Homeಅಂಕಣಗಳುಗ್ಯಾರಂಟಿ ಸಪೋರ್ಟು ಮಾಡಿ ನೋಡಿ ಸಾರ್

ಗ್ಯಾರಂಟಿ ಸಪೋರ್ಟು ಮಾಡಿ ನೋಡಿ ಸಾರ್

- Advertisement -
- Advertisement -

ಕಡೆಗೂ ಭಾರತ ಕಂಡ ಅಪರೂಪದ ಪ್ರಧಾನಿ ಲೋಕಸಭೆಯಲ್ಲಿ ಕಾಣಿಸಿಕೊಂಡು ಕಾಂಗ್ರೆಸ್ಸಿಗರನ್ನು ಎರಡು ಗಂಟೆ ಟೀಕಿಸಿದರು, ನಂತರ ಐದು ನಿಮಿಷ ಮಣಿಪುರದ ಪ್ರಸ್ತಾಪ ಮಾಡಿದರು. ಆದರೇನು ಪ್ರಧಾನಿಯ ಮುಖ ಸಹಜವಾಗಿರಲಿಲ್ಲ. ತಪ್ಪುಗಳನ್ನು ಮುಚ್ಚಿಕೊಳ್ಳುವ ಸುಳ್ಳುಹೇಳುವ ಮುಖದಂತಿತ್ತು. ಮೋದಿ ಈ ದೇಶದ ಜವಾಬ್ದಾರಿ ಹೊತ್ತ ಪ್ರಧಾನಿಯಾಗಿದ್ದರೆ ಮಣಿಪುರದಲ್ಲಿ ಗಲಭೆ ಹೊತ್ತಿಕೊಂಡ ಕೂಡಲೇ ಅಲ್ಲಿಗೆ ಹೋಗುತ್ತಿದ್ದರೆ, ಆ ಕಾರಣಕ್ಕಾದರೂ ನೂರಾರು ಕೊಲೆಗಳು ನಡೆಯುತ್ತಿರಲಿಲ್ಲ; ಸಾವಿರಾರು ಮನೆ ಧ್ವಂಸವಾಗುತ್ತಿರಲಿಲ್ಲ; ಹೆಣ್ಣು ಮಕ್ಕಳ ಬೆತ್ತಲೆ ಮೆರವಣಿಗೆ ನಡೆಯುತ್ತಿರಲಿಲ್ಲ ಮತ್ತು ಅವರ ಮೇಲಿನ ದೌರ್ಜನ್ಯ ನಡೆಯುತ್ತಿರಲಿಲ್ಲ. ಮೋದಿ ಸಂಸತ್‌ಗೆ ಬರದಂತೆ ತಪ್ಪಿಸಿಕೊಂಡು ತಿರುಗುವ ಪ್ರಮೇಯವೇ ಜರುಗುತ್ತಿರಲಿಲ್ಲ. ಗುಜರಾತಿನಲ್ಲಿ ಮೋದಿ ಸರಕಾರವಿದ್ದಾಗ ಮುಸ್ಲಿಮರ ಮಾರಣಹೋಮಕ್ಕೆ ಕಾರಣರಾದ ಕೋಮುಗಲಭೆಯ ಬಗ್ಗೆ ಇಂದಿಗೂ ಅವರು ಕ್ಷಮೆ ಕೋರಿಲ್ಲ. ಇನ್ನು ಮಣಿಪುರದ ಘಟನೆ ಕೇವಲ ಮಣಿಪುರಕ್ಕೆ ಮಾತ್ರ ಸೀಮಿತ ಎಂದು ಭಾರತದ ಒಕ್ಕೂಟದ ರಾಜ್ಯಗಳು ಭಾವಿಸುವಂತಿಲ್ಲ. ಈ ನಡುವೆ ಮಣಿಪುರದ ಘಟನೆಗಳನ್ನು ಮರೆಮಾಚಿ ಕುಳಿತಿರುವ ಮಾಧ್ಯಮದವರು ರಾಹುಲ್ ಗಾಂಧಿಯವರ ’ಫ್ಲೈಯಿಂಗ್ ಕಿಸ್’ ಬಗ್ಗೆ ತಲೆಕೆಡಿಸಿಕೊಂಡು ದಿನಗಟ್ಟಲೆ ಕೊರೆಯುತ್ತಿರುವುದು ನಗು ಕಳೆದುಕೊಂಡವರಿಗೆ ನಗು ತರಿಸಿದೆಯಲ್ಲಾ, ಥೂತ್ತೇರಿ.

******

ಪತ್ರಕರ್ತರಿಗೆ ಪ್ರಿಯರಾಗಿರುವ ಕುಮಾರಣ್ಣನನ್ನು ಮಾತನಾಡಿಸಬೇಕೆನಿಸಿತಲ್ಲಾ. ಇಂತಹ ಅಪೇಕ್ಷೆ ಮೂಡಲು, ಕುಮಾರಣ್ಣ ಸಿಂಗಾಪುರದ ಮುಖಾಂತರ ಯೂರೋಪ್ ಟೂರು ಮಾಡುತ್ತಿದ್ದಾರೆ ಎಂಬ ಸುದ್ದಿಯೇ ಕಾರಣವಾಗಿ ಪೋನು ಮಾಡಿದರೆ ರಿಂಗಾಯ್ತು. ರಿಂಗ್ ಟೋನ್ ’ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು..’

“ಯಾರು? ಹಲೊ ಯಾರು?”

“ನಾನು ಸಾರ್ ಯಾಹೂ.”

“ಎಲ್ಲಿ ಬ್ರದರ್ ಸಿಕ್ಕಲೇಯಿಲ್ಲ ನೀವು.”

“ಬಂದಿದ್ದೆ ಸಾರ್, ಈಗತಾನೇ ಸಿಂಗಾಪುರಕ್ಕೋದ್ರು ಅಂದ್ರು ಸಾರ್.”

“ಕರೆದಿದ್ರೆ ನೀವು ಬರತಿದ್ರ?”

“ನಾನಾಗ್ಲೆ ನೋಡಿದ್ದಿನಿ ಸಾರ್.”

“ಯಾವಾಗ ನೋಡಿದ್ರಿ?”

“ನಾನು ಸಿಂಗಾಪುರ ನೋಡಿದಾಗ ನೀವಿನ್ನೂ ಸ್ಟೂಡೆಂಟು ಸಾರ್, ಆಗ ಸಿಂಗಾಪುರ ತೋರಿಸೊ ಏಜೆಂಟ್‌ಗಳು ಹುಟ್ಟಿಗಂಡಿದ್ರು. ನಮ್ಮನ್ನ ಕರಕಂಡು ಹೋಗಿ, ನಮ್ಮ ಹೆಸರಲ್ಲಿ ಟಿ.ವಿ, ಗಡಿಯಾರ, ಫೋನು, ಟೇಪರಿಕಾರ್ಡು ಯಲ್ಲಾನು ತಗಂಡು ರಸ್ತೆ ಪಾರ್ಕು ಮಾಲ್ ತೋರಿಸಿ ಕರಕಂಡು ಬರೋರು. ಅಂಗೆ ನಾನು ಹೋಗಿದ್ದೆ, ನಾನು ಪತ್ರಕರ್ತ ಅಂತ ಒಂದು ಪೆನ್ನು ತಕ್ಕೊಟ್ರು ಸಾರ್, ಅಂಗಾಗಿ ನಾನು ಸಿಂಗಾಪುರ ನೋಡಿದ್ದಿನಿ.”

“ಈಗ ನೋಡಬೇಕು ನೀವು. ಆ ದೇಶಗಳ ನೋಡಿದ್ರೆ ತಲೆ ತಗ್ಗಸಂಗಾಯ್ತದೆ ಕಂಡ್ರಿ.”

“ನೀವ್ಯಾಕೆ ತಲೆ ತಗ್ಗಸಬೇಕು ಸಾರ್.”

“ನಾನು ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸಿಂಗಾಪುರದ ತರ ಒಂದು ರೋಡು ಒಂದು ಪಾರ್ಕು ಮಾಡಕ್ಕಾಗಲಿಲ್ಲವಲ್ಲ ಅಂತ ತಲೆ ತಗ್ಗಸತಕ್ಕಂತ ಅಭಿಪ್ರಾಯ ಮೂಡುತ್ತೆ ಕಂಡ್ರಿ.”

“ನಿಜ ಸಾರ್, ನಿಮ್ಮ ಆತ್ಮವಿಮರ್ಶೆ ಮೆಚ್ಚತಕ್ಕೆಂತದ್ದು. ಎಷ್ಟು ಜನ ರಾಜಕಾರಣಿಗಳಿಗೆ ಇಂತ ಜ್ಞಾನೋದಯ ಆಗತ್ತೆ ಸಾರ್? ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ನೀವು ರಾಮನಗರದ ಊರೊಳಗಡೆ ಹೋದ್ರೆ ತಲೆ ತಗ್ಗಿಸಲೇಬೇಕು ಸಾರ್. ಆ ರಸ್ತೆ ಗುಂಡಿಗಳು ಆ ಗಲೀಜು ನೋಡಕ್ಕಾಗಲ್ಲ ಸಾರ್.”

“ರಾಮನಗರ ಅಷ್ಟೇ ಅಲ್ಲ ಕಂಡ್ರಿ. ಐದಾರು ಬಾರಿ ಗೆದ್ದು ಶಾಸಕರು ಮಂತ್ರಿಗಳಾಗಿರತಕ್ಕಂತ ಉದಾಹರಣೆಗಳು ನಮ್ಮ ರಾಜ್ಯದಲ್ಲಿ ಹೇರಳವಾಗಿವೆ. ಕನಿಷ್ಟ ಜನಗಳಿಗೆ ಪ್ರಾಥಮಿಕವಾಗಿ ಬೇಕಾಗಿರತಕ್ಕಂತ ಅಗತ್ಯಗಳು ಏನಿವೆ ಅವನ್ನ ಪೂರ್ಣವಾಗಿ ಒದಗಿಸತಕ್ಕಂತ ಕೆಲಸನ ಯಾರೂ ಮಾಡತಕ್ಕಂತದ್ದಕ್ಕೆ ಮನಸು ಮಾಡದೆ ಬರೀ ಆಸ್ತಿ ಮಾಡಿಬುಟು.”

“ನಿಜ ಸಾರ್ ಕೇವಲ ಐದೊರ್ಸ ಮಂತ್ರಿಗಳಾಗಿದ್ದ ಜನಗಳು ಕೋಟ್ಯಾಂತರ ರೂಪಾಯಿಗಳ ಆಸ್ತಿ ಮಾಡಿದ್ದರೆ, ರಾಜಕಾರಣಿಗಳಿಗೆ ದುಡ್ಡು ಹೊಡಿಯಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಒಬ್ಬ ಅಧಿಕಾರಿನ ಲೋಕಾಯುಕ್ತರು ರೈಡ್ ಮಾಡಿದ್ರೆ ಐದು ಕೋಟಿ ಬೆಲೆ ಬಾಳೊ ಮನೆ, ಮೂರುವರೆ ಕೆ.ಜಿ ಚಿನ್ನ, ಸೈಟುಗಳು, ಅಪಾರ್ಟ್‌ಮೆಂಟ್ ಮನೆಲಿ ಎಪ್ಪತೈದು ಲಕ್ಷ ಕ್ಯಾಶು ಇನ್ನೂರು ಪ್ಯಾಂಟು, ನಾನ್ನೂರು ಶರಟು, ನೂರು ಜೊತೆ ಚಪ್ಪಲಿ ಸಿಗತವೆ ಸಾರ್.”

“ರಾಜಕಾರಣಿಗಳ ಮನೆ ರೈಡು ಮಾಡಿದ್ರು ಅಷ್ಟೆ ಆಸ್ತಿ ಸಿಗತಕ್ಕಂತ ವಾತಾವರಣ ಇದೆಯಲ್ರಿ. ಆ ದುಡ್ಡನ್ನೆಲ್ಲಾ ನಾವು ಕರ್ನಾಟಕದ ಅಭಿವೃದ್ಧಿಗೆ ಬಳಸಿದ್ರೆ ನಮ್ಮೂರು ಸಿಂಗಾಪುರ ಆಯ್ತಿತ್ತಲ್ರೀ.”

ಇದನ್ನೂ ಓದಿ: ರಾಮ ಕೃಷ್ಣ ಕಪ್ಪುಗಿದ್ರಲ್ಲವ..

“ಹಂಡ್ರೆಡ್ ಪರಸೆಂಟು ನಿಜ ಸಾರ್. ಒಬ್ಬ ರಾಜಕಾರಣಿಗೆ ನಾಲ್ಕು ಜನ ಗಂಡು ಮಕ್ಕಳಿದ್ರೆ ಅವುರಿಗೆಲ್ಲಾ ಮನೆ ಇರತ್ತೆ, ಕಾರಿರತ್ತೆ, ಬೈಕಿರತವೆ ನಾಲ್ಕು ಜನ ಸೊಸೆಯರತ್ರ ತಲಾ ನಾಲ್ಕು ಕೆ.ಜಿ ಚಿನ್ನದ ಒಡವೆಗಳಿರತವೆ. ಇಂಥ ರಾಜಕಾರಣಿಗಳ ಆಸ್ತಿ ಹರಾಜಾಕಿದ್ರೆ ಸಾಕು ಸಾರ್. ನಾವು ದುಬೈ ಶೇಕ್‌ಗಳ ತರ ಇರಬಹುದು.”

“ಆ ದೇಶದ ಜನಗಳನ್ನ ನೋಡ್ತಾಯಿದ್ರೆ ನಾವು ಯಾವತ್ತು ಆತರ ಆಗ್ತಿವಿ ಅನತಕ್ಕಂತ ಭಾವನೆ ಏನಿದೆ ಆ ಬಗ್ಗೆ ಚಿಂತನೆ ಮಾಡಿದ್ರೆ ನಿಜಕ್ಕೂ ಆಶ್ಚರ್ಯ ಆಗತ್ತೆ ಕಂಡ್ರಿ.”

“ನೀವು ಆ ದೇಶದ ಜನ ನೋಡದಿರ್ಲಿ, ಇಲ್ಲೆ ನಮ್ಮ ಸಿಟಿಗಳ ಹೊರಗೆ ಶೆಡ್ಡು ಗುಡುಸ್ಲಾಕ್ಕಂಡಿರೊ ಅಲೆಮಾರಿಗಳ ನೋಡಿದ್ರೆ. ಈ ರಾಜಕಾರಣಿಗಳು ಯಾವತ್ತು ಉದ್ದಾರಾಗಬಾರದು ಅನ್ಸುತ್ತೆ ಸಾರ್. ನೀವು ಮುಖ್ಯಮಂತ್ರಿಯಾಗಿದ್ದಾಗ ಇಂತವರ ಕಡೆ ನೋಡದು ಬಿಟ್ಟು ಬ್ರಾಹ್ಮಣರ ಅಭಿವೃದ್ಧಿ ನಿಗಮ ಮಾಡಿದ್ರಿ ಗೊತ್ತ ಸಾರ್.”

“ನಾನು ಬ್ರಾಹ್ಮಣರ ಅಭಿವೃದ್ಧಿ ನಿಗಮ ಮಾಡಿದ್ದು ಸರಿ ಕಂಡ್ರಿ. ಆ ಜನ ಸಮಾಜಕ್ಕೆ ಏನಾದ್ರು ಮಾಡ್ತರೆ, ಅದೇ ಈ ಊರ ಹೊರಗೆ ಇರತಕ್ಕಂತ ಜನಗಳಿಗೆ ಏನಾದ್ರು ಸಹಾಯ ಮಾಡಿದ್ರೆ ಕುಡುದು ತಿಂದು ಹಾಳು ಮಾಡ್ತರೆ. ಅವರಿಗೆ ಕೊಟ್ಟಿದ್ದೆ ವೇಸ್ಟು ಅನ್ನಂಗೆ ಮಾಡ್ತರೆ, ಅದ್ಕೆ ನಾನು ನಮ್ಮ ಸಹಾಯ ಏನಿದೆ ಅದು ಸದುಪಯೋಗ ಮಾಡಿಕತಕ್ಕಂತ ಜನಗಳನ್ನ ಪತ್ತೆ ಹಚ್ಚಿ ಆ ಕೆಲಸ ಮಾಡಿದೆ.”

“ನೀವು ಮಾಡಿದ್ದು ಬಿಜೆಪಿ ಕಾರ್ಯಕ್ರಮ ಸಾರ್. ನೋಡಿ ಅವುರು ನಿಮ್ಮನ್ನ ಬಳಸ್ಕಂಡ್ರು. ಮೋದಿನು ಬಳಸ್ಕಂಡು ಎಕನಾಮಿಕಲಿ ವೀಕರ್ ಸೆಕ್ಷನ್‌ಗೆ ಮೀಸಲಾತಿ ಬೇಕು ಅಂತ ಪಡದೇಬುಟ್ರು. ಈಗ ಅವುರನ್ನ ಹಿಡಿಯಕ್ಕೆ ಯಾರ ಕೈಲು ಆಗಲ್ಲ ಗೊತ್ತೆ.”

“ಆದ್ರು ಅವುರೆಷ್ಟು ಜನ ಇದಾರ್ರಿ?”

“ಒಬ್ಬರೆ ಸಾಕು ಸಾರ್, ಬ್ರಿಟಿಷರು ಎಷ್ಟು ಜನ ಇದ್ರು? ಇಂಡಿಯಾನೆ ಆಳಲಿಲ್ಲವ?”

“ಆಳಿದ್ರು ಸರಿ, ಆದ್ರೆ ರಾಜ್ಯವನ್ನ ಆಳತಕ್ಕಂತ ಜನಕ್ಕೆ ಅಧಿಕಾರ ಹೋದ್ರೆ ಹಾಗೆ ಇರದು ಕಷ್ಟ ಕಂಡ್ರಿ. ನನಿಗಂತು ಕರ್ನಾಟಕದಲ್ಲಿ ಇರಕ್ಕೆ ಬೇಜಾರು.”

“ಬೇಜಾರಾದ್ರೆ ಒಂದು ಕೆಲಸ ಮಾಡಬಹುದು ಸಾರ್. ಹ್ಯಂಗಿದ್ರೂ ನಮ್ಮ ಸಿನಿಮಾ ರಂಗ ಹಾಳಾಗ್ತಾಯಿದೆ. ಅದಕ್ಕೆ ಜೀವಕೊಡಿ ಸಾರ್, ಹೊಸ ಸಿನಿಮಾ ತಗಿರಿ, ಸಿನಿಮಾ ಟಾಕೀಸ್ ಕಟ್ಟಿ, ಡಿಸ್ಟ್ರಿಬ್ಯೂಷನ್ ಮಾಡಿ.”

“ಅವುನ್ಯಲ್ಲ ಮಾಡಿ ಆಯ್ತಲ್ರಿ, ಆ ಸಿನಿಮಾ ಲೋಕ ಏನು ಅನತಕ್ಕಂತ ಅನುಭವವನ್ನ ಪಡಕೊಂಡೆ ನಾನು ರಾಜಕಾರಣಕ್ಕೆ ಬಂದಿದ್ದು. ಈಗ ರಾಜಕಾರಣದ ಅನುಭವನೂ ಆಯ್ತು, ಪಂಚರತ್ನ ಕೈ ಹಿಡಿತವೆ ಅಂತ ತಿಳಕಂಡಿದ್ದೇ ತಪ್ಪಾಯ್ತು.”

“ಸಾರ್ ನನಿಗೆ ನಿಮ್ಮ ಬಗ್ಗೆ ಏನೋ ಒಂಥರ ಅಭಿಮಾನ ಇತ್ತು. ಅದ್ಯಲ್ಲ ವಂಟೊಯ್ತು ಸಾರ್.”

“ಯಾಕ್ರಿ?”

“ನಿಮ್ಮ ಪಾರ್ಟಿಗೆ ಐವತ್ತೆಂಟು ಸೀಟು ಬಂದಾಗ ಎಸ್ಸೆಂ ಕೃಷ್ಣ ಆಡಳಿತ ರಾಜ್ಯಪಾಲರ ಆಡಳಿತದಂಗಿತ್ತು, ಜನತಾದಳದಲ್ಲಿ ಪಟೇಲ್ರು, ಪ್ರಕಾಶ್, ಸಿಂಧ್ಯ, ಸಿದ್ದರಾಮಯ್ಯ, ವೈದ್ಯನಾಥ ಪಾಟೀಲ, ರಾಯರೆಡ್ಡಿ ಈ ತರ ಒಂದು ದಂಡೇಯಿದ್ದ ಕಾರಣಕ್ಕೆ ಜನತಾ ಪಾರ್ಟಿಗೆ ಅಷ್ಟು ಸೀಟು ಬಂದು ಈಗ ಅವರ್‍ಯಾರೂ ಇಲ್ಲದ ಕಾಲದಲ್ಲಿ ಪಂಚರತ್ನ ತೋರುಸ್ತ ನೀವೊಬ್ರು ಹೋದ್ರೆ ಯಾರು ಓಟಾಕ್ತರೆ ಸಾರ್? ನಿಜವಾಗ್ಲು ಹೇಳ್ತಿನಿ ನಿಮ್ಮ ಕುಟುಂಬದ ಮರ್‍ಯಾದಿಗೋಸ್ಕರ ಹತ್ತೊಂಬತ್ತು ಬಂದವೆ. ಇಲ್ಲಾ ಅಂದಿದ್ರೆ ಹತ್ತೆಯ. ಈಗ್ಲು ನೀವು ಬಿಜೆಪಿ ಕಡಿಕೋದ್ರೆ ನಿಮ್ಮ ಜೊತೆ ಬರವು ಒಂಬತ್ತು ನವಗ್ರಹಗಳು ಮಾತ್ರ.”

“ಮತ್ತೇನು ಮಾಡದೀಗ?”

“ಗ್ಯಾರಂಟಿ ಸಪೊರ್ಟ್ ಮಾಡಿ, ಮುಂದೆ ನೋಡಿ.”

“ಸತ್ರು ಅಂತ ಕೆಲಸ ಮಾಡಲ್ಲ.”

“ಥೂತ್ತೆರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...