Homeಕರ್ನಾಟಕಮನುವಾದಿಗಳಿಂದ ವಿರೋಧ ಇದ್ದೇ ಇರುತ್ತದೆ: ಹಂಸಲೇಖರ ಪರ ನಿಂತ ಪ್ರಿಯಾಂಕ್‌ ಖರ್ಗೆ

ಮನುವಾದಿಗಳಿಂದ ವಿರೋಧ ಇದ್ದೇ ಇರುತ್ತದೆ: ಹಂಸಲೇಖರ ಪರ ನಿಂತ ಪ್ರಿಯಾಂಕ್‌ ಖರ್ಗೆ

ಕಾಂಗ್ರೆಸ್‌ ನಾಯಕರಾದ ಡಾ.ಜಿ.ಪರಮೇಶ್ವರ, ಟಿ.ಬಿ.ಜಯಚಂದ್ರ ಹಾಗೂ ಕೆ.ಎನ್‌.ರಾಜಣ್ಣ ಅವರು ಹಂಸಲೇಖರ ಪರ ಮಾತನಾಡಿದ್ದರು. ಈಗ ಪ್ರಿಯಾಂಕ್‌ ಖರ್ಗೆ ದನಿ ಎತ್ತಿದ್ದಾರೆ.

- Advertisement -
- Advertisement -

‘ದಲಿತರ ಮನೆಗಳಿಗೆ ಬಲಿತರು ಹೋಗುವುದಲ್ಲ. ದಲಿತರನ್ನು ತಮ್ಮ ಮನೆಗಳಿಗೆ ಕರೆಸಿಕೊಳ್ಳಬೇಕು, ದಲಿತರ ಮನೆಗೆ ಭೇಟಿ ನೀಡಿದವರು ದಲಿತರು ಕೊಟ್ಟ ಆಹಾರ ಸೇವಿಸುತ್ತಾರಾ? ಕುರಿ, ಕೋಳಿಯನ್ನು ಸೇವಿಸುತ್ತಾರಾ’ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯವರನ್ನು ಉಲ್ಲೇಖಿಸಿ ಸಂಗೀತ ನಿರ್ದೇಶಕ ಹಂಸಲೇಖ ಅವರು ಹೇಳಿಕೆ ನೀಡಿದ್ದರು. ವಿರೋಧಗಳು ವ್ಯಕ್ತವಾದಾಗ ಕ್ಷಮೆಯಾಚಿಸಿದ್ದರು. ಆದರೂ ಅವರ ಮೇಲೆ ದಾಳಿಗಳು ಮುಂದುವರಿದ ಬಳಿಕ ರಾಜಕೀಯ ನಾಯಕರು ಹಂಸಲೇಖರ ಪರ ದನಿ ಎತ್ತುತ್ತಿದ್ದು, ಈಗ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್‌ ಖರ್ಗೆಯವರು, “ಹಂಸಲೇಖ ಅವರು ಹೇಳಿದ್ದರಲ್ಲಿ ತಪ್ಪೇನಿಲ್ಲ. ಕೆಲವು ಮನುವಾದಿಗಳು ಸಂವಿಧಾನದ ವಿರುದ್ಧವಿದ್ದಾರೆ. ಅವರು ವಿರೋಧ ಮಾಡಿಯೇ ಮಾಡುತ್ತಾರೆ. ಎಲ್ಲಿಯವರೆಗೆ ಮನುವಾದಿ ಸಂಸ್ಕೃತಿ ಇರುತ್ತದೋ ಅಲ್ಲಿಯವರೆಗೆ ವಿರೋಧ ಇರುತ್ತದೆ” ಎಂದು ತಿಳಿಸಿದ್ದಾರೆ.

ದಲಿತರ ಮನೆಗಳಿಗೆ ಭೇಟಿ ನೀಡುವ ರಾಜಕೀಯ ನಾಯಕರನ್ನು ಉಲ್ಲೇಖಿಸಿ ಮಾತನಾಡಿದ ಅವರು, “ಬಿಜೆಪಿಯವರು ದಲಿತರ ಮನೆಗೆ ಹೋಗಿ ಹೋಟೆಲ್ ನಿಂದ ತರಿಸಿ ತಿನ್ನುತ್ತಾರೆ. ಇವರೇನು ಟೂರಿಸಂ ಪ್ಯಾಕೇಜ್ ಮಾಡಿದ್ದಾರಾ. ಈ ರೀತಿ ನಡೆಯಲು ಅವಕಾಶ ಮಾಡಿಕೊಡಬೇಡಿ ಎಂದು ನಾನು ನಮ್ಮ ಜನರಿಗೂ ಹೇಳಿದ್ದೇನೆ. ಇವರು ದಲಿತರ ಮನೆಗೆ ಹೋಗಿ‌ ಮಾಧ್ಯಮಗಳಲ್ಲಿ ಪ್ರಚಾರ ತೆಗೆದುಕೊಳ್ಳುವುದು, ದಲಿತರ ಮನೆಗೆ ಹೋದರೂ ವೇಜ್ ಊಟಾನೇ ತರಿಸಿ ತಿನ್ನುವುದು. ಬಿಜೆಪಿಯವರು ದಲಿತರ ಮತ್ತು ಹಿಂದುಳಿದವರ ಪರವಾಗಿ ಇಲ್ಲ” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

“ಕುಲ ಕಸುಬಿನ ಪ್ರಕಾರ ಆಹಾರ ಪದ್ದತಿ ಇರುತ್ತದೆ. ಆದರೆ ಇಂತಹದ್ದೇ ಆಹಾರ ಸೇವಿಸಿ ಎಂದು ಹೇಳಲು ನಾನು ಯಾರು? ಎಷ್ಟು ಜನ ಬೇರೆ ಜನಾಂಗದದವರು ಮಾಂಸಾಹಾರಿ ತಿನ್ನಲ್ಲವೇ? ಕೆಲವು ಜನ ಒಪ್ಪದೆ ಇರಬಹುದು. ನಾನು ಒಪ್ಪದೆ ಇರಬಹುದು, ನೀವು ಒಪ್ಪದೆ ಇರಬಹುದು. ಆದರೆ ಸಂವಿಧಾನಿಕವಾಗಿ ರಾಷ್ಟ್ರದಲ್ಲಿ ಏನು ನಡೆಯುತ್ತಿದೆ ಅದೇ ಮಾಡುತ್ತಿರುವುದಲ್ಲವೆ?” ಇದು ಹೇಗೆ ಅಸಾಂವಿಧಾನಿಕ ಎಂದಿದ್ದಾರೆ.

ಕಾಂಗ್ರೆಸ್ ನಾಯಕರಾದ ಜಿ.ಪರಮೇಶ್ವರ, ಟಿ.ಬಿ.ಜಯಚಂದ್ರ ಹಾಗೂ ಕೆ.ಎನ್‌.ರಾಜಣ್ಣ ಅವರು ನವೆಂಬರ್‌ 23ರಂದು ತುಮಕೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, “ಸಂಗೀತ ನಿರ್ದೇಶಕ ಹಂಸಲೇಖ ಅವರು ಯಾವುದೇ ತಪ್ಪು ಮಾಡಿಲ್ಲ” ‌ಎಂದು ಹೇಳಿಕೆ ನೀಡಿದ್ದರು.


ಇದನ್ನೂ ಓದಿರಿ: ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿವಿಗೆ ನಾಳೆ ಬೃಹತ್‌ ಜಾಥಾ, ಸಮಾವೇಶ; ‘ಬಾಡೂಟದ ಬುತ್ತಿಯೊಂದಿಗೆ ಬನ್ನಿ…’


ಹಂಸಲೇಖ ಅವರ ವಿರುದ್ಧ ನಡೆಯುತ್ತಿರುವ ವಿಷಾದಕಾರಿ ಬೆಳವಣಿಗೆಗಳನ್ನು ಖಂಡಿಸಿ, ತುಮಕೂರಿನ ‘ದಲಿತ ಅಲ್ಪಸಂಖ್ಯಾತ ಹಿಂದುಳಿದ ಪ್ರಗತಿಪರ ಸಂಘಟನೆಗಳ ಒಕ್ಕೂಟ’ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು.

ಜಿ.ಪರಮೇಶ್ವರ ಅವರು ಮಾತನಾಡಿ, “ಹಂಸಲೇಖ ಅವರು ಯಾರಿಗಾದರೂ ಅವಮಾನ ಮಾಡಬೇಕೆಂದು ಹೇಳಲಿಲ್ಲ. ಯಾವುದೇ ಜಾತಿಯ ವ್ಯವಸ್ಥೆಗೆ ಅವರು ಅವಮಾನ ಮಾಡಬೇಕು ಎಂದು ಹೇಳಲಿಲ್ಲ. ಸಾಂದರ್ಭಿಕವಾಗಿ ಆಡಿದಂತಹ ಮಾತನ್ನು ಜಾತೀಯ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡುವಂತಹದ್ದು ತಪ್ಪು. ಈ ಬೆಳವಣಿಗೆಯನ್ನು ನಾನು ಖಂಡಿಸುತ್ತೇನೆ” ಎಂದಿದ್ದರು.

“ಬಹುಸಂಖ್ಯಾತ ಸಮುದಾಯವನ್ನು ಸಾವಿರಾರು ವರ್ಷಗಳಿಂದ ಶೋಷಣೆ ಮಾಡುತ್ತಿರುವಂತಹ ವರ್ಗ ಇಂದು ಮತ್ತೊಂದು ಬಾರಿ ಅಂತಹದ್ದೇ ಪ್ರಯತ್ನ ಮಾಡುತ್ತಿದೆ ಎಂಬುದನ್ನು ನಾವು ಖಂಡಿಸಬೇಕಾಗಿದೆ. ಜಾತೀಯ ವ್ಯವಸ್ಥೆ ನಾವು ಮಾಡಿಕೊಂಡಿರುವಂತಹದ್ದು, ಅಂದರೆ ಮನುಷ್ಯ ಮಾಡಿಕೊಂಡಿರುವಂತಹದ್ದು. ಮನುಷ್ಯ ಮನುಷ್ಯನನ್ನು ಅಸಮಾನತೆಯಿಂದ ಕಾಣಲಾಗುತ್ತಿದೆ, ಶೋಷಣೆ ಮಾಡಲಾಗುತ್ತಿದೆ. ಇಪತ್ತೊಂದನೆ ಶತಮಾನಕ್ಕೆ ಕಾಲಿಟ್ಟಿದ್ದರೂ ಆ ಶೋಷಣೆ ತಪ್ಪಿಲ್ಲ. ಆ ಶೋಷಣೆಯನ್ನು ತಪ್ಪಿಸುವ ಯಾವುದೇ ಸೂಚನೆಗಳೂ ಕಾಣುತ್ತಿಲ್ಲ” ಎಂದು ವಿಷಾದಿಸಿದ್ದರು.

ಕೆ.ಎನ್‌.ರಾಜಣ್ಣ ಮಾತನಾಡಿ, “ಹಂಸಲೇಖ ಅವರು ಹೇಳಿರುವಂತಹದರಲ್ಲಿ ಯಾವುದೇ ತಪ್ಪಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ ಜಾತಿಯ ಬಣ್ಣವನ್ನು ಕಟ್ಟಿ, ಈ ಅಸ್ಪೃಶ್ಯತೆಯನ್ನು ಇನ್ನು ಬಹಳಷ್ಟು ವರ್ಷಗಳ ಕಾಲ ಮುಂದುವರಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ರೀತಿಯ ಮಾತುಗಳನ್ನು ಹಂಸಲೇಖ ಅವರ ವಿರುದ್ಧ ಆಡುತ್ತಿದ್ದಾರೆ” ಎಂದು ಆರೋಪಿಸಿದ್ದರು.

“ಅವರು ಯಾವತ್ತೂ ಯಾವುದೇ ಸಮಾಜವಾಗಲೀ, ಯಾವುದೇ ಧರ್ಮದ ವಿರುದ್ಧವಾಗಲೀ ಮಾತನಾಡಿದವರಲ್ಲ. ಅವರು ಆಡಿರುವಂತಹ ಮಾತನ್ನು ಇವರು ತಿರುಚಿ ಅಪವಾದವನ್ನು ತರುವಂತಹ ಉನ್ನಾರವನ್ನು ಈ ಮುಂದುವರಿದ ಸಮಾಜಗಳು ಮಾಡುತ್ತಿರುವುದು ಎಲ್ಲರಿಗೂ ಸ್ಪಷ್ಟವಾಗಿದೆ. ನಾವು ಎಲ್ಲರೂ ಇದನ್ನು ಖಂಡಿಸುತ್ತೇವೆ ಎಂಬ ಸಂದೇಶವನ್ನು ಇಡೀ ರಾಜ್ಯಕ್ಕೆ ತಲುಪಿಸುವ ಪ್ರಯತ್ನವನ್ನು ನಾವು ಮಾಡಲು ಹೊರಟಿದ್ದೇವೆ” ಎಂದು ತಿಳಿಸಿದ್ದರು.

ಟಿ.ಬಿ.ಜಯಚಂದ್ರ ಅವರು ಮಾತನಾಡಿ, “ಹಂಸಲೇಖ ಅವರು ಕರ್ನಾಟಕದ ಹೆಮ್ಮೆಯ ಪುತ್ರ. ವಾಸ್ತವಿಕವಾಗಿರುವ, ಮನಸ್ಸಿನಲ್ಲಿರುವ ನೋವನ್ನು ಅವರು ಹೇಳಿದಾಗ ಅವರನ್ನು ಅವಹೇಳನ ಮಾಡುವಂತಹದ್ದು ಸರಿಯಲ್ಲ. ಹಂಸಲೇಖ ಅವರ ಜೊತೆ ನಾವಿದ್ದೇವೆ ಎಂಬುದನ್ನು ತೋರಿಸಲೆಂದು ನಾವಿಲ್ಲಿಗೆ ಬಂದಿದ್ದೇವೆ” ಎಂದು ಸ್ಪಷ್ಟಪಡಿಸಿದ್ದರು.

“ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನಬದ್ಧವಾಗಿ ಅಸ್ಪೃಶ್ಯತೆಯನ್ನು ನಿವಾರಣೆ ಮಾಡಿದರೂ ನಿಜಸ್ಥಿತಿಯಲ್ಲಿ ಅದು ಸಮಾಜದಲ್ಲಿದೆ. ಇದನ್ನು ಸಹಿಸಲು ಆಗುವುದಿಲ್ಲ, ಸಹಿಸಬಾರದು ಎಂಬ ಹಿನ್ನೆಲೆಯಲ್ಲಿ ಹಂಸಲೇಖ ಅವರು ಹೇಳಿರುವಂತಹ ವಿಚಾರಕ್ಕೆ ನಾವು ಸದಾ ಬೆಂಬಲವಾಗಿ ಇರಬೇಕು. ನಿಮ್ಮ ಹೋರಾಟದೊಂದಿಗೆ ನಾವು ಕೂಡ ಇದ್ದೇವೆ ಎಂಬುದನ್ನು ಘಂಟಾಘೋಷವಾಗಿ ಹೇಳಲು ಸಿದ್ಧವಿದ್ದೇವೆ” ಎಂದಿದ್ದರು.


ಇದನ್ನೂ ಓದಿರಿ: ಇದು ಆಹಾರದ ಪ್ರಶ್ನೆಯಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ: ಹಂಸಲೇಖರ ಪರ ನಿಂತ ನಟ ಚೇತನ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಕಾಲ್ತುಳಿತ: ಎಂಟು ಮಹಿಳೆಯರು ಸಾವು; ಹಲವು ಮಂದಿಗೆ ಗಾಯ 

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಹಿಳೆಯರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.  ಪೂಜೆಗಾಗಿ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದಾಗ ಈ ಘಟನೆ ಸಂಭವಿಸಿದ್ದು,...

ದಲಿತ ಕ್ರೈಸ್ತರ ಎಸ್‌ಸಿ ಸ್ಥಾನಮಾನ ರದ್ದು ಆದೇಶ; ಸುಪ್ರೀಂ ಕೋರ್ಟ್ ತೀರ್ಪು ಖಂಡಿಸಿದ ಮಂದಕೃಷ್ಣ ಮಾದಿಗ

ದಲಿತರು ಕ್ರೈಸ್ತರಾದರೆ ಅವರ ಎಸ್‌ಸಿ ಸ್ಥಾನಮಾನ ರದ್ದುಗೊಳ್ಳಲಿದೆ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಬಲವಾಗಿ ಖಂಡಿಸುತ್ತೇವೆ ಎಂದು ಎಂಆರ್‌ಪಿಎಸ್ ಫೌಂಡೇಶನ್ ಅಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು. "ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು,...

ಜಾರ್ಖಂಡ್: ರಾಮನವಮಿ ಘರ್ಷಣೆಗೆ ಸಂಬಂಧಿಸಿದ 19 ಜನರನ್ನು ಬಂಧಿಸಿ, ಕೈಕೋಳ ಹಾಕಿ ಸಾರ್ವಜನಿಕ ಮೆರವಣಿಗೆ ಮಾಡಿದ ಪೊಲೀಸರು

ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯ ನಂತರ ಕನಿಷ್ಠ 19 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಭದ್ರತಾ ಪಡೆಗಳನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಿದ ನಂತರ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ : ಹೊಸ ಮಸೂದೆ ಅಂಗೀಕರಿಸಿದ ಇಸ್ರೇಲ್ ಸಂಸತ್ತು

ಇಸ್ರೇಲ್ ಸಂಸತ್ತು ಸೋಮವಾರ (ಮಾರ್ಚ್ 30, 2026) ಹೊಸ ಮಸೂದೆಯೊಂದನ್ನು ಅಂಗೀಕರಿಸಿದೆ. ಇದರ ಪ್ರಕಾರ, ಮಿಲಿಟರಿ ನ್ಯಾಯಾಲಯದಲ್ಲಿ ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಲಾಗಿದೆ. ಪ್ರಧಾನಿ ಬೆಂಜಮಿನ್...

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...