ರೈತ ಪ್ರತಿಭಟನೆ ಹಿನ್ನೆಲೆ ಒಕ್ಕೂಟ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು, ಭಾರತೀಯ ಜನತಾ ಪಕ್ಷದ ವಕ್ತಾರ ಸಂಬಿತ್ ಪಾತ್ರ ಸೋಮವಾರ ರಾಹುಲ್ ಗಾಂಧಿ “ರಾಜಕೀಯ ಕೋಗಿಲೆ” ಎಂದು ಟೀಕಿಸಿದ್ದಾರೆ.
“ರಾಹುಲ್ ಗಾಂಧಿ ಅವರು ತಮ್ಮ ರಾಜಕೀಯ ಅಜೆಂಡಾಕ್ಕಾಗಿ ಇತರರನ್ನು ಬಳಸುತ್ತಾರೆ” ಎಂದು ಸಂಬಿತ್ ಪಾತ್ರ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಭಾನುವಾರ ನಡೆದ ಕಿಸಾನ್ ಮಹಾಪಂಚಾಯತ್ ಅನ್ನು ಉಲ್ಲೇಖಿಸುವಾಗ ರೈತರ ಪ್ರತಿಭಟನೆಯ ಹಳೆಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ವಕ್ತಾರ, ಇದು ಅವರ “ಗೊಂದಲ ಮತ್ತು ಸುಳ್ಳುಗಳನ್ನು ಹರಡುವ” ರಾಜಕೀಯದ ಭಾಗವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೌರಿ ಲಂಕೇಶ್ ದಿನ: ಗೌರಿಯನ್ನು ನೆನೆಯುತ್ತಾ…ಸಾವಿರಾರು ಗೌರಿಯರ ಮಾತುಗಳು…
ಕಳೆದ 10 ತಿಂಗಳಿಂದ ದೆಹಲುಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಕುರಿತು ಕಾಂಗ್ರೆಸ್ ಪಕ್ಷವು ಆಡಳಿತಾರೂಢ ಬಿಜೆಪಿ ವಿರುದ್ಧ ಟೀಕೆಗಳನ್ನು ಮಾಡುತ್ತಿದೆ. ರೈತರ ಮನವಿಯನ್ನು ಪರಿಗಣಿಸುವಂತೆ ಒತ್ತಾಯಿಸುತ್ತಿದೆ.
गूंज रही है सत्य की पुकार
तुम्हें सुनना होगा, अन्यायी सरकार! #मुज़फ्फरनगर_किसान_महापंचायत pic.twitter.com/zYZdmrl7ls— Rahul Gandhi (@RahulGandhi) September 5, 2021
“ಕಾಂಗ್ರೆಸ್ ಪಕ್ಷವು ತಳ ಮಟ್ಟದ ಸಮಸ್ಯೆಗಳನ್ನು ಚರ್ಚಿಸುವಲ್ಲಿ ಅಸಮರ್ಥವಾಗಿದೆ. ರಾಜಕೀಯ ಲಾಭಕ್ಕಾಗಿ ಸೋನಿಯಾ ಗಾಂಧಿ ಇತರ ಪಕ್ಷಗಳ ನಾಯಕರೊಂದಿಗೆ ವರ್ಚುಯಲ್ ಸಭೆಗಳನ್ನು ನಡೆಸುತ್ತಾರೆ. ಇತ್ತ ರಾಹುಲ್ ಗಾಂಧಿ ಹಳೆಯ ಛಾಯಾಚಿತ್ರಗಳನ್ನು ಅವಲಂಬಿಸಿದ್ದಾರೆ” ಎಂದಿದ್ದಾರೆ.
“ಕೋಗಿಲೆ ತನ್ನ ಗೂಡನ್ನು ನಿರ್ಮಿಸದ ಕಾರಣ, ಇತರ ಪಕ್ಷಿಗಳ ಗೂಡುಗಳನ್ನು ಅವಲಂಬಿಸುತ್ತದೆ. ರಾಹುಲ್ ಗಾಂಧಿ ಕೂಡ ಇದೇ ರೀತಿ ಕೆಲಸ ಮಾಡುತ್ತಾರೆ. ರಾಜಕೀಯಕ್ಕಾಗಿ ಇತರರ ಹೆಗಲುಗಳನ್ನು ಬಳಸುವುದು ಅವರ ಅಭ್ಯಾಸವಾಗಿಬಿಟ್ಟಿದೆ” ಎಂದು ಸಂಬೀತ್ ಪತ್ರಾ ಹೇಳಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಕಿಸಾನ್ ಮಹಾಪಂಚಾಯತ್: ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ ರೈತರು


