Homeಮುಖಪುಟಆಟೋ ಚಾಲಕನ ಮಗಳು ಮಿಸ್ ಇಂಡಿಯಾ ರನ್ನರ್ ಅಪ್ ಆದ ಕಥೆ

ಆಟೋ ಚಾಲಕನ ಮಗಳು ಮಿಸ್ ಇಂಡಿಯಾ ರನ್ನರ್ ಅಪ್ ಆದ ಕಥೆ

ರನ್ನರ್‌ ಅಪ್ ಆಗಿ ಸನ್ಮಾನ ಸಮಾರಂಭಕ್ಕೆ ಬರಲು ಈಕೆ ಬಳಸಿದ್ದು ತಮ್ಮ ಮನೆಗೆ ಬೆಂಬಲವಾಗಿ ನಿಂತಿದ್ದ ಅಪ್ಪನ ಆಟೋರಿಕ್ಷಾವನ್ನು.

- Advertisement -
- Advertisement -

ಬಡತನದ ಬೆಂಕಿಯಲ್ಲಿ ಬೆಂದು ಚಿನ್ನವಾಗಿ ಹೊರಹೊಮ್ಮಿದ ದಿಟ್ಟೆ ಈ ಬಾರಿಯ ಮಿಸ್ ಇಂಡಿಯಾ 2020 ರ ರನ್ನರ್ ಅಪ್ ಮಾನ್ಯಾ ಸಿಂಗ್. ಹೌದು, ಸಾಧಿಸುವ ಛಲವಿದ್ದರೇ, ಕಂಡ ಕನಸುಗಳನ್ನು ನನಸು ಮಾಡಿಕೊಳ್ಳುವ ಧೃಡ ಇಚ್ಛೆ ಇದ್ದಲ್ಲಿ ಅದು ಸಾಧ್ಯ ಎಂಬುದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ ಈಕೆ.

ಮಿಸ್ ಇಂಡಿಯಾ  2020 ರ ಕಿರೀಟ ಪಡೆದ 23 ವರ್ಷದ ತೆಲಂಗಾಣದ ಮಾನಸಾ ವಾರಣಾಸಿ ಅವರಿಗಿಂತ ಹೆಚ್ಚು ಸುದ್ದಿಯಾಗಿದ್ದು, ರನ್ನರ್‌ ಅಪ್ ಆದ 19 ವರ್ಷದ ಉತ್ತರ ಪ್ರದೇಶದ ಮಾನ್ಯಾ ಸಿಂಗ್.

ಖುಷಿ ನಗರದ ಆಟೋ ಡ್ರೈವರ್ ಓಂಪ್ರಕಾಶ್ ಸಿಂಗ್ ಮತ್ತು ಮನೋರಮಾ ಸಿಂಗ್ ಮಗಳಾಗಿದ್ದ ಮಾನ್ಯಾ ಸಿಂಗ್, ತೀವ್ರ ಬಡತನದಲ್ಲಿ ಬೆಳೆದವರು. ಆಟೋ ಓಡಿಸಿ ಬರುತ್ತಿದ್ದ ಹಣವೇ ಇವರ ಕುಟುಂಬದ ಆದಾಯವಾಗಿತ್ತು. ಇಂತಹ ಕುಟುಂಬದಲ್ಲಿ ಬೆಳೆದ ಮಾನ್ಯಾ ತನ್ನ ಕನಸುಗಳನ್ನು ಕಟ್ಟಿಕೊಂಡು ರೈಲು ಹತ್ತಿದ್ದು ಕನಸಿನ ನಗರ ಮುಂಬೈಗೆ.

ಇದನ್ನೂ ಓದಿ:  ರೈತ ಹೋರಾಟ: 24 ವರ್ಷದ ಯುವಕ ಬಲ್ಜಿತ್ ಸಿಂಗ್ ಅವಿರೋಧವಾಗಿ ಸರ್‌ಪಂಚ್‌ ಆದ ಕಥೆ

“ನಾನು ನಿಲ್ದಾಣದಿಂದ ಹೊರನಡೆದಾಗ, ನಾನು ನೋಡಿದ ಮೊದಲ ಸ್ಥಳ ಪಿಜ್ಜಾ ಹಟ್. ನಾನು ಅಲ್ಲಿ ಅರೆಕಾಲಿಕ ಉದ್ಯೋಗ ಮತ್ತು ತಾತ್ಕಾಲಿಕ ಉಳಿದುಕೊಳ್ಳುವ ಅವಕಾಶ ಪಡೆದುಕೊಂಡೆ. ಎರಡು ದಿನಗಳ ನಂತರ, ನಾನು ನನ್ನ ತಂದೆಗೆ ಕರೆ ಮಾಡಿದಾಗ, ಅವರು ಅಳತೊಡಗಿದರು. ಆದರೆ ನಾನು ಇದೆ ನನ್ನ ಸ್ಥಳ ಎಂದು ಧೈರ್ಯ ತುಂಬಿದೆ. ಮರುದಿನವೇ ನನ್ನ ತಂದೆ ತಾಯಿ ಮುಂಬೈಗೆ ಬಂದು ನಿನ್ನ ಕನಸಿಗೆ ನಾನು ಬೆಂಬಲವಾಗಿ ನಿಲ್ಲುತ್ತೇವೆ ಎಂದರು” ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾನ್ಯಾ ತಿಳಿಸಿದ್ದಾರೆ.

“ನನ್ನ ತಂದೆ ಜೀವನ ಸಾಗಿಸಲು ಆಟೋ ಓಡಿಸಿದರು. ಆದರೂ ನನ್ನನ್ನು ಉತ್ತಮ ಶಾಲೆಗೆ ಕಳುಹಿಸಿದರು. ಜೊತೆಗೆ, ನಾನು ಅರೆಕಾಲಿಕ ಉದ್ಯೋಗಗಳನ್ನು ಮಾಡಿದ್ದೇನೆ” ಎನ್ನುತ್ತಾರೆ ಮಾನ್ಯಾ.

Image result for manya singh

ಮಾನ್ಯಾ ಹೇಳುವಂತೆ, ಆಕೆ ತನ್ನ ಪದವಿ ದಿನಗಳಲ್ಲಿ, ಹತ್ತಾರು ಸ್ಪರ್ಧೆಗಳಿಗೆ ಆಡಿಷನ್ ಮಾಡಿದ್ದಳು, ಆದರೆ ಅವರು “ಶಕಲ್ ಅಚಿ ನಹಿ ಹೈ” (ನಿಮ್ಮ ಮುಖ ಚೆನ್ನಾಗಿ ಕಾಣುತ್ತಿಲ್ಲ) ಅಥವಾ “ನಿಮಗೆ ಇಂಗ್ಲಿಷ್ ಕೂಡ ತಿಳಿದಿಲ್ಲ” ಎಂದು ವಾಪಸ್ ಕಳಿಸುತ್ತಿದ್ದರಂತೆ.

“ಪ್ರತಿ ಬಾರಿ ನಾನು ಸೋತಾಗ ಅಂದುಕೊಳ್ಳುತ್ತಿದ್ದು, ಇನ್ನೆರಡು ಹೆಜ್ಜೆ ಮುಂದಕ್ಕೆ, ಮತ್ತೆರಡು ಹೆಜ್ಜೆ ಮುಂದಕ್ಕೆ ಎಂಬ ಮಾತುಗಳನ್ನು. ಇದು ನನ್ನನ್ನು ಇಲ್ಲಿಗೆ ತಂದಿರಿಸಿದೆ” ಎಂದು ಹೇಳುತ್ತಾರೆ ಮಾನ್ಯಾ ಸಿಂಗ್.

ಇದನ್ನೂ ಓದಿ: ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!

View this post on Instagram

 

A post shared by Manya Singh (@manyasingh993)

“ನನ್ನ ಕಾಲೇಜು ಶುಲ್ಕವನ್ನು ಪಾವತಿಸಲು ಅಪ್ಪ ನಮ್ಮ ಆಭರಣಗಳನ್ನು ಅಡಮಾನ ಇಟ್ಟಿದ್ದರು. ಸ್ಫರ್ಧೆಗಳಿಗಾಗಿ ಬಟ್ಟೆಗಳನ್ನು ಖರೀದಿಸಲು ನನಗೆ ಹಣದ ಅಗತ್ಯವಿದ್ದರಿಂದ ನಾನು ಪಿಜ್ಜಾ ಹಟ್‌ನಲ್ಲಿ ನೆಲವನ್ನು ಒರೆಸುವ ಕೆಲಸ ಮಾಡಿದ್ದೇನೆ. ಅಲ್ಲಿ ಜನ ಇಂಗ್ಲಿಷ್ ಮಾತಾಡುವುದನ್ನು, ಕಾಲೇಜಿನಲ್ಲಿ ಸ್ನೇಹಿತರು ಹೇಗೆ ಮಾತನಾಡುತ್ತಾರೆ ಎಂಬುದನ್ನು ಹೆಚ್ಚು ಗಮನಿಸುತ್ತಿದೆ”. ನನ್ನ ತಂದೆ ಆಟೋ ಚಾಲಕರು ಎಂದು ನನ್ನ ವಿಡಿಯೋಗಳಲ್ಲಿ ಹೇಳಿದಾಗ ಜನ ಪ್ರಚಾರಕ್ಕಾಗಿ ಎಂದುಕೊಂಡರು. ಆದರೆ ನನಗೆ ನನ್ನ ಮೂಲದ ಬಗ್ಗೆ, ನನ್ನ ತಂದೆಯ ಬಗ್ಗೆ ಹೆಮ್ಮೆಯಿದೆ ಎನ್ನುತ್ತಾರೆ ಈಕೆ.

Image result for manya singh

ರನ್ನರ್‌ ಅಪ್ ಆಗಿ ಸನ್ಮಾನ ಸಮಾರಂಭಕ್ಕೆ ಬರಲು ಈಕೆ ಬಳಸಿದ್ದು ತಮ್ಮ ಮನೆಗೆ ಬೆಂಬಲವಾಗಿ ನಿಂತಿದ್ದ ಅಪ್ಪನ ಆಟೋರಿಕ್ಷಾವನ್ನು.

ಬಡತನ ಎಂದು ಕೈಕಟ್ಟಿ ಕುಳಿತ್ತಿದ್ದರೆ ತನ್ನ ಕನಸು ನನಸಾಗುತ್ತಿರಲಿಲ್ಲ ಎನ್ನುತ್ತಾರೆ ಮಾನ್ಯ. ಇಷ್ಟು ದಿನ ತನಗೆ ಬೆಂಬಲವಾಗಿ ನಿಂತ ತಂದೆ ತಾಯಿಗೆ ಮನೆ ಖರೀದಿಸಿಕೊಡುವ ಮೂಲಕ ನಾನು ಅವರಿಗೆ ಸಹಾಯ ಮಾಡಲು ಆರಂಭಿಸುವೆ. ನನ್ನ ತಂದೆ ನನ್ನಲ್ಲಿ ವಿಶ್ವಾಸವಿರಿಸಿದ್ದರು ಹಾಗಾಗಿ ಇಂದು ಆಟೋ ಚಾಲಕನ ಮಗಳು ತಲೆ ಮೇಲೆ ಕಿರೀಟ ಧರಿಸಿದ್ದಾಳೆ. ಎಂದು ಹೆಮ್ಮೆಯಿಂದ ಹೇಳುತ್ತಾರೆ ಮಾನ್ಯ.


ಇದನ್ನೂ ಓದಿ: ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ: ಸಿಂಘು ಗಡಿಯಲ್ಲಿ ಗುರ್ತೇಜ್ ಸಿಂಗ್ ಗುಡುಗು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...