Homeಮುಖಪುಟಮೈಕೆಲ್ ಹನೆಕೆಯ ’ದ ಹಿಡನ್': ಸಾಮೂಹಿಕ ಪಶ್ಚಾತ್ತಾಪ ಮತ್ತು ವೈಯಕ್ತಿಕ ಜವಾಬ್ದಾರಿ

ಮೈಕೆಲ್ ಹನೆಕೆಯ ’ದ ಹಿಡನ್’: ಸಾಮೂಹಿಕ ಪಶ್ಚಾತ್ತಾಪ ಮತ್ತು ವೈಯಕ್ತಿಕ ಜವಾಬ್ದಾರಿ

- Advertisement -
- Advertisement -

ಸಾಮಾನ್ಯ ಹೊರಜಗತ್ತಿಗೆ ಯುರೋಪ್ ಎಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಉದಾತ್ತ ಆಶಯಗಳನ್ನು ಮೈಗೂಡಿಸಿಕೊಂಡಂತ ದೇಶಗಳ ಖಂಡ. ಸಮಕಾಲಿನ ಯುರೋಪ್ ಸಿನಿಮಾಗಳಲ್ಲಿ ಕಾಣುವುದು ಇವೇ ಸಂಗತಿಗಳನ್ನು. (ನಾನು ನೋಡಿರುವ ಬಹುತೇಕ ಸಿನಿಮಾಗಳಲ್ಲಿ). ಇನ್ನು ಇವರ ಸಿನಿಮಾಗಳಿಗೆ ಹಿಂಸೆ, ದೌರ್ಜನ್ಯ, ದಬ್ಬಾಳಿಕೆ ಕುರಿತಾದ ವಿಷಯಗಳಿಗೆ ವಸ್ತುವಾಗುವುದು ಎರಡನೇ ಮಹಾಯುದ್ಧದಲ್ಲಿ ಜರ್ಮನಿ ನಡೆಸಿದ ಕ್ರೌರ್ಯ ಮತ್ತು ಅವು ಮನುಷ್ಯನಲ್ಲಿ ಉಂಟು ಮಾಡಿದ ಅಸ್ತಿತ್ವದ ಪ್ರಶ್ನೆಗಳಲ್ಲಿ ಮಾತ್ರ. ಒಂದು ಕಾಲಕ್ಕೆ ಸಾಮ್ರಾಜ್ಯಶಾಹಿಗಳಾಗಿದ್ದ ಯುರೋಪ್‌ನ ಹಲವು ದೇಶಗಳು ಇತರೆ ಖಂಡಗಳಲ್ಲಿ ನಡೆಸಿದ ಹಿಂಸೆ, ದೌರ್ಜನ್ಯ, ದಬ್ಬಾಳಿಕೆ ಇವರ ಸಿನಿಮಾಗಳಿಗೆ ವಸ್ತುಗಳಾಗುವುದು ವಿರಳ. ಈ ಗತದ ಕೃತ್ಯಗಳಿಗೆ ಇವರ ಸಿನಿಮಾಗಳಲ್ಲಿ ಪಶ್ಚಾತ್ತಾಪಕ್ಕೂ ಜಾಗ ಸಿಕ್ಕುವುದಿಲ್ಲ.

’ದ ಹಿಡನ್’ (2005)

ಯಾರನ್ನ ನಾವು ಬೌದ್ಧಿಕ ಮೇಲ್ಪಂಕ್ತಿಯಲ್ಲಿ ಇಟ್ಟು ಕಾಣುತ್ತೇವೆಯೋ, ಅದೇ ಯುರೋಪ್ ದೇಶಗಳ ಸಮುದಾಯಗಳು ತಾವು ನಡೆಸಿದ ರಾಜಕೀಯ ಕ್ರೌರ್ಯಗಳಿಗೆ ಜಾಣ ಕುರುಡಾಗಿರುವುದನ್ನು ಮತ್ತು ಅವರ ಬೂರ್ಜ್ವಾ ಗುಣ, ಹೇಡಿತನ ಹಾಗೂ ಅವರು ಹೊರಜಗತ್ತಿನ ಸಮುದಾಯವನ್ನ ಗ್ರಹಿಸುವ ರೀತಿಯನ್ನು ಹನೆಕೆ ತನ್ನ ’ದ ಹಿಡನ್’ ಸಿನಿಮಾದಲ್ಲಿ ಚರ್ಚಿಸುತ್ತಾರೆ. ಹನೆಕೆ ಆಸ್ಟ್ರಿಯಾ ದೇಶದವರಾದರು ’ದ ಹಿಡನ್’ ಸಿನಿಮಾದ ಕಾಲ ದೇಶಗಳು ಮಾತ್ರ ಫ್ರಾನ್ಸಿನದು. ಅಲ್ಜೀರಿಯಾ ಯುದ್ಧದ (1954-62) ಸಂದರ್ಭದಲ್ಲಿ, ಅಲ್ಜೀರಿಯನ್ ನ್ಯಾಷನಲ್ ಲಿಬರಲ್ ಫ್ರಂಟ್ ಸಂಘಟನೆಯ ಸುಮಾರು 30 ಸಾವಿರ ಜನ ನಡೆಸುತ್ತಿದ್ದ ಶಾಂತಿಯುತ ಮೆರವಣಿಗೆಯ ಮೇಲೆ ಫ್ರಾನ್ಸ್ ಪೊಲೀಸ್ ನಡೆಸಿದ ಹತ್ಯಾಕಾಂಡದಲ್ಲಿ ಸುಮಾರು 300 ಜನ ಸಾಯುತ್ತಾರೆ ಮತ್ತು ಹಲವರು ಕಣ್ಮರೆಯಾಗುತ್ತಾರೆ. ಈ ಘಟನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು, ಫ್ರಾನ್ಸ್‌ನ ಮಧ್ಯಮ ವರ್ಗದ ಬೌದ್ಧಿಕ ಪರಿಸರದಲ್ಲಿ ಬದುಕುತ್ತಿರುವ ಕುಟುಂಬವೊಂದರ ಖಾಸಗಿ ಬದುಕಿನ ಘಟನೆಗಳನ್ನು ಹನೆಕೆ ಚಿತ್ರಿಸುತ್ತಾರೆ. ಖಾಸಗಿ ಸಂಗತಿಯಲ್ಲಿ ಮಾಡುವ ಪಶ್ಚಾತ್ತಾಪ ನಿರಾಕರಣೆ ಹೇಗೆ ಇಡೀ ದೇಶದ ಪಶ್ಚಾತ್ತಾಪದ ನಿರಾಕರಣೆ ಆಗಿರುತ್ತದೆ ಎಂಬುದನ್ನು ಹನಕೆ ಹೊಸ ಮಾದರಿಯ ದೃಶ್ಯಕಟ್ಟುವಿಕೆಯ ಮೂಲಕ ಹೆಣೆಯುತ್ತಾರೆ. ಇದಕ್ಕೆ ಸಿನಿಮಾದ ಪ್ರಾರಂಭದ ದೃಶ್ಯವೇ ಸಾಕ್ಷಿಯಾಗಿದೆ.

ಬೌದ್ಧಿಕ ಪ್ರತಿನಿಧಿಗಳಂತಿರುವ ಜಾರ್ಜ್ ಮತ್ತು ಅನ್ನೆ ದಂಪತಿಗಳು ಫ್ರಾನ್ಸ್ ನಗರದ ಸುಸಜ್ಜಿತ ಮನೆಯೊಂದರಲ್ಲಿ ಸಂತೃಪ್ತಿಯಿಂದ ಬದುಕುತ್ತಿದ್ದಾರೆ. ಜಾರ್ಜ್ ಟಿವಿ ಒಂದರಲ್ಲಿ ಸಾಹಿತ್ಯ ಕುರಿತಾದ ಕಾರ್ಯಕ್ರಮ ನಡೆಸಿಕೊಡುವ ನಿರೂಪಕನ ವೃತ್ತಿಯಲ್ಲಿದ್ದರೆ, ಅನ್ನೆ ಪುಸ್ತಕ ಪ್ರಕಾಶನ ಸ್ವರೂಪದ ವೃತ್ತಿಯಲ್ಲಿ ಇದ್ದಾಳೆ. ಜಾರ್ಜ್ ಮತ್ತು ಅನ್ನೆಯರ ನೆಮ್ಮದಿ ಬದುಕು ಒಂದು ದಿನ ದಿಢೀರ್ ಎಂದು ಬರುವ ವಿಡಿಯೋಟೇಪ್‌ನಿಂದ ಡಿಸ್ಟರ್ಬ್ ಆಗುತ್ತದೆ. ಇವರದ್ದೇ ಮನೆ ಮತ್ತು ದಿನಚರಿಯ ದೃಶ್ಯಗಳನ್ನು ಗೌಪ್ಯ ಕ್ಯಾಮೆರಾ ಮೂಲಕ ಆ ವಿಡಿಯೋದಲ್ಲಿ ಸೆರೆಹಿಡಿಯಲಾಗಿರುತ್ತದೆ. ಜಾರ್ಜ್ ದಂಪತಿಗಳಿಗೆ ನಾವು ಯಾರದೋ ಕಣ್ಗಾವಲಿನಲ್ಲಿ ಇದ್ದೇವೆ ಮತ್ತು ಈ ಮೂಲಕ ನಮ್ಮನ್ನು ಯಾರೋ ಬೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಅರಿವಿಗೆ ಬರುತ್ತದೆ. ಮುಂದೆ ಬರುವ ವಿಡಿಯೊ ಟೇಪ್ ಮತ್ತು ಅದರೊಂದಿಗೆ ಬರುವ ಡ್ರಾಯಿಂಗ್‌ನಿಂದ, ಜಾರ್ಜ್‌ಗೆ ತನ್ನ ಬಾಲ್ಯದ ದಿನಗಳು ನೆನಪಾಗುತ್ತವೆ ಮತ್ತು ಈ ವಿಡಿಯೋ ಕಳುಹಿಸುತ್ತಿರುವವರು ಯಾರೆಂಬ ಬಗ್ಗೆ ಒಂದು ಅಂದಾಜಿಗೆ ಬರುತ್ತಾನೆ.

ಜಾರ್ಜ್ 5 ವರ್ಷದವನಿದ್ದಾಗ ಅವನ ತಂದೆ, 1961ರ ಫ್ರಾನ್ಸ್ ಹತ್ಯಾಕಾಂಡದಲ್ಲಿ ಮೃತನಾಗಿರಬಹುದಾದ ಅಥವಾ ಕಣ್ಮರೆಯಾಗಿದ್ದ ಅಲ್ಜೀರಿಯನ್ ದಂಪತಿಗಳ ಮಗುವೊಂದನ್ನು ದತ್ತು ಪಡೆದು ತನ್ನ ಹಳ್ಳಿ ಮನೆಗೆ ಕರೆದುಕೊಂಡು ಬಂದಿರುತ್ತಾನೆ. ವಯಸ್ಸಿನಲ್ಲಿ ಜಾರ್ಜ್‌ಗಿಂತ ಹಿರಿಯನಾದ ಆ ನಿರಾಶ್ರಿತ ಮಗುವಿನ ಹೆಸರು ಮಜೀದ್. ಮಜೀದ್ ಮನೆಗೆ ಬಂದ ನಂತರ ಜಾರ್ಜ್‌ಗೆ ಮನೆಯಲ್ಲಿ ತಾನು ಒಬ್ಬನೇ ಇದ್ದಾಗಿನ ಕಂಫರ್ಟ್ ಈಗಿಲ್ಲ ಎಂಬ ಭಾವನೆ ಪ್ರಾರಂಭವಾಗಿ, ತನಗಿಂತ ಬಲಶಾಲಿಯಾದ ಮಜೀದ್‌ನನ್ನು ನೋಡಿದಾಗಲೆಲ್ಲ ಅಭದ್ರತೆಗೆ ಒಳಗಾಗುತ್ತಾನೆ. ತನ್ನ ತಂದೆ ತಾಯಿಗೆ ಮಜೀದ್ ಮೇಲೆ ಸುಳ್ಳು ಅರೋಪಗಳನ್ನು ಮಾಡಿ ಅವನನ್ನು ಮನೆಯಿಂದ ಅನಾಥಾಶ್ರಮಕ್ಕೆ ಸಾಗಿಹಾಕಲು ಕಾರಣವಾಗುತ್ತಾನೆ.

ಜಾರ್ಜ್‌ನ ಬಾಲ್ಯದ ನೆನಪು ಅನಾಮಧೇಯವಾಗಿ ಬಂದ ವಿಡಿಯೋ ಟೇಪ್ ಕಾರಣವಾಗಿ ನೆನಪಿಗೆ ಬರುತ್ತದೆಯೇ ಹೊರತು ಆ ಘಟನೆಯ ಬಗ್ಗೆ ಪಶ್ಚಾತ್ತಾಪ ಇರುವುದಿಲ್ಲ. ಅನ್ನೆಯಳಿಗೆ ಈ ಘಟನೆಯನ್ನು ವಿವರಿಸುವಾಗ ಕೂಡ ಜಾರ್ಜ್ ತನ್ನ ಪೋಷಕರಿಗೆ ಮಜೀದ್ ವಿರುದ್ಧ ಹೇಳಿದ ಸುಳ್ಳುಗಳು ಬಾಲ್ಯದ ಸಹಜ ವರ್ತನೆ ಎಂದು ಸಮರ್ಥಿಸಿಕೊಳ್ಳುತ್ತಾನೆ. ಈ ವಿಡಿಯೋಗಳನ್ನು ಮಜೀದ್ ತನ್ನ ಮೇಲಿನ ಪ್ರತೀಕಾರಕ್ಕೆ ಕಳುಹಿಸುತ್ತಿದ್ದಾನೆ ಎಂಬ ಖಚಿತ ನಿಲುವಿಗೆ ಜಾರ್ಜ್ ಬರುತ್ತಾನೆ. ಎಲ್ಲೋ ಒಂದು ಇಕ್ಕಟ್ಟಾದ ವಸತಿ ಸಂಕೀರ್ಣದಲ್ಲಿ ಬದುಕುತ್ತಿರುವ ಮಜೀದ್‌ನನ್ನು ಹುಡುಕುವ ಜಾರ್ಜ್, ಅವನಿಗೆ ಈ ರೀತಿಯ ವಿಡಿಯೋಗಳನ್ನು ಯಾಕೆ ಕಳುಹಿಸುತ್ತಿದ್ದೀಯಾ ಎಂದು ಕೇಳುತ್ತಾನೆ. ಮಜೀದ್ ಈ ಅರೋಪವನ್ನು ನಿರಾಕರಿಸುತ್ತಾನೆ. ಆದರೂ ಜಾರ್ಜ್ ಅವನಿಗೆ ಎಚ್ಚರಿಕೆ ನೀಡುತ್ತಾನೆ. ಈ ಎಚ್ಚರಿಕೆ ನೀಡಿದ ದೃಶ್ಯಗಳಿರುವ ವಿಡಿಯೋ ಟೇಪ್ ಜಾರ್ಜ್ ಕಚೆರಿಯ ವಿಳಾಸಕ್ಕೆ ಮರುದಿನ ತಲುಪುತ್ತದೆ. ಆ ರಾತ್ರಿ ಜಾರ್ಜ್ ಮಗ ಪಿರ್ರೋಟ್ ಮನೆ ತಲುಪುವುದಿಲ್ಲ. ಇದು ಮಜೀದ್‌ನದೆ ಕೃತ್ಯ ಎಂದು ನಿರ್ಧರಿಸುವ ಜಾರ್ಜ್ ಪೊಲೀಸ್ ಕಂಪ್ಲೇಟ್ ನೀಡುತ್ತಾನೆ. ಮಜೀದ್‌ನನ್ನು ಬಂಧಿಸಲಾಗುತ್ತದೆ. ಪಿರ್ರೋಟ್ ಕಾಣಿಯಾಗಿರುವ ಬಗ್ಗೆ ಮಜೀದ್ ಕೈವಾಡ ಇಲ್ಲವಾಗಿ ಮಾರನೆ ದಿನ ಅವನು ಬಿಡುಗಡೆಯಾಗುತ್ತಾನೆ. ಪಿರ್ರೋಟ್ ತನ್ನ ತಾಯಿಯ ಮೇಲಿನ ಕೋಪಕ್ಕೆ ರಾತ್ರಿ ಮನೆಗೆ ಬಂದಿರುವುದಿಲ್ಲ ಎಂದು ತಿಳಿಯುತ್ತದೆ. ಮಾರನೆಯ ದಿನ ಮಜೀದ್ ಜಾರ್ಜ್‌ನನ್ನು ತನ್ನ ಮನೆಗೆ ಅಹ್ವಾನಿಸುತ್ತಾನೆ. ಜಾರ್ಜ್ ಮಜೀದ್ ಮನೆಗೆ ಬಂದು ಮಾತು ಪ್ರಾರಂಭಿಸುತ್ತಿದ್ದಂತೆಯೇ ’ನಾನು ಕರೆದದ್ದು ಇದರ ಸಲುವಾಗಿ’ ಎಂದು ಹೇಳುತ್ತಾ ಮಜೀದ್ ತನ್ನ ಜೇಬಿನಲ್ಲಿದ್ದ ರೇಜರ್ ತೆಗೆದು ತನ್ನ ಕತ್ತನ್ನು ಕೊಯ್ದುಕೊಂಡು ಸಾಯುತ್ತಾನೆ.

ಇದಿಷ್ಟು ಕಥಾಹಂದರ. ಈ ವಿಡಿಯೋ ಚಿತ್ರೀಕರಣ ಮಾಡಿದ್ದು ಯಾರು ಎಂಬ ಸಸ್ಪೆನ್ಸ್ ಬಿಡಿಸುವ ಮತ್ತು ಆ ಮೂಲಕ ಪ್ರೇಕ್ಷಕನನ್ನು ಥ್ರಿಲ್ ಮೂಡ್‌ಗೆ ಒಳಪಡಿಸುವ ಯಾವ ಇರಾದೆಯೂ ಹನೆಕೆಗೆ ಇಲ್ಲ ಎಂಬುದು ಬಹಳ ನಿಧಾನಕ್ಕೆ ತಿಳಿಯುತ್ತದೆ. ಜಾರ್ಜ್ ಹುಡುಕಹೊರಡುವುದು ವಿಡಿಯೋ ಮುಖಾಂತರ ತನ್ನ ಕುಟುಂಬವನ್ನು ಭಯಪಡಿಸುತ್ತಿರುವವರು ಯಾರೆಂದು. ಹನೆಕೆ ಹುಡುಕುತ್ತಿರುವುದು ಭಯಭೀತನಾದ ಜಾರ್ಜ್‌ನ ಗತದ ಕೃತ್ಯ ಯಾವುದು ಮತ್ತು ಆ ಕೃತ್ಯದ ಬಗ್ಗೆ ಅವನಿಗಿರುವ ಅಭಿಪ್ರಾಯವಾದರೂ ಏನೆಂಬುದನ್ನು. ಅಮೆರಿಕಾದ 9/11ರ ಘಟನೆ ಮತ್ತು ಆನಂತರದ ಅಮೆರಿಕದ ವರ್ತನೆಗಳೆ ಹನೆಕೆಗೆ ಈ ಸಿನಿಮಾಗೆ ಮೂಲ ಪ್ರೇರಣೆ ಎಂದು ಒಂದು ಕಡೆ ಓದಿದ ನೆನಪು.

ಜಾರ್ಜ್ ತನ್ನ ಬಾಲ್ಯದಲ್ಲಿ ಮಜೀದ್ ವಿಚಾರವಾಗಿ ತಾಳಿದ ಅಸಹನೆ ಮತ್ತು ಅವನ ಮೇಲೆ ಮಾಡಿದ ಸುಳ್ಳು ಆರೋಪದಿಂದ ಮಜೀದ್ ತನಗೆ ದೊರಕಬಹುದಾಗಿದ್ದ ಉತ್ತಮ ಶಿಕ್ಷಣ, ಆರೈಕೆ ಮತ್ತು ಭವಿಷ್ಯದಿಂದ ವಂಚಿತನಾಗಿದ್ದಾನೆ. ಜಾರ್ಜ್‌ನ ಈ ಕೃತ್ಯದ ಬಗ್ಗೆ ನೆನಪು ಮಾಡಲು ಪ್ರಯತ್ನಿಸುವ ಮತ್ತು ಅದಕ್ಕಾಗಿ ಕಿಂಚಿತ್ ಪಶ್ಚಾತ್ತಾಪ ಏನಾದರೂ ಇದೆಯಾ ಎಂದು ಹುಡುಕುವ ಮಜೀದ್ ಮಾತುಗಳು; ಇದಕ್ಕೆ ಜಾರ್ಜ್ ತೋರಿಸುವ ನಿರ್ಲಕ್ಷ್ಯ ಮತ್ತು ತನ್ನ ತಪ್ಪುಗಳಿಗೆ ಅವನು ಕೊಡುವ ಸಮರ್ಥನೆ; ಇವು ದಬ್ಬಾಳಿಕೆ ನಡೆಸುವ ಪ್ರತಿಯೊಂದು ದೇಶ, ಸಮುದಾಯ ಕೊಡುವ ಸಮರ್ಥನೆಗಳೂ ಹೌದು. ಜಾರ್ಜ್‌ನ ವೈಯಕ್ತಿಕ ಪಶ್ಚಾತ್ತಾಪದ ನಿರಾಕರಣೆ, ದೇಶ ಮತ್ತು ಸಮುದಾಯಗಳ ಸಾಮೂಹಿಕ ಪಶ್ಚಾತ್ತಾಪದ ನಿರಾಕರಣೆಯೂ ಹೌದು. ಹನೆಕೆ ಈ ಸಿನಿಮಾದಲ್ಲಿ ಹೇಳಹೊರಟಿರುವುದು ಅದನ್ನೇ ಅನಿಸುತ್ತದೆ.


ಇದನ್ನೂ ಓದಿ: ‘ಗರಂ ಹವಾ’: ಒಂದು ನೆನಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...