Homeಮುಖಪುಟದೆಹಲಿ: ಗುಂಪು ಘರ್ಷಣೆಯಲ್ಲಿ ಇಬ್ಬರು ಮೃತ್ಯು

ದೆಹಲಿ: ಗುಂಪು ಘರ್ಷಣೆಯಲ್ಲಿ ಇಬ್ಬರು ಮೃತ್ಯು

- Advertisement -
- Advertisement -

ವಾಯುವ್ಯ  ದೆಹಲಿಯ ಅಶೋಕ ವಿಹಾರ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಓರ್ವ ಗಾಯಗೊಂಡ ಆಘಾತಕಾರಿ ಘಟನೆ ನಡೆದಿದೆ.

ಗುಂಪು ಘರ್ಷಣೆಯಲ್ಲಿ ಮೃತರನ್ನು ರಘು ಮತ್ತು ಭೂರಾ ಎಂದು ಗುರುತಿಸಲಾಗಿದೆ.

ರಘು ಮತ್ತು ಭೂರಾ ಮತ್ತು ಇನ್ನೋರ್ವ ವ್ಯಕ್ತಿ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ರವಿಕಾಂತ್ ಅಲಿಯಾಸ್ ದಾಬ್ಲು ಎಂಬಾತನ ಮೇಲೆ ರಾತ್ರಿ 8 ಗಂಟೆ ಸುಮಾರಿಗೆ ಅಶೋಕ್ ವಿಹಾರ್‌ನ ಜೈಲರ್ ವಾಲಾ ಬಾಗ್‌ನಲ್ಲಿ ಹಲ್ಲೆ ನಡೆಸಿದ್ದಾರೆ. ರಘು ಮತ್ತು ಭೂರಾ ಅವರು ದಾಬ್ಲು ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ.

ಈ ಘಟನೆ ನಡೆದ ಸ್ವಲ್ಪ ಸಮಯದ ನಂತರ ದಾಬ್ಲು ಸಹಚರರು ಬಂದು ರಾಘು ಮತ್ತು ಭೂರಾ ಮೇಲೆ ಚಾಕು ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ಮೇಲೆ ಗುಂಡು ಹಾರಿಸಲಾಗಿದೆ. ಈ ವೇಳೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಸಹಚರರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದಾಬ್ಲು ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಘು, ಭೂರಾ ಮತ್ತು ದಾಬ್ಲು ವಾಯುವ್ಯ ದೆಹಲಿಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದರು ಮತ್ತು ಹಣಕಾಸಿನ ವಿವಾದವನ್ನು ಹೊಂದಿದ್ದರು ಎಂದು ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ.

ಈ ಕುರಿತು ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: ರಾಜಕೀಯವನ್ನು ಹೊರತುಪಡಿಸಿ ನನ್ನ ಎಲ್ಲಾ ವ್ಯವಹಾರಗಳು ನಷ್ಟದಲ್ಲಿದೆ: ಬಿಜೆಪಿ ಸಂಸದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಏಕನಾಥ್ ಶಿಂಧೆ ಕುರಿತ ಹೇಳಿಕೆ ವಿವಾದ; ‘ಕ್ಷಮೆಯಾಚಿಸುವುದಿಲ್ಲ’ ಎಂದ ಕುನಾಲ್ ಕಮ್ರಾ

ಕೋಮುವಾದಿ ರಾಜಕಾರಣವನ್ನು ವಿರೋಧಿಸುತ್ತಾ ಬಲಪಂಥೀಯ ರಾಜಕೀಯವನ್ನು ವಿಡಂಬನೆ ಮಾಡುವ ಭಾರತದ ಖ್ಯಾತ 'ಸ್ಟಾಂಡಪ್‌ ಕಾಮಿಡಿಯನ್' ಕುನಾಲ್ ಕಮ್ರಾ ಗುರುವಾರ ಮಹಾರಾಷ್ಟ್ರ ಶಾಸಕಾಂಗ ಸಮಿತಿಯ ಮುಂದೆ ಹಾಜರಾದರು. "ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಗುರಿಯಾಗಿಸಿಕೊಂಡು...

ಪಶ್ಚಿಮ ಏಷ್ಯಾ ಬಿಕ್ಕಟ್ಟು| ’10 ಅಂಶಗಳ ಪ್ರಸ್ತಾವನೆಯ ಮೂರು ಷರತ್ತುಗಳನ್ನು ಉಲ್ಲಂಘಿಸಲಾಗಿದೆ’: ‘ಕದನ ವಿರಾಮ’ದ ಮರುದಿನ ಇರಾನ್ ಹೇಳಿಕೆ

ಮಂಗಳವಾರ ಒಪ್ಪಿಕೊಂಡ ಕದನ ವಿರಾಮದ ನಿಯಮಗಳನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಎಂ.ಬಿ ಗಾಲಿಬಾಫ್ ಬುಧವಾರ ಆರೋಪಿಸಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ  X ನಲ್ಲಿ ಈಬರೆದಿರುವ ಗಾಲಿಬಾಫ್, ಅಮೆರಿಕದ ಬಗ್ಗೆ...

ಬಂಗಾಳ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಆರ್‌ಜಿ-ಕರ್ ಸಂತ್ರಸ್ತೆ ತಾಯಿ

ಕರ್ತವ್ಯದಲ್ಲಿರುವಾಗಲೇ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಆರ್‌ಜಿಕರ್ ಆಸ್ಪತ್ರೆಯ ವೈದ್ಯೆಯ ತಾಯಿ ರತ್ನಾ ದೇಬ್ನಾಥ್ ಅವರು ಪಾಣಿಹತಿಯ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಅವರೊಂದಿಗೆ ಬಿಜೆಪಿಯ ಹಿರಿಯ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ...

‘ಮುಸ್ಲಿಮರನ್ನು ಮರುಳು ಮಾಡುವುದು ಸುಲಭ’: ಹುಮಾಯೂನ್ ಕಬೀರ್ ವಿಡಿಯೋ ವಿವಾದ: ತನಿಖೆಗೆ ಟಿಎಂಸಿ ಒತ್ತಾಯ

ಪಶ್ಚಿಮ ಬಂಗಾಳದಲ್ಲಿ ಗುರುವಾರ ರಾಜಕೀಯ ವಿವಾದ ಭುಗಿಲೆದ್ದಿದ್ದು, ಹುಮಾಯೂನ್ ಕಬೀರ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಅವರು ಹಿರಿಯ ಬಿಜೆಪಿ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ...

ಲೆಬನಾನ್ ಮೇಲೆ ‘ಅಗತ್ಯವಿರುವಲ್ಲೆಲ್ಲಾ’ ದಾಳಿ ಮುಂದುವರಿಸುವುದಾಗಿ ಘೋಷಿಸಿದ ನೆತನ್ಯಾಹು; ಹಿಜ್ಬೊಲ್ಲಾದ ಉನ್ನತ ಅಧಿಕಾರಿ ಹತ್ಯೆ 

ಇಸ್ರೇಲ್, ಲೆಬನಾನ್ ಮೇಲೆ ದಾಳಿ ಮಾಡಿದ ಮರುದಿನ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ, ಇರಾನ್ ಬೆಂಬಲಿತ ಹೆಜ್ಬೊಲ್ಲಾ ಮೇಲೆ "ಅಗತ್ಯವಿರುವಲ್ಲೆಲ್ಲಾ" ದಾಳಿ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಇಸ್ರೇಲಿ ಸೇನೆಯು ಗುರುವಾರ ದಕ್ಷಿಣ ಲೆಬನಾನ್‌ನಲ್ಲಿ ಮತ್ತಷ್ಟು...

ಬಾರಾಮತಿ ಉಪ ಚುನಾವಣಾ ಕಣದಿಂದ ಹಿಂದೆ ಸರಿದ ಕಾಂಗ್ರೆಸ್ ; ಸುನೇತ್ರಾ ಪವಾರ್ ಗೆಲುವು ಖಚಿತ

ಬಾರಾಮತಿ ಕ್ಷೇತ್ರದ ಉಪಚುನಾವಣಾ ಕಣದಿಂದ ಕಾಂಗ್ರೆಸ್ ಪಕ್ಷ ಹಿಂದೆ ಸರಿದ ಕಾರಣ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರ ಗೆಲುವು ಖಚಿತವಾಗಿದೆ. ಬಾರಾಮತಿ ವಿಮಾನ ದುರಂತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್...

ಗಿಗ್ ಕಾರ್ಮಿಕರ ಹಿನ್ನೆಲೆ ಪರಿಶೀಲನೆ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಸರ್ಕಾರ

ದಾಖಲೆರಹಿತ ವಲಸಿಗರ ಒಳನುಸುಳುವಿಕೆ ಆರೋಪದ ರಾಜಕೀಯ ವಿವಾದದ ನಡುವೆ, ಮುಂಬೈ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಾದ್ಯಂತ (ಎಂಎಂಆರ್‌) ಲಕ್ಷಾಂತರ ಗಿಗ್ ಮತ್ತು ವಿತರಣಾ ಕಾರ್ಮಿಕರಿಗೆ ಕಠಿಣ, ಕಡ್ಡಾಯ ಪರಿಶೀಲನಾ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಸರ್ಕಾರ...

ಪಶ್ಚಿಮ ಬಂಗಾಳ| ಎಸ್‌ಐಆರ್‌ ತೀರ್ಪಿನ ನಂತರ ಒಂದೇ ಗ್ರಾಮದ 3,700 ಹೆಸರುಗಳು ಡಿಲೀಟ್!

ಪಶ್ಚಿಮ ಬಂಗಾಳದ ಮಾಲ್ಡಾದ ಹಳ್ಳಿಯೊಂದರ ಸುಮಾರು 4,000 ಮತದಾರರ ಭವಿಷ್ಯವು ತೂಗುಯ್ಯಾಲೆಯಲ್ಲಿದೆ. ಮೊದಲ ಹಂತದ ಮತದಾರರ ಪಟ್ಟಿ ಈಗಾಗಲೇ ಸ್ಥಗಿತಗೊಂಡಿದ್ದು, ಇದರಿಂದಾಗಿ ಅವರು ರಾಜ್ಯಾದ್ಯಂತ ಲಕ್ಷಾಂತರ ಜನರಂತೆ ಏಪ್ರಿಲ್ 23 ರಂದು...

ದಲಿತ ಯುವಕನ ಕಸ್ಟಡಿ ಸಾವು ಆರೋಪ : ರಾಜ್ಯ ಸರ್ಕಾರ, ಪೊಲೀಸರು, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಹೈಕೋರ್ಟ್ ನೋಟಿಸ್

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್‌) ಕರ್ನಾಟಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗೆ ಸಂಬಂಧಿಸಿದಂತೆ ಹೈಕೋರ್ಟ್ ಬುಧವಾರ (ಏ.8) ರಾಜ್ಯ ಸರ್ಕಾರ, ಪೊಲೀಸರು ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ...

ಇಬ್ಬರು ಮಕ್ಕಳ ಸಾವಿನ ಬಳಿಕ ಮಣಿಪುರದಲ್ಲಿ ಭುಗಿಲೆದ್ದ ಪ್ರತಿಭಟನೆ; ಅಶ್ರುವಾಯು ಪ್ರಯೋಗಿಸಿದ ಪೊಲೀಸರು

ಏಪ್ರಿಲ್ 7 ರಂದು ಬಿಷ್ಣುಪುರ ಜಿಲ್ಲೆಯಲ್ಲಿ ಬಾಂಬ್ ದಾಳಿಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿದ ನಂತರ ಕಣಿವೆ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದ ಕಾರಣ ಬುಧವಾರ (ಏಪ್ರಿಲ್ 8) ಮಣಿಪುರದಾದ್ಯಂತ ಉದ್ವಿಗ್ನತೆ ಉಂಟಾಗಿತ್ತು....