Homeಚಳವಳಿಕೀಳು ನನ್ನ 'ಜಾತಿ' ಅಲ್ಲ, ಕೀಳು ನಿನ್ನ ಬುದ್ಧಿಮಟ್ಟ...!

ಕೀಳು ನನ್ನ ‘ಜಾತಿ’ ಅಲ್ಲ, ಕೀಳು ನಿನ್ನ ಬುದ್ಧಿಮಟ್ಟ…!

'ಜಾತಿ' ಕುರಿತು ಕನ್ನಡದ ಮೊದಲ ಹಿಪ್‌‌ಹಾಪ್ ರ್‍ಯಾಪ್ ಸಾಂಗ್ ಮಾಡಿರುವ ಹರೀಶ್ ಅವರು ಈಗ ಕೊರೊನಾ ಕಾಲದಲ್ಲಿ ಬಡಜನರು ಅನುಭವಿಸಿದ ಸಂಕಷ್ಟ ಹಾಗೂ ಸರ್ಕಾರದ ಕರಾಳ ನೀತಿಯ ಬಗ್ಗೆ 'ಮಾಹಾಮಾರಿ ಕಥೆ' ಎನ್ನುವ ಹಿಪ್‌‌ಹಾಪ್ ಹಾಡಿನಲ್ಲಿ ಅದ್ಭುತವಾಗಿ ಬಿಚ್ಚಿಟ್ಟಿದ್ದಾರೆ.

- Advertisement -
- Advertisement -

ನೀವು ಫೇಸ್ ಬುಕ್,ಯೂಟ್ಯೂಬ್ ಬಳಕೆದಾರರಾಗಿದ್ದರೆ ಹರೀಶ್ ಕಾಂಬಳೆ ಎನ್ನುವ ಹೆಸರಿನ ಅಕೌಂಟ್ ಇದೆ. ಹರೀಶ್ ಅವರು ವರ್ಷದ ಹಿಂದೆ ಯುಟ್ಯೂಬ್‌ಗೆ ಸೇರಿಸಿದ ಕೇವಲ ಮೂರು ನಿಮಿಷದ ಒಂದು ವಿಡಿಯೋ ತುಣುಕು ಹಾಡು ಈಗ ಎಲ್ಲೆಡೆ  ಸಕ್ಕತ್ ಸೌಂಡ್ ಮಾಡ್ತಿದೆ. ಸಾಹಿತ್ಯ ತನ್ನದೇ, ಆದರೆ ಇಂದಿನ ಯುವ ಜನತೆಯನ್ನು ಆಕರ್ಷಿಸಲು ಹೊಸ ಮ್ಯೂಸಿಕ್ ಆಯ್ದು ವಿಶಿಷ್ಟವಾಗಿ ಪ್ರಯತ್ನಿಸಿದ್ದಾರೆ.

“ನಿ ಬಿಟ್ಟು ಕೊಡು ಜಾತಿ
ನಾನು ಬಿಡುವೆ ಮೀಸಲಾತಿ
ಹೇಳು ಏಕೆ ಸುಮ್ಮನಾದೆ
ನಿನಗೆ ಇಲ್ವಾ ಮಂಜೂರಾತಿ
ರಣನೀತಿ ಪ್ರಖ್ಯಾತಿ

ಕೀಳು ನನ್ನ ಜಾತಿ ಅಲ್ಲ
ಕೀಳು ನಿನ್ನ ಬುದ್ಧಿಮಟ್ಟ
ಜಾತಿ ನಿನಗೆ ಮುಖ್ಯ”

ಇದನ್ನೂ ಓದಿ: PC: ಬ್ರಾಹ್ಮಣ್ಯದ ವಿರೋಧ ಮತ್ತು ಜಾತಿ ವಾಸ್ತವದ ಪ್ರಶ್ನೆಗೆ ಒಂದು ಉತ್ತರ

‘ಜಾತಿ’ ಎನ್ನುವ ಶೀರ್ಷಿಕೆಯಲ್ಲಿ ಹರೀಶ್ ಅವರು ರಚಿಸಿದ ಹಾಡಿನ ಈ ಮೇಲಿನ ಸಾಲುಗಳು ಸಮಾಜದಲ್ಲಿರುವ ಅನ್ಯಾಯ, ಅತ್ಯಾಚಾರ, ದೌರ್ಜನ್ಯ, ಜಾತಿಯ ಭೀಕರತೆ ಬಿಚ್ಚಿಡುತ್ತವೆ. ಹರೀಶ್ ಅವರು ರಚಿಸಿ ಹಾಡಿರುವ ಹಾಡು ಕನ್ನಡ ಸಂಗೀತ ಕ್ಷೇತ್ರದಲ್ಲಿಯೇ ಪ್ರಪ್ರಥಮ ‘ಜಾತಿ’ Hip-hop Rap ಹಾಡು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಹರೀಶ್ ಅವರ ವಿನೂತನ ದೃಷ್ಟಿಕೋನದ ಫಲವಾಗಿ ಇಂದು ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕಲ್ಯಾಣ ಕರ್ನಾಟಕದ ಹೆಮ್ಮೆಯ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹತ್ಯಾಳ ಎನ್ನುವ ಪುಟ್ಟ ಗ್ರಾಮದವರಾದ ಹರೀಶ್ ಕಾಂಬಳೆ ಅವರು ಮೂಲತಃ ಕೃಷಿ ಕುಟುಂಬದವರು. ಬಿ.ಎಸ್ಸಿ. ಬಿ.ಇಡ್. ಪದವಿಧರರಾದ ಹರೀಶ್ ಅವರು ಸ್ವಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದಾರೆ. ‘ನನಗೆ ಕಾಲೇಜು ದಿನಗಳಿಂದಲೂ ಕವಿತೆ ಬರೆಯುವುದು, ಸಂಗೀತದ ಮೇಲೆ ಹೆಚ್ಚಿನ ಹವ್ಯಾಸ ಇದೆ. ಹಾಗೇ ಬುದ್ಧ ಬಸವ ಅಂಬೇಡ್ಕರ್ ಸೇರಿದಂತೆ ಸಮಾಜದ ಉನ್ನತಿಗಾಗಿ ಶ್ರಮಿಸಿದ ಮಹಾತ್ಮರ ಪುಸ್ತಕಗಳನ್ನು ಓದುವ ಆಸಕ್ತಿ ಇದೆ’ ಎನ್ನುತ್ತಾರೆ ಹರೀಶ್.

ಹರೀಶ್ ಅವರು ಪ್ರೀತಿ – ಪ್ರೇಮ, ನಾಡು -ನುಡಿಯ ಬಗ್ಗೆ ಕವಿತೆಗಳು ಬರೆಯಲು ಹಾಡುಗಾರಿಕೆ ಮಾಡಲು ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಸಮಾಜವನ್ನು ಸೂಕ್ಷ್ಮವಾಗಿ ಗೃಹಿಸಿ ‘ಕಂಡದ್ದು ಕಂಡಹಾಗೇ’ ಹೇಳುವ ಧೈರ್ಯ ಬೆಳೆಸಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಅನುಭವ ಜೊತೆಗೆ ಸಮಕಾಲೀನ ಸಮಾಜದ ಅವಸ್ಥೆಯ ವಿರುದ್ಧ ‘ಬಂಡಾಯ ಸಾಹಿತ್ಯ’ ರಚಿಸುವ ಮೂಲಕ ತಮ್ಮದೇ ಶೈಲಿಯ ವಿಭಿನ್ನವಾದ ಪದ ಜೋಡಣೆ, ಹಾಡುಗಾರಿಕೆಯ ಸಾಹಸ ಮಾಡುತ್ತಿದ್ದಾರೆ.

PC: Harish Kamble/Facebook

ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಕಾಯಕ ಭೂಮಿಯ ನೆಲದವರಾದ ಹರೀಶ್ ಅವರಿಗೆ ಶರಣರ ‘ವಚನ ಕ್ರಾಂತಿ’ಯ ಬಗ್ಗೆ ಬಹಳ ಹೆಮ್ಮೆ ಇದೆ. ‘ಅಂದು ಶೋಷಣೆಗೆ ಒಳಪಟ್ಟ ಅನೇಕ ಶ್ರಮಿಕ ವರ್ಗದವರು ಮುಂದೆ ವಚನಕಾರರಾಗಿ ಅಸಮಾನತೆ, ಶೋಷಣೆ ಸಮಾಜದ ವಿರುದ್ಧ ದನಿಯಾಗಿ ಸಮ ಸಮಾಜ ಸ್ಥಾಪನೆಗೆ ಮುಂದಾಗಿದರು. ಅಂತಹ ಮಹಾನ್ ಶರಣರ ವಚನ ಚಳವಳಿಯ ಆಶಯ ಮತ್ತು ಸಿದ್ಧಾಂತವನ್ನು ಮತ್ತೆ ಮುನ್ನೆಲೆಗೆ ತರಬಯಸುವ ತುಡಿತ ನನ್ನದಾಗಿದೆ, ಹಾಗಾಗಿಯೇ ಈ ಒಂದು ಚಿಕ್ಕ ಪ್ರಯತ್ನಕ್ಕೆ ಕೈ ಹಾಕಿರುವೆ’ ಎಂದು ಹರೀಶ್ ತಮ್ಮ ಸಾಮಾಜಿಕ ಬದ್ಧತೆಯ ನುಡಿಗಳು ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಜಾತಿ ಮತ್ತು ಮೀಸಲಾತಿ ಬಗ್ಗೆ ನಟಿ ಕಂಗನಾ ರಣಾವತ್‌ಗೊಂದು ಪತ್ರ

ಹರೀಶ್ ಅವರು ‘ಜಾತಿ’ ಎನ್ನುವ ಹಿಪ್ ಹಾಪ್ ರ್‍ಯಾಪ್‌ ಹಾಡು ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದರು. ಆದರೆ ಹೆಚ್ಚು ಪ್ರಚಾರ ದೊರಕಲಿಲ್ಲ. ಆದರೆ ಈಗ ಯುಟ್ಯೂಬ್ ನಲ್ಲಿ ಹೆಚ್ಚು ಜನರು ಸ್ವೀಕರಿಸುತ್ತಿದ್ದಾರೆ. ಈಗ ಎಲ್ಲೆಡೆ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಇದನ್ನು ವಿರೋಧಿಸಿ ಬೆದರಿಕೆ ಕರೆಗಳು ಕೂಡಾ ಮಾಡತೊಡಗಿದ್ದಾರೆ. ಆದರೆ ಹರೀಶ್ ಅದಕ್ಕೆಲ್ಲ ತಲೆಕೆಡಿಸಿಕೊಂಡವರಲ್ಲ, “ಅವರಿಗೆ ಮೊದಲು ‘ನೀ ಬಿಡು ನಿನ್ನ ಜಾತಿ’ ಆಮೇಲೆ ನನ್ನ ಬಗ್ಗೆ ಮಾತನಾಡಿ ಎಂದು ಪ್ರೀತಿಯಿಂದಲೇ ಉತ್ತರಿಸಿ ಸುಮ್ಮನಾದೆ” ಎಂದು ಹೇಳುತ್ತಾರೆ.

ಸಮಾಜದಲ್ಲಿ ಹೆಚ್ಚು ಹೆಚ್ಚು ಪ್ರಜ್ಞಾವಂತಿಕೆ ಬೆಳೆಯಬೇಕು, ಸಮಾನತೆ ಜಾರಿಯಾಗಬೇಕಾದರೆ ನಮಗೆ ಭಾರತದ ಸಂವಿಧಾನ ಮೂಲ ಅಸ್ತ್ರವಾಗಿದೆ. ಪ್ರಸ್ತುತ ಭಾರತದಲ್ಲಿ ಸಂವಿಧಾನದ ಒಂದೊಂದು ಹಕ್ಕುಗಳು ದಿನದಿಂದ ದಿನಕ್ಕೆ ರೆಕ್ಕೆ ಮುರಿದುಕೊಳ್ಳುತ್ತಿವೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆ ಎನ್ನಬಹುದು. ಈ ಕುರಿತು ಇಂದಿನ ಯುವ ಜನತೆ ಎಚ್ಚೆತ್ತುಕೊಳ್ಳುವುದು ತೀರ ಅಗತ್ಯವಿದೆ. ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದು
ಜಾತಿ ಧರ್ಮಗಳೇ ಮೇಲುಗೈ ಸಾಧಿಸುತ್ತಿವೆ. ಆದ್ದರಿಂದ ಎಲ್ಲದಕ್ಕೂ ಪರಿಹಾರ ಇರುವುದು ಸಂವಿಧಾನ ಅಂಶಗಳಲ್ಲ ಎಂದು ಹರೀಶ್ ತಮ್ಮ ಮನದಾಳದ ಮಾತುಗಳು ಹಂಚಿಕೊಳ್ಳುತ್ತಾರೆ.

‘ಜಾತಿ’ ಕುರಿತು ಕನ್ನಡದ ಮೊದಲ ಹಿಪ್‌‌ಹಾಪ್ ರ್‍ಯಾಪ್ ಸಾಂಗ್ ಮಾಡಿರುವ ಹರೀಶ್ ಅವರು ಈಗ ಕೊರೊನಾ ಕಾಲದಲ್ಲಿ ಬಡಜನರು ಅನುಭವಿಸಿದ ಸಂಕಷ್ಟ ಹಾಗೂ ಸರ್ಕಾರದ ಕರಾಳ ನೀತಿಯ ಬಗ್ಗೆ ‘ಮಾಹಾಮಾರಿ ಕಥೆ‘ ಎನ್ನುವ ಹಿಪ್‌‌ಹಾಪ್ ಹಾಡಿನಲ್ಲಿ ಅದ್ಭುತವಾಗಿ ಬಿಚ್ಚಿಟ್ಟಿದ್ದಾರೆ. ಇನ್ನು ‘ರಾಜನೀತಿ‘ ಎನ್ನುವ ಮತ್ತೊಂದು ಹಿಪ್‌‌ಹಾಪ್ ಹಾಡು ಕೆಲವು ದಿನಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

ಕೇವಲ ದಲಿತರ ಜೊತೆ ಸಹಪಂಕ್ತಿ ಭೋಜನ ಏರ್ಪಡಿಸಿ ಚಿತ್ರಾನ್ನ ಸೇವಿಸಿದರೆ ಮಾತ್ರಕ್ಕೆ ಜಾತಿ ತಾರತಮ್ಯ, ಅಸ್ಪೃಶ್ಯತೆ ಹೋಗಲಾಡಿಸಲು ಖಂಡಿತ ಸಾಧ್ಯವಿಲ್ಲ. ಅಸ್ಪೃಶ್ಯರ ಜೊತೆಗೆ ಹೆಚ್ಚೆಚ್ಚು ಒಳಗೊಳ್ಳುವಿಕೆಗೆ ಎಲ್ಲರೂ ಮುಂದಾಗಬೇಕು, ಅಸಮಾನತೆ ಬಿಟ್ಟು ಸಮಾನತೆ ಸಮಾಜ ಕಟ್ಟಲು ಒಳಮನಸ್ಸು ಪರಿವರ್ತನೆ ಮಾಡಿಕೊಳ್ಳಬೇಕು, ಅವಾಗಲೇ ಜಾತಿ ತಾರತಮ್ಯ ತೊಲಗಬಹುದು, ‘ಪರಿವರ್ತನೆ ಜಗದ ನಿಯಮ’ ಎನ್ನುವ ಭರವಸೆದೊಂದಿಗೆ ನನ್ನ ಹೋರಾಟ ಮುಂದುವರಿಯುತ್ತದೆ ಎನ್ನುತ್ತಾರೆ ಹರೀಶ್.

ಇದನ್ನೂ ಓದಿ: ಭಾರತದ ಜಾತಿ ವೃಕ್ಷದ ವಿಷಕಾರಿ ಹಣ್ಣು ಖೈರ್ಲಾಂಜಿಯನ್ನು ಮರೆಯಬಾರದು

ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟದ ಕಥಾ ಆಧಾರಿತ ‘ಮಹಾನಾಯಕ’ ಧಾರವಾಹಿ ನಾವು ವಿರೋಧಿಸುವ ಬದಲು ಪ್ರೀತಿ ಹಾಗೂ ಹೆಮ್ಮೆಯಿಂದ ಸ್ವೀಕರಿಸಬೇಕಾಗಿದೆ. ಕನ್ನಡದಲ್ಲಿ ಇದೊಂದು ಅಪರೂಪ ಧಾರವಾಹಿ, ದೇಶದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಕೊಲೆ, ಅತ್ಯಾಚಾರ, ದೌರ್ಜನ್ಯಗಳ ಪ್ರಮಾಣ ದಿನಕಳೆದಂತೆ ಹೆಚ್ಚಾಗುತ್ತಿರುವ ಇಂತಹ ಕಾಲಘಟ್ಟದಲ್ಲಿ ‘ಮಹಾನಾಯಕ’ ಧಾರವಾಹಿ ಸಮಾಜದಲ್ಲಿ ಬೆಳಕಾಗಿ ಹಲವು ಮನಸ್ಸುಗಳು ಪರಿವರ್ತನೆಗೊಳ್ಳಲಿ ಎಂದು ಆಶಿಸುತ್ತಾರೆ.

ಹರೀಶ್ ಕಾಂಬಳೆ ಅವರು ಮುಂದಿನ ದಿನಗಳಲ್ಲಿ ಕಿರುತೆರೆ, ಸಿನಿಮಾ, ಸಂಗೀತ ಕ್ಷೇತ್ರದಲ್ಲಿ ಅವಕಾಶ ದೊರೆತರೆ ತಮ್ಮ ವಿಶಿಷ್ಟ ಸಂಗೀತ ಕಲೆ ಪ್ರದರ್ಶಿಸುವ ಇಚ್ಛಾಶಕ್ತಿ ಹೊಂದಿದ್ದಾರೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದ ಸಂಘ ಸಂಸ್ಥೆಗಳು ಹರೀಶ್ ಅವರ ಕಲೆಯನ್ನು ಗೌರವಿಸಿ ಪ್ರೋತ್ಸಾಹಿಸುತ್ತಿವೆ. ಬಡತನದಲ್ಲಿ ಹುಟ್ಟಿ ಬೆಳೆದ ಹರೀಶ್ ಅವರು ಸ್ವಯಂ ಪ್ರಯತ್ನದಿಂದಲೇ ಈ ಕಲೆಯನ್ನು ಕಲಿತುಕೊಂಡಿರುವುದು ಇನ್ನೊಂದು ವಿಶಿಷ್ಟ ಎನ್ನಬಹುದು.

PC: Harish Kamble/Facebook

ಇದನ್ನೂ ಓದಿ: ಜಾತಿಪದ್ಧತಿಯ ಕಡುವಿರೋಧಿ, ಹೋರಾಟಗಾರ ಸುಧೀರ್ ಧಾವ್ಳೆ

ಅಮೇರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ನಡೆದ ಹೋರಾಟದ ಸಂದರ್ಭದಲ್ಲಿ ಮೊಟ್ಟ ಮೊದಲು ಹಿಪ್‌ಹಾಪ್ ಹಾಡುಗಳು ಹುಟ್ಟು ಪಡೆದಿವೆ. ನಂತರದ ದಿನಗಳಲ್ಲಿ ವಿಶ್ವದಾದ್ಯಂತ ವ್ಯಾಪಿಸಿ ಹೆಚ್ಚು ಪ್ರಸಿ‌ದ್ಧಿ ಪಡೆದಿವೆ. ವಿಶೇಷವಾಗಿ ಅತೀ ಹೆಚ್ಚು ಯುವಜನತೆ ಇಷ್ಟ ಪಡುವ ಹಿಪ್‌ಹಾಪ್ ಹಾಡುಗಳಿಗೆ ಭಾರೀ ಡಿಮ್ಯಾಂಡ್ ಇದೆ. ಇದಕ್ಕೆ ಭಾರತವೂ ಹೊರತಾಗಿಲ್ಲ, ನನಗೂ ಮೊದಲಿನಿಂದಲೂ ತುಂಬಾ ಇಷ್ಟ ಪಡುವ ಸಂಗೀತವಾಗಿದೆ. ಹೀಗಾಗಿ ದೇಶದ ಭವಿಷ್ಯ ರೂಪಿಸುವ ಯುವಜನಾಂಗದ ಪ್ರಿಯವಾದ ಹಿಪ್‌ಹಾಪ್ ಮ್ಯೂಸಿಕ್ ನಾನು ನನ್ನ ‘ಜಾತಿ’ ಹಾಡಿಗೆ ಆಯ್ಕೆ ಮಾಡಿಕೊಂಡು ಪ್ರಯತ್ನಿಸಿದ್ದೇನೆ.

ಹರೀಶ್ ಕಾಂಬಳೆ ಅವರಿಗಿರುವ ಸಾಮಾಜಿಕ ತುಡಿತ ನಿಜಕ್ಕೂ ಮೆಚ್ಚಬೇಕು. ಅವರ ಉದ್ದೇಶ ಹಾಗೂ ಗುರಿಗಳಿಗೆ ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಹಿಪ್‌ಹಾಪ್ ರ್‍ಯಾಪ್‌ ಸಾಂಗ್‌ನಲ್ಲಿ ಅಡಗಿರುವ ಸಮಾಜದ ಚಿಂತನೆ ಬಗ್ಗೆ ನಾವೆಲ್ಲರೂ ಸೂಕ್ಷ್ಮವಾಗಿ ಗ್ರಹಿಸಬೇಕಿದೆ. ಸಮ ಸಮಾಜದ ಪರಿಕಲ್ಪನೆ ಹೊತ್ತು ‘ಎಲೆಮರೆ ಕಾಯಿಯಂತೆ’ ತಮ್ಮ ನಿಸ್ವಾರ್ಥ ಕಲೆಯನ್ನು ಸಂಗೀತ ಲೋಕಕ್ಕೆ ಅರ್ಪಿಸುತ್ತಿರುವ ಪ್ರತಿಭಾವಂತ ಯುವಕ ಹರೀಶ್ ಕಾಂಬಳೆ ಕಾರ್ಯಕ್ಕೆ ಬೆಂಬಲಿಸಿ, ಹಾರೈಸೋಣ.‌‌!!

ಹರೀಶ್ ಕಾಂಬಳೆ ಅವರ ಯುಟ್ಯೂಬ್ ಚಾನಲ್‌ಗೆ ಹೋಗಿ ಅವರಿಗೊಂದು ಶುಭಾಶಯ ಹೇಳಲು ಇಲ್ಲಿ ಕ್ಲಿಕ್‌ ಮಾಡಿ. ಹಾಗೂ ಅವರ ಫೇಸ್‌ಬುಕ್‌ಗೆ ಇಲ್ಲಿ ಕ್ಲಿಕ್ ಮಾಡಿ ತಲುಪಬಹುದು.

-ಬಾಲಾಜಿ ಕುಂಬಾರ, ಚಟ್ನಾಳ

ಇದನ್ನೂ ಓದಿ: ಮೇಲ್ಜಾತಿ ದೌರ್ಜನ್ಯವನ್ನು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ತಂದ ಕಾರಂಚೇಡು ದಲಿತರ ಹತ್ಯಾಕಾಂಡಕ್ಕೆ 35 ವರ್ಷ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...