Homeಮುಖಪುಟಸೂಪರ್‌ವೈಸರ್ ನಿರ್ಲಕ್ಷ್ಯ : ಗುಬ್ಬಿ ಕಾರ್ಮಿಕ ಮಹಿಳೆಯ ದುರ್ಮರಣ

ಸೂಪರ್‌ವೈಸರ್ ನಿರ್ಲಕ್ಷ್ಯ : ಗುಬ್ಬಿ ಕಾರ್ಮಿಕ ಮಹಿಳೆಯ ದುರ್ಮರಣ

- Advertisement -
- Advertisement -

ಸೂಪರ್‌ವೈಸರ್ ನಿರ್ಲಕ್ಷ್ಯದಿಂದ ಕೆಎಂಎಫ್ ಪಶುಆಹಾರ ಉತ್ಪಾದನಾ ಘಟಕದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆಯೊಬ್ಬರು ಚೈನ್ ಕನ್ವೈನರ್ ಮಿಷನ್‌ಗೆ ಸಿಲುಕಿ ನಜ್ಜುಗುಜ್ಜಾಗಿ ಮರಣ ಹೊಂದಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ಸಂಭವಿಸಿದೆ.

ಗುಬ್ಬಿಯ ಕೆಎಂಎಫ್‌ ಘಟಕದಲ್ಲಿ ಕಳೆದ 12-13 ವರ್ಷಗಳಿಂದ ಕೆಲಸ ಮಾಡುತ್ತಿದ್ದ 32 ವರ್ಷದ ಮಂಗಳಮ್ಮ ಮಾರ್ಚ್ 23ರಂದು ಬೆಳಗ್ಗೆ ಹಾಜರಾಗಿ ಕೆಲಸ ಮಾಡತೊಡಗಿದ್ದಾರೆ. ಕೆಲಸ ಮಾಡುವ ಸಮಯದಲ್ಲಿ ಸ್ಥಳದಲ್ಲಿರಬೇಕಾದ ಸೂಪರ್ ವೈಸರ್ ಇರದೇ ಹೊರಗೆ ಹೋಗಿದ್ದಾರೆ. ಹೀಗಾಗಿ ಚೈನ್ ಕನ್ವೈನರ್ ಸ್ವಚ್ಛ ಮಾಡುತ್ತಿದ್ದ ವೇಳೆ ಮಂಗಳಮ್ಮ ರೋಲರ್ ನಲ್ಲಿ ಸಿಲುಕಿ ದೇಹವೇ ಪುಡಿಪುಡಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸೂಪರ್‌ವೈಸರ್ ಜಿ.ಎಂ.ರವಿ ಅವರು ಘಟಕದಲ್ಲಿದ್ದರೆ ಅನಾಹುತವನ್ನು ತಪ್ಪಿಸಬಹುದಾಗಿತ್ತು. ಆದರೆ ರವಿ ಹೋಗಿದ್ದು ಅನಾಹುತಕ್ಕೆ ಕಾರಣ ಎಂದು ದೂರಲಾಗಿದೆ.

ಮಂಗಳಮ್ಮ ಕುಟುಂಬದ ಜವಾಬ್ದಾರಿ ಹೊತ್ತಿದ್ದರು. ಇಡೀ ಕುಟುಂಬ ಮಂಗಳಮ್ಮ ದುಡಿಮೆಯಿಂದಲೇ ಸಾಗುತ್ತಿತ್ತು. ಗಂಡ ಗಾರೆಕೆಲಸ ಮಾಡುತ್ತಿದ್ದರಾದರೂ, ಆತ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲಸವಿಲ್ಲದೆ ಪತಿ ಮನೆಯಲ್ಲಿದ್ದು, ಮಂಗಳಮ್ಮ ಅವರ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

ಲಾಕ್‌ಡೌನ್‌ ಸಮಯದಲ್ಲಿಯೂ ಮನೆಯನ್ನು ನಡೆಸುವುದಕ್ಕಾಗಿ ಮಂಗಳಮ್ಮ ದಿನನಿತ್ಯ ಕೆಲಸಕ್ಕೆ ಹೋಗುತ್ತಿದ್ದರು. ಇಂದು ತಿಳಿಯದೇ ಆದ ಸಣ್ಣ ಅವಘಡದಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಮಂಗಳಮ್ಮಗೆ ಮೂರು ವರ್ಷದ ಹೆಣ್ಣು ಮಗುವೊಂದು ಇದ್ದು ಈಗ ಅನಾಥವಾಗಿದೆ. ತಾಯಿ ಯಂತ್ರಕ್ಕೆ ಸಿಲುಕಿ ಮೃತಪಟ್ಟಿರುವುದರಿಂದ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲವಾಗಿದೆ. ತಂದೆ ಅನಾರೋಗ್ಯ ಪೀಡಿತರಾಗಿ ಮಗುವನ್ನು ನೋಡಿಕೊಳ್ಳುವ ಶಕ್ತಿ ಹೊಂದಿಲ್ಲ. ಇಂತಹ ದುರಂತದ ಸಮಯದಲ್ಲಿ ಕೋವಿಡ್ ಸಾಂಕ್ರಾಮಿಕ  ಹರಡುತ್ತಿದೆ. ಹಾಗಾಗಿ ಸರ್ಕಾರ ಕೂಡಲೇ ಪರಿಹಾರ ನೀಡಿ ಮಗುವಿನ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಿದೆ.

ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ಬಡಕುಟುಂಬದ ನೆರವಿಗೆ ಬರಬೇಕಾಗಿದೆ. ಲಾಕ್‌ಡೌನ್‌ ಸಮಯದಲ್ಲಿಯೇ ತೆಲಂಗಾಣದಲ್ಲಿ ಇದೇ ರೀತಿ ಮೂರು ಮಕ್ಕಳ ತಂದೆ ತಾಯಿಗಳು ಮರಣ ಹೊಂದಿದ್ದಾಗ ಅಲ್ಲಿನ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್‌ರವರು ಜಿಲ್ಲಾಢಳಿತಕ್ಕೇ ಆದೇಶಿಸಿ ಆ ಮಕ್ಕಳ ಜವಾಬ್ದಾರಿ ಸರ್ಕಾರದ್ದು ಎಂದು ಘೋಷಿಸಿದ್ದರು. ಆ ಮಕ್ಕಳ ವಿದ್ಯಾಬ್ಯಾಸ ಮತ್ತು ಜೀವನೋಪಾಯಕ್ಕೆ ಕ್ರಮ ತೆಗೆದುಕೊಂಡಿದ್ದರು. ಅಂತಹದೇ ಕ್ರಮ ಗುಬ್ಬಿಯಲ್ಲಿಯೂ ಜರುಗಬೇಕಿದೆ.


ಇದನ್ನೂ ಓದಿ: ಕೊರೊನಾ ಹರಡದಿರಲು ಔಷಧಿ ಸಿಂಪಡಿಸುತ್ತಿದ್ದ ಪೌರಕಾರ್ಮಿಕ ಬಸವರಾಜು ನಿಧನ : ತೀವ್ರ ಸಂತಾಪ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...