ತಿಳಿಸಿದ ಕಪಿಲ್ ಸಿಬಲ್

ಬಿಜೆಪಿ ಜೊತೆ ಕೈಜೋಡಿಸುವ ಪ್ರಾದೇಶಿಗಳ ಪಕ್ಷಗಳು ಅಥವಾ ಸಣ್ಣ ಪಕ್ಷಗಳಿಗೆ ರಾಜ್ಯಸಭಾ ಸಂಸದ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಭಾನುವಾರ (ಜ.18) ಎಚ್ಚರಿಕೆ ನೀಡಿದ್ದು, ಕೇಸರಿ ಪಕ್ಷ ಆರಂಭದಲ್ಲಿ ಮೈತ್ರಿ ಮಾಡಿಕೊಂಡು...

ಮಣಿಪುರ | ಜನಾಂಗೀಯ ಹಿಂಸಾಚಾರದ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಕುಕಿ ಯುವತಿ ಸಾವು

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ವೇಳೆ, ಅಂದರೆ ಮೇ 2023ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ 20 ವರ್ಷದ ಕುಕಿ ಸಮುದಾಯದ ಯುವತಿ, ದೀರ್ಘಕಾಲದ ಅನಾರೋಗ್ಯದ ನಂತರ ಜನವರಿ 10ರಂದು ನಿಧನರಾದರು ಎಂದು ನ್ಯೂಸ್‌ಲಾಂಡ್ರಿ ಶನಿವಾರ (ಜ.17)...

ಖಾಲಿ ಮನೆಯಲ್ಲಿ ನಮಾಝ್ : 12 ಜನರನ್ನು ಬಂಧಿಸಿದ ಪೊಲೀಸರು

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಹಳ್ಳಿಯೊಂದರ ಖಾಲಿ ಮನೆಯಲ್ಲಿ ನಮಾಝ್ ಮಾಡಿದ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ ವರದಿಯಾಗಿದೆ. ಅನುಮತಿ ಪಡೆಯದೆ ನಮಾಝ್ ಮಾಡಿದ್ದಾರೆ ಎಂಬ ಕಾರಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು theprint.in ವರದಿ ಮಾಡಿದೆ....

‘ನಮ್ಮ ದೇಶ ಮಾರಾಟಕ್ಕಿಲ್ಲ’: ಟ್ರಂಪ್‌ ಸಂಚಿನ ವಿರುದ್ಧ ಬೀದಿಗಿಳಿದ ಗ್ರೀನ್‌ಲ್ಯಾಂಡ್‌ ಜನತೆ, ಬೃಹತ್ ಪ್ರತಿಭಟನೆ

ಖನಿಜ ಸಮೃದ್ದ ಗ್ರೀನ್‌ಲ್ಯಾಂಡ್‌ ಅನ್ನು ವಶಪಡಿಸಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಚಿನ ವಿರುದ್ದ ಅಲ್ಲಿನ ಜನರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಶನಿವಾರ (ಜ.17) ಗ್ರೀನ್‌ಲ್ಯಾಂಡ್‌ ರಾಜಧಾನಿ ನೂಕ್‌ನಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಬೀದಿಗಳಿದ ಸಾವಿರಾರು...

ಪಾದ್ರಿ ಮೇಲೆ ಹಲ್ಲೆ ನಡೆಸಿದ ಹಿಂದುತ್ವ ಗುಂಪು : ಸಗಣಿ ತಿನ್ನಿಸಿ, ಜೈ ಶ್ರೀ ರಾಮ್ ಹೇಳುವಂತೆ ಒತ್ತಾಯ; ವರದಿ

ಒಡಿಶಾದ ಧೆಂಕನಲ್‌ನಲ್ಲಿ ಪಾದ್ರಿಯೊಬ್ಬರ ಮೇಲೆ ಬಜರಂಗದಳ ಸದಸ್ಯರು ಹಲ್ಲೆ ನಡೆಸಿದ್ದು, ಸಗಣಿ ತಿನ್ನಿಸಿ, ಜೈ ಶ್ರೀರಾಮ್ ಕೂಗುವಂತೆ ಒತ್ತಾಯಿಸಿದ್ದಾರೆ ಎಂದು ಮಕ್ತೂಬ್ ಮೀಡಿಯಾ ವರದಿ ಮಾಡಿದೆ. ಜನವರಿ 4ರಂದು ಭಾನುವಾರ ಈ ಘಟನೆ ನಡೆದಿದ್ದು,...

ವಿಮಾನ ಸೇವೆಯಲ್ಲಿ ವ್ಯತ್ಯಯ : ಇಂಡಿಗೋ ಏರ್‌ಲೈನ್ಸ್‌ಗೆ 22 ಕೋಟಿ ರೂ. ದಂಡ

ಕಳೆದ ತಿಂಗಳು ವಿಮಾನಯಾನ ಸೇವೆಯಲ್ಲಿ ಉಂಟಾದ ಭಾರೀ ವ್ಯತ್ಯಯಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನಗಳ ಮಹಾನಿರ್ದೇಶನಾಲಯ (ಡಿಜಿಸಿಎ) ಇಂಡಿಗೋ ವಿಮಾನಯಾನ ಸಂಸ್ಥೆಗೆ 22.2 ಕೋಟಿ ರೂಪಾಯಿ ದಂಡ ವಿಧಿಸಿದೆ. ಡಿಸೆಂಬರ್ 3 ರಿಂದ 5 ರವರೆಗಿನ...

ತೆಲಂಗಾಣದಲ್ಲಿ ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸುತ್ತೇವೆ: ಭಟ್ಟಿ ವಿಕ್ರಮಾರ್ಕ ಮಲ್ಲು

ರಾಜ್ಯದಲ್ಲಿ ರೋಹಿತ್ ವೇಮುಲಾ ಕಾಯ್ದೆಯನ್ನು ಆದಷ್ಟು ಬೇಗ ಜಾರಿಗೆ ತರಲಾಗುವುದು ಎಂದು ತೆಲಂಗಾಣ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು ಶನಿವಾರ ಹೇಳಿದ್ದಾರೆ. ಪ್ರಜಾ ಭವನದಲ್ಲಿ ಜಸ್ಟೀಸ್ ಫಾರ್ ರೋಹಿತ್ ವೇಮುಲಾ ಅಭಿಯಾನ ಸಮಿತಿಯ...

88 ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲು ; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ : ಸಿಎಂ ಸಿದ್ದರಾಮಯ್ಯ

ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶನಿವಾರ (ಜ.17) ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿದ ನಂತರ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಪೋಲೀಸ್ ಇಲಾಖೆ ಕೆಲವು...

ಇಂದೋರ್ ಕಲುಷಿತ ನೀರು ದುರಂತ : ಸಂತ್ರಸ್ತ ಕುಟುಂಬಗಳನ್ನು ಭೇಟಿಯಾದ ರಾಹುಲ್ ಗಾಂಧಿ

ಶನಿವಾರ (ಜ.17) ಮಧ್ಯಪ್ರದೇಶದ ಇಂದೋರ್‌ಗೆ ಭೇಟಿ ನೀಡಿದ ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಇತ್ತೀಚೆಗೆ ಸಂಭವಿಸಿದ ಕಲುಷಿತ ನೀರು ದುರಂತದ ಸಂತ್ರಸ್ತರನ್ನು ಭೇಟಿಯಾದರು. ಕಲುಷಿತ ನೀರು ಕುಡಿದು ವಾಂತಿ ಮತ್ತು...