Homeಅಂತರಾಷ್ಟ್ರೀಯಕಝಾಕಿಸ್ತಾನ್‌ನಲ್ಲಿ ಭುಗಿಲೆದ್ದ ಇಂಧನ ಬೆಲೆ ಏರಿಕೆ ವಿರೋಧಿ ಪ್ರತಿಭಟನೆ: ಅಧ್ಯಕ್ಷರ ನಿವಾಸಕ್ಕೆ ದಾಳಿ

ಕಝಾಕಿಸ್ತಾನ್‌ನಲ್ಲಿ ಭುಗಿಲೆದ್ದ ಇಂಧನ ಬೆಲೆ ಏರಿಕೆ ವಿರೋಧಿ ಪ್ರತಿಭಟನೆ: ಅಧ್ಯಕ್ಷರ ನಿವಾಸಕ್ಕೆ ದಾಳಿ

12 ಹೆಚ್ಚು ಪ್ರತಿಭಟನಾಕಾರರು ಹಾಗೂ 18 ಪೊಲೀಸರು ಮೃತಪಟ್ಟಿದ್ದು, ಗಲಭೆ ನಿಯಂತ್ರಿಸಲು ರಷ್ಯಾ ಸೇನೆ ಪ್ರವೇಶಿಸಿದೆ

- Advertisement -
- Advertisement -

ಕಝಾಕಿಸ್ತಾನ್‌ ನಲ್ಲಿ ಇಂಧನ ಬೆಲೆಗಳ ಹೆಚ್ಚಳವನ್ನು ವಿರೋಧಿಸಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. ಬೆಲೆ ಏರಿಕೆ ವಿರುದ್ದ ಪ್ರಾರಂಭವಾಗಿದ್ದ ಪ್ರತಿಭಟನೆಯು ಇದೀಗ ಸರ್ಕಾರಿ ವಿರೋಧಿ ಗಲಭೆಯಾಗಿ ಮಾರ್ಪಟ್ಟಿದ್ದು, 12 ಹೆಚ್ಚು ಪ್ರತಿಭಟನಾಕಾರರು ಹಾಗೂ 18 ಪೊಲೀಸರು ಮೃತಪಟ್ಟಿದ್ದಾರೆ. ಇದರಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ಶಿರಚ್ಛೇದ ಮಾಡಿರುವುದಾಗಿ ವರದಿಯಾಗಿದೆ.

ಬುಧವಾರದಂದು ದೇಶದ ಅತಿದೊಡ್ಡ ನಗರವಾದ ನೂರ್‌ ಸುಲ್ತಾನ್‌ನಲ್ಲಿರುವ ಅಧ್ಯಕ್ಷರ ನಿವಾಸ ಮತ್ತು ಅಲ್ಮಾಟಿಯ ಮೇಯರ್ ಕಚೇರಿಗೆ ನುಗ್ಗಿದ ಪ್ರತಿಭಟನಾಕಾರರು ರಾತ್ರಿಯಿಡೀ ಹಲವು ಕಟ್ಟಡಗಳಿಗೆ ದಾಳಿ ಮಾಡಲು ಪ್ರಯತ್ನಿಸಿದ್ದಾರೆ. ಹಲವು ಸರ್ಕಾರಿ ಕಚೇರಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.

ಇದನ್ನೂ ಓದಿ:ಗಾಲ್ವಾನ್ ಕಣಿವೆಯಲ್ಲಿ ಚೀನಿ ಧ್ವಜಾರೋಹಣ: ಮೋದಿ ಮೌನ ಪ್ರಶ್ನಿಸಿದ ಖರ್ಗೆ

“ಡಜನ್‌ಗಟ್ಟಲೆ ದಾಳಿಕೋರರನ್ನು ಹತ್ಯೆ(liquidated) ಮಾಡಲಾಗಿದೆ” ಎಂದು ಪೊಲೀಸ್ ವಕ್ತಾರ ಸಲ್ತಾನಾತ್ ಅಜಿರ್ಬೆಕ್ ರಾಜ್ಯ ಸುದ್ದಿ ವಾಹಿನಿ ಖಬರ್ -24 ಗೆ ತಿಳಿಸಿದ್ದಾರೆ. ಉಗ್ರಗಾಮಿಗಳೆಂದು ಭಾವಿಸಲಾದ ಜನರನ್ನು ಕೊಲ್ಲುವುದನ್ನು ವಿವರಿಸಲು ಬಳಸುವ ಸಾಮಾನ್ಯ ಪದವನ್ನು ಅವರು ಬಳಸಿದ್ದಾರೆ.

ಕಝಾಕಿಸ್ತಾನ್‌ ಅಧ್ಯಕ್ಷರಾದ ಕಸ್ಸೈಂ ಜೋಮಾರ್ಟ್ ಟೋಕಾಯೆವ್ ಆರಂಭದಲ್ಲಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸುವುದಕ್ಕೆ ಪ್ರಯತ್ನಿಸುತ್ತಿರುವಂತೆ ತೋರುತ್ತಿದ್ದರೂ, ನಂತರ ಅವರು ಅಶಾಂತಿಯನ್ನು ನಿಗ್ರಹಿಸಲು ಕಠಿಣಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಮತ್ತು ಇಡೀ ದೇಶದಲ್ಲಿ ಎರಡು ವಾರಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

ಅಶಾಂತಿಯನ್ನು ಅವರು “ಭಯೋತ್ಪಾದಕ ಬ್ಯಾಂಡ್” ಎಂದು ದೂಷಿಸಿದ್ದು, ಸಹಾಯಕ್ಕಾಗಿ ರಷ್ಯಾ ನೇತೃತ್ವದ ಮಿಲಿಟರಿ ಒಕ್ಕೂಟವನ್ನು ಕರೆದ್ದಾರೆ.

ಇದನ್ನೂ ಓದಿ:ಧರ್ಮ ಸಂಸದ್‌ನಲ್ಲಿ ದ್ವೇ‍ಷ ಭಾಷಣ: ಭಾರತದ ಉನ್ನತ ರಾಜತಾಂತ್ರಿಕರಿಗೆ ಸಮನ್ಸ್ ನೀಡಿದ ಪಾಕಿಸ್ತಾನ

ಈಗಾಗಲೆ, ಪ್ರತಿಭಟನೆಗಳನ್ನು ಹತ್ತಿಕ್ಕಲು ರಷ್ಯಾ ಮತ್ತು ಅದರ ಮಿತ್ರರಾಷ್ಟ್ರಗಳು ಪಡೆಗಳನ್ನು ಕಳುಹಿಸಿದೆ. ಆದರೆ ಇದನ್ನು ಅಮೇರಿಕಾ ವಿರೋಧಿಸಿದ್ದು, ‘ವಿಶ್ವವೂ ಗಮನಿಸುತ್ತಿದೆ’ ಎಂದು ಎಚ್ಚರಿಸಿದೆ.

ಪೆಟ್ರೋಲಿಯಂ ಅನಿಲ ಇಂಧನದ ಬೆಲೆಯಲ್ಲಿ ತೀವ್ರ ಏರಿಕೆಯಾಗುತ್ತಿರುವುದನ್ನು ವಿರೋಧಿಸಿ ಕಝಾಕಿಸ್ತಾನದಲ್ಲಿ ಭಾನುವಾರ ಪ್ರಾರಂಭವಾದ ಪ್ರತಿಭಟನೆಗಳು ತೀವ್ರಗೊಂಡಿದ್ದು ನಂತರದಲ್ಲಿ ದೇಶದ ಪಶ್ಚಿಮ ಅಲ್ಮಾಟಿ ಮತ್ತು ರಾಜಧಾನಿ ನೂರ್-ಸುಲ್ತಾನ್‌ಗೆ ಹಬ್ಬಿಕೊಂಡಿದೆ. ಮೂರು ದಶಕಗಳ ಹಿಂದೆ ಸ್ವಾತಂತ್ರ್ಯ ಗಳಿಸಿದ ಕಝಾಕಿಸ್ತಾನ್‌ನಲ್ಲಿ, ಪ್ರತಿಭಟನೆಯ ವೇಳೆ ನಡೆದ ಅತ್ಯಂತ ಭೀಕರ ಘಟನೆ ಇದು ಎಂದು ಮಾಧ್ಯಮಗಳು ಉಲ್ಲೇಖಿಸಿವೆ.

ಕಝಕಿಸ್ತಾನದಲ್ಲಿ ಬೆಲೆ ಏರಿಕೆಯ ಬಿಸಿ ತೀವ್ರವಾಗಿದ್ದು ಬೆಲೆ ಏರಿಕೆಯಿಂದಾಗಿ ಅಲ್ಲಿಯ ಜನರು ಬೇಸತ್ತಿದ್ದು, ಇದರ ಜೊತೆಗೆ ಹಣದುಬ್ಬರವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. 2019ರಲ್ಲಿ ಅಧ್ಯಕ್ಷನಾದ ಕಸ್ಸೈಂ ಜೋಮಾರ್ಟ್ ಟೋಕಾಯೆವ್ ಜನರ ತೀವ್ರ ವಿರೋಧಕ್ಕೆ ಗುರಿಯಾಗಿದ್ದಾರೆ.

ಇದನ್ನೂ ಓದಿ:ಲಡಾಖ್: ಪಾಂಗಾಂಗ್ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿರುವ ಚೀನಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಎಸ್‌ಐಆರ್‌ ತೀರ್ಪಿನ ನಂತರ ಒಂದೇ ಗ್ರಾಮದ 3,700 ಹೆಸರುಗಳು ಡಿಲೀಟ್!

ಪಶ್ಚಿಮ ಬಂಗಾಳದ ಮಾಲ್ಡಾದ ಹಳ್ಳಿಯೊಂದರ ಸುಮಾರು 4,000 ಮತದಾರರ ಭವಿಷ್ಯವು ತೂಗುಯ್ಯಾಲೆಯಲ್ಲಿದೆ. ಮೊದಲ ಹಂತದ ಮತದಾರರ ಪಟ್ಟಿ ಈಗಾಗಲೇ ಸ್ಥಗಿತಗೊಂಡಿದ್ದು, ಇದರಿಂದಾಗಿ ಅವರು ರಾಜ್ಯಾದ್ಯಂತ ಲಕ್ಷಾಂತರ ಜನರಂತೆ ಏಪ್ರಿಲ್ 23 ರಂದು...

ದಲಿತ ಯುವಕನ ಕಸ್ಟಡಿ ಸಾವು ಆರೋಪ : ರಾಜ್ಯ ಸರ್ಕಾರ, ಪೊಲೀಸರು, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಹೈಕೋರ್ಟ್ ನೋಟಿಸ್

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್‌) ಕರ್ನಾಟಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗೆ ಸಂಬಂಧಿಸಿದಂತೆ ಹೈಕೋರ್ಟ್ ಬುಧವಾರ (ಏ.8) ರಾಜ್ಯ ಸರ್ಕಾರ, ಪೊಲೀಸರು ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ...

ಇಬ್ಬರು ಮಕ್ಕಳ ಸಾವಿನ ಬಳಿಕ ಮಣಿಪುರದಲ್ಲಿ ಭುಗಿಲೆದ್ದ ಪ್ರತಿಭಟನೆ; ಅಶ್ರುವಾಯು ಪ್ರಯೋಗಿಸಿದ ಪೊಲೀಸರು

ಏಪ್ರಿಲ್ 7 ರಂದು ಬಿಷ್ಣುಪುರ ಜಿಲ್ಲೆಯಲ್ಲಿ ಬಾಂಬ್ ದಾಳಿಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿದ ನಂತರ ಕಣಿವೆ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದ ಕಾರಣ ಬುಧವಾರ (ಏಪ್ರಿಲ್ 8) ಮಣಿಪುರದಾದ್ಯಂತ ಉದ್ವಿಗ್ನತೆ ಉಂಟಾಗಿತ್ತು....

ಮತಕ್ಕಾಗಿ ನಗದು ಪ್ರಕರಣ: ಪಾಲಕ್ಕಾಡ್‌ನಲ್ಲಿ ಎನ್‌ಡಿಎ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

ಮತದಾನದ ಒಂದು ದಿನಕ್ಕೆ ಮುಂಚಿತವಾಗಿ ಮತದಾರರಿಗೆ ಲಂಚ ನೀಡಿದ ಆರೋಪದ ಮೇಲೆ ಪಾಲಕ್ಕಾಡ್ ಕ್ಷೇತ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರತಿನಿಧಿಗಳ ವಿರುದ್ಧ ಬುಧವಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಏಪ್ರಿಲ್ 8 ರಂದು ಬೆಳಿಗ್ಗೆ 10...

ಮಾದಕ ವ್ಯಸನ : 10 ವರ್ಷದಲ್ಲಿ ಐವರು ಗಂಡು ಮಕ್ಕಳನ್ನು ಕಳೆದುಕೊಂಡ ವೃದ್ಧ ದಂಪತಿ

ಡ್ರಗ್ ಕಾರಣದಿಂದ ವೃದ್ದ ದಂಪತಿ ತನ್ನ ಐವರು ಗಂಡು ಮಕ್ಕಳನ್ನು ಕಳೆದುಕೊಂಡ ಹೃದಯ ವಿದ್ರಾವಕ ಮತ್ತು ಆಘಾತಕಾರಿ ವರದಿ ಪಂಜಾಬ್‌ನ ಕಪುರ್ಥಲಾ ಜಿಲ್ಲೆಯ ಸುಲ್ತಾನ್‌ಪುರ ಲೋಧಿಯಿಂದ ಬಂದಿದೆ. ಸುಲ್ತಾನ್‌ಪುರ ಲೋಧಿಯ ಪಂಡೋರಿ ಮೊಹಲ್ಲಾ ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ...

ಜಮ್ಮು-ಕಾಶ್ಮೀರ: 28 ವರ್ಷಗಳ ಕಾಲ ಸೇನಾ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ ಶ್ರೀನಗರ ನ್ಯಾಯಾಲಯ

1997 ರಲ್ಲಿ ಸೇನಾ ಕಸ್ಟಡಿಗೆ ತೆಗೆದುಕೊಂಡ ಸುಮಾರು 28 ವರ್ಷಗಳ ನಂತರ ಶ್ರೀನಗರ ನ್ಯಾಯಾಲಯವು ಒಬ್ಬ ವ್ಯಕ್ತಿಯನ್ನು ಸತ್ತನೆಂದು ಘೋಷಿಸಿದೆ. ಬಂಧನದಲ್ಲಿದ್ದಾಗ ಕೊಲ್ಲಲ್ಪಟ್ಟಿದ್ದಾನೆ ಎಂಬ ತನಿಖಾ ಸಂಶೋಧನೆಗಳನ್ನು ಉಲ್ಲೇಖಿಸಿ ಮತ್ತು ಸಾವಿನ ಕಾನೂನುಬದ್ಧ...

ದೆಹಲಿ: ವೇತನ ಕೇಳಿದ್ದಕ್ಕೆ ಅಪಾಯಕಾರಿ ಚರಂಡಿ ಸ್ವಚ್ಛಗೊಳಿಸಲು ಒತ್ತಾಯ; ಸುರಕ್ಷತಾ ಸಾಧನಗಳಿಲ್ಲದೆ ಚರಂಡಿಗಿಳಿದ ನೈರ್ಮಲ್ಯ ಕಾರ್ಮಿಕ ಸಾವು

ವಾಲ್ಮೀಕಿ ಸಮುದಾಯದ ಗುತ್ತಿಗೆ ನೈರ್ಮಲ್ಯ ಕಾರ್ಮಿಕ ರಾಹುಲ್ (32) ಮಾರ್ಚ್ 30 ರಂದು ದಿಲ್ಶಾದ್ ಗಾರ್ಡನ್‌ನ ತಹಿರ್‌ಪುರದಲ್ಲಿ 8 ರಿಂದ 10 ಅಡಿ ಆಳದ ಚರಂಡಿಯನ್ನು ಹಸ್ತಚಾಲಿತವಾಗಿ ಹೂಳು ತೆಗೆಯುವಾಗ ಯಾವುದೇ ಸುರಕ್ಷತಾ...

ಗಾಝಾ | ಇಸ್ರೇಲ್ ದಾಳಿಯಲ್ಲಿ ಅಲ್‌-ಜಝೀರಾ ಪತ್ರಕರ್ತ ಸಾವು : ತೀವ್ರ ಖಂಡನೆ ವ್ಯಕ್ತಪಡಿಸಿದ ಮಾಧ್ಯಮ ಸಂಸ್ಥೆ

ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಅಲ್-ಜಝೀರಾ ಮಾಧ್ಯಮ ಸಂಸ್ಥೆಯ ಪತ್ರಕರ್ತ ಮೊಹಮ್ಮದ್ ವಿಶಾಹ್ ಸಾವನ್ನಪ್ಪಿದ್ದಾರೆ. ಗಾಝಾ ನಗರದ ಪಶ್ಚಿಮ ಭಾಗದಲ್ಲಿರುವ ಕರಾವಳಿ ರಸ್ತೆಯಾದ ಅಲ್-ರಶೀದ್ ಸ್ಟ್ರೀಟ್‌ನಲ್ಲಿ ಬುಧವಾರ (ಏ.8) ಕಾರಿನ...

ಅಸ್ಸಾಂ : ಮತದಾನದ ಹಿಂದಿನ ದಿನ ಪಕ್ಷಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಅಭ್ಯರ್ಥಿ!

ಅಸ್ಸಾಂ ವಿಧಾನಸಭೆ ಚುನಾವಣೆಗೆ ಕೇವಲ ಒಂದು ದಿನ ಬಾಕಿ ಇರುವಾಗ, ಉದಲ್ಗುರಿ (ಎಸ್‌ಟಿ) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುರೇನ್ ದೈಮರಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಎಂದು ವರದಿಯಾಗಿದೆ. ಪಕ್ಷದ ನಾಯಕತ್ವದಿಂದ...

ವಿಧಾನಸಭೆ ಚುನಾವಣೆ : ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ಇಂದು ಮತದಾನ

ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭೆಯ ಚುನಾವಣೆಯ ಮತದಾನ ಇಂದು (ಏ.9, 2026) ಒಂದೇ ಹಂತದಲ್ಲಿ ನಡೆಯಲಿದೆ. ಈಗಾಗಲೇ ಮತದಾನ ಆರಂಭಗೊಂಡಿದೆ. ಅಸ್ಸಾಂನ 126 ಸದಸ್ಯ ಬಲದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯು...