Homeಮುಖಪುಟನರೇಂದ್ರ ಮೋದಿಯಷ್ಟು ಕೆಟ್ಟವನಾಗುವ ಸಾಮಥ್ರ್ಯ ರಾಹುಲ್ ಗಾಂಧಿಗೆ ಇಲ್ಲ.

ನರೇಂದ್ರ ಮೋದಿಯಷ್ಟು ಕೆಟ್ಟವನಾಗುವ ಸಾಮಥ್ರ್ಯ ರಾಹುಲ್ ಗಾಂಧಿಗೆ ಇಲ್ಲ.

- Advertisement -
- Advertisement -

| ಎ.ಕೆ.ಸುಬ್ಬಯ್ಯ | ಹಿರಿಯ ಚಿಂತಕರು.

ನರೇಂದ್ರ ಮೋದಿಯ ವ್ಯಕ್ತಿಚಿತ್ರದ ಎದುರಾಗಿ ರಾಹುಲ್ ಗಾಂಧಿಯನ್ನು ನಿಲ್ಲಿಸೋಣ. ರಾಹುಲ್ ಗಾಂಧಿಯನ್ನು ನರೇಂದ್ರ ಮೋದಿಗಿಂತ ಕೆಟ್ಟವನು ಎಂದು ಹೇಳಲು ಸಾಧ್ಯವೇ ಇಲ್ಲ. ಅಥವಾ ನರೇಂದ್ರ ಮೋದಿ ರಾಹುಲ್ ಗಾಂಧಿಯಷ್ಟು ಒಳ್ಳೆಯವನು ಎಂದು ಹೇಳಲು ಸಾಧ್ಯವಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ರಾಹುಲ್ ಗಾಂಧಿಯಿಂದ ನರೇಂದ್ರ ಮೋದಿ ಆಗಲು ಸಾಧ್ಯವಿಲ್ಲ. ನರೇಂದ್ರ ಮೋದಿಯಿಂದ ರಾಹುಲ್ ಗಾಂಧಿ ಆಗಲು ಸಾಧ್ಯವಿಲ್ಲ.

ನರೇಂದ್ರ ಮೋದಿಯ ಸ್ಥಾನದಲ್ಲಿ ರಾಹುಲ್ ಗಾಂಧಿ ಇದ್ದಿದ್ದರೆ ಗುಜರಾತ್ ಹತ್ಯಾಕಾಂಡ ನಡೆಯುತ್ತಿತ್ತೇ? ಅದರ ನಂತರ ಸಿಬಿಐ ಅನ್ನು ವಶ ಮಾಡಿಕೊಂಡು ಅದರ ಮೂಲಕ ಕ್ರಿಮಿನಲ್‍ಗಳನ್ನೆಲ್ಲಾ ಪಾರು ಮಾಡುವ ಮಟ್ಟಕ್ಕೆ ರಾಹುಲ್ ಗಾಂಧಿ ಹೋಗುತ್ತಿದ್ದರಾ? ಯಾವ ಕಾರಣದಿಂದಲೂ, ಯಾವ ದೃಷ್ಟಿಕೋನದಿಂದಲೂ ನರೇಂದ್ರ ಮೋದಿಯಷ್ಟು ದುಷ್ಟತನದಿಂದ ಕೂಡಿದ, ಕ್ರೋಧ, ಅಸೂಯೆ, ಪ್ರತಿಕಾರ ಮನೋಭಾವನೆಯಿಂದ ಕೂಡಿದ ಒಬ್ಬ ವ್ಯಕ್ತಿ ಆಗಲು ರಾಹುಲ್ ಗಾಂಧಿಗೆ ಸಾಧ್ಯವೇ ಇಲ್ಲ.

ರಾಹುಲ್ ಗಾಂಧಿ ಎಂದೊಡನೆ ಕುಟುಂಬ ರಾಜಕಾರಣ, ಅಪ್ಪು, ಪಪ್ಪು ಎಂದು ಗೇಲಿ ಮಾಡುತ್ತಾ ಆತನ ನೈತಿಕ ಬಲವನ್ನು ಕುಗ್ಗಿಸುವ ಪ್ರಯತ್ನವನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆಂದುದನ್ನು ಬಿಟ್ಟರೆ, ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪ ಮಾಡಲು ಬೇರೆನೂ ಇಲ್ಲದೇ ಇದನ್ನೇ ಪದೇ ಪದೇ ಹೇಳುತ್ತಿದ್ದಾರೆ ಎಂದರೆ ಏನು ಅರ್ಥ?


ಭ್ರಷ್ಟಾಚಾರ ವಿರೋಧಿ ನರೇಂದ್ರ ಮೋದಿ ಎಂದು ಹೇಳುತ್ತಿದ್ದಾರಲ್ಲ, ರಾಫೇಲ್ ಪ್ರಕರಣದಲ್ಲಿ ಮೋದಿ ಇಂದು ಬೆತ್ತಲಾಗಿ ಬೀದಿಯಲ್ಲಿ ನಿಂತಿದ್ದಾರಲ್ಲವೇ? ದೇಶದ ಜನ ಇದನ್ನು ಅರ್ಥ ಮಾಡಿಕೊಂಡಿದ್ದಾರಲ್ಲವೇ? ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ, ಈ ಹಿಂದೆ ಯುಪಿಎ ಸಂದರ್ಭದಲ್ಲಿ ಜೈಲಿಗೆ ಹೋದ ಹಲವರು ಹೊರಗೆ ಬಂದರು. ಅವರು ರಾಬರ್ಟ್ ವಾದ್ರಾ ಸೇರಿದಂತೆ ಯಾರ್ಯಾರ ಮೇಲೆ ಆರೋಪವನ್ನು ಮಾಡಿದರೋ ಅವರ್ಯಾರೂ ಜೈಲಿಗೆ ಹೋಗಲಿಲ್ಲ.

ಎಲ್ಲ ರಾಷ್ಟ್ರೀಯ ಪಕ್ಷಗಳೂ ದೇಶವನ್ನು ಆಳಿದ್ದಾರೆ. ಅಧಿಕಾರ ಅನುಭವಿಸಿದಂತಹ ಪಕ್ಷಗಳೇ ಇರುವುದು. ಇವರೆಲ್ಲರ ಪೈಕಿ ಇಡೀ ದೇಶ ಗುರುತಿಸುವಂತಹ ಒಬ್ಬ ರಾಷ್ಟ್ರ ನಾಯಕ ಅಂದ್ರೆ ಯಾರಿದಾರೆ? ಮೋದಿ, ಮೋದಿಯ ನಂತರ.. .. ರಾಹುಲ್ ಗಾಂಧಿ ಬಿಟ್ಟರೆ ಇನ್ಯಾರಾದರೂ ಕಣ್ಣಿಗೆ ಕಾಣುತ್ತಾರಾ? ಇದ್ದಾರೆ, ವಾಮಪಂಥೀಯರಿದಾರೆ. ಸದ್ಗುಣ ಸಂಪನ್ನರಿದಾರೆ. ಆದರೆ ಅವರು ಸಮಾಜದಲ್ಲಿ ಹೆಚ್ಚು ಚಲಾವಣೆ ಆಗುತ್ತಿಲ್ಲ. ಅವರು ಅವರನ್ನು ತಿದ್ದಿಕೊಂಡು, ಇಡೀ ಇಂಡಿಯಾದ ನೇತೃತ್ವವನ್ನು ತಮ್ಮದಾಗಿಸಿಕೊಳ್ಳುವಂತಹ ಪ್ರಯತ್ನವನ್ನೇ ಮಾಡುವುದಿಲ್ಲವಲ್ಲ. ಈ ರೀತಿ ನಾವು ತುಂಬ ಅಸಹಾಯಕರಾಗಿದ್ದೀವಿ. ಆ ದೃಷ್ಟಿಯಲ್ಲಿ ರಾಹುಲ್ ಗಾಂಧಿಯೇ ನಮಗೆ ಸ್ವೀಕಾರಾರ್ಹ.


ವ್ಯಕ್ತಿಚಿತ್ರವನ್ನು ತೆಗೆದುಕೊಂಡು ರಾಹುಲ್ ಗಾಂಧಿಯನ್ನು ಪದೇ ಪದೇ ಗೇಲಿ ಮಾಡೋದರ ಅರ್ಥ ರಾಹುಲ್ ಗಾಂಧಿ ಅಷ್ಟು ಸಣ್ಣವ ಅಂತಲ್ಲ. ರಾಹುಲ್ ಗಾಂಧಿಯನ್ನು ಸಣ್ಣದು ಮಾಡುವ ಪ್ರಯತ್ನ ಅದು. ಸಣ್ಣದು ಮಾಡುವುದರ ಹಿಂದೆ ಇರುವಂತದ್ದು ಭಯ, ರಾಹುಲ್ ಗಾಂಧಿಯ ಬಗ್ಗೆ ಇರುವ ಭಯ. ಇಷ್ಟೊಂದು ಸಣ್ಣ ವ್ಯಕ್ತಿಯ ಬಗ್ಗೆ ಭಯ ಏಕೆ? ಮೋದಿ ರಾಹುಲ್ ಗಾಂಧಿಯ ಭಜನೆ ಮಾಡದೇ ಯಾವುದಾದರೊಂದು ಭಾಷಣವನ್ನು ಅಂತ್ಯ ಮಾಡುತ್ತಾರಾ? ಒಬ್ಬ ಅಪ್ಪು, ಪಪ್ಪು, ಕೆಲಸಕ್ಕೆ ಬಾರದ ಸಣ್ಣ ವ್ಯಕ್ತಿಯ ಬಗ್ಗೆ ಯಾಕೆ ಭಯ ಪಡಬೇಕು? ಇದು ರಾಹುಲ್ ಗಾಂಧಿಯ ಬಗ್ಗೆ ಒಳಗೆ ಅಡಗಿಸಿಟ್ಟುಕೊಂಡಿರುವ ಭಯ. ಆದ್ದರಿಂದ ಇಡೀ ದೇಶದಲ್ಲಿ ನರೇಂದ್ರ ಮೋದಿಯ ವಿರುದ್ಧ ಗೆಲ್ಲಿಸಬೇಕಾದಂತಹ, ಸ್ವೀಕರಿಸಬೇಕಾದಂತಹ ಏಕೈಕ ವ್ಯಕ್ತಿ, ಎಲ್ಲ ಕೋನಗಳಿಂದ ರಾಹುಲ್ ಗಾಂಧೀ ಎಂದು ನನಗೆ ಅನಿಸುತ್ತದೆ.


ನಾನು ರಾಹುಲ್ ಗಾಂಧಿಯನ್ನು ಭಾರಿ ಪುರುಷೋತ್ತಮ ಎಂದು ಭಾವಿಸುತ್ತಿಲ್ಲ. ಮನುಷ್ಯನಲ್ಲಿ ಅಡಗಿರುವಂತಹ ಕೆಲವು ದೌರ್ಬಲ್ಯಗಳು ಅವನಲ್ಲಿಯೂ ಇವೆ. ಆದರೆ ನರೇಂದ್ರ ಮೋದಿಗೆ ಹೋಲಿಸಿದರೆ ರಾಹುಲ್ ಗಾಂಧಿ ಅಪರಂಜಿಯಾಗಿ ವಿಜೃಂಭಿಸುತ್ತಾನೆ. ಇದನ್ನು ಜನ ಆಳವಾಗಿ ಯೋಚನೆ ಮಾಡಿ, ಚಿಂತನೆ ಮಾಡಿ ಸರಿಕಂಡರೆ ಒಪ್ಪಿಕೊಳ್ಳಿ, ಇಲ್ಲವೆಂದರೆ ಬಿಟ್ಟುಬಿಡಿ. ಆದರೆ ಒಂದಂತೂ ನಿಜ, ನರೇಂದ್ರ ಮೋದಿಯಷ್ಟು ಕೆಟ್ಟವನಾಗುವ ಸಾಮಥ್ರ್ಯ ರಾಹುಲ್ ಗಾಂಧಿಗೆ ಇಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...