Homeಮುಖಪುಟಬಿಜೆಪಿ ಸ್ಟಾರ್ ಪ್ರಚಾರಕ ಸುದೀಪ್‌ರವರ ಪ್ರಚಾರ ಆರಂಭ: ವೈರಲ್ ಆಯ್ತು ಕಿಚ್ಚ ಸಿನಿಮಾದ ದೃಶ್ಯ

ಬಿಜೆಪಿ ಸ್ಟಾರ್ ಪ್ರಚಾರಕ ಸುದೀಪ್‌ರವರ ಪ್ರಚಾರ ಆರಂಭ: ವೈರಲ್ ಆಯ್ತು ಕಿಚ್ಚ ಸಿನಿಮಾದ ದೃಶ್ಯ

- Advertisement -
- Advertisement -

ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಬೆಂಬಲ ನೀಡುತ್ತೇನೆ. ಅವರು ಸೂಚಿಸಿದವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಖ್ಯಾತ ಕನ್ನಡ ಸಿನಿಮಾ ನಟ ಸುದೀಪ್ ಘೋಷಿಸಿದ ಬೆನ್ನಲ್ಲೆ ಅವರ ಕಿಚ್ಚ ಸಿನಿಮಾದಲ್ಲಿ ರಾಜಕಾರಣಿಗಳನ್ನು ಬೈಯ್ಯುವ, ಸಿಎಂ ಖುರ್ಚಿಗೆ ಶಾಸಕರನ್ನು ಖರೀದಿಸುವುದನ್ನು ಖಂಡಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ, “ನಾನು ಮುಖ್ಯಮಂತ್ರಿಯಾಗಬೇಕು, ಅವನು ಮುಖ್ಯಮಂತ್ರಿಯಾಗಬೇಕು ಎಂದು ಒಬ್ಬೊಬ್ಬ ಎಂಎಲ್‌ಎಗಳನ್ನು ಪರ್ಚೇಸ್ ಮಾಡಲು ಕೋಟಿ ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದಾರೆ ಈನನ್ಮಕ್ಕಳು. ಯಾರ್ಯಾರ ಹತ್ರ ಎಷ್ಟೆಸ್ಟು ಹೊಡೆದೆ? ಎಷ್ಟೆಷ್ಟು ತಿಂದೆ ಎಂದು ಹೇಳದೆ ಹೋದರೆ ನ್ಯಾಯ ಅಲ್ಲ ಅಲ್ವಾ? ಅವರುಗಳಿಗೂ ಗೊತ್ತಾಗಲಿ ಅವರ ರಕ್ತ ಹೀರಿ ನೀವು ಎಷ್ಟು ಹಣ ಸಂಪಾದನೆ ಮಾಡಿದ್ದೀರಿ ಅಂತ” ಎಂಬ ಡೈಲಾಗ್‌ಗಳು ಕಂಡುಬರುತ್ತವೆ.

ಮುಂದುವರಿದು ರಾಜ್ಯವನ್ನು ಒಳ್ಳೆ ರೀತಿಯಲ್ಲಿ ಆಳಲಿ ಎಂದು ನೀವೆಲ್ಲ ಓಟ್ ಹಾಕಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ್ದೀರಿ ಈ ಸಿಂಗಾರಪ್ಪನನ್ನು. ಇವನು ಎಷ್ಟು ದುಡ್ಡು ಮಾಡಿದ್ದಾನೆ ಅಂತ ನಿಮಗೆಲ್ಲರಿಗೂ ಎಂದು ಹೇಳಿದ್ದ ಸುದೀಪ್ ಡೈಲಾಗ್ ಅನ್ನು ಇಂದಿನ ರಾಜಕಾರಣಕ್ಕೆ ಅನ್ವಯಿಸಿ ಜನ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ಕೇವಲ ಅರ್ಧ ಗಂಟೆ ಸಮಯದಲ್ಲಿ ಸಾವಿರಾರು ಜನ ವಿಡಿಯೋ ಷೇರ್ ಮಾಡಿರುವುದು ಕಂಡುಬಂದಿದೆ.

ವಿಡಿಯೋ ಹಂಚಿಕೊಂಡಿರುವ ಹಿರಿಯ ಲೇಖಕರಾದ ಪುರಷೋತ್ತಮ ಬಿಳಿಮಲೆಯವರು, “ಈ ಜನ ಬಹಳ ಕ್ರಿಯೇಟಿವ್‌ ಇದ್ದಾರಪ್ಪಾ! ಬಾಪ್ರೇ.. ವಾಟ್ಸಾಪ್‌ ತುಂಬಾ ಇದುವೇ.. ಇವರ ಸಿನೇಮಾ ಒಂದೂ ನೋಡಿರಲಿಲ್ಲ. ಇವತ್ತು ನೋಡಬೇಕು! ಸಖತ್‌ ಇಸ್ಟೈಲ್” ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಪ್ರಚಾರ ಸಭೆಯಲ್ಲಿ ಕಿಚ್ಚ ಸುದೀಪ್ ಭಾಷಣದ ತುಣುಕು ಎಂದು ಸಿಕಂದರ್ ವಿಡಿಯೋ ಹಂಚಿಕೊಂಡಿದ್ದಾರೆ.

ಸುದೀಪ್‌ ಥರದ ನಟರು ಒಂದು ರಾಜಕೀಯ ನಿಲುವು ತೆಗೆದುಕೊಂಡರೆ ಅದನ್ನು ಧೈರ್ಯವಾಗಿ ಹೇಳುವ ಬದ್ಧತೆಯನ್ನೂ ತೋರಬೇಕು. ಇವತ್ತಿನ ಅವರ ಪತ್ರಿಕಾಗೋಷ್ಟಿಯ ಸಾರಾಂಶ ಏನೆಂದರೆ ಅವರು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಅದಕ್ಕೆ ಕಾರಣ ಏನೇ ಇರಲಿ, ಅವರು ಈ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್‌ ಪ್ರಚಾರಕ ಎಂಬುದು ದಿಟ. ಇಷ್ಟನ್ನು ನೇರವಾಗಿ ಹೇಳುವ ಬದಲು, ನಾನು ರಾಜಕೀಯಕ್ಕೆ ಬಂದಿಲ್ಲ, ಪಾರ್ಟಿ ಸೇರಿಲ್ಲ, ವೈಯಕ್ತಿಕ ಸಂಬಂಧ, ಸಹಾಯ-ಋಣ ಲಂಗು ಲೊಟ್ಟೆ ಅನ್ನೋದು ಒಂಥರಾ ಹೇಡಿತನ. ಸುದೀಪ್‌ ಗೆ ಬಿಜೆಪಿ ಅಂತಲ್ಲ, ಯಾವುದೇ ಪಾರ್ಟಿ ಸೇರುವ ವೈಯಕ್ತಿಕ ಆಯ್ಕೆ, ಹಕ್ಕು ಇದ್ದೇ ಇರುತ್ತದೆ. ಆದರೆ ತನಗೆ ಯಾವುದೇ ರಾಜಕೀಯ ನಿಲುವು ಇಲ್ಲ ಎಂಬಂತೆ ಮಾತನಾಡುತ್ತ ಒಂದು ಪಾರ್ಟಿಯನ್ನು ಬೆಂಬಲಿಸುವುದು ಗೋಸುಂಬೆತನ. ಇತರ ಪಕ್ಷವನ್ನು ಬೆಂಬಲಿಸುವ ತನ್ನ ಅಭಿಮಾನಿಗಳು ಎಲ್ಲಿ ದೂರ ಹೋಗುತ್ತಾರೋ ಎಂಬ ಲೆಕ್ಕಾಚಾರ ಅವರನ್ನು ಕಾಡುತ್ತಿರಬಹುದು. ಇದನ್ನು ಸಮಯಸಾಧಕತನ ಅಂತಾರೆ. ಸುದೀಪ್‌ ಗೆ ಇದು ಬೇಡವಾಗಿತ್ತು. ಒಂದೇ ಗೆರೆ ನಂಬು, ಇಲ್ಲದೇ ಇದ್ದರೆ ನೆರೆ ನಂಬು ಎಂಬುವ ಮಾತೊಂದಿದೆ. ಸುದೀಪ್‌ ಮಧ್ಯೆ ನಿಂತಿದ್ದಾರೆ, ಅಂಜುಬುರುಕನಂತೆ. ಸದಾ ಎಲ್ಲರಿಗೂ ಬೋಧನೆ ಮಾಡುವ ಸುದೀಪ್‌ ಅವರಿಗೆ ಇಷ್ಟು ಮಾತ್ರ ತಿಳಿಯದೇ ಹೋಯ್ತು ಎನ್ನುವಂತಿಲ್ಲ. ಇದು ಗೊತ್ತಿದ್ದೇ ತಂದುಕೊಂಡಿರುವ ಸನ್ನಿವೇಶ. ಅಂದಹಾಗೆ ಸುದೀಪ್‌ ಬಿಜೆಪಿಗೆ ಪ್ರಚಾರ ಮಾಡುವುದರಿಂದ ಅವರು ರಾಜಕೀಯವಾಗಿಯೂ ಸಾರ್ವಜನಿಕ ಜೀವನಕ್ಕೆ ಬಂದಿದ್ದಾರೆ. ಹೀಗಾಗಿ ಟೀಕೆ, ವಿಮರ್ಶೆಗಳು ಹೆಚ್ಚಲಿವೆ. ಅದನ್ನು ಎದುರಿಸಲೂ ಅವರು ಸಜ್ಜಾಗಿರಬೇಕು ಎಂದು ಪತ್ರಕರ್ತ ದಿನೇಶ್ ಕುಮಾರ್ ದಿನೂ ಬರೆದಿದ್ದಾರೆ.

ಇದನ್ನೂ ಓದಿ: ಮಾಮ ಬಸವರಾಜ ಬೊಮ್ಮಾಯಿಯವರಿಗೆ ಬೆಂಬಲ ಕೊಡುತ್ತೇನೆ: ನಟ ಸುದೀಪ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...