ಜೀವಂತವಾಗಿರುವ ರೈತರೊಬ್ಬರಿಗೆ ತಾಲೂಕು ಕಂದಾಯ ಇಲಾಖೆ ಅಧಿಕಾರಿಗಳು ಮರಣ ಪ್ರಮಾಣ ಪತ್ರ ನೀಡಿ ಬೇಜವಾಬ್ದಾರಿ ಮೆರೆದಿರುವ ಘಟನೆ ಕೋಲಾರದ ಮುಳಬಾಗಿಲಿನಲ್ಲಿ ನಡೆದಿದೆ.
ಮುಳಬಾಗಿಲು ತಾಲೂಕಿನ ಎಂ.ಹೊಸಹಳ್ಳಿ ಗ್ರಾಮದ 40 ವರ್ಷದ ರೈತ ಶಿವರಾಜ್ ಅವರಿಗೆ ಬದುಕಿರುವಾಗಲೇ ಅಧಿಕಾರಿಗಳು ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಇದರಿಂದ ರೈತ ಶಿವರಾಜ್ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ.
ತಾಲೂಕಿನಲ್ಲಿ ಈ ಹಿಂದೆ ತಹಶಿಲ್ದಾರ್ ಆಗಿದ್ದ ಜಿ.ರಾಜಶೇಖರ್ ಹಾಗೂ ಗ್ರಾಮ ಲೆಕ್ಕಿಗ ಅರವಿಂದ, ಕಂದಾಯ ನಿರೀಕ್ಷಿಕ ಸಾದತ್ ವುಲ್ಲಾ ಖಾನ್, ನಾಡಕಚೇರಿ ಶಿರೇಸ್ತೆದಾರ್ ಜಯರಾಂ ವಿರುದ್ಧ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ರೈತ ಶಿವರಾಜ್ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಜಿಂದಾಲ್ ಯೋಜನೆ ವಿರುದ್ಧ ಸಂತ್ರಸ್ತರನ್ನು ಬೆಂಬಲಿಸಿದ ‘O.P. ಜಿಂದಾಲ್ ಗ್ಲೋಬಲ್ ವಿವಿ’ ವಿದ್ಯಾರ್ಥಿಗಳು
ಪಡಿತರ ತರಲು ನ್ಯಾಯಬೆಲೆ ಅಂಗಡಿಗೆ ತೆರಳಿದ್ದಾಗ ಪಡಿತರ ಚೀಟಿಯಲ್ಲಿ ಹೆಸರು ತೆಗೆದು ಹಾಕಿರುವುದು ಶಿವರಾಜ್ ಗಮನಕ್ಕೆ ಬಂದಿದ್ದು, ಈ ವೇಳೆ ವಿಚಾರಿಸಿದಾಗ ನೀವು ಮರಣ ಹೊಂದಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದರಿಂದ ಆತಂಕಕ್ಕೆ ಒಳಗಾದ ಶಿವರಾಜ್ ತಾಲೂಕು ಕಚೇರಿಯಲ್ಲಿ ವಿಚಾರಣೆ ನಡೆಸಿದ್ದು, ಮರಣ ಪ್ರಮಣ ಪತ್ರ ನೀಡಿದ್ದಾರೆ. ಇದು ಉದ್ದೇಶಪೂರ್ವಕ ಕೃತ್ಯ, ತನ್ನ ಜಮೀನು ಕಸಿಯಲು ಮಾಡಿರುವ ತಂತ್ರ ಎಂದು ರೈತ ಆರೋಪಿಸಿದ್ದಾರೆ.
“ಪೋಸ್ಟ್ ಆಫೀಸ್, ಅಂಗನವಾಡಿ ಕೇಂದ್ರಗಳ ಬಳಿಯೆಲ್ಲಾ ಮರಣ ಪ್ರಮಾಣ ಪತ್ರ ಅಂಟಿಸಿದ್ದಾರೆ. ಇದನ್ನು ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಗೊತ್ತಿಲ್ಲ. ಪೋಸ್ಟರ್‌ಗಳನ್ನೆಲ್ಲ ಆಕಿತ್ತು ಹಾಕಿ, ಎಸಿ, ಡಿಸಿ, ಕಮಿಷನರ್, ಜಿಲ್ಲಾಡಳಿತ, ಸರ್ಕಾರ ಎಲ್ಲರಿಗೂ ತಿಳಿಸಿದೆ. ಪ್ರಯೋಜನವಾಗಲಿಲ್ಲ. ಅದಕ್ಕೆ ದೂರ ದಾಖಲಿಸಿದ್ದೇನೆ” ಎಂದು ರೈತ ಶಿವರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ವಿಕಲಾಂಗ ಮಹಿಳೆಯ ಮೇಲೆ ಟ್ರಾಫಿಕ್ ಎಎಸ್‌ಐ ಹಲ್ಲೆ; ಮಹಿಳೆಯ ಮೇಲೆಯೇ ಪ್ರಕರಣ ದಾಖಲು!


