Homeಮುಖಪುಟಶೈಕ್ಷಣಿಕ ವರ್ಷಾರಂಭದ ಕುರಿತು ಸಮಿತಿ ವರದಿ ಸಲ್ಲಿಕೆ: ಸೆಪ್ಟಂಬರ್‌‌ನಿಂದ ಆರಂಭ ಸಾಧ್ಯತೆ

ಶೈಕ್ಷಣಿಕ ವರ್ಷಾರಂಭದ ಕುರಿತು ಸಮಿತಿ ವರದಿ ಸಲ್ಲಿಕೆ: ಸೆಪ್ಟಂಬರ್‌‌ನಿಂದ ಆರಂಭ ಸಾಧ್ಯತೆ

- Advertisement -
- Advertisement -

ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ 2020-21ನೇ ಶೈಕ್ಷಣಿಕ ವರ್ಷಾರಂಭ ಸಾಕಷ್ಟು ವಿಳಂಬವಾಗಲಿದೆ. ಸಂಪ್ರದಾಯದಂತೆ ಪ್ರತಿವರ್ಷ ಜುಲೈ ತಿಂಗಳಿನಿಂದ ಆರಂಭವಾಗಬೇಕಿದ್ದ ಶೈಕ್ಷಣಿವರ್ಷ ಪ್ರಸಕ್ತ ವರ್ಷ ಸೆಪ್ಟೆಂಬರ್ ತಿಂಗಳಿಗೆ ಹೋಗಲಿದೆ ಎಂದು ಸರ್ಕಾರ ನೇಮಿಸಿದ್ದ ಏಳು ಸದಸ್ಯರ ಸಮಿತಿ ಹೇಳಿದೆ.

ಭಾರತ ಸರ್ಕಾರ ದೇಶಾದ್ಯಂತ ಶಾಲಾ-ಕಾಲೇಜುಗಳ ಮುಚ್ಚುವಂತೆ ಘೋಷಿಸಿದ ನಂತರ ವಿಶ್ವವಿದ್ಯಾಲಯಗಳು ಕಾಲೇಜುಗಳನ್ನು ಮಾರ್ಚ್ 16, 2020 ರಿಂದ ಮುಚ್ಚಲಾಗಿದೆ. ಹಾಗಾಗಿ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ರಚಿಸಿದ್ದ ಏಳು ಸದಸ್ಯರ ಸಮಿತಿಯು ಪರೀಕ್ಷೆಗಳು, ಶೈಕ್ಷಣಿಕ‍ಕ್ಯಾಲೆಂಡರ್‌ ಸಂಬಂಧ ಶಿಫಾರಸು ಮಾಡಿ ಮುಂದೆ ಅನುಸರಿಸಬೇಕಾದ ನಿಯಮಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ನೂತನ ಶೈಕ್ಷಣಿಕವರ್ಷ ವಿಳಂಬವಾಗುವುದರಿಂದ ನಿಗದಿತ ಸಮಯದಲ್ಲೇ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರವೇಶ ಪರೀಕ್ಷೆಗಳನ್ನು ನಡೆಸಬೇಕಾಗಿದೆ. ಶೈಕ್ಷಣಿಕ ವರ್ಷಾರಂಭ ಎಷ್ಟು ತಿಂಗಳು ವಿಳಂಬವಾಗಲಿದೆ ಎಂಬ ಕಲ್ಪನೆ ಇದ್ದು ಎರಡು ತಿಂಗಳ ನಂತರ ಹೊಸ ಶೈಕ್ಷಣಿಕವರ್ಷ ಆರಂಭವಾಗಲಿದೆ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ.

ಶೈಕ್ಷಣಿಕ ವರ್ಷಾಂತ್ಯ, ಸೆಮಿಸ್ಟರ್ ಗಳ ಅಂತ್ಯ ಮತ್ತು ಪರೀಕ್ಷೆಗಳು ಮುಂದಿನ ಜುಲೈಗೆ ಮಾಡಬೇಕು ಎಂದು ಸಮಿತಿ ವರದಿ ನೀಡಿದೆ. ಹರ್ಯಾಣ ಕೇಂದ್ರ ವಿಶ್ವವಿದ್ಯಾಲನಿಯಲದ ಕುಲಪತಿ ಆರ್.ಸಿ.ಕುಹರ್ ಅಧ್ಯಕ್ಷತೆಯ ಇಂಟ್ರಾ ವಿವಿ ಆಕ್ಸಲೇಟರ್ ಕೇಂದ್ರದ ನಿರ್ದೇಶಕ ಎ.ಪಾಂಡೆ, ಬನಸ್ಥಳಿ ವಿದ್ಯಾಪೀಠದ ಕುಲಪತಿ ಆದಿತ್ಯ ಶಾಸ್ತ್ರಿ ಮತ್ತು ರಾಜ್ ಕುಮಾರ್ ಅವರಿದ್ದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಸಮಿತಿ ನೀಡಿರುವ ವರದಿ ಆಧರಿಸಿ ಯುಜಿಸಿ ಉನ್ನತ ಶಿಕ್ಷಣದ ಪರೀಕ್ಷಾ ವೇಳಾಪಟ್ಟಿ, ಶೈಕ್ಷಣಿಕ ಕ್ಯಾಲೆಂಡರ್ ರಚಿಸಲಿದೆ. ಆದರೆ ನಿಯಮಾವಳಿಗಳು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ. ಸಮಿತಿ ಸಲ್ಲಿಸಿರುವ ವರದಿಗೆ ಯುಜಿಸಿ ಯಾವಾಗ ಒಪ್ಪಿಗೆ ನೀಡಲಿದೆ ಎಂಬುದು ತಿಳಿದುಬಂದಿಲ್ಲ.


ಇದನ್ನೂ ಓದಿ: ಲಾಕ್‍ಡೌನ್ – ಮನೆಯಿಂದಲೇ ಕೆಲಸ, ಮನೆಕೆಲಸ ಮತ್ತು ಮಹಿಳೆ! – ಮಲ್ಲಿಗೆ ಸಿರಿಮನೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...