HomeUncategorizedಕೊರೊನಾ ಬಗ್ಗೆ ತಪ್ಪು ಮಾಹಿತಿ: ಟ್ರಂಪ್ ಟ್ವೀಟ್‌ ಅನ್ನು ನಿರ್ಬಂಧಿಸಿದ ಟ್ವಿಟ್ಟರ್

ಕೊರೊನಾ ಬಗ್ಗೆ ತಪ್ಪು ಮಾಹಿತಿ: ಟ್ರಂಪ್ ಟ್ವೀಟ್‌ ಅನ್ನು ನಿರ್ಬಂಧಿಸಿದ ಟ್ವಿಟ್ಟರ್

ಇದು ಜನರನ್ನು ತಪ್ಪುದಾರಿಗೆಳೆಯುವ ಮಾಹಿತಿ ಎಂದು ಟ್ವಿಟ್ಟರ್ ಸಂಸ್ಥೆ ಎಚ್ಚರಿಕೆ ನೀಡಿದ್ದು, ಟ್ರಂಪ್ ಮಾಡಿದ್ದ ಟ್ವೀಟನ್ನು ನಿರ್ಬಂಧಿಸಿದೆ.

- Advertisement -
- Advertisement -

ಕೊರೊನಾ ಸೋಂಕಿಗೆ ಒಳಗಾಗಿದ್ದ ಟ್ರಂಪ್ ಕೊರೊನಾ ಸೋಂಕಿನ ಕುರಿತು ಮಾಡಿರುವ ಟ್ವೀಟ್‌ ಅನ್ನು ಟ್ವಿಟ್ಟರ್ ಸಂಸ್ಥೆ ಅಳಿಸಿಹಾಕಿದ್ದು, ಇದು ತಪ್ಪು ಮಾಹಿತಿ ನೀಡುತ್ತದೆ ಎಂದು ಎಚ್ಚರಿಕೆ ನೀಡಿದೆ.

ಕೊರೊನಾ ಸೋಂಕಿನ ತೀವ್ರತೆಯನ್ನು ಅರಿಯದೇ, ಇದು ಕೇವಲ ಸಾಮಾನ್ಯ ಜ್ವರ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಂಗಳವಾರ ಟ್ವೀಟ್ ಮಾಡಿದ್ದರು. ಇದು ಜನರನ್ನು ತಪ್ಪುದಾರಿಗೆಳೆಯುವ ಮಾಹಿತಿ ಎಂದು ಟ್ವಿಟ್ಟರ್ ಸಂಸ್ಥೆ ಎಚ್ಚರಿಕೆ ನೀಡಿದ್ದು, ಟ್ರಂಪ್ ಮಾಡಿದ್ದ ಟ್ವೀಟನ್ನು ನಿರ್ಬಂಧಿಸಿದೆ.

ಇದನ್ನೂ ಓದಿ: ಜಗತ್ತಿನ 10 ಜನರಲ್ಲಿ ಒಬ್ಬರಿಗೆ ಕೊರೊನಾ: WHO ಕಳವಳ

“ಜ್ವರ ಪ್ರತಿವರ್ಷವೂ ಬರುತ್ತದೆ. ಅನೆಕ ಜನರು, ಕೆಲವೊಮ್ಮೆ 100,000ಕ್ಕಿಂತ ಹೆಚ್ಚು ಜನರು ಲಸಿಕೆ ನೀಡಿದ ಹೊರತಾಗಿಯೂ ಜ್ವರದಿಂದ ಸಾಯುತ್ತಾರೆ. ನಾವು ನಮ್ಮ ದೇಶವನ್ನು ಮುಚ್ಚುತ್ತೇವೆಯೇ? ಇಲ್ಲ, ನಾವು ಅದರೊಟ್ಟಿಗೆ ಬದುಕಲು ಕಲಿತಿರುವಂತೆಯೇ ಕೋವಿಡ್‌ನೊಡನೆಯೂ ಬದುಕಲು ಕಲಿತಿದ್ದೇವೆ” ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ 551 ವೈದ್ಯರ ಸಾವು: ಭಾರತೀಯ ವೈದ್ಯಕೀಯ ಸಂಘಟನೆಯ ದತ್ತಾಂಶ

ಟ್ರಂಪ್‌ ಕೊರೊನಾ ವೈರಸ್‌ಗೆ ತುತ್ತಾಗಿದ್ದರಿಂದ, ಅವರನ್ನು ಮೇರಿಲ್ಯಾಂಡ್‌ನ ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅಲ್ಲಿಂದ ಬಿಡುಗಡೆಯಾದ ಕೆಲವೇ ಗಂಟೆಗಳ ನಂತರ ಈ ಟ್ವೀಟ್ ಮಾಡಿದ್ದಾರೆ. ಕೋವಿಡ್‌ಗೆ ಭಯಪಡಬೇಡಿ ಎಂದು ನಾಗರೀಕರಿಗೆ ಹೇಳುತ್ತಾ, ತಮಗಿನ್ನೂ ಸೋಂಕು ಸಂಪೂರ್ಣವಾಗಿ ನಿವಾರಣೆಯಾಗಿಲ್ಲದಿದ್ದರೂ, ಕ್ಯಾಮರಾಗೆ ಪೋಸ್ ನೀಡಲು ತಮ್ಮ ಮಾಸ್ಕನ್ನು ಕಿತ್ತೊಗೆದರು.

ಈ ಹಿಂದೆಯೂ ಟ್ರಂಪ್ ಇದೇ ರೀತಿಯ ತಪ್ಪು ಮಾಹಿತಿ ನೀಡುವ ಪೋಸ್ಟನ್ನು ಫೇಸ್‌ಬುಕ್‌ನಲ್ಲಿ ಮಾಡಿದ್ದರು. ಆಗ ಫೇಸ್‌ಬುಕ್ ಇದನ್ನು ನಿರ್ಬಂಧಿಸಿತ್ತು ಎಂದು CNN ತಿಳಿಸಿದೆ.

ಇದನ್ನೂ ಓದಿ: ‘ನನಗೆ ಕೊರೊನಾ ಬಂದರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುವೆ’ ಎಂದಿದ್ದ ಬಿಜೆಪಿ ನಾಯಕನಿಗೆ ಕೊರೊನಾ ದೃಢ!

ಕೊರೊನಾ ಸಾಂಕ್ರಾಮಿಕವು ಅಮೇರಿಕಾದಲ್ಲಿ ಮಾತ್ರ ಕನಿಷ್ಠ 2 ಲಕ್ಷ ಜೀವಗಳನ್ನು ಬಲಿತೆಗೆದುಕೊಂಡಿದೆ. ಅಮೇರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಸೇರಿದಂತೆ ಅನೇಕ ಶ್ವೇತಭವನದ ಅಧಿಕಾರಿಗಳು ಇತ್ತೀಚೆಗೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಸೋಮವಾರ ಶ್ವೇತಭವನ್ ಪತ್ರಿಕಾ ಕಾರ್ಯದರ್ಶಿ ಕೇಲೀ ಮೆಗ್ ಎನಾನಿ ಸೋಂಕಿಗೆ ಒಳಗಾಗಿದ್ದರು.

ನಿನ್ನೆ  ವಿಶ್ವ ಆರೋಗ್ಯ ಸಂಸ್ಥೆ ತನ್ನ ವಿಶೇಷ ಸಭೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. “ಜಗತ್ತಿನ ಜನಸಂಖ್ಯೆಯಲ್ಲಿ ಶೇಕಡಾ 10 ರಷ್ಟು ಜನರಿಗೆ ಸೋಂಕು ತಗುಲಿದೆ. ಹಾಗಾಗಿ ನಾವು ಅಪಾಯದ ಅಂಚಿನಲ್ಲಿದ್ದೇವೆ” ಎಂದು ಎಚ್ಚರಿಕೆ ನೀಡಿತ್ತು.


ಇದನ್ನೂ ಓದಿ: ಕ್ಯಾಟ್‌ ಕ್ಯೂ ವೈರಸ್: ಕೊರೊನಾದಂತೆಯೇ ಮತ್ತೊಂದು ಅಪಾಯಕಾರಿ ವೈರಸ್: ICMR ಆತಂಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...