Homeಮುಖಪುಟಲಸಿಕೆಗಾಗಿ ಆನ್‌ಲೈನ್ ನೋಂದಣಿ: ಇಂಟರ್‌ನೆಟ್ ಇಲ್ಲದವರಿಗೂ ಬದುಕುವ ಹಕ್ಕಿದೆ ಎಂದ ರಾಹುಲ್ ಗಾಂಧಿ

ಲಸಿಕೆಗಾಗಿ ಆನ್‌ಲೈನ್ ನೋಂದಣಿ: ಇಂಟರ್‌ನೆಟ್ ಇಲ್ಲದವರಿಗೂ ಬದುಕುವ ಹಕ್ಕಿದೆ ಎಂದ ರಾಹುಲ್ ಗಾಂಧಿ

- Advertisement -

ಇಂಟರ್‌ನೆಟ್ ಸಂಪರ್ಕ ಇಲ್ಲದವರಿಗೂ ಬದುಕುವ ಹಕ್ಕಿದೆ. ಆನ್‌ಲೈನ್ ನೋಂದಣಿ ಮಾಡದಿದ್ದರೂ ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಬರುವ ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

“ಲಸಿಕೆಗಾಗಿ ಆನ್‌ಲೈನ್ ನೋಂದಣಿ ಮಾತ್ರ ಸಾಕಾಗುವುದಿಲ್ಲ. ಲಸಿಕೆ ಕೇಂದ್ರಕ್ಕೆ ಕಾಲಿಟ್ಟ ಪ್ರತಿಯೊಬ್ಬರೂ ವ್ಯಕ್ತಿಗೆ ಕೊರೊನಾ ಲಸಿಕೆ ನೀಡಬೇಕು. ಬದುಕುವ ಹಕ್ಕು ಇಂಟರ್‌ನೆಟ್ ಇಲ್ಲದವರಿಗೂ ಸೇರಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್ ಸಂಪರ್ಕ ಇರುವುದಿಲ್ಲ. ಬಡವರ ಬಳಿ ಸ್ಮಾರ್ಟ್‌ಫೋನ್‌ ಇರುವುದಿಲ್ಲ ಹಾಗಾಗಿ ಇಂಟರ್‌ನೆಟ್ ಬಳಸದವರಿಗೂ ಲಸಿಕೆ ಪಡೆಯುವ ಹಕ್ಕಿದೆ. ಹೀಗಾಗಿ ಲಸಿಕೆಗಾಗಿ ನೋಂದಣಿ ಮಾಡದಿದ್ದವರಿಗೂ ಲಸಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಮೊದಲ ಅಲೆಯಲ್ಲಿ ಸಿಂಧಿಯಾ, ಎರಡನೆ ಅಲೆಯಲ್ಲಿ ಜಿತಿನ್‍: ರಾಹುಲ್‍ ತೊರೆದ ಆಪ್ತರು!

ನಗರ ಪ್ರದೇಶಗಳಿಂದ ದೂರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗಾಗಿ ಡಿಜಿಟಲ್ ಬಳಕೆ, ಇಂಟರ್‌ನೆಟ್ ಬಳಕೆ ಅಥವಾ ಸ್ಮಾರ್ಟ್ ಫೋನ್ ಇಲ್ಲದ ಬಡವರ ಪರವಾಗಿ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಟ್ವೀಟ್ ಮಾಡಿದ್ದಾರೆ. ಕೊರೊನಾ ಲಸಿಕೆ ಪಡೆಯಲು ಆನ್‌ಲೈನ್ ನೋಂದಣಿ ಕಡ್ಡಾಯ ಬೇಡ ಎಂದು ವಿರೋಧ ಪಕ್ಷ ಒತ್ತಾಯಿಸುತ್ತಿದೆ.

ದೆಹಲಿಯಲ್ಲಿ ಕೊರೊನಾ ಲಸಿಕೆ ಎಲ್ಲರಿಗೂ ನೀಡಬೇಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮತದಾನ ಕೇಂದ್ರಗಳನ್ನು ಲಸಿಕಾ ಕೇಂದ್ರಗಳನ್ನಾಗಿಸಿದ್ದಾರೆ. ಕೊರೊನಾ ಲಸಿಕೆ ಬಗ್ಗೆ ಭಯವಿರುವ ಜನರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ತರಬೇತಿ ನೀಡಿ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ.


ಇದನ್ನೂ ಓದಿ: ಸೆಪ್ಟಂಬರ್ ಒಳಗೆ ಎಲ್ಲರಿಗೂ ಉಚಿತ ಲಸಿಕೆ ನೀಡಿ: ರಾಜ್ಯಾದ್ಯಂತ ಸಾವಿರಾರು ಪ್ರತಿಭಟನೆಗಳನ್ನು ದಾಖಲಿಸಿದ ಕರವೇ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial