Homeಕರ್ನಾಟಕಅಧಿಕ ಶೈಕ್ಷಣಿಕ ಅರ್ಹತೆಯಿದ್ದರೂ ಪೊಲೀಸ್ ಪೇದೆಗಳಾಗಿರುವ ರಾಜ್ಯದ ಯುವತಿಯರು

ಅಧಿಕ ಶೈಕ್ಷಣಿಕ ಅರ್ಹತೆಯಿದ್ದರೂ ಪೊಲೀಸ್ ಪೇದೆಗಳಾಗಿರುವ ರಾಜ್ಯದ ಯುವತಿಯರು

- Advertisement -
- Advertisement -

ಮೈಸೂರಿನಲ್ಲಿ ನಡೆದ ಪೊಲೀಸ್ ತರಬೇತಿ ಅಕಾಡೆಮಿಯ ಆರನೇ ಬ್ಯಾಚ್‌ನಲ್ಲಿ ತರಬೇತಿ ಮುಗಿಸಿ ಮಂಗಳವಾರ ನಡೆದ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಭಾಗವಹಿಸಿದ್ದ ಒಟ್ಟು 242 ಮಹಿಳೆಯರಲ್ಲಿ, 38 ಮಂದಿ ಸ್ನಾತಕೋತ್ತರ ಪದವೀಧರರಾಗಿದ್ದರೆ, 182 ಮಂದಿ ಪದವೀಧರರಾಗಿದ್ದಾರೆ.

ಹೌದು, ಪೊಲೀಸ್ ಪೇದೆ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಪಿಯುಸಿಯಾಗಿತ್ತು. ಆದರೆ, ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಹೆಚ್ಚಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗಿ ಎಂಟು ತಿಂಗಳ ಅವಧಿಯ ತರಬೇತಿಯನ್ನು ಪಡೆದಿದ್ದಾರೆ.

ಇದರಲ್ಲಿ 13 ಕಾನ್ಸ್‌ಟೇಬಲ್‌ಗಳು ಎಂಎ ಪದವಿ ಪಡೆದಿದ್ದರೆ, ಇತರರು ಎಂಎಸ್‌ಸಿ ಮತ್ತು ಎಂಕಾಂ ಪದವೀಧರರು. ಅಲ್ಲದೆ, 14 ಎಂಜಿನಿಯರಿಂಗ್ ಮುಗಿಸಿದ್ದರೆ, 06 ಮಂದಿ ಬಿಬಿಎ ಮತ್ತು ಬಿಸಿಎ ಪದವೀಧರರು ಸೇರಿದ್ದಾರೆ. ಸರ್ಕಾರಿ ನೌಕರಿ ಪಡೆಯುವುದು ತೀವ್ರ ಅವಶ್ಯಕತೆಯೋ ಅಥವಾ ಪೊಲೀಸ್ ಪಡೆಯಲ್ಲಿ ಕೆಲಸ ಮಾಡುವ ಉತ್ಸಾಹ ಇದಕ್ಕೆ ಕಾರಣವೋ ತಿಳಿಯದಾಗಿದೆ.

ಈ 242 ಕಾನ್ಸ್‌ಟೇಬಲ್‌ಗಳಲ್ಲಿ 214 ಜನರು ಗ್ರಾಮೀಣ ಪ್ರದೇಶಗಳಿಂದ ಬಂದವರು, 28 ಮಂದಿ ನಗರ ಭಾಗಗಳವರು. ಅವರನ್ನು ಈಗ ಚಾಮರಾಜನಗರ, ಮೈಸೂರು, ತುಮಕೂರು, ಕೊಡಗು, ರಾಯಚೂರು, ಮಂಗಳೂರು, ಕಲಬುರಗಿ ಮತ್ತು ರಾಜ್ಯದ ಇತರ ಪೊಲೀಸ್ ಘಟಕಗಳಿಗೆ ನೇಮಿಸಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಉತ್ಪಾದನೆ ನಿಲ್ಲಿಸಲಿರುವ ‘ಫೋರ್ಡ್‌​ ಮೋಟಾರ್ಸ್‌’: 4 ಸಾವಿರ ಉದ್ಯೋಗಿಗಳ ಸ್ಥಿತಿ ಅತಂತ್ರ

ಈ ಹೊಸ ನೇಮಕಾತಿಗಳಲ್ಲಿ ಶೈಕ್ಷಣಿಕವಾಗಿ ವಿಶ್ವವಿದ್ಯಾನಿಲಯದ ಟಾಪರ್‌ಗಳೂ ಸೇರಿದ್ದಾರೆ. ಆಲ್ ರೌಂಡ್ ಬೆಸ್ಟ್ ಟ್ರೇನಿ ಪ್ರಶಸ್ತಿಯನ್ನು ಪಡೆದ ಲತಾ ಎಂ ಅವರು ಬಿಎ ಪದವಿಯಲ್ಲಿ ತನ್ನ ಜಿಲ್ಲೆಗೆ ಟಾಪರ್‌ ಆಗಿದ್ದರು. ಗುಂಡಿನ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದ ಸುಜಾತ ಎಸ್ ಬಿರಾದಾರ್, ಚಂದ್ರಕಲಾ ಬಿರಾದಾರ ಮತ್ತು ಚಿತ್ರಾ ಜಿ ತಮ್ಮ ತಮ್ಮ ಹಳ್ಳಿಯ ಮೊದಲ ಪೊಲೀಸ್ ಉದ್ಯೋಗ ಪಡೆದ ಯುವತಿಯರು.

ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಅರ್ಹ ಮಹಿಳೆಯರು ಉದ್ಯೋಗಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಇದು ಒಳ್ಳೆಯ ಸಂಕೇತವಾಗಿದ್ದರೂ, ಹೆಚ್ಚಿನವರು ಇತರ ಸ್ಪರ್ಧಾತ್ಮಕ ಅಥವಾ ಅಂತರ-ವಿಭಾಗದ ಪರೀಕ್ಷೆಗಳನ್ನು ತೆಗೆದುಕೊಂಡು, ಈ ಹುದ್ದೆಗಳನ್ನು ಮತ್ತೆ ಖಾಲಿ ಮಾಡಿ ಹೋಗುತ್ತಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.


ಇದನ್ನೂ ಓದಿ: #NationalUnemploymentDay | ಪ್ರಧಾನಿ ಜನ್ಮದಿನದಂದೆ ಉದ್ಯೋಗ ಕೇಳಿದ ದೇಶದ ಜನತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...