Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

ಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

- Advertisement -
- Advertisement -

ಕನ್ನಡದಲ್ಲಿ ಕಲಾವಿದರು-ಲೇಖಕರು ಬರೆದ ಆತ್ಮಕಥೆಗಳು ಸಾಕಷ್ಟಿವೆ. ಆದರೆ ರಾಜಕಾರಣಿಗಳ ಆತ್ಮಕಥೆಗಳ ಸಂಖ್ಯೆ ಕಡಿಮೆ. ಇರುವ ಕೆಲವು ಆತ್ಮಕಥೆಗಳಾದರೂ ಆಧುನಿಕ ಕರ್ನಾಟಕದ ರಾಜಕೀಯ ಚರಿತ್ರೆಯ ಅಪೂರ್ವ ದಾಖಲೆಗಳಂತಿವೆ. ಇವುಗಳಲ್ಲಿ ಹಗರಿಬೊಮ್ಮನಹಳ್ಳಿಯ ಶಾಸಕರಾಗಿದ್ದ ಚನ್ನಬಸವನಗೌಡರ ‘ನಾನೊಬ್ಬ ಸಾರ್ವಜನಿಕ’ ಹಾಗೂ ಕರ್ನಾಟಕದ ಶಿಕ್ಷಣಮಂತ್ರಿಗಳಾಗಿದ್ದ ಬಿ.ಎ. ಮೊಹಿದೀನ್ ಅವರ ‘ನನ್ನೊಳಗಿನ ನಾನು’ ಸೇರಿವೆ.

ಇದೊಂದು ಹೇಳಿ ಬರೆಯಿಸಿದ ಆತ್ಮಕಥೆ. ಇದರಲ್ಲಿ ಲೇಖಕರ ವೈಯಕ್ತಿಕ, ವ್ಯಕ್ತಿತ್ವದ, ಕುಟುಂಬದ, ಬ್ಯಾರಿ ಸಮುದಾಯದ, ಕರಾವಳಿಯ ಹಾಗೂ ರಾಜ್ಯದ ರಾಜಕಾರಣದ ಸ್ತರಗಳಿವೆ. ಆತ್ಮಕಥೆಯ ಹೆಸರು ಸಾಂಕೇತಿಕವಾಗಿದೆ. ಬಾಳನ್ನೆಲ್ಲ ಸಾರ್ವಜನಿಕವಾಗಿ ಮತ್ತು ಬಹಿರ್ಮುಖಿಯಾಗಿ ಕಳೆದ ವ್ಯಕ್ತಿಯೊಬ್ಬರು ತಮ್ಮ ವೃದ್ಧಾಪ್ಯದ ಸಾವಿನ ಸನ್ನಿಧಿಯಲ್ಲಿ ಬದುಕನ್ನು ಒಮ್ಮೆ ಹಿಂತಿರುಗಿ ಕಾಣುವಾಗ ಹುಟ್ಟುವ ನೋಟದಲ್ಲಿ ಜನ್ಮತಳೆದ ಕೃತಿಯಿದು. ಇದು ತನ್ನನ್ನು ತಾನು ನೋಡಿಕೊಳ್ಳುವ ಆತ್ಮಾವಲೋಕನ ಕ್ರಮದಲ್ಲಿ ಹುಟ್ಟಿದ ಕೃತಿ. ಕರ್ನಾಟಕದ ರಾಜಕೀಯ ಚರಿತ್ರೆಯನ್ನು ಕಂಡರಿಸುತ್ತ ಅದರ ಮೌಲ್ಯಮಾಪನ ಮಾಡುವ ಕೃತಿ ಕೂಡ. ಲೇಖಕರು ಗಂಡಾಳಿಕೆ ಮನೋಭಾವದಿಂದ ಹೆಂಗರುಳಿನ ಅಂತಃಕರಣಕ್ಕೆ, ಹಿರಿತನದಿಂದ ಮಗುತನಕ್ಕೆ ರೂಪಾಂತರವಾದಂತೆ ಇಲ್ಲಿನ ಭಾವವಿದೆ. ಒಂಟಿತನದಲ್ಲಿ, ಏಕಾಂತದಲ್ಲಿ ಕಾಡುವ ಬಾಲ್ಯಕಾಲದ ನೆನಪುಗಳು ಬರುವ ಕಡೆ ಆತ್ಮಕಥೆ ಆಪ್ತವಾಗಿದೆ.

ಆತ್ಮಕಥೆಯ ವಿಶೇಷವೆಂದರೆ, ಸ್ವಂತ ವ್ಯಕ್ತಿತ್ವದ, ಕರ್ನಾಟಕ ರಾಜಕಾರಣದ, ಬ್ಯಾರಿ ಸಮುದಾಯದ ಹಾಗೂ ಕರಾವಳಿಯ ಸಾಮಾಜಿಕ ಸನ್ನಿವೇಶದ ಚಿತ್ರಗಳನ್ನು ಕೊಡುವುದು; ಮಾತ್ರವಲ್ಲದೆ, ಅವುಗಳ ವಿಮರ್ಶೆಯನ್ನೂ ಮಾಡಿರುವುದು. ಸೌದಿ ಅರೇಬಿಯಾದಲ್ಲಿ ಇರುವ ವಂಶಾಡಳಿತದ ರಾಜಪ್ರಭುತ್ವವು ಪೈಗಂಬರ್ ಬಯಸಿದ ಖಲೀಫಾ ಪದ್ಧತಿಗೆ ವಿರುದ್ಧವಾಗಿದೆ ಎಂದು ಲೇಖಕರು ಒಂದೆಡೆ ಹೇಳುತ್ತಾರೆ. ಆತ್ಮಕಥೆ ಮುಗಿಯುವುದು ಮಡದಿಯ ಜತೆ ಗಂಡಾಳಿಕೆಯ ಮನೋಭಾವವುಳ್ಳ ತಾನು ನಡೆದುಕೊಂಡ ಬಗೆಗಿನ ಪರಿತಾಪದಿಂದ. ಬೇರೆಬೇರೆ ಧರ್ಮ ಜಾತಿಗಳ ಮಕ್ಕಳೊಂದಿಗೆ ಬೆರೆಯದ ಮದ್ರಸಾ ಶಿಕ್ಷಣದ ಪದ್ಧತಿಯ ಐಸೊಲೇಶನ್ ಬಗ್ಗೆ ಇಲ್ಲಿ ವಿಮರ್ಶೆಯಿದೆ. ಸಂಪ್ರದಾಯವಾದಿ ಮೌಲವಿಗಳ ಟೀಕೆಯಿದೆ. ಲೇಖಕರು ಅವರೊಟ್ಟಿಗೆ ಚರ್ಚೆ ಕೂಡ ಮಾಡುತ್ತಾರೆ. ಮದ್ರಸಾಗಳ ಧಾರ್ಮಿಕ ಶಿಕ್ಷಣವನ್ನು ಲೌಕಿಕವಾಗಿ ಉಪಯುಕ್ತವಾಗುವ ವಿದ್ಯೆಗಳನ್ನು ಕಲಿವ ಜಾಗವಾಗಿಸಬೇಕೆಂದೂ, ಕ್ರೈಸ್ತ ಮಿಶನರಿ ಶಾಲೆಗಳಿರುವಂತೆ ಎಲ್ಲ ಧರ್ಮ ಜಾತಿಯ ಮಕ್ಕಳು ಕಲಿಯುವಂತೆ ವಿಸ್ತರಣೆ ಪಡೆಯಬೇಕೆಂದೂ, ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲ ಧರ್ಮದವರಿಗೆ ಸಂಬಂಧಪಟ್ಟಿರಬೇಕೆಂದೂ ಅಭಿಪ್ರಾಯ ಪಡುವರು. ಮಹಿಳಾ ಶಿಕ್ಷಣದ ಪ್ರಾಮುಖ್ಯದ ಬಗ್ಗೆ ಪ್ರಸ್ತಾಪಿಸುವರು. ಈ ಕಾರಣಕ್ಕೆ ಆತ್ಮಕಥೆಯು ಸಮಾಜ ಸುಧಾರಣವಾದಿಯೊಬ್ಬನ ಜಾತ್ಯತೀತ ಚಿಂತನೆಯ ದಾಖಲೆ.

ಇದನ್ನೂ ಓದಿ: ಪುಸ್ತಕ ಪರಿಚಯ: ಸದನದಲ್ಲಿ ಭೂಪತಿ

ಲೇಖಕರು ಒಂದೆಡೆ ಹೀಗೆ ಹೇಳುತ್ತಾರೆ: “ಮಸೀದಿ ಮದ್ರಸಾಗಳ ಆವರಣದೊಳಗಿರುವ ಶಾಲೆಗಳಲ್ಲಿ ಶಾಲಾ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ಹಾಡು ನಾಟಕ ನೃತ್ಯ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ವಿದ್ಯಾರ್ಥಿಗಳಿಗೆ ಅಲ್ಲಿಯ ವ್ಯವಸ್ಥಾಪಕರು, ಧಾರ್ಮಿಕ ನಾಯಕರು ಬಿಡುತ್ತಿಲ್ಲ ಎಂಬ ಆರೋಪ ಕೂಡ ಇದೆ. ಇದು ತಪ್ಪು. ಎಳೆಯ ಮಕ್ಕಳನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ಇದೂ ಶಿಕ್ಷಣದ ಒಂದು ಅಂಗವಾಗಿದೆ. ಇಂದಿನ ಕಾಲದ ಅಗತ್ಯವೂ ಆಗಿದೆ. ಇದರಿಂದ ಮಕ್ಕಳ ಪ್ರತಿಭೆ ಹೊರಹೊಮ್ಮಿ ಅರಳಿ ಬೆಳೆಯಲು ಸಹಕಾರಿಯಾಗುತ್ತದೆ ಮತ್ತು ಇದು ಸೌಹಾರ್ದ ಬದುಕಿಗೆ ತುಂಬಾ ಅಗತ್ಯವೂ ಆಗಿದೆ.”

ಆತ್ಮಕಥೆಯು 70-80ರ ದಶಕದ ಕೂಡುಬದುಕಿನ ಚಿತ್ರಗಳನ್ನು ಕೊಡುತ್ತದೆ. ಅದರಲ್ಲಿ ಮುಸ್ಲಿಮರು ಭೂತದಕೋಲ, ಯಕ್ಷಗಾನ, ಕೋಳಿಅಂಕ, ಕಂಬಳದಲ್ಲಿ ಭಾಗವಹಿಸುವ ವಿವರಗಳಿವೆ. ಬಂಟರು ಸ್ಥಳೀಯ ಉರುಸನ್ನು ನಡೆಸಿಕೊಡುವ ವಿವರಗಳಿವೆ. ಇಲ್ಲೊಂದು ವಿಶೇಷ ಪ್ರಸಂಗ ಬರುತ್ತದೆ: ಯಕ್ಷಗಾನಕ್ಕೆ ಹೋಗಲು ಹಟಮಾಡುವ ಮೊಮ್ಮಗನನ್ನು ಮನೆಯ ಅಜ್ಜಿ ನಿರಾಕರಿಸಿ, ಅವನಿಗೆ ಬುದ್ಧಿಹೇಳಲು ಮೌಲವಿಯೊಬ್ಬರಿಗೆ ಒಪ್ಪಿಸುವಳು. ಆದರೆ ಆ ಮೌಲವಿಯು ಮಗುವಿಗೆ ಹಣಕೊಟ್ಟು ನಿದ್ದೆಗೆಡದಂತೆ ಎಚ್ಚರವಹಿಸಿ, ಆಟಕ್ಕೆ ಗುಪ್ತವಾಗಿ ಕಳಿಸಿಕೊಡುತ್ತಾರೆ. ಮಕ್ಕಳನ್ನು ಅವರ ಸಹಜ ಇಚ್ಛೆಗೆ ವಿರುದ್ಧವಾಗಿ ಹಿಡಿದಿಡಬಾರದು ಎಂಬ ಶಿಕ್ಷಕ ಪ್ರಜ್ಞೆಯ ಜತೆಗೆ, ಮಕ್ಕಳು ಸ್ಥಳೀಯ ಪರಿಸರದೊಂದಿಗೆ ಸಹಜವಾಗಿ ಬೆರೆಯುವ ಸನ್ನಿವೇಶವೂ ಇರಬೇಕೆಂಬ ನಾಗರಿಕ ಪ್ರಜ್ಞೆಯನ್ನು ಪ್ರಕಟಿಸುತ್ತಾರೆ. ಇದಕ್ಕೆ ಪೂರಕವಾಗಿ ಆತ್ಮಕಥೆಯು ಬ್ಯಾರಿ ಮುಸ್ಲಿಮರ ಸಂಸ್ಕೃತಿಯ ಚಿತ್ರಗಳನ್ನು ಕೊಡುವುದು. ಬ್ಯಾರಿಗಳ ಮದುವೆ ಬಟ್ಟೆಬರೆ ಊಟಆಟ ಉರುಸುಗಳನ್ನು ದಟ್ಟವಾಗಿ ಕಟ್ಟಿಕೊಡುತ್ತದೆ.

ಈ ಕಾರಣದಿಂದ ಆತ್ಮಕತೆಯು ಮುಸ್ಲಿಮರ ದಟ್ಟವಾದ ಜಾನಪದ ಸಂಸ್ಕೃತಿಯನ್ನು ಮೂಲಭೂತವಾದವೂ; ಕರಾವಳಿಯ ಧಾರ್ಮಿಕ ಕೂಡುಬಾಳ್ವೆಯ ಬದುಕನ್ನು ಕೋಮುವಾದವೂ ಕಳೆದುಹಾಕಿದವು ಎಂಬ ವಿಷಾದಕರ ದನಿಯನ್ನು ಒಳಗೊಂಡಿದೆ. ಇದರ ಭಾಗವಾಗಿಯೇ ಇಲ್ಲಿ ಬರುವ ಸುರತ್ಕಲ್ ಕೋಮುಗಲಭೆಯ ವಿವರಗಳನ್ನು ಗಮನಿಸಬೇಕು. ಕರಾವಳಿಯಲ್ಲಿ ಆರ್ಥಿಕ ಬಡತನವಿದ್ದಾಗ ಅದು ಸಾಂಸ್ಕೃತಿಕವಾಗಿ ಸಿರಿವಂತವಾಗಿತ್ತು ಮತ್ತು ಕೂಡುಬಾಳಿನ ಬದುಕನ್ನು ಹೊಂದಿತ್ತು. ಈಗ ಆರ್ಥಿಕ ಏಳಿಗೆಯಿದೆ; ಸಂಪತ್ತಿದೆ. ಆದರೆ ಮನುಷ್ಯ ಸಂಬಂಧಗಳು ಹಾಗೂ ಸಾಮಾಜಿಕ ಬದುಕು ವಿಘಟಿತವಾಗಿದೆ ಎಂಬ ವಿಷಾದವನ್ನು ಆತ್ಮಕಥೆ ಓದುಗರಲ್ಲಿ ಮೂಡಿಸುತ್ತದೆ. ಹಲಾಲ್, ಹಿಜಾಬ್, ಆಜಾನ್, ಟಿಪ್ಪು, ಉರಿಗೌಡ-ನಂಜೇಗೌಡ, ವ್ಯಾಪಾರ ನಿಷೇಧ, ಮೀಸಲಾತಿ ರದ್ದತಿ ಮೊದಲಾದ ವಿದ್ಯಮಾನಗಳು ಕಳೆದ ಒಂದು ವರ್ಷದಿಂದ ಕರ್ನಾಟಕದ ರಾಜಕೀಯ ಸಾಮಾಜಿಕ ಆರ್ಥಿಕ ಬದುಕನ್ನು ಕದಡಿವೆ. ಈ ಹಿನ್ನೆಲೆಯಲ್ಲಿ ಈ ಆತ್ಮಕಥೆಯು, ಸಾಂಸ್ಕೃತಿಕವಾಗಿ ಕಳೆದುಹೋದ ಸುವರ್ಣಯುಗದಂತೆ, ಸಮಾಜವಾದಿ ರಾಜಕಾರಣದ ಅಧ್ಯಾಯದಂತೆ ಭಾಸವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...