Homeಅಂಕಣಗಳುಸರ್ವೋಚ್ಚ ನ್ಯಾಯಾಲಯ: ಬಹುತೇಕ ಒಂದೇ ಬಗೆಯ ಬಿಕ್ಕಟ್ಟು ಎದುರಿಸುತ್ತಿರುವ ಭಾರತ ಮತ್ತು ಇಸ್ರೇಲ್

ಸರ್ವೋಚ್ಚ ನ್ಯಾಯಾಲಯ: ಬಹುತೇಕ ಒಂದೇ ಬಗೆಯ ಬಿಕ್ಕಟ್ಟು ಎದುರಿಸುತ್ತಿರುವ ಭಾರತ ಮತ್ತು ಇಸ್ರೇಲ್

- Advertisement -
- Advertisement -

ಇಸ್ರೇಲ್ ಈ ವರ್ಷದ ಆರಂಭದಿಂದ ಭಾರೀ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಇಸ್ರೇಲಿನ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನು ನೇಮಿಸುವಲ್ಲಿ, ಸರ್ಕಾರದ ಪಾತ್ರವನ್ನು ಹೆಚ್ಚಿಸಿಕೊಳ್ಳುವ ಹಾಗೂ ಸರ್ಕಾರ ರಚಿಸುವ ಕಾಯ್ದೆ ಕಾನೂನುಗಳ ಮೇಲೆ ಸುಪ್ರೀಂ ಕೋರ್ಟ್‌ನ ಪರಾಮರ್ಶೆಯ ಅಧಿಕಾರವನ್ನು ಮೊಟಕುಗೊಳಿಸುವ ಇಸ್ರೇಲಿ ಸರ್ಕಾರದ ಕಾನೂನು ಅಲ್ಲಿನ ಜನತೆಯನ್ನು ಕೆರಳಿಸಿದೆ. ಉಂಟಾಗಿರುವ ಈ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ಸುಮಾರು 11 ವಾರಗಳಿಂದ ಲಕ್ಷಾಂತರ ಜನ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಸುಪ್ರೀಂ ಕೋರ್ಟಿನ ಅಧಿಕಾರವನ್ನು ಕಡಿತಗೊಳಿಸಿ ನಿರಂಕುಶವಾಗಲು ಪ್ರಯತ್ನಿಸುತ್ತಿರುವ ಸರ್ಕಾರದ ನಡೆಯನ್ನು ಶತಾಯಗತಾಯ ಸೋಲಿಸಲು ವಿವಿಧ ವಲಯದ ಜನ ಒಗ್ಗೂಡಿದ್ದಾರೆ. ವಿಶ್ವದಾದ್ಯಂತ ಪ್ರಜಾಪ್ರಭುತ್ವಗಳು ಸರ್ವಾಧಿಕಾರದತ್ತ ವಾಲುತ್ತಿವೆ ಎಂದು ಹಲವು ಅಧ್ಯಯನಗಳು ಎಚ್ಚರಿಸುತ್ತಿರುವಾಗ ದೇಶವೊಂದರ ನ್ಯಾಯಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಜನರ ಕರ್ತವ್ಯವಾದೀತು!

ಈ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದ, ಇತಿಹಾಸಕಾರ ಮತ್ತು ’ಸೇಪಿಯನ್ಸ್’ ಪುಸ್ತಕದ ಕರ್ತೃ ಯುವಲ್ ನೋವಾ ಹರಾರಿ ಅವರು ಜನರನ್ನು ಎಚ್ಚರಿಸುವ ಭಾಷಣ ಮಾಡಿದ್ದರು. “ಕಾನೂನುಬದ್ಧ ರೀತಿಯಿಂದಲೇ ಅಧಿಕಾರಕ್ಕೆ ಬಂದ ಜನರಿಂದಲೇ ಸ್ಥಾಪಿತವಾದ ಸರ್ವಾಧಿಕಾರಗಳಿಂದ ಇತಿಹಾಸವು ತುಂಬಿಹೋಗಿದೆ. ಅತ್ಯಂತ ಹಳೆಯ ತಂತ್ರವೆಂದರೆ: ಮೊದಲಿಗೆ ಅಧಿಕಾರ ಪಡೆಯಲು ಕಾನೂನನ್ನು ಬಳಸಿಕೊಳ್ಳುವುದು ಮತ್ತು ನಂತರ ಕಾನೂನನ್ನು ವಿರೂಪಗೊಳಿಸಲು ಆ ಅಧಿಕಾರವನ್ನು ಬಳಸಿಕೊಳ್ಳುವುದು. ಇವನ್ನು ಜೊತೆಯಾಗಿ ಪರಿಶೀಲಿಸಿದಾಗ, ಈ (ಇಸ್ರೇಲಿ) ಸರಕಾರವು ಪ್ರಸ್ತುತ ತರುತ್ತಿರುವ ಕಾನೂನಿಗೆ ಒಂದೇ ಸರಳ ಅರ್ಥವಿದೆ ಮತ್ತು ಅದನ್ನು ಅರ್ಥಮಾಡಿಕೊಳ್ಳಲು ನೀವು ಕಾನೂನಿನಲ್ಲಿ ಪಿಎಚ್.ಡಿ ಪಡೆದಿರಬೇಕಾದ ಅಗತ್ಯವಿಲ್ಲ. ಅದೆಂದರೆ: ಈ

ಬೆಂಜಮಿನ್ ನೆತನ್ಯಾಹು

ಕಾನೂನುಗಳು ಅಂಗೀಕಾರವಾದರೆ, ನಮ್ಮ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ನಾಶ ಮಾಡಲು ಸರಕಾರಕ್ಕೆ ಸಂಪೂರ್ಣ ಅಧಿಕಾರ ಇರುತ್ತದೆ” ಎಂದಿದ್ದ ಅವರು, “ಪ್ರಜಾಪ್ರಭುತ್ವವು ಒಂದು ಒಪ್ಪಂದ. ಅದರ ಪ್ರಕಾರ ಸರಕಾರವು ಜನರ ಮೂಲಭೂತ ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಎಂಬ ಷರತ್ತಿನ ಮೇಲೆ ನಾಗರಿಕರು ಸರಕಾರದ ನಿರ್ಧಾರಗಳನ್ನು ಗೌರವಿಸಬೇಕು. ಒಂದು ಕಡೆಯವರು ಈ ಒಪ್ಪಂದವನ್ನು ಮುರಿದಾಗ ಇನ್ನೊಂದು ಕಡೆಯವರು ತಮ್ಮ ಪಾತ್ರವನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿಲ್ಲ. ಒಂದು ಸರಕಾರವು ಸರ್ವಾಧಿಕಾರವನ್ನು ಸ್ಥಾಪಿಸಲು ಹೊರಟಾಗ ಆದನ್ನು ಪ್ರತಿರೋಧಿಸಲು ನಾಗರಿಕರಿಗೆ ಹಕ್ಕಿದೆ” ಎಂದಿದ್ದರು. ಈ ಮೂಲಕ ದೇಶದ ಪ್ರತಿ ನಾಗರಿಕನೂ ಈ ಕಾನೂನು ತಿದ್ದುಪಡಿಗಳ ವಿರುದ್ಧ ಹೋರಾಡಬೇಕೆಂಬ ಕರೆಕೊಟ್ಟು “ನಾವಿಂದು ಧ್ವನಿ ಎತ್ತದಿದ್ದರೆ, ಜೀವನಪೂರ್ತಿ ಬಾಯಿಮುಚ್ಚಿ ಬಿದ್ದಿರಬೇಕು” ಎಂದಿದ್ದರು.

ಇಸ್ರೇಲಿನದ್ದು ಭಾರತದಂತೆಯೇ ತೀವ್ರ ಬಲಪಂಥೀಯ ಸರ್ಕಾರ. ಕಳೆದ ಚುನಾವಣೆಗಳಲ್ಲಿ ಯಾವುದೇ ಪಕ್ಷಕ್ಕೆ ನಿಚ್ಚಳ ಬಹುಮತ ದೊರಕದ ಕಾರಣ ಬೆಂಜಮಿನ್ ನೆತನ್ಯಾಹು ನೇತೃತ್ವದಲ್ಲಿ ಹಲವು ಪಕ್ಷಗಳನ್ನು (ಇದರಲ್ಲಿ ಉಗ್ರ ಬಲಪಂಥೀಯ ಪಕ್ಷಗಳೂ ಒಳಗೊಂಡಿವೆ) ಒಳಗೊಂಡ ಸರ್ಕಾರವನ್ನು 2022ರ ಅಂತ್ಯದಲ್ಲಿ ರಚಿಸಲಾಗಿತ್ತು. ಇಂತಹ ಮೈತ್ರಿಕೂಟದಲ್ಲಿ ಇತಮಾರ್ ಬೆನ್-ಗ್ವಿರ್ ಎಂಬ ವ್ಯಕ್ತಿಯನ್ನು ರಾಷ್ಟ್ರೀಯ ಭದ್ರತಾ ಸಚಿವರನ್ನಾಗಿ ನೇಮಿಸಲಾಗಿದೆ. ಪ್ಯಾಲೆಸ್ತೇನಿಯನ್ನರ ವಿರುದ್ಧ ಬಹಿರಂಗವಾಗಿ ದ್ವೇಷ ಕಾರುವ ಈ ವ್ಯಕ್ತಿ ಅಲ್ಲಿನ ಲಿಬರಲ್ ಮತ್ತು ಸೆಂಟ್ರಿಸ್ಟ್ ಮುಖಂಡರನ್ನೂ ಅವರ ಧೋರಣೆಗೆ ಲೇವಡಿ ಮಾಡುವವರು. ಉಗ್ರ ಬಲಪಂಥೀಯತೆಯ ಪ್ರತಿಪಾದಕರಾದ ಇವರು ’ಅರಬ್ಬರು ನಾಯಿಗಳಂತೆ, ಅವರು ಸುಮ್ಮನೆ ಬಾಯಿಮುಚ್ಚಿರಬೇಕು ಇಲ್ಲ ಹೊರನಡೆಯಬೇಕು’ ಎಂದು ಪ್ರತಿಪಾದಿಸುತ್ತಿದ್ದ ಇಸ್ರೇಲಿ ಧರ್ಮಗುರು ಮೀರ್ ಕಹಾನೆ ಅನ್ನುವರರ ಅನುಯಾಯಿ. ’ಜ್ಯೂಯಿಶ್ ಪ್ರಭುತ್ವ ಪ್ರಜಾಪ್ರಭುತ್ವವಾಗಿರುವುದೇ ಹುಚ್ಚಾಟ’ ಎಂದು ಪ್ರತಿಪಾದಿಸುತ್ತಿದ್ದ ವ್ಯಕ್ತಿಯೀತ. ಇಂತಹವರ ಬೆಂಬಲಿಗರು ಸರ್ಕಾರದಲ್ಲಿ ನುಸುಳಿದಾಗ ಏನಾಗಬಹುದು ಎಂದು ಊಹಿಸುವುದು ಕಷ್ಟವೇನಲ್ಲ. ಹಿಂದಿನ ಅವಧಿಯಲ್ಲಿ ಪ್ರಧಾನಿಯಾಗಿದ್ದಾಗ, ನೆತನ್ಯಾಹು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿಯೇ ಬಲಪಂಥೀಯ ಆರ್ಥಿಕತೆಯನ್ನು ಪೋಷಿಸಿ ಆಡಳಿತ ನಡೆಸುತ್ತಿದ್ದರಾದರೂ, ಪ್ರಜಾಪ್ರಭುತ್ವದ ಸಂಸ್ಥೆಗಳ ಸ್ವಾತಂತ್ರ್ಯವನ್ನು ಹರಣ ಮಾಡುವ ನಿಟ್ಟಿನಲ್ಲಿ ಮುಂದುವರಿದಿರಲಿಲ್ಲ ಎನ್ನಲಾಗುತ್ತದೆ. ಈಗ ಆ ಕೆಲಸಕ್ಕೂ ಅಡಿಯಿಟ್ಟಿರುವುದು ಜಗತ್ತಿನಲ್ಲಿ ಪ್ರಜಾಪ್ರಭುತ್ವಗಳು ಸರ್ವಾಧಿಕಾರಕ್ಕೆ ತಿರುಗುತ್ತಿರುವುದರ ಪ್ರತೀಕವಾಗಿದೆ.

ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆಯಾಗಿರುವ ಪಕ್ಷಾಂತರ ಹಾವಳಿ

ಇಂತಹುದ್ದೇ ವಿದ್ಯಮಾನಗಳು ಭಾರತದಲ್ಲಿಯೂ ಬೇರೆಬೇರೆ ರೀತಿಯಲ್ಲಿ ಕಾಣಿಸುತ್ತಿವೆ. ಮೊದಲು ಸುಪ್ರೀಂ ಕೋರ್ಟ್ ಕೊಲಿಜಿಯಂ ವಿರುದ್ಧ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಆಕ್ಷೇಪವೆತ್ತಿದ್ದರು. ಸರ್ಕಾರ ಕೆಲವು ನ್ಯಾಯಾಧೀಶರನ್ನು ನೇಮಿಸುವಲ್ಲಿ ತೋರುತ್ತಿರುವ ದೃಷ್ಟಿಕೋನವನ್ನು ಸರ್ವೋಚ್ಚ ನ್ಯಾಯಾಲಯ ಆಕ್ಷೇಪಿಸಿದ್ದರಿಂದ ಕೊಲಿಜಿಯಂ ವ್ಯವಸ್ಥೆಯನ್ನೇ ಪ್ರಶ್ನಿಸುವಂತಹ ಮಾತುಗಳನ್ನು ರಿಜಿಜು ಅವರು ಆಡಿದ್ದರು. ಈಗಿನ ಸಂದರ್ಭದಲ್ಲಿ, ಕೊಲಿಜಿಯಂ ವ್ಯವಸ್ಥೆ ಪರಿಪೂರ್ಣವಲ್ಲದಿದ್ದರೂ ಇದ್ದುದರಲ್ಲಿ ಸುಧಾರಿತ ವ್ಯವಸ್ಥೆ. ಅದರಲ್ಲಿ ಸರ್ಕಾರದ ಪ್ರತಿನಿಧಿಗಳು ತೂರಿಕೊಂಡರೆ ಆಗುವ ಅಪಾಯವನ್ನು ಯಾರಾದರೂ ಮನಗಾಣಬಹುದು.

ಕಿರಣ್ ರಿಜಿಜು

ಹಾಗೆಯೇ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತರನ್ನು (ಇಸಿ) ನೇಮಿಸುವ ವಿಷಯದಲ್ಲಿ ಕೇಂದ್ರ ಸರ್ಕಾರ ಹೊಸದೊಂದು ಕಾನೂನು ರಚಿಸುವವರೆಗೂ, ಪ್ರಧಾನ ಮಂತ್ರಿ, ಸಂಸತ್ತಿನ ವಿರೋಧ ಪಕ್ಷದ ನಾಯಕ ಅಥವಾ ಲೋಕಸಭೆಯಲ್ಲಿ ಅತಿ ಹೆಚ್ಚು ಸ್ಥಾನಗಳುಳ್ಳ ವಿರೋಧ ಪಕ್ಷವೊಂದರ ಮುಖಂಡ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿ ಸಿಇಸಿ ಮತ್ತು ಇಸಿರನ್ನು ನೇಮಿಸಬೇಕು ಎಂದು ಇತ್ತೀಚಿಗೆ ಸುಪ್ರೀಂ ಕೋರ್ಟ್‌ನ ಪೀಠವೊಂದು ಒಮ್ಮತದ ತೀರ್ಮಾನ ನೀಡಿತ್ತು. ಇದರ ಬಗ್ಗೆ ಇತ್ತೀಚಿಗೆ ಒಂದು ಸಭೆಯಲ್ಲಿ ಆಕ್ಷೇಪವೆತ್ತಿದ್ದ ರಿಜಿಜು ಇದನ್ನು ಲಕ್ಷ್ಮಣರೇಖೆಯೆಂದು ಕರೆದು, ಕಾರ್ಯಾಂಗದ ವಿಷಯಕ್ಕೆ ನ್ಯಾಯಾಲಯ ಮೂಗು ತೂರಿಸುವುದಾದರೆ ನ್ಯಾಯಾಲಯದ ಕೆಲಸಗಳನ್ನು ಮಾಡುವವರು ಯಾರು ಎಂದಿದ್ದರು.

ಇವೆಲ್ಲವೂ ನ್ಯಾಯಾಲಯದ ಬಗೆಗಿನ ಸಾಮಾನ್ಯ ವಿಮರ್ಶೆಗಳಲ್ಲ. ಬದಲಿಗೆ, ದೇಶ ಸರ್ವಾಧಿಕಾರದತ್ತ ವಾಲುತ್ತಿದೆ ಎಂದು ಪ್ರತಿಪಕ್ಷಗಳಿಂದ ಹಿಡಿದು ಜನಸಾಮಾನ್ಯರವರೆಗೂ ದೂರುತ್ತಿರುವ ಹಿನ್ನೆಲೆಯಲ್ಲಿ ಇಂತಹ ಟೀಕೆಗಳು ಬೇರೆಯೇ ಅರ್ಥವನ್ನು ಪಡೆದುಕೊಳ್ಳುತ್ತವೆ. ಸರ್ವೋಚ್ಚ ನ್ಯಾಯಾಲಯ ಇನ್ನೂ ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ಸಿಕ್ಕಿರದೆ ಹೋಗಿರುವುದರಿಂದ, ಅದನ್ನು ಸಾಧಿಸಿಕೊಳ್ಳಲು ಇವೆಲ್ಲವೂ ನಾಂದಿಯಂತೆ ಕಾಣದೆ ಇರದು. ಮುಂದೊಂದು ದಿನ ನ್ಯಾಯಾಂಗದ ವಿಷಯದಲ್ಲಿ ಈಗ ಇಸ್ರೇಲಿ ಸರ್ಕಾರ ಬಂದಿರುವ ಹಂತಕ್ಕೆ ಭಾರತ ಸರ್ಕಾರವೂ ಮುಂದುವರಿಯಬಾರದೆಂದಿದ್ದರೆ ನಾಗರಿಕ ಸಮಾಜ ಬಹಳ ಎಚ್ಚರಿಕೆಯಿಂದ ನಮ್ಮ ಪ್ರಜಾಪ್ರಭುತ್ವವನ್ನು ಮತ್ತದರ ಸಂಸ್ಥೆಗಳನ್ನು ಕಾಯ್ದುಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...