Homeಅಂತರಾಷ್ಟ್ರೀಯಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಗದ ಪುನರಾರಂಭ: ಅನುಮತಿ ನೀಡಿದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ

ಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಗದ ಪುನರಾರಂಭ: ಅನುಮತಿ ನೀಡಿದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ

ಭಾರತ ಮತ್ತು ಯುಕೆ ಯಲ್ಲಿ DSMBಯ ಶಿಫಾರಸುಗಳನ್ನು ಪರಿಶೀಲಿಸಿದ ನಂತರ, ಹೊಸ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮಗಳು, 2019ರ ನಿಯಮ 30 ರ ಅಡಿಯಲ್ಲಿ ಹೊರಡಿಸಲಾದ ಸೆಪ್ಟೆಂಬರ್ 11 ರ ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ

- Advertisement -
- Advertisement -

ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಕ್ಲಿನಿಕಲ್ ಪ್ರಯೋಗವನ್ನು ಪುನರಾರಂಭಿಸಲು ಅನುಮತಿ ನೀಡಿ, ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಈ ಹಿಂದೆ ನೀಡಿದ್ದ ತಡೆಯ ಆದೇಶವನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಡಾ. ವಿ.ಜಿ.ಸೋಮಾನಿ ಮಂಗಳವಾರ ಹಿಂಪಡೆಡಿದ್ದಾರೆ.

ಆದರೆ ಈ ಅನುಮತಿಗೂ DCGI ಹಲವು ಷರತ್ತುಗಳನ್ನು ವಿಧಿಸಿದ್ದು, ಸ್ಕ್ರೀನಿಂಗ್ ಸಮಯದಲ್ಲಿ ಸ್ವಯಂಸೇವಕರ ಹೆಚ್ಚಿನ ಕಾಳಜಿ ವಹಿಸುವುದು, ಸ್ವಯಂಸೇವಕರೊಂದಿಗೆ ಒಪ್ಪಿಗೆ ಪ್ರಮಾಣ ಪತ್ರದಲ್ಲಿ ಪ್ರಯೋಗದ ಕುರಿತು ಹೆಚ್ಚಿನ ಮಾಹಿತಿ ನೀಡುವುದು, ಪ್ರತಿಕೂಲ ಘಟನೆಗಳಿಗೆ ನಿಕಟ ಮೇಲ್ವಿಚಾರಣೆ, ಸ್ವಯಂ ಸೇವಕರ ಫಾಲೋಅಪ್ ತನಿಖಾ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಬಳಿಕ ಮುಂದಿನ ಕ್ರಮ ಅನುಸರಿಸಬೇಕು ಎಂಬಿತ್ಯಾದಿ ಅಂಶಗಳು ಸೇರಿದಂತೆ ಹಲವು ಷರತ್ತುಗಳನ್ನು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ(SII) ವಿಧಿಸಲಾಗಿದೆ.

ಪ್ರತಿಕೂಲ ಘಟನೆಗಳ ನಿರ್ವಹಣೆಗೆ ಪ್ರೋಟೋಕಾಲ್‌ಗೆ ಅನುಗುಣವಾಗಿ ಬಳಸುವ ಔಷಧಿಗಳ ಬಗ್ಗೆ DCGI ಕಚೇರಿಗೆ ವಿವರಗಳನ್ನು ಸಲ್ಲಿಸಲು SIIಗೆ ಸೂಚಿಸಲಾಗಿದೆ ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.

ಸೆಪ್ಟೆಂಬರ್ 11 ರಂದು, ಸೆರೆಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ತನ್ನ ಆಕ್ಸ್ ಫರ್ಡ್ ಲಸಿಕೆಯ 2 ಮತ್ತು ಮೂರನೇ ಹಂತದ ಪ್ರಯೋಗಕ್ಕೆ ಸ್ವಯಂ ಸೇವಕರ ನೇಮಕಾತಿಗೆ ಮುಂದಾಗಿತ್ತು. ಆದರೆ ಆಸ್ಟ್ರಾ ಜೆನಿಕಾ ಘಟನೆ ಬಳಿಕ ಲಸಿಕೆ ಪ್ರಯೋಗ ಸಂಬಂಧ ಹೊಸ ನೇಮಕಾತಿ (ಸ್ವಯಂ ಸೇವಕರು) ಮಾಡಿಕೊಳ್ಳದಂತೆ ಸೆರೆಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಡಿಸಿಜಿಐ ಸೂಚನೆ ನೀಡಿತ್ತು.

ಇದನ್ನೂ ಓದಿ: ಕಂಗನಾಗೆ ಬೆಂಬಲ ನೀಡಲು ಮುಂಬೈಗೆ ಆಗಮಿಸಿತೆ ಕರ್ಣಿಸೇನಾ!: ಸತ್ಯಾಸತ್ಯತೆ ಏನು..?

ಶನಿವಾರ, ಪ್ರಯೋಗಗಳು ಸುರಕ್ಷಿತವೆಂದು ಔಷಧಿ ಆರೋಗ್ಯ ನಿಯಂತ್ರಣ ಪ್ರಾಧಿಕಾರದ (MHRA) ದೃಢಪಡಿಸಿದ ನಂತರ, ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು, ‘ತಮ್ಮ ಕೊರೊನಾ ವೈರಸ್ ಲಸಿಕೆಗಾಗಿ ಕ್ಲಿನಿಕಲ್ ಪ್ರಯೋಗಗಳು ಯುಕೆಯಲ್ಲಿ ಪುನರಾರಂಭಗೊಂಡಿವೆ’ ಎಂದು ಹೇಳಿದೆ.

ಕೊರೊನಾಗಾಗಿ ಲಸಿಕೆ ಅಭ್ಯರ್ಥಿಯನ್ನು ತಯಾರಿಸಲು ಅಸ್ಟ್ರಾಜೆನೆಕಾ ಜೊತೆ ಪಾಲುದಾರಿಕೆ ಹೊಂದಿರುವ SII, ಯುಕೆ ಮತ್ತು ಭಾರತ ಮತ್ತು ಡೇಟಾ ಮತ್ತು ಸುರಕ್ಷತಾ ಮಾನಿಟರಿಂಗ್ ಬೋರ್ಡ್ (DSMB), ಮತ್ತು ಭಾರತದ DSMB ಶಿಫಾರಸುಗಳನ್ನು ಮಂಗಳವಾರ ಸಲ್ಲಿಸಿ, ಕ್ಲಿನಿಕಲ್ ಪ್ರಯೋಗದಲ್ಲಿ ದಾಖಲಾತಿಯನ್ನು ಮರುಪ್ರಾರಂಭಿಸಲು ಅನುಮತಿ ಕೋರಿತ್ತು.

ಮಂಗಳವಾರ DCGI ಹೊರಡಿಸಿದ ಆದೇಶದ ಪ್ರಕಾರ, ಯುಕೆ ಯ DSMB, ಕೆಲವು ಷರತ್ತುಗಳಿಗೆ ಒಳಪಟ್ಟು ತನಿಖಾಧಿಕಾರಿಗಳು ತಮ್ಮ ಕ್ಲಿನಿಕಲ್ ಪ್ರಯೋಗಗಳಲ್ಲಿ ಎಲ್ಲಾ ರೋಗನಿರೋಧಕವನ್ನು ಪುನಃ ಪ್ರಾರಂಭಿಸುವಂತೆ ಶಿಫಾರಸು ಮಾಡಿದ್ದಾರೆ ಎಂದು ಹೇಳಿದೆ.

ಭಾರತದ DSMB, ಕೆಲವು ಷರತ್ತುಗಳಿಗೆ ಒಳಪಟ್ಟು ಪ್ರೋಟೋಕಾಲ್ ಪ್ರಕಾರ ಅಧ್ಯಯನವನ್ನು ಮುಂದುವರಿಸಲು ಮತ್ತು ಉಳಿದ ಭಾಗವಹಿಸುವವರನ್ನು ಕ್ಲಿನಿಕಲ್ ಪ್ರಯೋಗದಲ್ಲಿ ದಾಖಲಿಸಲು ಶಿಫಾರಸು ಮಾಡಿದೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್

ಪುಣೆ ಮೂಲದ ಸಂಸ್ಥೆಯು ಮೊದಲ ವ್ಯಾಕ್ಸಿನೇಷನ್ ನಂತರದ ಏಳು ದಿನಗಳ ಸುರಕ್ಷತೆಯ ಅನುಸರಣೆಯ ಸಾರಾಂಶವನ್ನು ಸಲ್ಲಿಸಿದೆ. ವರದಿಯ ದಿನಾಂಕದವರೆಗೆ ಯಾವುದೇ ಘಟಕಗಳಿಂದ ಯಾವುದೇ ಗಂಭೀರ ಪ್ರತಿಕೂಲ ಘಟನೆಗಳು ಸಂಭವಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಮೇಲಿನದನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಪರವಾನಗಿ ಪ್ರಾಧಿಕಾರದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಡಾ. ವಿ.ಜಿ.ಸೋಮಾನಿ, “ಭಾರತ ಮತ್ತು ಯುಕೆ ಯಲ್ಲಿ DSMBಯ ಶಿಫಾರಸುಗಳನ್ನು ಪರಿಶೀಲಿಸಿದ ನಂತರ, ಹೊಸ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮಗಳು, 2019ರ ನಿಯಮ 30 ರ ಅಡಿಯಲ್ಲಿ ಹೊರಡಿಸಲಾದ ಸೆಪ್ಟೆಂಬರ್ 11 ರ ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.

“ಈಗಾಗಲೇ ಅನುಮೋದಿತ ಪ್ರೋಟೋಕಾಲ್ ಮತ್ತು ಹೊಸ ಔಷಧಗಳು ಮತ್ತು ಕ್ಲಿನಿಕಲ್ ಟ್ರಯಲ್ ರೂಲ್ಸ್, 2019 ರ ಅಡಿಯಲ್ಲಿ ತಿಳಿಸಲಾದ ಷರತ್ತುಗಳಿಗೆ ಅನುಗುಣವಾಗಿ ಭಾರತದ DSMB ಶಿಫಾರಸು ಮಾಡಿದಂತೆ, ನೀವು ಕ್ಲಿನಿಕಲ್ ಪ್ರಯೋಗವನ್ನು ಪುನಃ ಪ್ರಾರಂಭಿಸಬಹುದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: ಕೊರೊನಾ ಲಸಿಕೆ ಪ್ರಯೋಗ ನಿಲ್ಲಿಸಿದ ಅಸ್ಟ್ರಾಜೆನೆಕಾ ಕಂಪನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...