Homeಕರ್ನಾಟಕಧರ್ಮ ಮತ್ತು ಹಿಂದುತ್ವ ಪ್ರತಿಪಾದಕರು

ಧರ್ಮ ಮತ್ತು ಹಿಂದುತ್ವ ಪ್ರತಿಪಾದಕರು

- Advertisement -
- Advertisement -

ನೂರರ ನೋಟ- 40

| ಎಚ್.ಎಸ್ ದೊರೆಸ್ವಾಮಿ |

ಹಿಂದುತ್ವ ಪ್ರತಿಪಾದಕ ಉತ್ತರ ಪ್ರದೇಶದ ಮುಖ್ಯಮಂತ್ರಿ, ದಕ್ಷಿಣ ಕನ್ನಡ ಜಿಲ್ಲೆಯ ತಲೆಕೆಟ್ಟ ಹಿಂದುತ್ವ ಪ್ರತಿಪಾದಕರು ಗೋವಿನ ಹೆಸರಲ್ಲಿ ಮತೀಯ ದ್ವೇಷ ಸಾಧಿಸುವುದಕ್ಕಾಗಿ ಆಗಾಗ ಕೋಮುದಂಗೆ ಮಾಡಿಸುತ್ತಾರೆ; ಕೊಲೆ ಆಗುವಂತೆ ಮಾಡುತ್ತಾರೆ. ‘ಧರ್ಮವನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಧರ್ಮೋರಕ್ಷತಿ ರಕ್ಷಿತಃ ಧರ್ಮವನ್ನು ರಕ್ಷಿಸುವವರನ್ನು ಧರ್ಮ ಕಾಪಾಡುತ್ತದೆ. ಆದ್ದರಿಂದ ಧರ್ಮವನ್ನು ರಕ್ಷಿಸಲು ಹೋರಾಡಬೇಕು. ಧರ್ಮಕ್ಕೆ ಹೋರಾಡದಿದ್ದರೆ ನಮ್ಮ ಸಮಾಜ ಎಲ್ಲಿ ಉಳಿಯುತ್ತದೆ’ ಎಂದು ಹಿಂದೂ ಮತಾಂಧರು, ಮುಸ್ಲಿಂ ಮತಾಂಧರು ವಾದಿಸುತ್ತಾರೆ.

ಈ ಧರ್ಮಾಂಧರಿಗೆ ಧರ್ಮ ರಕ್ಷಣೆ ತಮ್ಮ ಕರ್ತವ್ಯ ಎಂದು ಅನಿಸಿದಾಗ ಗೂಂಡಾಗಳನ್ನು ಸಾಕಿಕೊಳ್ಳುತ್ತಾರೆ. ಈ ಪಡೆ ಶಾಂತಿಕಾಲದಲ್ಲಿ ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳುವುದರಲ್ಲಿ ತೊಡಗುತ್ತಾರೆ ಮತ್ತು ಹೋರಾಡುವ ಸಂದರ್ಭ ಬಂದಾಗ ತಮ್ಮ ನಿಲುವನ್ನು ಒಪ್ಪದ ಜನರ ಮೇಲೆ ಬಿದ್ದು ಅವರನ್ನು ಕೊಲೆಮಾಡುವರು. ಹಣಕ್ಕಾಗಿ ಕೊಲೆಮಾಡಲು ಸುಪಾರಿ ಸ್ವೀಕರಿಸುವವರಿಗೂ ಈ ಮತಾಂಧರು ಸಾಕಿಕೊಂಡಿರುವ ಗೂಂಡಾಗಳಿಗೂ ಏನು ವ್ಯತ್ಯಾಸ? ಧರ್ಮಕ್ಕೂ ಈ ಗೂಂಡಾಗಳಿಗೂ ಯಾವ ನಂಟು? ಗೂಂಡಾಗಳಿಗೊಂದು ಧರ್ಮವಿದೆಯೇ? ಸಿದ್ಧಾಂತವಿದೆಯೇ? ಹಿಂದುತ್ವ ಪ್ರತಿಪಾದಕರು ತಾವೇ ಗೂಂಡಾಗಳಾಗಿರುವುದರಿಂದ ಸಂದರ್ಭ ಸಿಕ್ಕರೆ ಇವರು ಸಮಸ್ತ ಅಧಿಕಾರವನ್ನು ಕರವಶ ಮಾಡಿಕೊಂಡು ವಿಜೃಂಭಿಸುವರು. ತಾತ್ಪರ್ಯವಿಷ್ಟೇ. ಯಾರು ಧರ್ಮ ರಕ್ಷಣೆಗಾಗಿ ಗೂಂಡಾಗಳನ್ನು ಬೆಳೆಸುವರೋ-ಬಳಸುವರೋ ಅವರು ಧರ್ಮವನ್ನು ಹೇಗೆ ಪ್ರತಿಪಾದಿಸುತ್ತಾರೆ?

ಭೀಮನ ಗದೆಯಾಗಲೀ, ಅರ್ಜುನನ ಗಾಂಡೀವವಾಗಲೀ ಧರ್ಮವನ್ನು ರಕ್ಷಿಸುವ ಸಾಧನವಾಗಲಾರದು. ಧರ್ಮದಿಂದ ನಡೆದುಕೊಂಡಿದ್ದರಿಂದ ಅವರು ಹೊತ್ತಿದ್ದ ಅಯುಧಗಳಿಗೆ ಕೀರ್ತಿ ಬಂತು. ಹಾಗಿಲ್ಲವಾದರೆ ಭೀಮ ಅರ್ಜುನರು ಕೊಲೆಗಡುಕರು ಅನ್ನಿಸಿಕೊಳ್ಳುತ್ತಿದ್ದರು.

ಹಿಂದುತ್ವ ಪ್ರತಿಪಾದಕರು ಯಾರ ಕೈಯಲ್ಲಿ ಗದೆ ಇದೆಯೋ ಅವರಿಗೇ ಜಯ ಎಂದು ಭಾವಿಸುತ್ತಾರೆ. ಧರ್ಮ ಅವರಿಗೆ ಒಂದು ಕೋಣವಿದ್ದಂತೆ. ಯಾರು ಅಪಮಾರ್ಗದಲ್ಲಿ ಗೆಲ್ಲುವರೋ ಅವರು ಧರ್ಮಿಷ್ಟರು, ಅವರದು ಕೋಣ. ಧರ್ಮದ ರಕ್ಷಣೆ ಎಂದರೆ ಧರ್ಮಿಷ್ಟರಾಗಿ ನಡೆದುಕೊಳ್ಳುವುದು.

ಹಿಂದೂ ಮತಾಂಧರು, ಮುಸ್ಲಿಮ್ ಮತಾಂಧರು, ಕ್ರಿಶ್ಚಿಯನ್ ಮತಾಂಧರು ಧರ್ಮ ಎಂದರೆ, ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ, ಇಸ್ಲಾಂ ಧರ್ಮ ಎಂದು ಅರ್ಥೈಸುತ್ತಾರೆ. ಇವೆಲ್ಲ ಹೊಡೆದಾಡುವ ಧರ್ಮಗಳು. ಬಡಿದಾಡುವ ಧರ್ಮಗಳು ಧರ್ಮವೇ ಅಲ್ಲ. ಯಾವ ಧರ್ಮವು ಪರಸ್ಪರ ಹೊಡೆದಾಡಲು ಹೇಳಿಲ್ಲ. ಶಾಂತಿಯನ್ನು ಬೋಧಿಸುತ್ತದೆ. ಆದರೆ ಈ ಧರ್ಮಾಂಧರು ಧರ್ಮವನ್ನು ಬಳಸಿಕೊಂಡು ಕೋಮು ಸಂಘರ್ಷದ ಕೆಲಸವನ್ನೇ ಮಾಡುತ್ತಾರೆ. ಕ್ರಿಶ್ಚಿಯನ್ ಜನಾಂಗದವರು ಮಾಡಿರುವಷ್ಟು ಯುದ್ಧವನ್ನು ಬೇರಾವ ಜನಾಂಗವೂ ಮಾಡಿಲ್ಲ.

ಎಲ್ಲಾ ಮತಗಳ ಹೊಂದಾಣಿಕೆಯೇ ಧರ್ಮ. ಪರಸ್ಪರ ಬಡಿದಾಡುವ ಧರ್ಮ ಧರ್ಮವೇ ಅಲ್ಲ. ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಮುಂತಾದ ಎಲ್ಲಾ ಧರ್ಮಗಳ ಅನುಯಾಯಿಗಳು ‘ಧರ್ಮ’ ಪದವನ್ನು ತಮ್ಮ ವಾದಕ್ಕೆ ಅನುಗುಣವಾಗಿ ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಸತ್ಯಂವದ, ಧರ್ಮಂಚರ ಎಂದು ನಮ್ಮ ಉಪನಿಷತ್ತು ಹೇಳುತ್ತದೆ. ಸತ್ಯವನ್ನು ನುಡಿ ಧರ್ಮವನ್ನು ಆಚರಣೆ ಮಾಡು ಎಂದು ಇದರ ಅರ್ಥ. ‘ಧರ್ಮ’ ಒಂದು ಧರ್ಮಕ್ಕೆ ಸೀಮಿತವಾದುದಲ್ಲ. ಅದು ವಿಶ್ವ ಧರ್ಮವನ್ನು ಪ್ರತಿಪಾದಿಸುತ್ತದೆ. ಎಲ್ಲಾ ಧರ್ಮಗಳೂ ಅಂಗೀಕರಿಸಬೇಕಾದ ಧರ್ಮ ಅದು, ವಿಶ್ವಧರ್ಮ. ಯಾರನ್ನೂ ದ್ವೇಷಿಸಲು ಹೇಳುವುದಿಲ್ಲ. ಯಾವ ಧರ್ಮವನ್ನೂ ಅದು ಅಲ್ಲಗಳೆಯುವುದಿಲ್ಲ. ಧರ್ಮದ ಹೆಸರಿನಲ್ಲಿ ಇತರ ಧರ್ಮಗಳ ಮೇಲೆ ದಾಳಿಮಾಡಲು ದ್ವೇಷ ಬುದ್ಧಿಯಿಂದ ನಡೆದುಕೊಳ್ಳಲು ಹೇಳುವುದಿಲ್ಲ. ಶ್ರೀರಾಮಕೃಷ್ಣ ಪರಮಹಂಸರು ವಿಶ್ವ ಧರ್ಮ ಪರಿಪಾಲಕರು. ಎಲ್ಲಾ ಮತಗಳಲ್ಲಿರುವ ಉತ್ತಮ ವಿಚಾರಗಳನ್ನು ಹಿಂದೂ ಧರ್ಮ ಅಳವಡಿಸಿಕೊಳ್ಳಬೇಕೆಂದು ಅವರು ಬಯಸಿ, ಸರ್ವಧರ್ಮ ಸಮನ್ವಯದ ಮಾತನಾಡಿದ್ದರು. ಇತರ ಮತಗಳ ಸಂಸ್ಥಾಪಕರು ಪ್ರತಿಪಾದಿಸಿದ ಉತ್ತಮ ಅಂಶಗಳನ್ನು ಹಿಂದೂ ಧರ್ಮಕ್ಕೆ ಜೋಡಿಸಿದರು. ಹಿಂದೂ ಧರ್ಮದಲ್ಲಿ ಪ್ರತಿಪಾದಿಸದಿರುವ ಅನೇಕ ಒಳ್ಳೆಯ ಅಂಶಗಳು ಇತರ ಧರ್ಮಗಳಲ್ಲಿರುವುದನ್ನು ಅರಿತು ಅವನ್ನು ಹಿಂದೂ ಧರ್ಮಕ್ಕೆ ಅಳವಡಿಸಲು ಮುಂದಾದರು. ಪೂಜ್ಯ ವಿನೋಬಾ ಭಾವೆಯವರು ಬೈಬಲ್ ಕುರಾನ್‍ಗಳಲ್ಲಿರುವ ಮೌಲಿಕ ತತ್ವಗಳನ್ನು ಆಯ್ದು ಕಲೆ ಹಾಕಿ ‘ಎಸೆನ್ಸ್ ಆಫ್ ಇಸ್ಲಾಂ, ಎಸೆನ್ಸ್ ಆಫ್ ಕ್ರಿಶ್ಚಿಯಾನಿಟಿ’ ಶೀರ್ಷಿಕೆಯು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮತ ಧರ್ಮಗಳ ಹೊಂದಾಣಿಕೆಯ ಕೆಲಸ ಇದು.

ಹಿಂದೂ ಮತಾಂಧ ಸಂಸ್ಥೆಗಳವರು ಈ ಲೋಕ ಕಲ್ಯಾಣದ ಕೆಲಸ ಮಾಡುವ ಬದಲು, ಮತಧರ್ಮಗಳನ್ನು ಒಡೆಯುವ, ಆ ಮೂಲಕ ಮುಗ್ಧ ಹಿಂದೂಗಳ ಭಾವನೆಗಳನ್ನು ಕೆರಳಿಸಿ ಅನ್ಯ ಧರ್ಮೀಯರನ್ನು ಶತ್ರುಗಳಂತೆ ಕಾಣಲು ಕೈ ಜೋಡಿಸುತ್ತಾರೆ. ಕೃಷ್ಣ ಗೋಕುಲಕ್ಕೆ ಬೆಂಕಿ ಬಿದ್ದಾಗ ಗೋವರ್ಧನ ಪರ್ವತವನ್ನು ಮೇಲೆತ್ತಿ ಅದರ ತಳಗೆ ಗೋಕುಲದವರನ್ನೆಲ್ಲಾ ಇಟ್ಟು ಕಾಪಾಡಿದನಂತೆ. ಆದರೆ ಹಿಂದೂತ್ವ ಪ್ರತಿಪಾದಕರು ಸಮಾಜಕ್ಕೆ ಸಂದರ್ಭ ಒದಗಿದಾಗಲೆಲ್ಲ ಬೆಂಕಿ ಹಾಕುವ ತಯಾರಿಯಲ್ಲಿರುವವರೇ!

ಎಲ್ಲಾ ಮತ ಧರ್ಮಗಳಲ್ಲಿ ಕೆಲವು ಲೋಪ ದೋಷಗಳು ಇದ್ದೇ ಇವೆ. ಹಿಂದೂ ಧರ್ಮ ಇದಕ್ಕೆ ಹೊರತಲ್ಲ. ಹಿಂದೂ ಧರ್ಮದಲ್ಲಿ ಜಾತೀಯತೆ, ಶ್ರೇಣೀಕೃತ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಹೆಣ್ಣಿನ ಬಗೆಗೆ ತಾರತಮ್ಯ, ಹೀಗೆ ಹತ್ತಾರು ಲೋಪದೋಷಗಳಿವೆ.

ಅದರ ಜೊತೆಗೆ ಹಿಂದೂ ಮತಾಂಧತೆ, ಅನ್ಯ ಧರ್ಮೀಯರ ವಿಚಾರದಲ್ಲಿ ಕ್ರೌರ್ಯ, ಅಸಹನೆ, ವೈಚಾರಿಕ ಭಿನ್ನಾಭಿಪ್ರಾಯ ಉಳ್ಳವರನ್ನು, ಹಿಂದುತ್ವ ಪ್ರತಿಪಾದಕರನ್ನು ಪ್ರಶ್ನಿಸುವವರನ್ನು ವ್ಯವಸ್ಥಿತವಾಗಿ ಕೊಲೆ ಮಾಡುವುದು, ಸೆರೆಮನೆಗೆ ದೂಡುವುದು, ಖಟ್ಲೆಗಳನ್ನು ಹಾಕುವುದು ಅವ್ಯಾಹತವಾಗಿ ನಡೆದಿದೆ. ಇಷ್ಟೆಲ್ಲಾ ಅನಾಹುತ ಹಿಂದುತ್ವ ಪ್ರತಿಪಾದಕರಿಂದ ಮೇಲಿಂದ ಮೇಲೆ ನಡೆಯುತ್ತಿದ್ದರೂ, ಪ್ರಧಾನಿ ಮೋದಿಯವರು ಒಂದು ಸಾರಿಯೂ ಈ ಕುರಿತು ಪ್ರಸ್ತಾಪಿಸಿದ್ದೇ ಇಲ್ಲ. ಇಷ್ಟೇ ಅಲ್ಲ, ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅವರೂ ಅಮಿತ್ ಷಾರವರು ಕೂಡಿಕೊಂಡು ವ್ಯವಸ್ಥಿತವಾಗಿ ಮುಸ್ಲಿಮರ ಸಾಲ್ಗೊಲೆ ಮಾಡಿಸಿದ್ದೂ ಜಗಜ್ಜಾಹೀರಾಗಿದೆ. ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಈ ಎಲ್ಲ ಪಿಡುಗುಗಳಿಂದ ಹಿಂದೂ ಮತವನ್ನು ಪಾರು ಮಾಡಲೇಬೇಕಾದ್ದು ಮತದಾರರ ಆದ್ಯ ಕರ್ತವ್ಯವಾಗಿದೆ. ಆಸ್ಟ್ರೇಲಿಯಾ ಪ್ರಜೆಯೊಬ್ಬ ನ್ಯೂಜಿಲೆಂಡಿನಲ್ಲಿ ನೌಕರಿ ಮಾಡುತ್ತಿದ್ದು, ಕಳೆದ ಶುಕ್ರವಾರ 2 ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ 50 ಮುಸ್ಲಿಂ ಮುಗ್ಧರನ್ನು ಬಂದೂಕಿನಿಂದ ಹೊಡೆದು ಕೊಂದಿದ್ದಾನೆ. ಅವನು ಇವರನ್ನು ಏಕೆ ಕೊಂದನೆಂಬುದಕ್ಕೆ, ಬಿಳಿಯರಿಗೆ ಮಾತ್ರ ಈ ದೇಶ ಇರುವುದು ಎಂದು ಹೇಳಿದ್ದಾನೆ.

ಭಾರತದಲ್ಲಿ ಆರ್‍ಎಸ್‍ಎಸ್, ಬಿಜೆಪಿ, ಮೋದಿ ಹೇಳುವುದೂ ಇದನ್ನೇ. ಭಾರತ ಹಿಂದೂಗಳ ರಾಷ್ಟ್ರ, ಇಲ್ಲಿ ಬೇರೆಯವರಿಗೆ ಇರಲು ಅವಕಾಶವಿಲ್ಲ, ಇದ್ದರೂ ಅವರು 2ನೇ ದರ್ಜೆಯ ಪ್ರಜೆಗಳಾಗಿ ಇರಬೇಕು.

ಈ ವಿಚಿತ್ರ ನಿಲುವಿನ ಕೊಲೆಗಡುಕ ಜನ ಅಲ್ಲೊಬ್ಬರು ಇಲ್ಲೊಬ್ಬರು ಇದ್ದರೆ, ಭಾರತದಲ್ಲಿ ಇಂತಹ ತಲೆ ಕೆಟ್ಟವರ ಸಂಘಟನೆಗಳೇ ಇವೆ. ರಾಜಕೀಯದಲ್ಲಿ ವಿಷ ಸೇರಿಕೊಂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...