ಹಾಡಹಗಲೇ ನಡೆದ ಯುವತಿಯ ಅಪಹರಣದ ವೀಡಿಯೋ ವೈರಲ್; ಇದು ಉತ್ತರಪ್ರದೇಶದ್ದೇ?

ಉತ್ತರ ಪ್ರದೇಶದ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಮತ್ತೊಂದು ಉದಾಹರಣೆ ಎಂದು, ಹಾಡಹಗಲೇ ಯುವತಿಯನ್ನು ಅಪಹರಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಳ್ಳಲಾಗುತ್ತಿದೆ.

“ಉತ್ತರ ಪ್ರದೇಶದಲ್ಲಿ ಹೆಣ್ಣುಮಕ್ಕಳನ್ನು ಹಗಲು ಹೊತ್ತಿನಲ್ಲಿ ಅಪಹರಿಸಲಾಗುತ್ತಿದೆ, ಅಂಧ ಭಕ್ತರು ಇನ್ನೂ ಕಣ್ಣುಮುಚ್ಚಿ ಕುಳಿತಿದ್ದಾರೆ” ಎನ್ನುವ ಹೇಳಿಕೆಯೊಂದಿಗೆ ವೀಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌‌: ಪಂಜಾಬ್‌‌ನ ಈ ಮಹಿಳಾ ಅಧಿಕಾರಿ ಮೃತಪಟ್ಟಿದ್ದು ಅತ್ಯಾಚಾರದಿಂದಲ್ಲ, ರಸ್ತೆ ಅಫಘಾತದಿಂದ

ಕಾಂಗ್ರೆಸ್‌ನ ರಾಷ್ಟ್ರೀಯ ಸಂಯೋಜಕಿ ಎಂದು ಹೇಳಿಕೊಂಡಿರುವ ಸುಜಾತಾ ಪಾಲ್ ಎಂಬುವವರು ತಮ್ಮ ವಾಲ್‌ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವರದಿ ಬರೆಯುವ ವೇಳೆಗೆ, 1 ಲಕ್ಷದ 74 ಸಾವಿರ ಜನರು ಇದನ್ನು ವೀಕ್ಷಿಸಿದ್ದು, 8 ಸಾವಿರ ಜನರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ನಟ ಅಮಿತಾಬ್ ಬಚ್ಚನ್‌ ದಾವೂದ್ ಇಬ್ರಾಹಿಂನನ್ನು ಭೇಟಿ ಆಗಿದ್ದು ನಿಜವೆ?

ರಶ್ಮಿಕಾ ಮಂದಣ್ಣ ಫ್ಯಾನ್ಸ್‌ ಗುಂಪಿನಲ್ಲಿಯೂ ಈ ವಿಡಿಯೋವನ್ನು ಇದೇ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಹೀಗೆ, ಸಾಮಾಜಿಕ ಮಾಧ್ಯಮಗಳಲ್ಲಿ ಈ ವೀಡಿಯೋ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂಬ ಪ್ರತಿಪಾದನೆಯೊಂದಿಗೆ ಹರಿದಾಡುತ್ತಿದೆ. ಇದನ್ನು ನೂರಾರು ಜನರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಎಡಿಟೆಡ್‌ ವಿಡಿಯೋ ಹಂಚಿದ ಮಧ್ಯಪ್ರದೇಶ ಕಾಂಗ್ರೆಸ್‌!

ಫ್ಯಾಕ್ಟ್‌ಚೆಕ್:

ಈ ವೀಡಿಯೋನ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಡವು ಡಿಜಿಟಲ್ ಸುದ್ಧಿ ಮಾಧ್ಯಮ ದಿ ನ್ಯೂಸ್ ಮಿನಿಟ್‌ಗೆ ಕರೆದೊಯ್ಯಿತು ಎಂದು ದಿ ಕ್ವಿಂಟ್ ವರದಿ ಮಾಡಿದೆ.

ಈ ಅಪಹರಣ ಘಟನೆಯು ಆಗಸ್ಟ್ 14, 2020 ರಂದು ಬೆಳಿಗ್ಗೆ 11.30ಕ್ಕೆ ಕೋಲಾರದಲ್ಲಿ ನಡೆದಿದೆ ಎಂದು ಅಲ್ಲಿನ ಲೇಖನವೊಂದರಲ್ಲಿ ಹೇಳಲಾಗಿದೆ. ಶಿವಶಂಕರ್, ಬಾಲಾಜಿ ಮತ್ತು ದೀಪಕ್ ಎಂದು ಗುರುತಿಸಲ್ಪಟ್ಟ ಮೂವರ ಗುಂಪು ಬಾಲಕಿಯನ್ನು ಹಾಡಹಗಲೇ ಅಪಹರಿಸಿತ್ತು. ಈ ಗುಂಪಿನಲ್ಲಿ ಒಬ್ಬನಾದ ಶಿವಶಂಕರ್ ನೀಡಿದ ಮದುವೆಯ ಪ್ರಸ್ತಾಪವನ್ನು ಯುವತಿ ತಿರಸ್ಕರಿಸಿದ್ದರಿಂದ ಆಕೆಯನ್ನು ಅಪಹರಿಸಲಾಗಿತ್ತು ಎಂದು ತಿಳಿದುಬಂದಿದೆ. ಈ ಯುವತಿಯನ್ನು ಪೊಲೀಸರು ರಕ್ಷಿಸಿದ್ದು, ಈಗ ಆಕೆ ತನ್ನ ಕುಟುಂಬದೊಂದಿಗೆ ಇದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಕೇಂದ್ರ ಸರ್ಕಾರ ಪ್ರತಿ ಹೆಣ್ಣು ಮಕ್ಕಳಿಗೆ ಮಾಸಿಕ ತಲಾ 2000 ರೂ. ನೀಡುತ್ತಿರುವುದು…

“ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನಾವು ಅಪಹರಣಕಾರರನ್ನು ಬೆನ್ನಟ್ಟಿದೆವು. ನಂತರ ಅವರನ್ನು ಪತ್ತೆಹಚ್ಚಿ ಯುವತಿಯನ್ನು ರಕ್ಷಿಸಿ ಕೋಲಾರಕ್ಕೆ ಕರೆತರುವಾಗ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ” ಎಂದು ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದರು.

ಈ ಘಟನೆಯನ್ನು ಟೈಮ್ಸ್ ಆಫ್ ಇಂಡಿಯಾ, ನ್ಯೂಸ್ 18 ಕನ್ನಡ ಮತ್ತು ಮಿರರ್ ನೌ ಸಹ ವರದಿ ಮಾಡಿದೆ.

ಇದರಿಂದ ತಿಳಿದುಬರುವುದೇನೆಂದರೆ, ಕರ್ನಾಟಕದಲ್ಲಿ ನಡೆದ ಅಪಹರಣದ ವೀಡಿಯೋವನ್ನು ಉತ್ತರಪ್ರದೇಶದಲ್ಲಿ ನಡೆದಿದೆ ಎಂಬ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ: ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ? ಇಲ್ಲಿದೆ ಫ್ಯಾಕ್ಟ್‌ಚೆಕ್‌ ವಿವರ

LEAVE A REPLY

Please enter your comment!
Please enter your name here