ಬಾಲಿವುಡ್ ನಟಿ ರಿಚಾ ಚಾಡ್ಡಾಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಭಾರತರತ್ನ ಡಾ.ಅಂಬೇಡ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ನಟಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ರಾಜಭವನದಲ್ಲಿ ರಾಜ್ಯಪಾಲರು ರಿಚಾ ಚಾಡ್ಡಾ ಅವರನ್ನು ಗೌರವಿಸಿದರು. ರಿಚಾ ಇತ್ತೀಚೆಗೆ ಎಲ್ ಗೌನಾ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು, ಅಲ್ಲಿ ಮಹಿಳಾ ಸಬಲೀಕರಣದ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದರು.
ಭಾರತ ರತ್ನ ಡಾ.ಅಂಬೇಡ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ರಿಚಾ ಚಾಡ್ಡಾ “ಈ ಗೌರವ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಗಾಡ್ ಫಾದರ್ ಇಲ್ಲದ ನಟಿಗೆ, ಪ್ರತಿ ಸಾಧನೆಯೂ ಅಮೂಲ್ಯ ಮತ್ತು ಉತ್ತಮವಾಗಿರುತ್ತದೆ. ಈ ಪ್ರಶಸ್ತಿ ನನ್ನ ಕನಸುಗಳ ಮೇಲಿನ ನನ್ನ ನಂಬಿಕೆಯನ್ನು ಪುನರುಚ್ಚರಿಸುತ್ತದೆ. ಕೇವಲ ಮನರಂಜನೆಗಿಂತ ಹೆಚ್ಚಿನದನ್ನು ನೀಡುವ ಚಲನಚಿತ್ರಗಳನ್ನು ಮಾಡುವುದು ನನ್ನ ಪ್ರಯತ್ನವಾಗಿದೆ” ಎಂದಿದ್ದಾರೆ.
“ಈ ಪ್ರಶಸ್ತಿಗೆ ಕೃತಜ್ಞರಾಗಿರುತ್ತೇವೆ. ಜೊತೆಗೆ ಈದು ‘ಭವಿಷ್ಯದಲ್ಲಿ ಉತ್ತಮ ಯೋಜನೆಗಳನ್ನು ಆಯ್ಕೆ ಮಾಡಲು ಧೈರ್ಯ ತುಂಬುತ್ತದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನಟ ಸೋನು ಸೂದ್ ಮಾನವೀಯ ಕಾರ್ಯಕ್ಕೆ ವಿಶ್ವಸಂಸ್ಥೆಯ ಗೌರವ
“ಕಡಿಮೆ ಸವಲತ್ತುಗಳನ್ನು ಹೊಂದಿರುವವರನ್ನು ಬೆಂಬಲಿಸುವುದು ಮತ್ತು ಅವರ ಜೀವನವನ್ನು ಪುನಃ ಸ್ಥಾಪಿಸಲು ಸಹಾಯ ಮಾಡುವುದು ಕಲಾವಿದರ ನಿರಂತರ ಕರ್ತವ್ಯವಾಗಿ ಉಳಿದಿದೆ. ನಟ – ನಟಿಯರ ಕೆಲಸ ಮನರಂಜನೆಯನ್ನು ಮೀರಿದೆ” ಎಂಬ ಮಾತುಗಳನ್ನು ರಿಚಾ ಆಡಿದ್ದಾರೆ.
“ನಾವೆಲ್ಲರೂ ಸಮಾಜವನ್ನು ಉನ್ನತೀಕರಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತೇವೆ ಮತ್ತು ಕಡಿಮೆ ಸವಲತ್ತುಗಳನ್ನು ಹೊಂದಿರುವವರನ್ನು ಬೆಂಬಲಿಸುವಲ್ಲಿ ಹೆಚ್ಚಿನ ಜನರು ಸೇರಿಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಜೊತೆಗೆ ಕೊರೊನಾ ವಾರಿಯರ್ಸ್‌ಗೆ ನಿರಂತರ ಬೆಂಬಲ ನೀಡುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ನಟಿ ಹೇಳಿದ್ದಾರೆ.
Thrilled to be among the recipients of the Bharat Ratna Ambedkar award, conferred upon me by the H'ble Gov of Maharashtra. Woke up to the greatness of Babasaheb late in life, due to caste privilege! Jai Bhim! Jai Hind! pic.twitter.com/4OZKnR8yNY
— TheRichaChadha (@RichaChadha) November 19, 2020
ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಶಸ್ತಿ ಬಗ್ಗೆ ಸಂಸತ ಹಂಚಿಕೊಂಡಿರುವ ನಟಿ, “ಭಾರತ್ ರತ್ನ ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾದವರಲ್ಲಿ ಒಬ್ಬರಾಗಿರುವುದು ರೋಮಾಂಚನವಾಗಿದೆ. ಮಹಾರಾಷ್ಟ್ರದ ಗೌರವಾನ್ವಿತ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಜಾತಿ ಸವಲತ್ತು ಕಾರಣದಿಂದ ಬಾಬಾಸಾಹೇಬರ ಶ್ರೇಷ್ಠತೆ ಬಗ್ಗೆ ಜೀವನದಲ್ಲಿ ತಡವಾಗಿ ಎಚ್ಚರವಾಯಿತು! ಜೈ ಭೀಮ್! ಜೈ ಹಿಂದ್!” ಎಂದು ಬರೆದುಕೊಂಡಿದ್ದಾರೆ.
ರಿಚಾ ಚಾಡ್ಡಾ ಅವರು 2008 ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ಆದರೆ, 2012ರ ಗ್ಯಾಂಗ್ಸ್ ಆಫ್ ವಾಸ್ಸೆಪುರ್ ಚಿತ್ರ ಆಕೆಗೆ ದೊಡ್ಡ ಬ್ರೇಕ್ ನೀಡಿತ್ತು. ಅಂದಿನಿಂದ, ರಿಚಾ ಮಸಾನ್, ಸರ್ಬ್ಜಿತ್, ಲವ್ ಸೋನಿಯಾ, ಮತ್ತು ಸೆಕ್ಷನ್ 375 ಸೇರಿದಂತೆ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿ ಕಂಗನಾ ರಾಣಾವತ್ ಜೊತೆ ನಟಿಸಿದ್ದ ಪಂಗಾ ಚಿತ್ರದಲ್ಲಿ ಆಕೆಯ ನಟನೆ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.


