Homeಕರೋನಾ ತಲ್ಲಣಕೊರೊನಾದಿಂದ 551 ವೈದ್ಯರ ಸಾವು: ಭಾರತೀಯ ವೈದ್ಯಕೀಯ ಸಂಘಟನೆಯ ದತ್ತಾಂಶ

ಕೊರೊನಾದಿಂದ 551 ವೈದ್ಯರ ಸಾವು: ಭಾರತೀಯ ವೈದ್ಯಕೀಯ ಸಂಘಟನೆಯ ದತ್ತಾಂಶ

ಕೊರೊನಾ ಸೋಂಕಿಗೆ ಒಳಗಾಗಿ, ಅದರಿಂದ ಮೃತಪಟ್ಟ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಸಂಪೂರ್ಣ ದತ್ತಾಂಶ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಇದನ್ನು IMA ತೀವ್ರವಾಗಿ ಟೀಕಿಸಿತ್ತು.

- Advertisement -
- Advertisement -

ಭಾರತದಲ್ಲಿ ಕೊರೊನಾ ಸೋಂಕಿತರು ದಿನೇ ದಿನೇ ಹೆಚ್ಚಾಗುತ್ತಿದ್ದು, ಕೊರೊನಾ ಸೋಂಕಿಗೆ ಇದುವರೆಗೂ ದೇಶದಲ್ಲಿ ಸುಮಾರು 551 ವೈದ್ಯರ ಸಾವು ಸಂಭವಿಸಿದೆ ಎಂದು ಭಾರತೀಯ ವೈದ್ಯಕೀಯ ಸಂಘಟನೆ (IMA) ಶುಕ್ರವಾರ ಹೇಳಿದೆ.

ಕೊರೊನಾ ಸೋಂಕಿಗೆ ಒಳಗಾಗಿ, ಅದರಿಂದ ಮೃತಪಟ್ಟ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಸಂಪೂರ್ಣ ದತ್ತಾಂಶ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಇದನ್ನು IMA ತೀವ್ರವಾಗಿ ಟೀಕಿಸಿತ್ತು.

ಇದನ್ನೂ ಓದಿ: ಕೊರೊನಾ ಸಾವುಗಳಿಗೆ ಕೊನೆಯಿಲ್ಲವೇ? ಮನಸ್ಸು ಮಾಡಿದರೆ ಜೀವ ಉಳಿಸಬಹುದಲ್ಲವೇ?

“ದೇಶದಲ್ಲಿ ಇದುವರೆಗೆ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದ 551 ವೈದ್ಯರು ಮೃತಪಟ್ಟಿದ್ದಾರೆ. IMAನ ನಮ್ಮ ವಿವಿಧ ಶಾಖೆಗಳ ಮೂಲಕ ಗುರುತಿಸಲಾಗಿರುವ ಮೃತರೆಲ್ಲಾ ಅಲೋಪತಿ ವೈದ್ಯರೇ ಆಗಿದ್ದಾರೆ. ದೇಶದಾದ್ಯಂತ ಸುಮಾರು 1,746 ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ” ಎಂದು ಭಾರತೀಯ ವೈದ್ಯಕೀಯ ಸಂಘಟನೆಯ ಅಧ್ಯಕ್ಷ ಡಾ.ರಾಜನ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರ ನಿರುದ್ಯೋಗದ ಬಗೆಗಿನ ದತ್ತಾಂಶ ಮುಚ್ಚಿಡಬಹುದೇ ವಿನಃ ಸತ್ಯವನ್ನಲ್ಲ-  ಕೌಶಿಕ್ ಬಸು, ಅರ್ಥಶಾಶ್ತ್ರಜ್ಞ

“60-70 ವಯಸ್ಸಿನ 201 ವೈದ್ಯರು, 50-60 ವಯಸ್ಸಿನ 171 ವೈದ್ಯರು, 70 ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ 66 ವೈದ್ಯರು ಮತ್ತು 35-50 ವಯಸ್ಸಿನ 59 ವೈದ್ಯರ ಸಾವು ದಾಖಲಾಗಿವೆ ಎಂದು IMA ದತ್ತಾಂಶ ಹೇಳುತ್ತದೆ.

ಕೇಂದ್ರ ಸರ್ಕಾರ ಈ ಹಿಂದೆ ನಡೆದ ಅಧಿವೇಶನದಲ್ಲಿ ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರ ಸಾವುಗಳ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿತ್ತು. ಆದರೆ ಇದಾದ ಕೆಲವು ದಿನಗಳ ನಂತರ 97 ಜನ ಸತ್ತಿದ್ದಾರೆ ಎಂದು ಕೇಂದ್ರ ಸರ್ಕಾರವೇ ವರದಿ ನೀಡಿತ್ತು.


ಇದನ್ನೂ ಓದಿ: ಸಿಬಿಐ, ಆಬಿಐ ಸ್ವಾಯುತ್ತತೆ ಹಾಳು ಮಾಡಿದಾಯ್ತು. ಈಗ ದತ್ತಾಂಶ ವಿಶ್ಲೇಷಕ ಸಂಸ್ಥೆಗಳ ಮೇಲೆ ಮೋದಿ ಕಣ್ಣು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂವಿಧಾನ-ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟ ಇಂದಿನಿಂದ ಆರಂಭ: ಮಲ್ಲಿಕಾರ್ಜುನ ಖರ್ಗೆ

0
2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದಿನಿಂದ ಆರಂಭಗೊಂಡಿದ್ದು, ಮತದಾರರು ಎಚ್ಚರಿಕೆಯಿಂದ ಮತದಾನ ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ. "ಆರ್ಥಿಕ ಸಬಲೀಕರಣ ಮತ್ತು ಸಮಾನ ಅವಕಾಶಗಳ ಹೊಸ...