Homeಮುಖಪುಟಖ್ಯಾತ ಕ್ರಾಂತಿಕಾರಿ ಗಾಯಕ ಗದ್ದರ್ ನಿಧನ

ಖ್ಯಾತ ಕ್ರಾಂತಿಕಾರಿ ಗಾಯಕ ಗದ್ದರ್ ನಿಧನ

- Advertisement -
- Advertisement -

ತೆಲಂಗಾಣದ ಕ್ರಾಂತಿಕಾರಿ ಗಾಯಕ ಗದ್ದರ್ ಇನ್ನಿಲ್ಲ… ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗದ್ದರ್ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಗುಮ್ಮಡಿ ವಿಟ್ಟಲ್ ರಾವ್ (ಜನನ 1949), ಗದ್ದರ್ ಎಂದೇ ಚಿರಪರಿಚಿತರಾಗಿದ್ದರು. ಇವರು ಕ್ರಾಂತಿಕಾರಿ ಕವಿ ಮತ್ತು ಮಾಜಿ ನಕ್ಸಲೈಟ್ ನಾಯಕ. 2010ರವರೆಗೆ ನಕ್ಸಲ್ ಚಳವಳಿಯಲ್ಲಿ ಸಕ್ರೀಯವಾಗಿದ್ದ ಅವರು ನಂತರ ತೆಲಂಗಾಣ ರಾಜ್ಯ ರಚನೆಗಾಗಿ ಚಳವಳಿಯಲ್ಲಿ ಸೇರಿಕೊಂಡರು.

ತೆಲಂಗಾಣ ಚಳವಳಿಯ ಸಮಯದಲ್ಲಿ ಗದ್ದರ್ ಅವರು ತಮ್ಮ ಹಾಡುಗಳಿಂದಲೇ  ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಅವರು ತೆಲಂಗಾಣ ಚಳವಳಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದು, ಈ ಭಾಗದಲ್ಲಿ ಅನ್ಯಾಯಗಳನ್ನು ಪರಿಹರಿಸಲು ತಮ್ಮ ಸಂಗೀತವನ್ನು ಬಳಸಿದರು.

ಗದ್ದರ್ ಅನೇಕ ಯುವಕರನ್ನು ಕ್ರಾಂತಿಕಾರಿ ಚಳುವಳಿಗಳಲ್ಲಿ ಸೇರಲು ಪ್ರೇರೇಪಣೆ ನಿಡಿದ್ದಾರೆ. ಇತ್ತೀಚೆಗೆ ಖಮ್ಮಂನಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದ ಕಾಂಗ್ರೆಸ್ ಸಾರ್ವಜನಿಕ ಸಭೆಯಲ್ಲಿ ಗದ್ದರ್ ಭಾಗವಹಿಸಿದ್ದರು.

1949ರಲ್ಲಿ ತೂಪ್ರಾನ್‌ನಲ್ಲಿ ಗುಮ್ಮಡಿ ವಿಠಲ್ ರಾವ್ ಆಗಿ ಜನಿಸಿದ ಗದ್ದರ್ 2010ರವರೆಗೆ ನಕ್ಸಲಿಸಂ ಚಳವಳಿಯೊಂದಿಗೆ ಸಂಬಂಧ ಹೊಂದಿದ್ದರು. ನಂತರ ಅವರು ತೆಲಂಗಾಣ ಚಳವಳಿಯಲ್ಲಿ ಪ್ರಮುಖ ವ್ಯಕ್ತಿಯಾದರು.

ಗದ್ದರ್ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಹಾಗಾಗಿ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು (ಭಾನುವಾರ) ಅವರು ಕೊನೆಯುಸಿರೆಳೆದಿದ್ದಾರೆ. ಅವರ ಸಂಗೀತ ಮತ್ತು ಸಾಮಾಜಿಕ ಚಳುವಳಿಗಳ ಮೇಲಿನ ಪ್ರಭಾವವು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ವಿವಾದ: ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಮದನ್ ಲೋಕೂರ್ ನೇತೃತ್ವದಲ್ಲಿ ಅಕ್ಟೋಬರ್ 15ರಂದು ಸಾರ್ವಜನಿಕ ವಿಚಾರಣೆ!

ಭಾರತೀಯ ಚುನಾವಣಾ ಆಯೋಗವು ದೇಶಾದ್ಯಂತ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision - SIR) ಪ್ರಕ್ರಿಯೆಯು ತೀವ್ರ ವಿವಾದಕ್ಕೆ ಹಾಗೂ ವಿರೋಧಕ್ಕೆ ಗುರಿಯಾಗಿರುವ ಬೆನ್ನಲ್ಲೇ, ಈ ಕುರಿತು...

DELHI PROTEST : ಸಿಜೆಪಿಯ ಸೌರವ್ ದಾಸ್, ಅಶುತೋಷ್ ರಾಂಕಾಗೆ 5 ದಿನಗಳ ನ್ಯಾಯಾಂಗ ಬಂಧನ

ಪ್ರತಿಭಟನಾ ಪ್ರದೇಶ ಎಂಬ ಮಾನ್ಯತೆಯನ್ನು ರದ್ದುಗೊಳಿಸಲಾಗಿರುವ ಜಂತರ್ ಮಂತರ್‌ಗೆ ಅಕ್ರಮವಾಗಿ ಪ್ರವೇಶಿಸುವ ಮೂಲಕ ಶಾಂತಿ ಕದಡುವುದಿಲ್ಲ ಎಂಬ ಬಾಂಡ್ ಉಲ್ಲಂಘಿಸಿದ ಆರೋಪದ ಮೇಲೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್...

ಎಸ್‌ಐಆರ್ ವಿರುದ್ಧದ ಹೋರಾಟಕ್ಕೆ ರೈತರ ಬೆಂಬಲ: ನವೆಂಬರ್ 26ರಂದು ದೇಶವ್ಯಾಪಿ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಬೆಂಬಲವಾಗಿ ದೇಶಾದ್ಯಂತ ರೈತರನ್ನು ಬೀದಿಗಿಳಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನಿರ್ಧರಿಸಿದೆ. ಎಸ್‌ಐಆರ್ ಪ್ರಕ್ರಿಯೆಯನ್ನು...

‘ಪ್ರತಿಭಟನೆಗೆ ದ್ವಿಮುಖ ನೀತಿ ಇಲ್ಲ’: ಪ್ರತಿಭಟನಾಕಾರರ ಮೇಲೆ ಪೊಲೀಸರ ಬಲಪ್ರಯೋಗದ ಬಗ್ಗೆ ಸಮಗ್ರ ವರದಿ ಕೇಳಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು. ದೆಹಲಿಯಲ್ಲಿ ಈ ಹಕ್ಕನ್ನು ಪ್ರತಿಪಾದಿಸಿ, ಬೆಂಗಳೂರಿನಲ್ಲಿ ಅದೇ ಹಕ್ಕನ್ನು ನಿರಾಕರಿಸುವ ದ್ವಿಮುಖ ನೀತಿ ಇರಬಾರದು ಎಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ....

ವಿಜಯ್ ನೇತೃತ್ವದ ಟಿವಿಕೆ ಸೇರಿದ ಎಐಎಡಿಎಂಕೆ ಶಾಸಕರ ರಾಜೀನಾಮೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ಚುನಾವಣೆಯ ಬೆನ್ನಲ್ಲೇ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಪಕ್ಷಕ್ಕೆ ರಾಜೀನಾಮೆ ನೀಡಿ, ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷ ಸೇರಿದ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದ್ಧ ತಮಿಳುನಾಡು...

ದೆಹಲಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ತೀವ್ರ ಹಲ್ಲೆ ನಡೆಸಿದ್ದ ಆರೋಪಿಗೆ 48 ಗಂಟೆಯೊಳಗೆ ಜಾಮೀನು, ಹೂಮಾಲೆ ಹಾಕಿ ಸ್ವಾಗತ!

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಹಿಂದೂ ರಕ್ಷಾ ದಳದ ನಾಲ್ವರು ಕಾರ್ಯಕರ್ತರು ಬಿಡುಗಡೆಯಾದ ಬಳಿಕ, ಅವರಲ್ಲಿ ಒಬ್ಬರಿಗೆ ಹೂಮಾಲೆ ಹಾಕಿ, ಹೂವುಗಳನ್ನು ಸುರಿದು...

SC, ST ಮೀಸಲಾತಿ ಹೆಚ್ಚಳ ರದ್ದು | ಸುಪ್ರೀಂ ಕೋರ್ಟ್‌ಗೆ ಹೋಗುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ : ಡಿಸಿಎಂ ಪರಮೇಶ್ವರ್

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಕುರಿತು ಸಚಿವ ಸಂಪುಟದಲ್ಲಿ ಸಮಗ್ರವಾಗಿ ಚರ್ಚಿಸಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಮುಂದಿನ ಕಾನೂನಾತ್ಮಕ ಕ್ರಮಗಳ...

ಬೆಂಗಳೂರಿನಲ್ಲಿ SIR ವಿರೋಧಿ ಪ್ರತಿಭಟನೆ ವೇಳೆ ಪೊಲೀಸ್ ಕ್ರಮ: “ಶಾಂತಿಯುತ ಹಕ್ಕು ರಕ್ಷಿಸಿ, ಪೊಲೀಸರ ನಡವಳಿಕೆ ಮರುಪರಿಶೀಲಿಸಲಾಗುವುದು” – ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಅಕ್ಟೋಬರ್ 12ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಂತಿಯುತ ಮೆರವಣಿಗೆಯ...

SC, ST ಮೀಸಲಾತಿ ಹೆಚ್ಚಳ ರದ್ದು | ಹಿಂದಿನ ಬಿಜೆಪಿ ಸರ್ಕಾರದ ಬೇಜವಾಬ್ದಾರಿತನ ಕಾರಣ; ಡಿಸಿಎಂ ಪರಮೇಶ್ವರ್

ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲಾತಿಯನ್ನು ಶೇಕಡ 50ರ ಮಿತಿಗಿಂತ ಹೆಚ್ಚಿಸುವ ಕಾಯ್ದೆಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ (ಅ.12) ರದ್ದುಗೊಳಿಸಿದೆ. ಈ ಮೀಸಲಾತಿ ಹೆಚ್ಚಳವು 'ಸಾಂವಿಧಾನಿಕವಾಗಿ ಅಸಮ್ಮತ' ಎಂದು...

ದೆಹಲಿ ಪ್ರತಿಭಟನೆ: ಇಂಡಿಯಾ ಬ್ಲಾಕ್ ಸಂಸದರು, ನಾಗರಿಕ ಸಮಾಜ ಮತ್ತು ವಿದ್ಯಾರ್ಥಿ ಸಂಘಟನೆಗಳೊಂದಿಗೆ ರಾಹುಲ್ ಗಾಂಧಿ ಚಹಾ ಕೂಟ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಚುನಾವಣಾ ಅಕ್ರಮಗಳು ಮತ್ತು ‘ಮತ ಚೋರಿ’ ಆರೋಪಗಳ ವಿರುದ್ಧ ದೇಶಾದ್ಯಂತ ವಿರೋಧ ಪಕ್ಷಗಳ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್...