ಕೊರೊನಾ ರೋಗಿಗಳಿಗೆ ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ತಕ್ಷಣ ನೀಡಲಾಗಿದೆಯೆ, ಅವರಿಗೆ ಹಾಸಿಗೆಗಳು ದೊರೆಯುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ.
ಮುಂಬೈನ 24 ವಾರ್ಡ್‌ಗಳಲ್ಲಿ, ಅದರಲ್ಲೂ ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಹಾಸಿಗೆಗಳನ್ನು ನೀಡುವ ಬಗ್ಗೆ ಈ ನೋಡಲ್ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ ಎಂದು ಪುರಸಭೆ ಆಯುಕ್ತ ಐ.ಎಸ್.ಚಾಹಲ್ ಸೋಮವಾರ ತಿಳಿಸಿದ್ದಾರೆ.
ಕೊರೊನಾ ಸೋಂಕಿತ ರೋಗಿಗಳಿಗೆ ಹಾಸಿಗೆ ಹಂಚಿಕೆ ಬಗ್ಗೆ ಈ ಅಧಿಕಾರಿಗಳು ಮಧ್ಯಾಹ್ನ 3 ರಿಂದ 11 ರವರೆಗೆ ಮತ್ತು ರಾತ್ರಿ 11 ರಿಂದ ಬೆಳಿಗ್ಗೆ 7 ರವರೆಗೆ ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೀದಿಬದಿ ವಾಸಿಸುವ ಬಾಲಕಿಯರಿಗೆ ಸಿಎಎ, ಎನ್‌ಆರ್‌ಸಿ ಪಾಠ ಮಾಡಿದ್ದಕ್ಕೆ ದೇಶದ್ರೋಹ ಪ್ರಕರಣ ದಾಖಲು!
ರಾತ್ರಿ 11 ರಿಂದ ಬೆಳಿಗ್ಗೆ 7 ರವರೆಗೆ ಕೊರೊನಾ ವಾರ್ಡ್‌ಗಳಿಗೆ ಕರೆದೊಯ್ಯುವ ಎಲ್ಲಾ ರೋಗಿಗಳಿಗೂ ತಮ್ಮ ಪರೀಕ್ಷೆ ಅಥವಾ ವರದಿ ಬಾಕಿ ಇದ್ದರೂ ಸಹ ಹಾಸಿಗೆ ನೀಡಲಾಗುತ್ತದೆ. ಅಂತಹ ರೋಗಿಗಳಿಗೆ “ಶಂಕಿತ” ವಿಭಾಗದಲ್ಲಿ ಹಾಸಿಗೆಗಳನ್ನು ಹಂಚಲಾಗುತ್ತದೆ. ಅಗತ್ಯವಿದ್ದರೆ ಆಮ್ಲಜನಕ ಸಿಲಿಂಡರ್‌ಗಳನ್ನು ವ್ಯವಸ್ಥೆ ಮಾಡಲಾಗಿರುತ್ತದೆ.
ಮುಂಬೈನಲ್ಲಿ ಮುಂದಿನ ಆರು ವಾರಗಳಲ್ಲಿ ಇನ್ನೂ ಮೂರು ಬೃಹತ್ ಕೊರೊನಾ ಆಸ್ಪತ್ರೆಗಳು ಆರಂಭವಾಗಲಿವೆ. 200 ತೀವ್ರ ನಿಗಾ ಘಟಕದ ಹಾಸಿಗೆಗಳು ಸೇರಿದಂತೆ 2,000 ಕೊರೊನಾ ಹಾಸಿಗೆಗಳನ್ನು ಒಳಗೊಂಡಿರಲಿದೆ. ಜೊತೆಗೆ ಈ ಹಾಸಿಗೆಗಳಲ್ಲಿ ಸುಮಾರು 1,400 ಆಮ್ಲಜನಕ ಸೌಲಭ್ಯಗಳನ್ನು ಹೊಂದಿರುತ್ತದೆ ಎಂದು ಬಿಎಂಸಿ ಪ್ರಕಟಿಸಿದೆ.
ಇದನ್ನೂ ಓದಿ: ರೈತ ಹೋರಾಟ: ಕೇಂದ್ರದೊಂದಿಗೆ ಮಾತುಕತೆಗೆ ಸಿದ್ದವಿದ್ದೇವೆ, ಹಕ್ಕೊತ್ತಾಯಗಳು ಅವೆ ಇರಲಿವೆ- ರಾಕೇಶ್ ಟಿಕಾಯತ್


