ಚಂದನವನದಲ್ಲಿ ಅಪ್ಪು ನಿಧನ ದುಃಖದ ಜೊತೆಗೆ ಹಲವು ಪಾಠಗಳನ್ನು ಕಲಿಸುತ್ತಿದೆ. ಹೊಸ ಬೆಳವಣಿಗೆಯೊಂದು ನಡೆಯುತ್ತಿದೆ. ಕನ್ನಡ ಸಿನಿರಂಗದಲ್ಲಿ ಅತಿ ಹೆಚ್ಚು ಸುದ್ದಿಯಾಗುವ ಫ್ಯಾನ್ಸ್ ವಾರ್‌ಗೆ ಕಡಿವಾಣ ಬೀಳುವ ಸಮಯ ಬಂದಿದೆ ಎನ್ನುವ ನಂಬಿಕೆ ಚಿಗುರೊಡೆಯುತ್ತಿದೆ.
ಕನ್ನಡಿಗರ ಅಪ್ಪು, ರಾಜಕುಮಾರ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ಸಾವು ಎಲ್ಲರನ್ನು ದಿಗ್ರ್ಬಮೆಗೆ ತಳ್ಳಿದೆ. ಎಷ್ಟು ದಿನ ಇರುತ್ತೇವೊ ಇಲ್ಲವೋ ಇರುವಷ್ಟು ದಿನ ಎಲ್ಲರು ಖುಷಿಯಿಂದ ಒಗ್ಗಟ್ಟಿನಿಂದ ಇರೋಣಾ. ಈ ಸ್ಟಾರ್ ವಾರ್, ಫ್ಯಾನ್ ವಾರ್ ಎಲ್ಲ ಬಿಟ್ಟು ಬಿಡುವ ಎಂಬ ವಿಚಾರಗಳು ಮುನ್ನಲೆಗೆ ಬರುತ್ತಿವೆ.
ನವೆಂವರ್ 2 ರಂದು ಕನ್ನಡ ನಟ, ನಟಿಯರ ಅಭಿಮಾನಿಗಳು ಟ್ವಿಟರ್‌ನಲ್ಲಿ ಈ ಬಗ್ಗೆ ಅಭಿಯಾನ ನಡೆಸಿದ್ದಾರೆ. ಇದಕ್ಕೆ ಕನ್ನಡದ ನಟ, ನಟಿಯರು ಸಾಥ್ ನೀಡಿದ್ದಾರೆ. ಸಾವಿರಾರು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ #UnitedKFI #UnitedKFIFans ಹ್ಯಾಶ್‌ಟ್ಯಾಗ್ ಬಳಸಿ ಟ್ರೆಂಡ್ ಮಾಡಿದ್ದಾರೆ.
ಇದನ್ನೂ ಓದಿ: ನಾಲ್ವರಿಗೆ ಬೆಳಕಾದ ನಟ ಪುನೀತ್ ಕಣ್ಣುಗಳು: ರಾಜ್ಯದಲ್ಲಿ ಮೊದಲ ಬಾರಿಗೆ ಹೊಸ ತಂತ್ರ ಬಳಕೆ
ನವರಸ ನಾಯಕ ಜಗ್ಗೇಶ್ ಕೂಡ ಈ ಟ್ವಿಟರ್ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.
“ಈ ಭಾವ ನನ್ನ ಕಣ್ಣಲ್ಲಿ ಆನಂದಭಾಷ್ಪ ತರಿಸಿತು. ಮಾನ್ಯರೆ ನಾವೆಲ್ಲಾ ಶಾರದೆಯ ಮಕ್ಕಳು ಚಿತ್ರರಂಗ ನಮ್ಮ ಮನೆ. ಕನ್ನಡಿಗರು ನಮ್ಮ ಬಂಧುಗಳು. ನಮ್ಮ ಈ ಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು. ಮತ್ತೆ ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು. ಈಗ ಇದನ್ನ ನೋಡಿ ಹಾಲುಜೇನು ಸವಿದಂತೆ ಆಯಿತು. ಈ ಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೆ ಮುಂದುವರಿಯಲಿ love all” ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಈಭಾವ ನನ್ನಕಣ್ಣಲ್ಲಿ ಆನಂದಭಾಷ್ಪ ತರಿಸಿತು!
ಮಾನ್ಯರೆ ನಾವೆಲ್ಲಾ ಶಾರದೆಯ ಮಕ್ಕಳು ಚಿತ್ರರಂಗ ನಮ್ಮ ಮನೆ!
ಕನ್ನಡಿಗರು ನಮ್ಮ ಬಂಧುಗಳು!
ನಮ್ಮ ಈಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು!ಮತ್ತೆ ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು!ಈಗ ಇದನ್ನ ನೋಡಿ ಹಾಲುಜೇನು ಸವಿದಂತೆ ಆಯಿತು!ಈಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೆ ಮುಂದುವರಿಯಲಿlove all pic.twitter.com/FC4WM7wQ0r— ನವರಸನಾಯಕ ಜಗ್ಗೇಶ್ (@Jaggesh2) November 2, 2021
ನಟಿ ಅದಿತಿ ಪ್ರಭುದೇವ ಅವರು ಕೂಡ “ಕನ್ನಡ ಚಿತ್ರರಂಗದಲ್ಲಿ ನಾವೆಲ್ಲ ಒಂದೇ. ಸ್ಟಾಪ್ ಫ್ಯಾನ್ ವಾರ್” ಎಂದು ಹೇಳಿದ್ದಾರೆ.
Let's Be United Forever ?❤️ ಕನ್ನಡ ಚಿತ್ರರಂಗದಲ್ಲಿ ನಾವೆಲ್ಲ ಒಂದೇ…
Stop Fan War ?#UnitedKFI #UnitedKFIfans pic.twitter.com/T2dikref2W— Aditi Prabhudeva (@AditiPrabhudeva) November 2, 2021
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಫ್ಯಾನ್ಸ್ ಪೇಜ್ ಕೂಡ ಜೇನಿನ ಗೂಡು ನಾವೆಲ್ಲಾ..ಬೇರೆಯಾದರೆ ಜೇನಿಲ್ಲಾ ಎಂದು ಟ್ವೀಟ್ ಮಾಡಿದೆ.
ಜೇನಿನ ಗೂಡು ನಾವೆಲ್ಲಾ…!! ಬೇರೆಯಾದರೆ ಜೇನಿಲ್ಲಾ…!! #UnitedKFI #UnitedKFIFans pic.twitter.com/bjmPSoV9SF
— Yash Boss Official Fans Club (@YashFC) November 2, 2021
ಇದನ್ನೂ ಓದಿ: ಪುನೀತ್ ನಿಧನ: ಅರ್ಧಕ್ಕೆ ನಿಂತು ಹೋಯಿತು ಸಾಲು ಸಾಲು ಸಿನಿಮಾ
United KFI❤️#UnitedKFI #UnitedKFIFans pic.twitter.com/sJABhR6HjM
— Golden Kotresh (@Golden_Kotresha) November 2, 2021
#NewProfilePic pic.twitter.com/bQdLJvMpYF
— UNITED KFI (@UNITEDKFI8147) November 1, 2021
ಕಳೆದೆರಡು ದಿನಗಳ ಹಿಂದೆ ನಟ ಸುದೀಪ್ ಅಭಿಮಾನಿಗಳು ತಮ್ಮ ಪೇಜ್‌ನಿಂದ ಬಹಿರಂಗವಾಗಿಯೇ ಕ್ಷಮೆ ಕೇಳಿ ಪತ್ರ ಬಿಡುಗಡೆ ಮಾಡಿದ್ದರು. ’ಇಷ್ಟು ದಿನ ಬೇರೆ ನಟರನ್ನು ಟ್ರೋಲ್ ಮಾಡಿದಕ್ಕೆ, ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ಕ್ಷಮಿಸಿ, ಫ್ಯಾನ್ಸ್ ವಾರ್ ಬಿಟ್ಟು ಬಿಡೋಣ. ನಾವೆಲ್ಲಾ ಒಂದಾದರೇ ನಮ್ಮ ಚಿತ್ರರಂಗ ಬೆಳೆಯುತ್ತದೆ. ನಮ್ಮ ಒಂದು ದೊಡ್ಡ ಪಿಲ್ಲರ್ ಅನ್ನೇ ನಾವು ಕಳೆದುಕೊಂಡಿದ್ದೇವೆ. ದರ್ಶನ್, ಪುನೀತ್, ಯಶ್ ಸರ್ ಫ್ಯಾನ್ಸ್ ನನ್ನನ್ನು ಕ್ಷಮಿಸಿ” ಎಂದು ಮನವಿ ಮಾಡಿದ್ದರು.
ಎಲ್ಲರೂ ಬದಲಾಗೋಣ ?
#StopFanWars pic.twitter.com/5vyzv4ny9B
— ?????? ????????™ (@KicchaUniverse) October 31, 2021
ಇದನ್ನೂ ಓದಿ: ಅಪ್ಪು ಅಗಲಿಕೆ: ಎಲ್ಲಾ ನಟರ ಅಭಿಮಾನಿಗಳಿಂದ ’ಸ್ಟಾಪ್ ಫ್ಯಾನ್ಸ್ ವಾರ್’ ಅಭಿಯಾನ



ನಮ್ಮ ಸೆಲೆಬ್ರಿಟಿ ಗಳು , ಪಕ್ಕದ ಆಂಧ್ರ ರಾಜ್ಯದ ಸೆಲೆಬ್ರಿಟಿಗಳ ಮಾದರಿ ಸ್ನೇಹ ಸಂಬಂಧಗಳು ನಟರುಗಳಲ್ಲಿ ಬೆರಸಿ ಕರ್ನಾಟಕ ರಾಜ್ಯದ ಜನರಿಗೆ ತೋರಿಸಿದರೆ ಸಾಕು.