ಚಿತ್ರೀಕರಣ ನಡೆಯುತ್ತಿರುವ ಮಲಯಾಳಂನ ಪಡವೆಟ್ಟು ಚಿತ್ರದ ನಿರ್ದೇಶಕ ಲಿಜು ಕೃಷ್ಣ ಅವರನ್ನು ಅತ್ಯಾಚಾರದ ಆರೋಪದಲ್ಲಿ ಭಾನುವಾರ (ಮಾರ್ಚ್ 6) ಕೇರಳದ ಕಣ್ಣೂರಿನಲ್ಲಿ ಬಂಧಿಸಲಾಗಿದೆ.
ಪೊಲೀಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿರುವ ಎನ್‌ಡಿಟಿವಿಗೆ, “ಲಿಜು ಕೃಷ್ಣ ಅವರನ್ನು ಐಪಿಸಿಯ ಸೆಕ್ಷನ್ 376 ರ ಅಡಿಯಲ್ಲಿ ಬಂಧಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ನಾವು ನೀಡಲು ಸಾಧ್ಯವಿಲ್ಲ, ಸಂತ್ರಸ್ತ ದೂರುದಾರರು ಚಿತ್ರರಂಗದವರಲ್ಲ. ಆದರೆ, ಲಿಜು ಕೃಷ್ಣ ಅವರಿಗೆ ತುಂಬಾ ಪರಿಚಿತರು” ಎಂದು ಹೇಳಿದ್ದಾರೆ.
ಪಡವೆಟ್ಟು ಲಿಜು ಕೃಷ್ಣ ಅವರ ಚೊಚ್ಚಲ ಚಿತ್ರವಾಗಿದೆ. ನಿರ್ದೇಶಕ ಲಿಜು ಕೃಷ್ಣ ಅವರನ್ನು ಸೋಮವಾರ (ಇಂದು) ಕೊಚ್ಚಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನಟಿ ಸಂಜನಾರಿಗೆ ಅಶ್ಲೀಲ ಮೆಸೇಜ್: ಆ್ಯಡಂ ಬಿದ್ದಪ್ಪ ಅರೆಸ್ಟ್
‘ಪಡವೆಟ್ಟು’, ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮಲಯಾಳಂ ಕಲಾವಿದರಾದ ಮಂಜು ವಾರಿಯರ್ ಮತ್ತು ನಿವಿನ್ ಪೌಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರತ್ಯೇಕ ಪ್ರಕರಣವೊಂದರಲ್ಲಿ, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಆರೋಪದ ಮೇಲೆ ಕೊಚ್ಚಿ ಮೂಲದ ಜನಪ್ರಿಯ ಟ್ಯಾಟೂ ಕಲಾವಿದ ಸುಜೀಶ್ ಪಿ.ಎಸ್ ಅವರನ್ನು ಕೇರಳ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಕನಿಷ್ಠ 6 ಮಹಿಳೆಯರ ದೂರುಗಳ ಆಧಾರದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಅವರೆಲ್ಲರೂ ಈ ಹಿಂದೆ ಟ್ಯಾಟೂ ಕಲಾವಿದನ ಗ್ರಾಹಕರಾಗಿದ್ದರು. ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ನನ್ನ ಘನತೆಗಾಗಿ ಹೋರಾಟ ಮುಂದುವರೆಸುತ್ತೇನೆ- ನಟಿ ಭಾವನಾ
ಇದನ್ನೂ ಓದಿ: ಮಜಾಭಾರತ ಷೋನಲ್ಲಿ ಟ್ರಾನ್ಸ್‌ಜೆಂಡರ್‌ಗಳಿಗೆ ಅಪಹಾಸ್ಯ: ಹೋರಾಟಗಾರ್ತಿ ಆಕ್ಷೇಪ


