Homeಅಂತರಾಷ್ಟ್ರೀಯಅಮೆರಿಕಾದಲ್ಲಿ ಮತ್ತೊಬ್ಬ ಕಪ್ಪು ವರ್ಣಿಯನನ್ನು ಹತ್ಯೆಗೈದ ಪೊಲೀಸರು

ಅಮೆರಿಕಾದಲ್ಲಿ ಮತ್ತೊಬ್ಬ ಕಪ್ಪು ವರ್ಣಿಯನನ್ನು ಹತ್ಯೆಗೈದ ಪೊಲೀಸರು

- Advertisement -
- Advertisement -

ಅಮೆರಿಕಾದ ಕಪ್ಪು ವರ್ಣಿಯ ಜಾರ್ಜ್ ಪ್ಲಾಯ್ಡ್‌ ಹತ್ಯೆ ನಡೆದು ತಿಂಗಳಾಗಿಲ್ಲ. ಅದನ್ನು ವಿರೋಧಿಸಿ ಪ್ರತಿಭಟನೆಗಳು ಇನ್ನು ಭುಗಿಲೇಳುತ್ತಲೇ ಇವೆ. ಇಂತಹ ಸಂದರ್ಭದಲ್ಲಿಯೇ ಅಮೆರಿಕಾ ಪೊಲೀಸರು ಮತ್ತೊಬ್ಬ ಕಪ್ಪು ವರ್ಣಿಯನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ 27 ವರ್ಷದ ರೇಶರ್ಡ್‌ ಬ್ರೂಕ್ಸ್‌ ಎಂಬಾತ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಅಟ್ಲಾಂಟಾದಲ್ಲಿ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದು, ಇದು ಆಕಸ್ಮಿಕವಾಗಿ ನಡೆದಿದೆ ಎಂದು ಪೊಲೀಸರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಘಟನೆ ಖಂಡಿಸಿ ಅಟ್ಲಾಂಟಾದಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಈ ಘಟನೆ ನಡೆದ ಕೆಲವೇ ಗಂಟೆಗಳ ನಂತರ, ಅಟ್ಲಾಂಟಾ ಪೊಲೀಸ್‌ ಮುಖ್ಯಸ್ಥೆ ಎರಿಕಾ ಶೀಲ್ಡ್ಸ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವೆಂಡಿ ರೆಸ್ಟೋರೆಂಟ್‌ನ ವಾಹನ ಪಾರ್ಕಿಂಗ್‌ ಸ್ಥಳದಲ್ಲಿರುವ ಕಾರೊಂದರಲ್ಲಿ ಯುವಕನೊಬ್ಬ ಮಲಗಿದ್ದು, ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಕೆಲವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ತೆರಳಿದ್ದ ಪೊಲೀಸರು, ಕಾರಿನಲ್ಲಿದ್ದ ಯುವಕ ಬ್ರೂಕ್ಸ್ ಮದ್ಯಪಾನ ಮಾಡಿರುವ ಶಂಕೆ ವ್ಯಕ್ತಪಡಿಸಿ, ಪರೀಕ್ಷೆಗೆ ಒಳಗಾಗುವಂತೆ‌ ಸೂಚನೆ ನೀಡಿದ್ದಾರೆ. ಈ ಪರೀಕ್ಷೆಗೆ ಒಳಪಡಲು ನಿರಾಕರಿಸಿದ ಬ್ರೂಕ್ಸ್‌, ಓಡಿ ಹೋಗಲು ಯತ್ನಿಸಿದ್ದಾನೆ. ಓಡಿ ಹೋಗುತ್ತಿದ್ದವನಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಜಾರ್ಜಿಯಾ ಬ್ಯುರೋ ಆಫ್‌ ಇನ್ವೆಸ್ಟಿಗೇಷನ್‌ (ಜಿಬಿಐ) ಅಧಿಕಾರಿಗಳು ಹೇಳಿದ್ದಾರೆ.


ಇದನ್ನೂ ಓದಿ: ಭಾರತ ದುರ್ಬಲ ರಾಷ್ಟ್ರವಲ್ಲ, ಚೀನಾ ಮಾತುಕತೆ ಬಯಸಿದೆ: ರಾಜನಾಥ್ ಸಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...