Homeಮುಖಪುಟನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ - ಎ.ಕೆ.ಸುಬ್ಬಯ್ಯ

ನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ – ಎ.ಕೆ.ಸುಬ್ಬಯ್ಯ

- Advertisement -
ಎ.ಕೆ.ಸುಬ್ಬಯ್ಯ, ಹಿರಿಯ ಚಿಂತಕರು. 
ನರೇಂದ್ರ ಮೋದಿ ಮತ್ತು ಅವರ ಪರಿವಾರದವರ ಕೈಯಲ್ಲಿ ಈ ದೇಶದ ಆಡಳಿತ ಇರುವುದಕ್ಕಿಂತ  ಅಪಾಯಕಾರಿ ಸಂದರ್ಭ ಈ ದೇಶಕ್ಕೆ ಹಿಂದೆಂದೂ ಬಂದಿರಲಿಲ್ಲ. ಈ ಚುನಾವಣಾ ಸಮಯದಲ್ಲಿ ಇನ್‍ಕಂ ಟ್ಯಾಕ್ಸ್ ಇಲಾಖೆಯ ದಾಳಿಗಳೇ ದೊಡ್ಡ ಭ್ರಷ್ಟಾಚಾರವಾಗಿದೆ.
ಮೋದಿಯವರು ಮೊನ್ನೆ ಬೆಂಗಳೂರಿನ ಭಾಷಣದಲ್ಲಿ ಎರಡು ತಪ್ಪು ಸಂದೇಶಗಳನ್ನು ಕೊಡುವುದಕ್ಕೆ ಬುದ್ಧಿಪೂರ್ವಕ ಪ್ರಯತ್ನವನ್ನು ಮಾಡಿದ್ದಾರೆ. ಮೊದಲನೆಯದು ಮೋದಿಯನ್ನು ಟೀಕೆ ಮಾಡುವವರೆಲ್ಲರೂ ದೇಶ ದ್ರೋಹಿಗಳು. ಅವರು ದೇಶದ ವಿರುದ್ಧ ಮಾತಾಡುತ್ತಾರೆ. ಎರಡನೆಯದು ತನ್ನ ಭ್ರಷ್ಟಾಚಾರದ ಹೋರಾಟ. ಈ ಉದ್ಯಮಿಗಳ ಮನೆ ಮೇಲೆ  ಇನ್‍ಕಂಟ್ಯಾಕ್ಸ್ ನವರು ಏನು ದಾಳಿ ನಡೆಸುತ್ತಿದ್ದಾರೆ, ಅದು ಭ್ರಷ್ಟಾಚಾರದ ಹೋರಾಟ. ಅದರಿಂದ ವಿರೋಧ ಪಕ್ಷಗಳು ಗಾಬರಿ ಆಗುತ್ತಿದ್ದಾರೆ. ಒಂದು ಕಡೆ ಭ್ರಷ್ಟಾಚಾರದ ಹೋರಾಟ, ಇನ್ನೊಂದು ಕಡೆ ತಾನೇ ದೇಶಭಕ್ತ, ತನ್ನ ಪರಿವಾರದವೇ ದೇಶಭಕ್ತರು ಎಂಬ ತಪ್ಪು ಸಂದೇಶವನ್ನು ಜನರಿಗೆ ಕೊಡುವ ಮೂಲಕ ಜನರ ದಾರಿ ತಪ್ಪಿಸುವ ಬುದ್ಧಿಪೂರ್ವಕ ಪ್ರಯತ್ನವನ್ನು ನರೇಂದ್ರ ಮೋದಿಯವರು ಇಲ್ಲಿ ಮಾಡಿದ್ದಾರೆ. ಈ ಎರಡೂ ಸಹ ಸುಳ್ಳುಗಳು. ಒಂದು ದೇಶ ಅಂದ್ರೆ ಏನು? ನರೇಂದ್ರ  ಮೋದಿಯ ಮಾತಿನ ಪ್ರಕಾರವೇ ದೇಶವೆಂದರೆ ನರೇಂದ್ರ ಮೋದಿ, ಮೋದಿ ಬಿಟ್ಟು ದೇಶ ಇಲ್ಲ.  ನರೇಂದ್ರ ಮೋದಿಯನ್ನ  ಟೀಕೆ ಮಾಡುವ ಎಲ್ಲರೂ ದೇಶದ್ರೋಹಿಗಳು. ಇಂತಹ ಒಂದು ಸಂದೇಶವನ್ನು ಆತ ಜನಕ್ಕೆ ಕೊಡುತ್ತಿದ್ದಾನೆ.
ದೇಶಕ್ಕಾಗಿ ನಾವು ಎಂಬ ಆಂದೋಲನ ನಡೆಸುತ್ತಿರುವವರ ಪೈಕಿ ನಾನೂ ಒಬ್ಬ. ನಮಗೆ ದೇಶ ಅಂದರೆ, ಈ ಭಾರತದ ಭೂಪಟದಲ್ಲಿ ವಿಶಾಲವಾದ ಭೂ ಪ್ರದೇಶ. ಅಲ್ಲಿ ಇರುವಂತ ವೈವಿಧ್ಯಮಯವಾದಂತಹ ಜನರ ಸೌಹಾರ್ದಯುತವಾದಂತಹ ಬದುಕು. ವೈವಿಧ್ಯಮಯವಾದ ಜೀವ ಸಂಸ್ಕøತಿ. ಇವೆಲ್ಲವೂ ಸೇರಿ ನಮಗೆ ದೇಶ.  ಅವೆಲ್ಲವನ್ನೂ ಉಳಿಸಿಕೊಳ್ಳಲಿಕ್ಕಾಗಿ ದೇಶಕ್ಕಾಗಿ ನಾವು ಜನಾಂದೋಲನವನ್ನು ಮಾಡುತ್ತಿದ್ದೇವೆ. ನಾವು ಯಾವುದೇ ಕ್ಷುಲ್ಲಕವಾದಂತಹ ಚಳವಳಿಯೂ ಅಲ್ಲ. .. .. ಸ್ವಾರ್ಥದಿಂದ ಮಾಡುತ್ತಿರುವ ಚಳವಳಿಯೂ ಅಲ್ಲ. ಇದು ನಮ್ಮ ನಿಜವಾದ ದೇಶವನ್ನು ಉಳಿಸಿಕೊಳ್ಳಬೇಕು ಎಂದು ಮಾಡುತ್ತಿರುವ ಚಳವಳಿ ಇದಾಗಿದೆ. ನಮ್ಮ ದೇಶದ ಪರಿಕಲ್ಪನೆ ನರೇಂದ್ರ ಮೋದಿ ದೇಶದ ಪರಿಕಲ್ಪನೆಯಂತಲ್ಲ. ನಮ್ಮ ದೃಷ್ಟಿಯಲ್ಲಿ ಅತ್ಯಂತ ದೇಶದ್ರೋಹಿಗಳು ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ  ಮತ್ತು ಅವನ ಪರಿವಾರದವರು.
ನಮಗೆ ಮಹಾತ್ಮ ಗಾಂಧಿ ದೇಶದ ಶ್ರೇಷ್ಠ ಮಾರ್ಗದರ್ಶಕ. ನರೇಂದ್ರ ಮೋದಿಗೆ ಮಹಾತ್ಮ ಗಾಂಧಿಯನ್ನು ಕೊಂದವರು ದೇಶಭಕ್ತರು. ನಮಗೆ ಮಹಾತ್ಮ ಗಾಂಧಿ ದೇಶಭಕ್ತ. ನಮಗೆ ವಿವೇಕಾನಂದರ ದೇಶ ಬೇಕು. ನರೇಂದ್ರ ಮೋದಿಗೆ ಗೋಡ್ಸೆಯ ದೇಶ ಬೇಕು. ನಮಗೆ ನಾರಾಯಣ ಗುರು, ಮಹಾತ್ಮ ಫುಲೆ, ಬಾಬಾ ಸಾಹೆಬ್ ಅಂಬೇಢ್ಕರ್, ಗೌತಮ ಬುದ್ದ ಇಂತಹ ಮಹಾ ಮಾನವರ ಜೀವಪರ ವ್ಯಕ್ತಿಗಳ ದೇಶ ಬೇಕು. ಈ ದೇಶವನ್ನು ಉಳಿಸಲಿಕ್ಕೆ ನಾವು ದೇಶಭಕ್ತಿಯ ಚಳವಳಿಯನ್ನು ನಾವು ಮಾಡುತ್ತಿದ್ದೇವೆ.
ಆದರೆ ಈ ದೇಶವನ್ನ ಗಾಂಧಿಯವರನ್ನು ಕೊಂದವರ ದೇಶ ಮಾಡಬೇಕು. ಗೌರಿ ಲಂಕೇಶರನ್ನು  ಕೊಂದವರ ದೇಶವನ್ನಾಗಿ ಮಾಡಬೇಕು, ಹಾಗೆಯೇ ಧಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರನ್ನ ಕೊಂದವರ  ರೀತಿಯ ದೇಶ ಮಾಡಲು ಹೊರಟಿದ್ದಾರೆ. ನರೇಂದ್ರ ಮೋದಿ ಮತ್ತು ಅವರ ಪರಿವಾರದವರ ಕೈಯಲ್ಲಿ ಈ ದೇಶದ ಆಡಳಿತ ಇರುವುದಕ್ಕಿಂತ  ಅಪಾಯಕಾರಿ ಸಂದರ್ಭ ಈ ದೇಶಕ್ಕೆ ಹಿಂದೆಂದೂ ಬಂದಿರಲಿಲ್ಲ ಅನ್ನಿಸುತ್ತೆ. ಇಂದು ನಮ್ಮ ದೇಶದ ಮುಂದೆ  ಇಂತ ಅಪಾಯದಿಂದ ಇಡೀ ದೇಶವನ್ನು ಪಾರುಮಾಡುವಂತಹ ಹೊಣೆಗಾರಿಕೆ  ಬೇರೆ ಬೇರೆ ರಾಜಕೀಯ ಪಕ್ಷಗಳಿಗಿಂತ  ಹೆಚ್ಚಾಗಿ ನಮ್ಮಂತೆ ಚಿಂತನೆ ಮಾಡುವವರ ಹೆಗಲ ಮೇಲೆ ಹೆಚ್ಚಾಗಿ ಇದೆ. ಅದರಿಂದಾಗಿ ನಾವು ವಿಚಲಿತರಾಗಿದ್ದೇವೆ.
ಚುನಾವಣೆಯ ಸಂಧರ್ಭದಲ್ಲಿ ನಡೆಯುತ್ತಿರುವ ಐಟಿ ದಾಳಿಗಳನ್ನೇ  ಭ್ರಷ್ಟಾಚಾರಿ ವಿರೋಧಿ ಹೋರಾಟ ಮತ್ತು ತಾನೇ ಮಾಡಿಸುತ್ತಿದ್ದೇನೆ ಎಂದು ಪರೋಕ್ಷವಾಗಿ  ಹೇಳುತ್ತಿದ್ದಾರೆ. ಐಟಿ ಸಂಸ್ಥೆ ಇಲಾಖೆಯ ವತಿಯಿಂದ ಅದರ ಪಾಡಿಗೆ ಅದರ ಕೆಲಸ ಮಾಡುತ್ತಿದೆ ಎಂದು ಹೇಳುತ್ತಿಲ್ಲ. ಇದನ್ನು ವಿರೋಧಿಸಿದವರು ದೇಶದ್ರೋಹಿಗಳು. ನರೇಂದ್ರ ಮೋದಿ ಈ ದಾಳಿಗಳನ್ನು ಮಾಡಿಸುತ್ತಿರುವುದಾದರೂ ಏಕೆ. ವಿರೋಧ ಪಕ್ಷಗಳಿಗೆ ಚುನಾವಣಾ ಪ್ರಚಾರ ಮಾಡಲು ಸಾಧ್ಯವಾಗದಂತಹ ಏಕಮಾತ್ರ ಬಿಕ್ಕಟ್ಟು ನಿರ್ಮಾಣ ಮಾಡುವ ಏಕಮಾತ್ರ ಉದ್ದೇಶದಿಂದ ಈ ದಾಳಿಗಳನ್ನು ನಡೆಸುತ್ತಿದ್ದಾರೆ. ಇಂತಹ ದಾಳಿಗಳನ್ನು ಚುನಾವಣೆಗೆ ಮೊದಲು ಮುಗಿಸಬಹುದಿತ್ತು. ಚುನಾವಣೆಯ ನಂತರದ ಇಪ್ಪತ್ತು ದಿನ ಕಾದಿದ್ದರೂ ಆಕಾಶವೇನೂ ಕೆಳಗೆ ಬೀಳುತ್ತಿರಲಿಲ್ಲ. ಚುನಾವಣೆಯಲ್ಲಿ ಹಣದ ದುವ್ರ್ಯವಹಾರಗಳು ನಡೆಯುತ್ತಿದ್ದರೆ, ಚುನಾವಣಾ ಆಯೋಗ ದಾಳಿಗಳನ್ನು ಮಾಡಬಹುದಿತ್ತು. ಇನ್‍ಕಂ ಟ್ಯಾಕ್ಸ್‍ನವರು ಬರುವ ಅವಶ್ಯಕತೆ ಏನಿತ್ತು. ಈ ಚುನಾವಣಾ ಸಮಯದಲ್ಲಿ ಇನ್‍ಕಂ ಟ್ಯಾಕ್ಸ್ ಇಲಾಖೆಯ ದಾಳಿಗಳೇ ದೊಡ್ಡ ಭ್ರಷ್ಟಾಚಾರವಾಗಿದೆ. ಇದು  ಭ್ರಷ್ಟಾಚಾರ ತಡೆಯುವುದಲ್ಲ. ಆದರೆ ಮೋದಿ ಯತಾ ಪ್ರಕಾರ ಇದನ್ನು ಭ್ರಷ್ಟಾಚಾರ ವಿರೋಧಿ ಚಳವಳಿ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ ನಮ್ಮ ದೇಶದ ಜನ ಅಷ್ಟು ದಡ್ಡರಲ್ಲ. ಜನರ ಮೇಲೆ ಭರವಸೆ ಇಟ್ಟೇ ನಾವು ದೇಶಕ್ಕಾಗಿ ನಾವು ಚಳವಳಿಯನ್ನು ಮುಂದುವರೆಸುತ್ತೇವೆ. ಈ ರೀತಿ ಯೋಚನೆ ಮಾಡುವಂತ ಇಡೀ ದೇಶದ ಪ್ರಗತಿಪರ ಮತದಾರರು, ಈ ಚುನಾವಣೆಯಲ್ಲಿ ತಮ್ಮಿಂದ ತಾವೇ ಇದನ್ನು ಅರಿತು ತನು, ಮನ, ಧನಗಳನ್ನು ಅರ್ಪಿಸಿ ಈ ನರೇಂದ್ರ ಮೋದಿಯಂತಹ ದೇಶದ್ರೋಹಿ ಕೋಮು ಶಕ್ತಿಗಳಿಂದ  ದೇಶವನ್ನು ಈ ಚುನಾವಣೆಯಲ್ಲಿ ಪಾರು ಮಾಡುವಂತಹ ಸುವರ್ಣ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಾನು ಪ್ರಾರ್ಥನೆ ಮಾಡುತ್ತೇನೆ.
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...