Homeಕರ್ನಾಟಕ‘ನಮಗಿವೆಲ್ಲ ಹೊಸತೇನೂ ಅಲ್ಲ ಬಿಡಿ, ಸತೀಶಣ್ಣ ಚೀರ್ಸ್!’: ವ್ಯಂಗ್ಯ ಚಿತ್ರಕಾರ ದಿನೇಶ್‌ ಕುಕ್ಕುಜಡ್ಕ

‘ನಮಗಿವೆಲ್ಲ ಹೊಸತೇನೂ ಅಲ್ಲ ಬಿಡಿ, ಸತೀಶಣ್ಣ ಚೀರ್ಸ್!’: ವ್ಯಂಗ್ಯ ಚಿತ್ರಕಾರ ದಿನೇಶ್‌ ಕುಕ್ಕುಜಡ್ಕ

ಹತ್ತು ಒಳ್ಳೆಯ ಕೆಲಸ ಮಾಡಿ, ಒಂದು ಹಾಳು ಕೆಲಸ ಮಾಡಿದರೆ, ನಾವು ಕಾರ್ಟೂನಿಸ್ಟರು ಆ ಒಂದು ಹಾಳು ಕೆಲಸದ ಬಗ್ಗೆ ಮಾತ್ರ ಮಾತಾಡುತ್ತೇವೆ. ಅದು ನಮ್ಮ ವೃತ್ತಿಧರ್ಮ. ಅದು ಕಾರ್ಟೂನಿನ ಶೈಲಿ. ಅದರ ಸಂಹಿತೆಯೇ ಅಂಥದ್ದು!

- Advertisement -
- Advertisement -

ಕಳೆದ ಆರೇಳು ವರ್ಷಗಳಿಂದ ಇಡೀ ದೇಶದಲ್ಲೇ ಕಾರ್ಟೂನಿಸ್ಟ್‌ಗಳ ಮೇಲೆ ಸೋಷಿಯಲ್ ಮೀಡಿಯಾ ಗುಂಪು ದಾಳಿಗಳು, ಫಿಸಿಕಲ್ ಅಟ್ಯಾಕ್‌‌ಗಳೂ ನಡೆಯುವುದು ಸಾಮಾನ್ಯ ಎನಿಸಿಬಿಟ್ಟಿವೆ. ಎಷ್ಟೋ ಬಾರಿ ನಾನಂದುಕೊಂಡದ್ದು ಇದೆ. ಕಾರ್ಟೂನ್ ನೋಡುವುದು ಹೇಗೆ ಎಂಬ ಕುರಿತೇ ಜನರಿಗೆ ಪಠ್ಯ ಅಥವಾ ಸೆಮಿನಾರ್ ಮಾಡಬೇಕಾದ ಅಗತ್ಯವಿದೆ ಎಂದು.

ಜನಪ್ರತಿನಿಧಿಯಾದವ ಎಲ್ಲಾ ರೀತಿಯ ಟೀಕೆ ವಿಮರ್ಶೆಗಳಿಗೆ ಒಳಗಾಗಬೇಕಾದ ಒಂದು ವಿಶಿಷ್ಟ ಸನ್ನಿವೇಶವನ್ನು ಕಲ್ಪಿಸಿಕೊಟ್ಟಿದೆ ಈ ಪ್ರಜಾಪ್ರಭುತ್ವ. ಹೆಜ್ಜೆ ಹೆಜ್ಜೆಗೂ ಆತ ಜನರಿಗೆ ಉತ್ತರದಾಯಿಯೇ ಹೊರತು ಸರ್ವಾಧಿಕಾರಿಯಲ್ಲ. ಹಿಂದೆ ಶಂಕರ್ ಅವರ “ಡೋಂಟ್ ಸ್ಪೇರ್ ಮೀ” ಪುಸ್ತಿಕೆ ಹೊರಬಂದ ಬಗೆ ಮತ್ತು ಹಿನ್ನೆಲೆ ನಮಗೆಲ್ಲ ತಿಳಿದೇ ಇದೆ. ಆರ್. ಕೆ. ಲಕ್ಷ್ಮಣ್ ಮತ್ತು ಇಂದಿರಾ ಗಾಂಧಿ ಒಮ್ಮೆ ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳುವ ಸಂದರ್ಭ ಬಂದಾಗ ಕಾರ್ಯಕ್ರಮದ ಕೊನೆಯಲ್ಲಿ ಎದ್ದು ಬಂದು ಲಕ್ಷಮಣ್‌ರನ್ನು ಅಭಿನಂದಿಸಿದ ಇಂದಿರಾಜೀ “I enjoy your creations. Congratulations” ಅಂದಿದ್ದರಂತೆ!

ತಮ್ಮ ಕುರಿತಾಗಿ ಅಬು ಅಬ್ರಹಾಂ ಬರೆದ ತೀವ್ರ ಟೀಕೆಯ ಬೆತ್ತಲೆ ವ್ಯಂಗ್ಯಚಿತ್ರವನ್ನು ಆಗಿನ ರಾಷ್ಟ್ರಪತಿ ಫಕ್ರುದೀನ್ ಅಲಿ ಅಹಮದ್ ಆ ತುರ್ತುಪರಿಸ್ಥಿತಿ ಯ ಕಾಲದಲ್ಲೇ ಅರಗಿಸಿಕೊಂಡಿದ್ದರು! ಸುಮ್ಮನೆ ಈಗಿನ ಪರಿಸ್ಥಿತಿ ಯಲ್ಲಿ ಅದನ್ನೊಮ್ಮೆ ಊಹಿಸಿ ನೋಡಿ!

ಇದನ್ನೂ ಓದಿ: ‘ಸತೀಶ್ ಆಚಾರ್ಯ ಅವರೇ, ನೀವು ಆನೆಯಂತೆ‌ ನಡೆಯಿರಿ’: ಬಿಜೆಪಿ ಐಟಿ ಸೆಲ್‌ ದಾಳಿ ವಿರುದ್ದ ಆಕ್ರೋಶ

ಜಸ್ವಂತ್ ಸಿಂಗ್ ಅವರು ವಿದೇಶಾಂಗ ಸಚಿವರಾಗಿದ್ದ ಕಾಲದಲ್ಲಿ ಅವರನ್ನು ಟೀಕಿಸಿ ಸುಧೀರ್ ತೈಲಾಂಗ್ ಅವರು ಬರೆದ ವ್ಯಂಗ್ಯಚಿತ್ರವನ್ನು ಸಿಂಗ್ ಫ್ರೇಮ್‌ ಹಾಕಿಸಿ ತನ್ನ ಕೋಣೆಯಲ್ಲಿ ನೇತುಹಾಕಿದ್ದರಂತೆ! ಹೆಚ್ಚುಕಮ್ಮಿ ಅಧಿಕಾರದ ಹಮ್ಮುಬಿಮ್ಮಿನಲ್ಲೇ ಮೆರೆಯುತ್ತಿದ್ದ ತೆಲುಗಿನ ಎನ್.ಟಿ.ಆರ್. ಆಗ ‘ಆಂಧ್ರಭೂಮಿ’ ಪತ್ರಿಕೆಯಲ್ಲಿ ಕಾರ್ಟೂನ್ ಬರೆಯುತ್ತಿದ್ದ ಸುರೇಂದ್ರನ್ ಅವರು ತನ್ನನ್ನು ಟೀಕಿಸಿ ಬರೆದ ‘ಕೃಷ್ಣಾವತಾರಂ’ ಚಿತ್ರವನ್ನು ಬಹುವಾಗಿ ಮೆಚ್ಚಿದ್ದರಂತೆ! ಮುಂದ್ಯಾವತ್ತೋ ಸಂದರ್ಶನದಲ್ಲಿ ಅದನ್ನು ಹೇಳಿಕೊಂಡಿದ್ದರೂ ಕೂಡ.

ಪ್ರಜಾಪ್ರಭುತ್ವದ ಕಾಲ ಹಾಗಿರಲಿ. ಬ್ರಿಟಿಷ್‌ ಆಡಳಿತದ ಭಾರತದಲ್ಲಿ ವೈಸರಾಯ್‌ಗಳು ಮೆರೆಯುತ್ತಿದ್ದ ಕಾಲ. ಕಾರ್ಟೂನಿಸ್ಟ್ ಅಬ್ರಹಾಂ ಅವರು ವೈಸರಾಯ್ ಕುರಿತು ಬರೆದ ನೆಗೆಟಿವ್ ಚಿತ್ರವನ್ನು ಮೆಚ್ಚಿ, ಮರುದಿನ ದೂತನೊಬ್ಬನನ್ನು ಕಳಿಸಿ ಅಬ್ರಹಾಂ ಅವರಿಂದ ಅದರ ಒರಿಜಿನಲ್ ಪ್ರತಿ ಪಡೆದು ಸಂಗ್ರಹಿಸಿಟ್ಟುಕೊಂಡಿದ್ದರಂತೆ! ನೆನಪಿಡಿ. ನಮಗೆ ಸ್ವಾತಂತ್ರ್ಯವಿರಲಿಲ್ಲ ಆಗ!

ಈಗ ಬನ್ನಿ 2021 ರ ಈ ಹೊತ್ತಿಗೆ!

ವಸಾಹತುಶಾಹಿ ಆಡಳಿತವಿದೆಯೇನು ಇಲ್ಲಿ? ತುರ್ತುಪರಿಸ್ಥಿತಿ ಏನಾದರೂ ಘೋಷಿಸಲ್ಪಟ್ಟಿದೆಯಾ ಇಲ್ಲಿ? ವ್ಯವಸ್ಥೆಯ ಕುರಿತು ಟೀಕೆ ಅಂದರೇನು? ವ್ಯವಸ್ಥೆಯ ಮುಂದಾಳತ್ವ ವಹಿಸಿದ ವ್ಯಕ್ತಿಯ ವಿಮರ್ಶೆಯೇ ತಾನೇ? ಟೀಕೆ ಅಥವಾ ವಿಮರ್ಶೆ ಸರಿಯಾಗಿದ್ದರೆ ಜನ ತಲೆದೂಗುತ್ತಾರೆ. ಇಲ್ಲವೆಂದರೆ ಕೃತಿಕಾರನನ್ನು ತಾವಾಗೇ ಇಗ್ನೋರ್ ಮಾಡುತ್ತಾರೆ ಜನ! ಜನರಿಂದ ಕೋಟಿ ಕೋಟಿ ಸೌಲಭ್ಯಗಳನ್ನು ಪಡೆದು ಸಲಹುವ ಉತ್ತರದಾಯಿತ್ವ ಹೊಂದಿದ ನಾಯಕನೊಬ್ಬನನ್ನು ಟೀಕಿಸಲೇಬಾರದೆಂದರೆ?

ಇದನ್ನೂ ಓದಿ: ಕೇಂದ್ರವೇ ಏಕೆ ಎಲ್ಲಾ ಲಸಿಕೆ ಖರೀದಿಸಬಾರದು? ಲಸಿಕೆ ದರದಲ್ಲಿ ತಾರತಮ್ಯವೇಕೆ: ಸುಪ್ರೀಂ ಪ್ರಶ್ನೆ

ಒಂದು ವಿಚಾರ ನಾನ್ಯಾವತ್ತೂ ಹೇಳುತ್ತಿರುತ್ತೇನೆ ಮಿತ್ರರಲ್ಲಿ. ಪ್ರಧಾನಿಯಾದವ ಅಥವಾ ಇನ್ಯಾರೇ ನಾಯಕನಾದವ ಹತ್ತು ಒಳ್ಳೆಯ ಕೆಲಸಗಳನ್ನು ಮಾಡಿ ಒಂದು ಕೆಟ್ಟ ಕೆಲಸ ಮಾಡಿದನೆಂದಾದರೆ, ನಾವು ಕಾರ್ಟೂನಿಸ್ಟರು ಆತನ ಆ ಒಂದು ಹಾಳು ಕೆಲಸದ ಬಗ್ಗೆ ಮಾತ್ರ ಮಾತಾಡುತ್ತೇವೆ. ಅದು ನಮ್ಮ ವೃತ್ತಿಧರ್ಮ. ಅದು ಕಾರ್ಟೂನಿನ ಶೈಲಿ. ಅದರ ಸಂಹಿತೆಯೇ ಅಂಥದ್ದು!

ಹತ್ತು ಒಳ್ಳೆಯ ಕೆಲಸದ ಬಗ್ಗೆ ಮಾತಾಡುವುದಕ್ಕೇನಿದೆ? ಅದು ಅವನ ಕರ್ತವ್ಯ ತಾನೇ? ಅದಕ್ಕಲ್ಲವೇ ಆತ ದೇಶದ ಅತ್ಯುನ್ನತ ಗೌರವವನ್ನು ಹೊಂದಿರುವುದು? ಅಷ್ಟಾಗಿಯೂ ಆ ಹತ್ತು ಕೆಲಸಗಳ ಬಗ್ಗೆ ತುತ್ತೂರಿ ಊದಿ ಉಘೇ ಅನ್ನುವುದಕ್ಕೆ ಅವರದ್ದೇ ಪ್ರತ್ಯೇಕ ಗುಂಪುಗಳಿವೆ. ನಮ್ಮ ಕೆಲಸವಲ್ಲವಲ್ಲ ಅದು!

ಎಲ್ಲೋ ಉತ್ತರ ಕೊರಿಯಾದಲ್ಲಿದ್ದೇವೇನೋ ಅನ್ನಿಸಿಬಿಡುತ್ತದೆ ಈಗ. ಅಲ್ಲ, ಆ ಮನಮೋಹನ್ ಸಿಂಗ್ ಕುರಿತಂತೆ, ಲಾಲೂಪ್ರಸಾದ್ ಕುರಿತಂತೆ, ನಮ್ಮ ದೇವೇಗೌಡರ ಕುರಿತಂತೆ ದೇಶದ ವ್ಯಂಗ್ಯಚಿತ್ರಕಾರರು ಮಾಡದೇ ಬಿಟ್ಟ ಕಾರ್ಟೂನ್ ಯಾವುದಾದ್ರೂ ಇದೆಯೇನ್ರೀ? ಎಷ್ಟು ಗೋಳು ಹುಯ್ಕೊಂಡಿಲ್ಲ ಆ ಪುಣ್ಯಾತ್ಮರುಗಳನ್ನೆಲ್ಲ! ಅವರ್ಯಾರಿಗೂ ಆಗದ ಅವಮಾನ, ಅಸಹಿಷ್ಣುತೆ ಈ ನರೇಂದ್ರ ಮೋದಿ ಅಥವಾ ಅವರ ಪರಿವಾರಕ್ಕೇನಿದೆ? ಅರೆ! ಒಬ್ಬ ಸ್ಟೇಟ್ಸ್‌ಮನ್‌ನ ಮೊತ್ತ ಮೊದಲ ಲಕ್ಷಣವೇ ತಾನು ಎಲ್ಲಾ ವಿಮರ್ಶೆಗಳಿಗೂ ತೆರೆದು ಕೊಂಡಿರುವುದು. ಇದೇನಾಗ್ತಿದೆ ಇಲ್ಲಿ?

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಮೋದಿ ಫೋಟೊಗಳಿಗೆ ಹೆಚ್ಚುತ್ತಿರುವ #ResignModi ಕಮೆಂಟ್‌ಗಳು: ಹಳೆ ಫೋಟೊಗಳನ್ನು ಬಿಡದ ನೆಟ್ಟಿಗರು!

ಯಾವ ದೇಶದಲ್ಲಿ ಕಲೆ, ಸಾಹಿತ್ಯ, ರಂಗಭೂಮಿ…. ಇತ್ಯಾದಿ ಸೃಜನಶೀಲ ಆಯಾಮಗಳಿಗೆ ಪೂರ್ತಿ ಸ್ವಾತಂತ್ರ್ಯ ಇಲ್ಲವೋ ಆ ದೇಶದ ಭವಿಷ್ಯ ಅಪಾಯದಲ್ಲಿರುವುದಂತೂ ಖಂಡಿತ. ಅಮೆರಿಕದ ವ್ಯಂಗ್ಯಚಿತ್ರಕಾರರು ಟ್ರಂಪನ್ನಷ್ಟೆಲ್ಲ ಗೋಳು ಹುಯ್ಕೊಂಡರೂ ಮಹಾ ಡಿಕ್ಟೇಟರ್ ಮನಸ್ಥಿತಿಯ ಟ್ರಂಪ್ ಅವರ ಕೂದಲೂ ಕೊಂಕಿಸಲಿಲ್ಲ!

ಆರ್.ಕೆ.ಲಕ್ಷ್ಮಣ್, ಅಬು ಅಬ್ರಹಾಂ, ಶಂಕರ್ಸ್ ವೀಕ್ಲಿಯ ಶಂಕರ್ ಅವರೇನಾದರೂ ಈಗಿರುತ್ತಿದ್ದರೆ ಒಂದೋ ಜೈಲಲ್ಲಿರುತ್ತಿದ್ದರು ಅಥವಾ ಇನ್ನೊಬ್ಬ ಗೌರಿ ಲಂಕೇಶ್ ಆಗಿಬಿಡುತ್ತಿದ್ದರು ಅಂತ ಎಷ್ಟೋ ಬಾರಿ ಅನಿಸಿದ್ದಿದೆ ನನಗೆ! ಕಳೆದ ಶತಮಾನದ ಅರವತ್ತು ಎಪ್ಪತ್ತು ಎಂಭತ್ತರ ದಶಕ ಎಂಥಾ ಸುವರ್ಣ ಯುಗವಾಗಿತ್ತದು! ಭಾರತ ಮತ್ತೆಂದು ಅಂಥ ದಿನಗಳನ್ನು ಕಾಣುವುದೋ!

ಕಳೆದ ಆರೇಳು ವರ್ಷಗಳಿಂದ ನನ್ನ ಇನ್ಬಾಕ್ಸ್‌ಗೆ ಬಂದು ಬೀಳುತ್ತಿರುವ ಸಂಸ್ಕೃತ ಶ್ಲೋಕಗಳನ್ನು ನೋಡಿದರೆ ಕನಿಕರ ಮೂಡುತ್ತದೆ ಆ ಬಿಜೆಪಿ ಬೆಂಬಲಿಗರ ಬಗ್ಗೆ. ನನ್ನೆದುರೇ ಓಡಾಡಿ ಬೆಳೆದ ಹುಡುಗನೊಬ್ಬ ಅತ್ಯಂತ ಕೊಳಕು ಸುಳ್ಳುಗಳ ಮೂಲಕ ಭಯಂಕರ ಟ್ರಾಲ್ ಮಾಡಿ ಬರೆದಿದ್ದ ನನ್ನ ಕುರಿತು. ಅವರ ಬಾಲಂಗೋಚಿಗಳ ಕಮೆಂಟುಗಳೋ..! ಆಹ! ಭಾರತಾಂಬೆಯ ಸುಸಂಸ್ಕೃತ ಪುತ್ರರತ್ನರವರು ಅನ್ನಲು ಯಾವ ಅಡ್ಡಿಯೂ ಇರದು.

ಇದನ್ನೂ ಓದಿ: ‘ಅದು ಹೃದಯವಲ್ಲ, ಕಲ್ಲು’- ಮೋದಿಗೆ ಪರೋಕ್ಷವಾಗಿ ಕುಟುಕಿದ ರಾಹುಲ್‌ ಗಾಂಧಿ

ಇನ್ನು ಪ್ರಗತಿಪರರ ಸೋಗು ಹಾಕಿ ಮನೆಯಲ್ಲಿ ಜಾತಿವಾದಿ ಮೂಲಭೂತವಾದಿ ಪುಟಾಣಿಗಳನ್ನು ಬೆಳೆಸುತ್ತಿರುವ ಸಾಹಿತಿಗಳದ್ದೋ ಇನ್ನೊಂದು ಪ್ರತ್ಯೇಕ ಕತೆ! ಇವರ ನೆಂಟರಿಷ್ಟರಾದ ಪ್ರಗತಿಪರರದ್ದಂತೂ ದಾಕ್ಷಿಣ್ಯದ ನಾಜೂಕು ನಡೆ. ನಿಷ್ಠುರಕ್ಕೆ ಬಿದ್ದು ಯಾವ ನರಕಕ್ಕೆ ಹೋಗಬೇಕು? ಇವರನ್ನೆಲ್ಲ ಯಾರೂ ಪ್ರಶ್ನೆ ಮಾಡಬಾರದು. ಇವರು ಗುಪ್ತವಾಗಿಯೋ ಬಹಿರಂಗವಾಗಿಯೋ ನಂಬಿದ ಸಿದ್ದಾಂತಗಳ ವಿರುದ್ಧ ಟಿಪ್ಪಣಿ ಮಾಡಬಾರದು. ಇದು ಈ ಶತಮಾನದ ಈ ಹೊತ್ತಿನ ಕರ್ಮ!

ನಿನ್ನೆ ಮೊನ್ನೆ ಮತ್ತೆ ನನ್ನ ಕಾರ್ಟೂನ್ ಗಳ ನೆಪವಾಗಿ ನನ್ನ ಮೇಲೆ ದಾಳಿ ನಡೆದಿತ್ತು. ಇವತ್ತು ನಮ್ಮನೆಚ್ಚಿನ ಸತೀಶ್ ಆಚಾರ್ಯರ ಮೇಲೆ! ನಮಗಿವೆಲ್ಲ ಹೊಸತೇನೂ ಅಲ್ಲ ಬಿಡಿ. ಆದರೆ ದೇಶ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಬಗ್ಗೆ ಸಣ್ಣದೊಂದು ವಿಷಾದ ಅಷ್ಟೆ!

ಅಂದಿನ ಬಸವಣ್ಣನಿಂದ ಹಿಡಿದು, ಮೊನ್ನೆ ಮೊನ್ನೆಯ ಗಾಂಧಿ, ದಾಬೋಲ್ಕರ್, ಗೌರಿಯರವರೆಗೆ…. ಇದೇ ಮೇಲ್ವರ್ಗದ ಸಂಚಿಗೆ ಬಲಿಯಾದ ದಕ್ಷಿಣ ಕನ್ನಡದ ಆರಾಧ್ಯ ದೈವಗಳಾದ ಕಲ್ಕುಡ ಕಲ್ಲುರ್ಟಿಯರಿಂದ ಹಿಡಿದು ಕೋಟಿ ಚೆನ್ನಯರವರೆಗೆ ಈ ನೆಲದಲ್ಲಿ ಪುರಾಣ ಇತಿಹಾಸಗಳ ಏಳುಬೀಳುಗಳ ಹಸಿಹಸಿ ನೆನಪು ನೆನವರಿಕೆಗಳಿವೆ. ಆ ನೆನಪುಗಳಲ್ಲಿ ಜೀವ ಪುಟಿಯುವ ಎದೆಯ ಉತ್ತೇಜಕ ದ್ರವ್ಯಗಳಿವೆ. ನನ್ನ ಚಿತ್ರ ನನ್ನದು. Always with you ಸತೀಶಣ್ಣ. ನಮ್ಮೆಲ್ಲರದೂ ಒಂದೇ ಧರ್ಮ- ಅದು ಮನುಷ್ಯ ಧರ್ಮ! Cheers!

ವ್ಯಂಗ್ಯಚಿತ್ರಕಾರ ದಿನೇಶ್‌ ಕುಕ್ಕುಜಡ್ಕ

ಇದನ್ನೂ ಓದಿ: ಕೋವಿಡ್ 2ನೆ ಅಲೆ ತೀವ್ರವಾಗುತ್ತಿದ್ದಾಗ ಕುಂಭಮೇಳದಲ್ಲಿ ಮುಳುಗೆದ್ದವರು 70 ಲಕ್ಷ ಜನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮನುವಾದಿಗಳ ಆಡಳಿತದಲ್ಲಿ ಬಾರತ ಬಹಳ ವೇಗವಾಗಿ ಹಿಟ್ಲರೀಕರಣಗೊಳ್ಳುತ್ತಿದೆ. ಈ ದೇಶದ ಪ್ರಜ್ಞಾವಂತರು ಎದೆಗುಂದದೆ, ಒಕ್ಕೊರಲಿನಿಂದ ಇದನ್ನು ಪ್ರತಿಭಟಿಸಬೇಕು.

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....