ಭಾರತ ಕೊರೊನಾ ಸಾಂಕ್ರಾಮಿಕದಿಂದ ತತ್ತರಿಸುತ್ತಿದೆ. ಈ ನಡುವೆಯೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತೊಂದು ಆತಂಕ ಸೃಷ್ಟಿಸುವ ಮಾಹಿತಿ ನೀಡಿದೆ. ಕೊರೊನಾ ಜೊತೆಗೇ ನಾವು ಚೀನಾದ ಮತ್ತೊಂದು ವೈರಸ್ ವಿರುದ್ಧ ಹೋರಾಡಬೇಕಿದೆ. ಅದೇ ಕ್ಯಾಟ್ ಕ್ಯೂ ವೈರಸ್ (CQV).
ಈ ವೈರಸ್ ಅನ್ನು ಆರ್ಬೋವೈರಸ್ ಎಂದು ಕರೆಯಲಾಗುತ್ತದೆ. ಚೀನಾ ಮತ್ತು ವಿಯೆಟ್ನಾಂನ ಕೆಲವು ಭಾಗಗಳಲ್ಲಿ ಕೆಲ ಜಾತಿಯ ಸೊಳ್ಳೆಗಳು ಮತ್ತು ಹಂದಿಗಳಲ್ಲಿ ಕ್ಯಾಟ್ ಕ್ಯೂ ವೈರಸ್ (CQV) ಕುರುಹುಗಳು ಕಂಡುಬಂದಿವೆ.
ಪುಣೆಯ ರಾಷ್ಟ್ರೀಯ ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಸಲಾಗಿರುವ 883 ಜನರ ರಕ್ತದ ಮಾದರಿ ಪರೀಕ್ಷೆಯಲ್ಲಿ ಹಲವರಲ್ಲಿ ಕ್ಯಾಟ್ ಕ್ಯೂ ವೈರಸ್ ಇರುವುದು ದೃಢಪಟ್ಟಿದೆಯಂತೆ. ಈ ವೈರಸ್ ಕರ್ನಾಟಕದಲ್ಲಿ 2014 ಮತ್ತು 2017ರಲ್ಲಿ ಎರಡು ಪ್ರಕರಣಗಳು ಕಂಡುಬಂದಿದ್ದವು.
ಇದನ್ನೂ ಓದಿ: ಇನ್ಮುಂದೆ ಕೊರೊನಾ ಸೋಂಕಿತರಿಗೆ ಕ್ಷಯರೋಗ ಪರೀಕ್ಷೆ ಕಡ್ಡಾಯ
ಕ್ಯಾಟ್ ಕ್ಯೂ ವೈರಸ್ ಎಂದರೇನು..?
ಈ ಕ್ಯಾಟ್ ಕ್ಯೂ ವೈರಸ್ ಪ್ರಾಣಿಗಳಿಗೆ (ಸೊಳ್ಳೆಗಳು, ಹಂದಿಗಳು) ಮತ್ತು ಮನುಷ್ಯರಿಗೆ ಇಬ್ಬರಿಗೂ ಸೋಂಕು ತಗುಲುತ್ತದೆ. ವೈರಸ್ ಸೋಂಕಿನಿಂದ ಅಧಿಕ ಜ್ವರ, ಮೆನಿಂಜೈಟಿಸ್, ಮೆದುಳಿನ ಉರಿಯೂತದಂತಹ ಭಯಾನಕ ರೋಗಲಕ್ಷಣಗಳಿಗೆ ಕಾರಣವಾಗಬಹುದು. ವೈರಸ್ ಈಗಾಗಲೇ ಚೀನಾ ಮತ್ತು ವಿಯೆಟ್ನಾಂ ಜಿಲ್ಲೆಗಳ ಹಂದಿಗಳಲ್ಲಿ ವಾಡಿಕೆಯಂತೆ ಕಂಡುಬರುತ್ತದೆ ಎಂದು ಹೇಳಲಾಗುತ್ತದೆ.
ಈ ವೈರಸ್, ಆರ್ತ್ರೋಪಾಡ್ ವಾಹಕಗಳ ಮೂಲಕ ಹರಡುವ ವೈರಸ್, ಇದನ್ನು ಅರ್ಬೊವೈರಸ್ ಎಂದೂ ಕರೆಯುತ್ತಾರೆ. ತಜ್ಞರ ಪ್ರಕಾರ, 130 ಕ್ಕೂ ಹೆಚ್ಚು ವಿವಿಧ ರೀತಿಯ ಆರ್ಬೊವೈರಸ್‌ಗಳಿದ್ದು ಇವು ಮನುಷ್ಯರಲ್ಲಿ ಸೋಂಕು ಹಬ್ಬಿಸುತ್ತವೆ. ಈ ವೈರಸ್ ಲಕ್ಷಣಗಳು ಲಕ್ಷಣರಹಿತ, ಸಾಮಾನ್ಯ ಜ್ವರದ ಜೊತೆಗೆ ಅತಿಯಾದ ತೀವ್ರತೆಯನ್ನು ಹೊಂದಿರುತ್ತವೆ.
ಕ್ಯಾಟ್ ಕ್ಯೂ ವೈರಸ್ ಹೇಗೆ ಹರಡುತ್ತದೆ…?
ಸೋಂಕು ಸಾಮಾನ್ಯವಾಗಿ ಕೋಳಿ ಮತ್ತು ಸಸ್ತನಿಗಳಲ್ಲಿ ಹರಡಿದರೆ, ಸೊಳ್ಳೆಗಳು ಮತ್ತು ಕೀಟಗಳ ಮೂಲಕ ಮೂಲಕ ಮನುಷ್ಯರಿಗೂ ಹರಡಬಹುದು. ಮನುಷ್ಯನಿಗೆ ಸೋಂಕಿತ ಸೊಳ್ಳೆ ಅಥವಾ ಕೀಟ ಕಚ್ಚಿದಾಗ ಸೋಂಕು ಹರಡಬಹುದು.
ಇದನ್ನೂ ಓದಿ: ಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಗದ ಪುನರಾರಂಭ: ಅನುಮತಿ ನೀಡಿದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ
ಕಚ್ಚುವಿಕೆಯ ಹೊರತಾಗಿ, ರಕ್ತ ವರ್ಗಾವಣೆ, ಕಸಿ, ಲೈಂಗಿಕ ಸಂಪರ್ಕ, ಗರ್ಭಧಾರಣೆ ಮತ್ತು ಜನ್ಮ ನೀಡುವ ಸಂದರ್ಭಗಳಲ್ಲೂ ಆರ್ಬೊವೈರಸ್‌ಗಳು ಮನುಷ್ಯರ ಮೇಲೆ ಪರಿಣಾಮ ಬೀರಬಹುದು. ಮನುಷ್ಯರಿಗೆ ಹರಡುವ ಸಾಧ್ಯತೆ ಬಗ್ಗೆ ಐಸಿಎಂಆರ್ ಕಳವಳ ವ್ಯಕ್ತಪಡಿಸಿದೆ.
ಐಸಿಎಂಆರ್ ಪ್ರಕಾರ, ಭಾರತದಲ್ಲಿ, ಕೆಲವು ಸೊಳ್ಳೆ ತಳಿಗಳಾದ ಏಜಿಪ್ಟಿ, Cx quinquefasciatus ಮತ್ತು Cx Tritaeniorhynchus ಇವುಗಳಿಂದ ವೈರಸ್ ಹಬ್ಬುವ ಅಪಾಯ ಹೆಚ್ಚಾಗಿದೆ. ಈ ಅಧ್ಯಯನದ ಸಂಶೋಧನೆಗಳನ್ನು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ (ಐಜೆಎಂಆರ್) ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.
ಹಂದಿ, ಕಾಡು ಮೈನಾ ಹಕ್ಕಿ ಮತ್ತು ಸೊಳ್ಳೆಗಳಂತಹ ಜೀವಿಗಳಲ್ಲಿ ಕಂಡುಬರುವ ಸೋಂಕಿನ ಕುರುಹುಗಳು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಾಗಿ ಬದಲಾಗಬಹುದು. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಂತೆಯೇ ಇದು ಇರಬಹುದು ಎಂದು ವಿಜ್ಞಾನಿಗಳು ಸೂಚಿಸಿದ್ದಾರೆ.