Homeಮುಖಪುಟಬೈಕ್ ಬಿಜೆಪಿ ನಾಯಕನ ಮಗನದ್ದು; ಹೆಲ್ಮೆಟ್, ಮಾಸ್ಕ್ ಎಲ್ಲಿ ಮೈ ಲಾರ್ಡ್...!

ಬೈಕ್ ಬಿಜೆಪಿ ನಾಯಕನ ಮಗನದ್ದು; ಹೆಲ್ಮೆಟ್, ಮಾಸ್ಕ್ ಎಲ್ಲಿ ಮೈ ಲಾರ್ಡ್…!

ಮಾಸ್ಕ್, ಹೆಲ್ಮೆಟ್ ಧರಿಸದೆ ಬೈಕ್ ಏರಿದ ಮುಖ್ಯ ನ್ಯಾಯಮೂರ್ತಿಯನ್ನು ತರಾಟೆಗೆ ಪಡೆದ ಟ್ವಿಟ್ಟರಿಗರು.

- Advertisement -
- Advertisement -

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರು ಹಾರ್ಲೆ ಡೇವಿಡ್ಸನ್ ಸೂಪರ್‌ ಬೈಕ್‌ ಏರಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಪ್ರಸ್ತುತ ಬೈಕ್ ಬಿಜೆಪಿ ರಾಜಕಾರಣಿಯ ಮಗನದ್ದು ಎಂದು ಟ್ವಿಟ್ಟರಿಗರು ಹೇಳಿದ್ದು, ಮೈ ಲಾರ್ಡ್ ಹೆಲ್ಮೆಟ್ ಎಲ್ಲಿ ಎಂದು ಕೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಹಿಂದಿನಿಂದಲೂ ಬೈಕುಗಳ ಮೇಲೆ ವಿಶೇಷ ಅಭಿರುಚಿ ಹೊಂದಿದ್ದರು ಎನ್ನಲಾಗಿದ್ದು, ಭಾನುವಾರ ಟ್ವಿಟ್ಟರ್ನಲ್ಲಿ ವೈರಲ್ ಆದ ಫೋಟೋಗಳಲ್ಲಿ, ಹಾರ್ಲೆ ಡೇವಿಡ್ಸನ್ ಕಂಪೆನಿಯ ಲಿಮಿಟೆಡ್ ಎಡಿಷನ್ ಸಿವಿಒ 2020 ಜೊತೆ ಕಾಣಿಸಿಕೊಂಡಿದ್ದಾರೆ.

ಈ ಪೋಟೊವನ್ನು ಅವರ ತವರೂರಾದ ನಾಗ್ಪುರದಲ್ಲಿ ಈ ಫೋಟೋ ತೆಗೆಯಲಾಗಿದೆ. ಫೋಟೋಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆಗಳ ಸುರಿಮಳೆಯಾಗಿದೆ. ಕೆಲವರು ಇದನ್ನು ನ್ಯಾಯಮೂರ್ತಿಗಳ ಜೀವನ ಪ್ರೀತಿಯೆಂದು ಮೆಚ್ಚಿದ್ದರೆ ಇನ್ನು ಕೆಲವರು ತೀವ್ರವಾಗಿ ತರಾಟೆಗೆ ಪಡೆದುಕೊಂಡಿದ್ದಾರೆ.

ಹಲವಾರು ಜನ ನ್ಯಾಯಮೂರ್ತಿಯೂ ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸಿಲ್ಲ ಎಂದು ಆಕ್ಷೇಪಿಸಿ, ”ಮಾಸ್ಕ್ ಹಾಗೂ ಹೆಲ್ಮಟ್ ಎಲ್ಲಿ ಮೈ ಲಾರ್ಡ್” ಎಂದು ಕೇಳಿದ್ದಾರೆ.

ಪ್ರಸ್ತುತ ಬೈಕು ನಾಗಪುರ ಬಿಜೆಪಿ ನಾಯಕ ಸೊನ್ಬಾ ಮುಸಳೆ ಅವರ ಪುತ್ರ ರೋಹಿತ್‌ ಮುಸಳೆ ಎಂಬುವವರಿಗೆ ಸೇರಿದ್ದು ಎಂದು ಹೇಳಿ ಅದರ ವಿವರಗಳನ್ನ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೊನ್ಬಾ ಮುಸಳೆ 2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು.

ಆದರೆ ಮುಖ್ಯ ನ್ಯಾಯಮೂರ್ತಿಯ ಆಪ್ತ ಮೂಲಗಳ ಪ್ರಕಾರ ಬೈಕ್‌ನ್ನು ವ್ಯಾಪಾರಿಯು ಡೆಮೊಗಾಗಿ ತಂದಿದ್ದು, ನ್ಯಾಯಮೂರ್ತಿ ಬಾಬ್ಡೆ ಒಂದು ಫೀಲ್‌ಗಾಗಿ ಅದರ ಮೇಲೆ ಕುಳಿತುಕೊಂಡಿದ್ದಾರೆ. ಅಲ್ಲದೆ ಬೈಕ್‌ನಲ್ಲಿ ಕುಳಿಕೊಳ್ಳುವಾಗ ಮಾಸ್ಕ್ ಅನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ವಿವಾದಿತ ಬಾಬರಿ ಮಸೀದಿ ತೀರ್ಪು ನೀಡಿದ ಐವರು‌ ನ್ಯಾಯಮೂರ್ತಿಗಳಲ್ಲಿ, ನ್ಯಾಯಮೂರ್ತಿ ಬೊಬ್ಡೆ ಕೂಡ ಒಬ್ಬರು.


ಓದಿ: ಮಗು ಸಾಯುತ್ತಿದ್ದರೂ ವೈದ್ಯರು ಮುಟ್ಟಿಲ್ಲವೆಂದು ಆರೋಪ; ಹೃದಯ ವಿದ್ರಾವಕಾರಿ ಘಟನೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...