Homeಮುಖಪುಟಮಾದಕ ವ್ಯಸನ : 10 ವರ್ಷದಲ್ಲಿ ಐವರು ಗಂಡು ಮಕ್ಕಳನ್ನು ಕಳೆದುಕೊಂಡ ವೃದ್ಧ ದಂಪತಿ

ಮಾದಕ ವ್ಯಸನ : 10 ವರ್ಷದಲ್ಲಿ ಐವರು ಗಂಡು ಮಕ್ಕಳನ್ನು ಕಳೆದುಕೊಂಡ ವೃದ್ಧ ದಂಪತಿ

- Advertisement -
- Advertisement -

ಡ್ರಗ್ ಕಾರಣದಿಂದ ವೃದ್ದ ದಂಪತಿ ತನ್ನ ಐವರು ಗಂಡು ಮಕ್ಕಳನ್ನು ಕಳೆದುಕೊಂಡ ಹೃದಯ ವಿದ್ರಾವಕ ಮತ್ತು ಆಘಾತಕಾರಿ ವರದಿ ಪಂಜಾಬ್‌ನ ಕಪುರ್ಥಲಾ ಜಿಲ್ಲೆಯ ಸುಲ್ತಾನ್‌ಪುರ ಲೋಧಿಯಿಂದ ಬಂದಿದೆ.

ಸುಲ್ತಾನ್‌ಪುರ ಲೋಧಿಯ ಪಂಡೋರಿ ಮೊಹಲ್ಲಾ ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ ಜೋಗಿಂದರ್ ಪಾಲ್ ಸಿಂಗ್ ಮತ್ತು ಮಂಜಿತ್ ಕೌರ್ ದಂಪತಿ ಮಕ್ಕಳನ್ನು ಕಳೆದುಕೊಂಡವರು.

ದಂಪತಿಯ ಹಿರಿಯ ಮಗ ಜಸ್ವಿಂದರ್ ಸಿಂಗ್ 2015ರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗ ಮೃತಪಟ್ಟಿದ್ದ. ಈತ, ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯ (NDPS Act) ಅಡಿಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದ.

ಏಳು ವರ್ಷಗಳ ಹಿಂದೆ ((2017-18ರಲ್ಲಿ) ಎರಡನೇ ಮಗ ಬಲ್ವಿಂದರ್ ಸಿಂಗ್ ಕೂಡ ಸಾವನ್ನಪ್ಪಿದ್ದ. ಈತ ತನ್ನ ಮನೆಯಲ್ಲೇ ಸಂಭವಿಸಿದ ಅಗ್ನಿ ಅವಘಡಕ್ಕೆ ಬಲಿಯಾಗಿದ್ದ. ಬಲ್ವಿಂದರ್ ಮಾದಕ ವ್ಯಸನಿಯಾಗಿದ್ದ. ಘಟನೆ ನಡೆದ ದಿನ ಮಾದಕ ವಸ್ತು ಸೇವಿಸಿದ ನಂತರ ಸಿಗರೇಟ್ ಸೇದುತ್ತಾ ಕೋಣೆಯಲ್ಲಿ ಮಲಗಿದ್ದಾಗ ಹಾಸಿಗೆಗೆ ಬೆಂಕಿ ತಗುಲಿ ಇಡೀ ಕೋಣೆ ಸುಟ್ಟು ಹೋಗಿತ್ತು ಎಂದು ವರದಿಯಾಗಿದೆ.

ಪೊಲೀಸ್ ಮತ್ತು ಸರ್ಕಾರಿ ಅಧಿಕಾರಿಗಳ ವರದಿಯ ಪ್ರಕಾರ, ಬಲ್ವಿಂದರ್ ಸಿಂಗ್ ಸಾವು ನೇರವಾಗಿ ಡ್ರಗ್ಸ್ ಸೇವನೆಯಿಂದ ಆಗಿದ್ದಲ್ಲ, ಬದಲಾಗಿ ಬೆಂಕಿ ಮತ್ತು ಸುಟ್ಟ ಗಾಯಗಳಿಂದ ಸಂಭವಿಸಿದೆ ಎಂದು ದಾಖಲಿಸಲಾಗಿದೆ. ಆದರೂ, ಪರೋಕ್ಷವಾಗಿ ಆತನ ಮಾದಕ ವಸ್ತು ಸೇವನೆಯೇ ಸಾವಿಗೆ ಕಾರಣ ಎಂದು ಕುಟುಂಬ ಹೇಳುತ್ತಿದೆ.

ದಂಪತಿಯ ಮೂರನೇ ಮಗ ರವಿ ಸಿಂಗ್ 2021ರಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗಿದ್ದ. ರವಿ ದೀರ್ಘಕಾಲದ ಮಾದಕ ವ್ಯಸನದಿಂದ ಬಳಲುತ್ತಿದ್ದ. ಅತಿಯಾದ ಮಾದಕ ವಸ್ತುಗಳ ಸೇವನೆಯಿಂದಾಗಿ ಸಾವಿಗೀಡಾದ ಎನ್ನಲಾಗಿದೆ.

ಸಾವಿಗೂ ಮೊದಲು ರವಿ ಅವರ ಮೇಲೆ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ರವಿ ಸಾವಿನ ನಂತರ, 2023ರಲ್ಲಿ ನಾಲ್ಕನೇ ಮಗ ಮಿಥುನ್ ಕೂಡ ಡ್ರಗ್ಸ್‌ಗೆ ಬಲಿಯಾದ. ಮಿಥುನ್ ದೀರ್ಘಕಾಲದಿಂದ ಡ್ರಗ್ಸ್‌ಗೆ ದಾಸನಾಗಿದ್ದ. ಅತಿಯಾದ ಮಾದಕ ವಸ್ತು ಸೇವನೆಯಿಂದಾಗಿ ಆರೋಗ್ಯ ಕ್ಷೀಣಿಸಿ ಮೃತಪಟ್ಟ ಎನ್ನಲಾಗಿದೆ.

ಮಿಥುನ್ ಮೇಲೆ ಮಾದಕ ವಸ್ತುಗಳ ಮಾರಾಟ ಅಥವಾ ಬಳಕೆಗೆ ಸಂಬಂಧಿಸಿದಂತೆ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜೋಗಿಂದರ್ ಪಾಲ್ ಸಿಂಗ್ ಮತ್ತು ಮಂಜಿತ್ ಕೌರ್ ಅವರ ಐದನೇ ಮತ್ತು ಕೊನೆಯ ಮಗ ಸೋನು (32), ಮಂಗಳವಾರ (ಏಪ್ರಿಲ್ 8, 2026) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸೋನು ದೀರ್ಘಕಾಲದ ಮಾದಕ ವ್ಯಸನದಿಂದಾಗಿ ತೀವ್ರವಾದ ಲಿವರ್ ಸೋಂಕು, ಎದೆನೋವು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.

ಅಮೃತಸರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆಸಿದ ಪರೀಕ್ಷೆಗಳ ಪ್ರಕಾರ, ಸೋನುಗೆ ಹೆಚ್‌ಐವಿ ಪಾಸಿಟಿವ್ ಆಗಿತ್ತು. ಆತನ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿತ್ತು. ಅಂತಿಮವಾಗಿ ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಹೃದಯಾಘಾತದಿಂದ ಆತ ಮೃತಪಟ್ಟಿದ್ದಾನೆ.

ಸೋನು ಸ್ಥಿತಿ ಗಂಭೀರವಾಗಿದ್ದಾಗ ಅವರ ತಾಯಿ ಮಂಜಿತ್ ಕೌರ್ ಕಣ್ಣೀರಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತಕ್ಷಣ ಪಂಜಾಬ್ ಸರ್ಕಾರ ಸೋನು ಅನ್ನು ಅಮೃತಸರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ವೆಚ್ಚ ಭರಿಸುವುದಾಗಿ ಘೋಷಿಸಿತ್ತು. ಆದರೆ, ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಒಳಗೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ವರದಿಯಾಗಿದೆ.

ಸೋನು ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು (ಒಂದು ಎರಡು ವರ್ಷದ ಮಗ ಮತ್ತು ಆರು ತಿಂಗಳ ಮಗಳು) ಅಗಲಿದ್ದಾನೆ. ಈ ಸಾವಿನೊಂದಿಗೆ ಜೋಗಿಂದರ್ ಪಾಲ್ ಸಿಂಗ್ ಮತ್ತು ಮಂಜಿತ್ ಕೌರ್ ದಂಪತಿಯ ಐವರು ಪುತ್ರರೂ ಮಾದಕ ವ್ಯಸನದ ಜಾಲಕ್ಕೆ ಬಲಿಯಾದಂತಾಗಿದೆ.

“ಸೋಮವಾರ (ಏ.6) ವೈದ್ಯಕೀಯ ಕಾಲೇಜಿಗೆ ಬಂದ ನಂತರ ಅವರನ್ನು (ಸೋನು) ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಚೇತರಿಕೆಯ ಲಕ್ಷಣಗಳು ಕಂಡುಬಂದರೂ, ನಂತರ ಪರಿಸ್ಥಿತಿ ಕ್ಷೀಣಿಸಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವರು ಮೃತಪಟ್ಟರು. ಕುಟುಂಬದ ಆರ್ಥಿಕ ಸಂಪನ್ಮೂಲಗಳು ಈಗಾಗಲೇ ಖಾಲಿಯಾಗಿದ್ದರಿಂದ, ನಾನು ವೈದ್ಯಕೀಯ ಕಾಲೇಜು ಅಧಿಕಾರಿಗಳಿಗೆ ವಿನಂತಿಸಿದೆ. ಅವರು ಮೃತದೇಹವನ್ನು ಮನೆಗೆ ಕಳುಹಿಸಲು ವ್ಯವಸ್ಥೆ ಮಾಡಿದರು” ಎಂದು ಕಪುರ್ಥಲಾದ ಸಿವಿಲ್ ಸರ್ಜನ್ ಸಂಜೀವ್ ಭಗತ್ ಹೇಳಿರುವುದಾಗಿ timesofindia.indiatimes.com ಬುಧವಾರ (ಏ.8) ವರದಿ ಮಾಡಿದೆ.

ಸೋನು ಸಾವಿನ ವಿಚಾರವನ್ನು ಮಂಗಳವಾರ ಸಂಜೆ ತಡವಾಗಿ ಆತನ ತಾಯಿಗೆ ತಿಳಿಸಲಾಯಿತು. ಈ ವೇಳೆ ಅವರು ಕುಸಿದು ಬಿದ್ದರು. ತನ್ನ ಐವರು ಮಕ್ಕಳನ್ನೂ ಮಾದಕ ವ್ಯಸನಕ್ಕೆ ಬಲಿ ಕೊಟ್ಟೆ ಎಂದು ಅಳಲು ತೋಡಿಕೊಂಡರು. ಸೋಮವಾರ ಆಡಳಿತಾರೂಢ ಆಮ್‌ ಆದ್ಮಿ ಪಕ್ಷ (ಎಎಪಿ) ಮತ್ತು ಕಪುರ್ಥಲಾ ಪೊಲೀಸರು ತಾಯಿಯ ಹೇಳಿಕೆಯನ್ನು ವಿರೋಧಿಸಿ ಪ್ರತ್ಯೇಕ ಹೇಳಿಕೆ ನೀಡಿದ್ದರು. ಆಕೆಯ ಉಳಿದ ನಾಲ್ವರು ಮಕ್ಕಳು ಎಂಟು ವರ್ಷಗಳ ಅವಧಿಯಲ್ಲಿ ಬೇರೆ ಬೇರೆ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಅದರಲ್ಲಿ ಒಬ್ಬ ಮಾದಕ ವ್ಯಸನದಿಂದ ಮತ್ತು ಇನ್ನೊಬ್ಬ ಮಾದಕ ದ್ರವ್ಯ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಆದರೆ ಆ ತಾಯಿ ಮಾತ್ರ, “ನನ್ನ ಎಲ್ಲಾ ಮಕ್ಕಳು ‘ಚಿಟ್ಟಾ’ (ಮಾದಕ ದ್ರವ್ಯ) ವ್ಯಸನಿಗಳಾಗಿದ್ದರು” ಎಂಬುವುದಾಗಿ ಕಣ್ಣೀರಿಡುತ್ತಿದ್ದರು ಎಂದು ವರದಿ ವಿವರಿಸಿದೆ.

ತನ್ನ ಐವರು ಮಕ್ಕಳೂ ಮಾದಕ ವ್ಯಸನಿಗಳಾಗಿದ್ದರು ಎಂಬ ಹೇಳಿಕೆಯನ್ನು ಪೊಲೀಸರು ಅಲ್ಲಗಳೆದಿದ್ದು ಆ ತಾಯಿಯ ಆಕ್ರೋಶ ಮತ್ತು ಆಕ್ರಂದನಕ್ಕೆ ಕಾರಣವಾಯಿಗಿತ್ತು. “ನನ್ನ ಮಗನ ಚಿಕಿತ್ಸೆಗೆ ಸಹಾಯ ಮಾಡಿದ್ದಕ್ಕಾಗಿ ನಾನು ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಶ್ಲಾಘಿಸುತ್ತೇನೆ, ಆದರೆ ಪೊಲೀಸರನ್ನು ಕೆಟ್ಟವರೆಂದೇ ಕರೆಯುತ್ತೇನೆ. ಕಪುರ್ಥಲಾದ ಪೊಲೀಸ್ ಅಧಿಕಾರಿಯೊಬ್ಬರು ನಾನು ಸುಳ್ಳು ಸುದ್ದಿ ಹರಡುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ಒಬ್ಬ ತಾಯಿಯ ನೋವು ಅರ್ಥವಾಗುವುದಿಲ್ಲ” ಎಂದು ತಾಯಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ತನ್ನ ನಾಲ್ವರು ಗಂಡುಮಕ್ಕಳು ತಮ್ಮ 20ರ ಹರೆಯದಲ್ಲೇ ಸಾವನ್ನಪ್ಪಿದ್ದಾರೆ ಎಂದು ಆಕೆ (ತಾಯಿ) ಸೋಮವಾರ ತಿಳಿಸಿದ್ದರು. ಜೀವಂತವಾಗಿದ್ದ ಒಬ್ಬನೇ ಮಗ 30 ವರ್ಷ ದಾಟಿದ್ದರೂ, ಈಗ ಆತ ಕೂಡ ಮೃತಪಟ್ಟಿದ್ದಾನೆ. ಪ್ರಸ್ತುತ ವೃದ್ಧ ದಂಪತಿ ತಮ್ಮ ನಾಲ್ವರು ಮೊಮ್ಮಕ್ಕಳನ್ನು ಸಲಹುವ ಜವಾಬ್ದಾರಿಯೊಂದಿಗೆ ಅನಾಥರಾಗಿ ಉಳಿದಿದ್ದಾರೆ ಎಂದು ವರದಿ ಹೇಳಿದೆ.

“ನನ್ನ ಕೊನೆಯ ಮಗ ಕೂಡ ಮಾದಕ ವ್ಯಸನಿ ಎಂದು ತಿಳಿದಿದ್ದರೂ, ಆತನಿಗೆ ಮದುವೆ ಮಾಡಿಸಿದ್ದೆ. ನಾವು ಅವನಿಗೆ ಚಿಕಿತ್ಸೆ ಕೊಡಿಸಿದ್ದೆವು. ಆತ ಸ್ವಲ್ಪ ಸಮಯದವರೆಗೆ ಗುಣಮುಖನಾಗಿದ್ದ. ನನ್ನ ಕುಟುಂಬದ ಹೆಸರು ಮುಂದುವರಿಯಬೇಕೆಂದು ನಾನು ಬಯಸಿದ್ದೆ” ಎಂದು timesofindia.indiatimes.com ವರದಿ ವಿವರಿಸಿದೆ.

ಮೃತ ಸೋನು ತಾಯಿ ಸೇರಿದಂತೆ ಪಾಂಡೋರಿ ಮೊಹಲ್ಲಾದ ಇತರ ಮಹಿಳೆಯರು ತಮ್ಮ ಪ್ರದೇಶವು ಮಾದಕ ದ್ರವ್ಯದ ವ್ಯಸನಕ್ಕೆ ಸಿಲುಕಿದೆ. ಅದು ಈಗಾಗಲೇ ಅನೇಕ ಯುವಕರ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ಸೋಮವಾರ ಪೊಲೀಸರು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ, ಅಲ್ಲಿನ ಮಹಿಳೆಯರು ಮಾದಕ ದ್ರವ್ಯಗಳ ಸುಲಭ ಲಭ್ಯತೆಯ ಬಗ್ಗೆ ತಮ್ಮ ಆಕ್ರೋಶ ಮತ್ತು ವೇದನೆಯನ್ನು ಹೊರಹಾಕಿದ್ದಾರೆ. ಚಿಕಿತ್ಸೆಗಾಗಿ ಮೂವರು ಮಾದಕ ವ್ಯಸನಿಗಳನ್ನು ಅವರ ಕುಟುಂಬದವರೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಅದೇ ಮೊಹಲ್ಲಾದ ಮತ್ತೊಬ್ಬ ಮಹಿಳೆ ಚರಂಜಿತ್ ಕೌರ್, ತನ್ನ ಇಬ್ಬರು ಗಂಡು ಮಕ್ಕಳು ಕೂಡ ಮಾದಕ ವ್ಯಸನಕ್ಕೆ ಬಲಿಯಾಗಿರುವುದಾಗಿ ಹೇಳಿದ್ದಾರೆ. ಒಬ್ಬ ಏಳು ವರ್ಷಗಳ ಹಿಂದೆ ಮತ್ತು ಇನ್ನೊಬ್ಬ ಸುಮಾರು ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ ಎಂಬುವುದಾಗಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.




 



ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...