ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಲ್ಲರನ್ನೂ ಬೆಚ್ಚಿ ಬೀಳಿಸುವ ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದೆ. ನಿತ್ಯ ಸಾವಿರಾರು ಜನರ ಜೀವ ರಕ್ಷಿಸುವ ಪ್ರಮುಖ ಆಸ್ಪತ್ರೆಯಲ್ಲಿಯೇ ಮಹಿಳೆ ಮೇಲೆ ಘೋರ ಅತ್ಯಾಚಾರ ನಡೆದಿದೆ. ಹೌದು ಮೈಸೂರಿನ ಹೃದಯ ಭಾಗದಲ್ಲಿರುವ ಮೈಸೂರು ಮಾತ್ರವಲ್ಲದೇ ಸುತ್ತಮುತ್ತಲಿನ ಜಿಲ್ಲೆಗಳ ಜನರ ಜೀವನಾಡಿಯಾಗಿರುವ ಕೆ.ಆರ್. ಆಸ್ಪತ್ರೆಯಲ್ಲಿ ಇಂತದ್ದೊಂದು ಹೇಯ ಕೃತ್ಯ ನಡೆದಿದೆ.
ಆಸ್ಪತ್ರೆಯ ಕಟ್ಟಡದೊಳಗಡೆಯಲ್ಲಿಯೇ ಮಾನಸಿಕ ಚಿಕಿತ್ಸೆಗೆಂದು ದಾಖಲಾದ ಮಹಿಳಾ ರೋಗಿಯ ಮೇಲೆ ಅತ್ಯಾಚಾರ ನಡೆದಿದೆ. ವಾರಗಳ ಹಿಂದೆಯೇ ಒಂದು ರಾತ್ರಿಯ ವೇಳೆ ಈ ಪೈಶಾಚಿಕ ಕೃತ್ಯ ನಡೆದಿದ್ದು ಈ ಬಗ್ಗೆ ವೃದ್ಧೆಯೊಬ್ಬರು ಮಾಹಿತಿ ನೀಡಿದರೂ ಆಸ್ಪತ್ರೆಯ ವೈದ್ಯರು ಕ್ರಮ ಕೈಗೊಂಡಿಲ್ಲ. ವಾರಗಳ ನಂತರ ಪ್ರಕರಣ ಬಯಲಿಗೆ ಬಂದಿದ್ದು ಆಸ್ಪತ್ರೆ ವೈದ್ಯರು ಮತ್ತು ಆಡಳಿತ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿತೇ ಎಂಬ ಅನುಮಾನ ಹುಟ್ಟಿಕೊಂಡಿದೆ.
30 ವರ್ಷದ ಮಹಿಳೆ ಮೇಲೆ ಈ ಅಮಾನುಷ ಕೃತ್ಯ ನಡೆದಿದ್ದು ರಾತ್ರಿ ವೇಳೆ ಆಸ್ಪತ್ರೆಯ ವಾರ್ಡ್ ಕಿಟಕಿ ಗ್ರಿಲ್ ಕಿತ್ತು ಒಳನುಗ್ಗಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಹೇಳಲಾಗುತ್ತಿದೆ.
ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಜೊತೆ ಅದೇ ವಾರ್ಡ್‌ನಲ್ಲಿದ್ದ ಮಹಿಳೆಯೊಬ್ಬರು ಘಟನೆಯ ಕುರಿತು ಮಾನವ ಹಕ್ಕುಗಳ ಸೇವಾ ಸಮಿತಿಗೆ ಮಾಹಿತಿ ನೀಡಿದ್ದಾರೆ. ಆ ಮಾಹಿತಿಯನ್ನು ಪಡೆದ ಸಮಿತಿ ಪ್ರಕರಣವನ್ನು ಬಯಲಿಗೆಳೆದಿದೆ. ಅತ್ಯಾಚಾರದ ಬಗ್ಗೆ ವೃದ್ಧೆ ವಾರದ ಹಿಂದೆಯೇ ವೈದ್ಯರಿಗೆ ಮಾಹಿತಿ ನೀಡಿದ್ದರು. ಆದರೆ, ಮಾಹಿತಿ ನೀಡಿದ ವೃದ್ಧೆಗೆ ಆಸ್ಪತ್ರೆ ಸಿಬ್ಬಂದಿ ಹಲ್ಲೆ ಮಾಡಿ ಬಾಯಿ ಬಿಡದಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಅತ್ಯಾಚಾರ ಪ್ರಕರಣ : ಎಐಎಡಿಎಂಕೆ ಮಾಜಿ ಸಚಿವ ಎಂ.ಮಣಿಕಂಠನ್‌ಗೆ ಷರತ್ತು ಬದ್ಧ ಜಾಮೀನು
ಆರೋಪಿ ಕಾಮುಕ ರಾತ್ರಿಯ ವೇಳೆ ಕಿಟಕಿ ಮೂಲಕ ನುಗ್ಗಿ ಅತ್ಯಾಚಾರ ಎಸಗುತ್ತಿದ್ದ ಎಂದು ಅತ್ಯಾಚಾರದ ಬಗ್ಗೆ ವೃದ್ಧೆಯೊಬ್ಬರು ಮಾಹಿತಿ ನೀಡಿದರೂ ಆಸ್ಪತ್ರೆಯವರು ಕ್ರಮ ಕೈಗೊಂಡಿಲ್ಲ. ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಕೆ.ಆರ್. ಆಸ್ಪತ್ರೆಯ ವೈದ್ಯರು ಯತ್ನಿಸುತ್ತಿದ್ದಾರೆ ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ ಮಾನವ ಹಕ್ಕುಗಳ ಸೇವಾ ಸಮಿತಿಯಿಂದ ಪ್ರಕರಣ ಬೆಳಕಿಗೆ ಬಂದಿದೆ.
ಅದೇ ವಾರ್ಡ್ ನ ವೃದ್ದೆಯಿಂದ ಈ ಕುಕೃತ್ಯ ಬಯಲಾಗಿದೆ. ವಾರ್ಡ್ ನಲ್ಲಿದ್ದ ವೃದ್ದೆ ಅತ್ಯಾಚಾರದ ಬಗ್ಗೆ ವಾರದ ಹಿಂದೆಯೇ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಆದರೆ ಮಾಹಿತಿ ನೀಡಿದ ವೃದ್ಧೆಯ ಮೇಲೆಯೇ ಹಲ್ಲೆ ಮಾಡಿ, ಬಾಯಿ ಬಿಡದಂತೆ ಆಸ್ಪತ್ರೆಯ ಸಿಬ್ಬಂದಿ ಬೆದರಿಕೆಯೊಡ್ಡಿದ್ದಾರೆ ಎಂದು ಮಾನವ ಹಕ್ಕು ಸೇವಾ ಸಮಿತಿ ಆರೋಪಿಸಿದೆ.
ಕೆ.ಆರ್.ಆಸ್ಪತ್ರೆ ಅಧಿಕಾರಿಗಳ ಹೇಳಿಕೆ ಏನು?:
ಆಕೆ ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವ ಮಹಿಳೆಯಾಗಿದ್ದಾಳೆ. ಸದ್ಯ ಪ್ರಾಥಮಿಕ ಪರೀಕ್ಷೆ ಮಾಡಲಾಗಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಅತ್ಯಾಚಾರದ ಬಗ್ಗೆ ಕಂಡುಬಂದಿಲ್ಲ. ಎಫ್.ಎಸ್.ಎಲ್ ವರದಿಗೆ ಕಳುಹಿಸಲಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ. ಸಿಸಿಟಿವಿ ಪೋಟೆಜ್ ಅನ್ನು ಪರಿಶೀಲನೆ ಮಾಡಲಾಗುತ್ತಿದೆ. ದುಷ್ಕರ್ಮಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಸಿದ್ದ ಉತ್ತರವನ್ನು ಅವರು ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬಾಂಗ್ಲಾ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 12 ಜನರ ಬಂಧನ


