Homeಮುಖಪುಟಬ್ರಾಹ್ಮಣ್ಯದ ವಿರೋಧ ಮತ್ತು ಜಾತಿ ವಾಸ್ತವದ ಪ್ರಶ್ನೆಗೆ ಒಂದು ಉತ್ತರ

ಬ್ರಾಹ್ಮಣ್ಯದ ವಿರೋಧ ಮತ್ತು ಜಾತಿ ವಾಸ್ತವದ ಪ್ರಶ್ನೆಗೆ ಒಂದು ಉತ್ತರ

"ಅವರು ಇತಿಹಾಸದ ಪುಟಗಳಲ್ಲಿ, ದೇಶದಲ್ಲಿ ಯಾರೂ ಮುಟ್ಟಿಸಿಕೊಳ್ಳದ, ಊರ ಹೊರಗಿಟ್ಟ, ಬದುಕುವ ಎಲ್ಲ ಅವಕಾಶಗಳನ್ನೂ ನಿರಾಕರಿಸಿ ಅತ್ಯಂತ ಕೀಳು ದರ್ಜೆಗೆ ತಳ್ಳಲ್ಪಟ್ಟಂಥ ಜನಸಮುದಾಯಗಳು ಇದ್ದವು ಎಂದು ಓದಿಕೊಳ್ಳಬೇಕಾಗಿ ಬಂದಾಗ, ಆ ಸಮುದಾಯಗಳು ಯಾವವು ಎಂದರೆ ಏನು ಹೇಳುತ್ತೀರಿ?"

- Advertisement -
- Advertisement -

ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಶೂದ್ರ ಸಮೂದಾಯದ ಹಿರಿಯ ಮಿತ್ರರೊಬ್ಬರು ನನಗೆ ‘ನೀವು ತುಂಬ ತೀಕ್ಷ್ಣವಾಗಿ ಚಿಂತನೆ ಮಾಡುತ್ತಿರಿ(ಸುಳ್ಳು). ಆದರೆ ನೀವು ಹೆಚ್ಚು ಜಾತಿ ಬಗ್ಗೆಯೇ ಮಾತನಾಡುತ್ತ, ಬ್ರಾಹ್ಮಣರ ಬಗ್ಗೆಯೇ ಹೆಚ್ಚು ದ್ವೇಷ ಮಾಡುತ್ತಿರಿ. ಅದು ಸರಿಯೇ’? ಎಂದರು. ನಾನು ಗಾಬರಿಯಾದೆ. ನನಗೆ ಇದು ಹೊಸ ಆರೋಪವಾಗಿತ್ತು ಮತ್ತು ಅವರಿಗೆ ಉತ್ತರಿಸಲು ಸಾಕಷ್ಟು ಸಮಯದ ಅಗತ್ಯ ಇದ್ದುದರಿಂದ ನಾನು ಅವರ ಮುಖವನ್ನೊಮ್ಮೆ ದಿಟ್ಟಿಸಿ ನೋಡಿ ನಾನು ಈ ವಿಷಯದ ಕುರಿತು ನಂತರ ಮಾತನಾಡುತ್ತೇನೆ ಎಂದು ಹೇಳಿ ಅಲ್ಲಿಂದ ಬಂದು ಬಿಟ್ಟೆ.

ಆ ನನ್ನ ಮಿತ್ರರಿಗೆ ಉತ್ತರ ಇಷ್ಟೇ.

ಭಾರತದಲ್ಲಿ ಯಾವ ವಿಷಯಗಳೂ ಜಾತಿ ಪರೀದಿಯನ್ನು ದಾಟಿ ಬೆಳೆದಿಲ್ಲಿ. ಅದು ಸಾಮಾಜಿಕ ಇರಬಹುದು, ರಾಜಕೀಯ ಇರಬಹುದು , ಅರ್ಥ ವ್ಯವಸ್ಥೆ, ಶಿಕ್ಷಣ, ಸಂಸ್ಕೃತಿ ಯಾವುದನ್ನೇ ತೆಗೆದುಕೊಂಡರೂ ಅದು ಜಾತಿ ಪರಿಮಿತಿಯಲ್ಲೇ ಹರಡಿಕೊಂಡಿದೆ. ನಮ್ಮ ಸಾಮಾಜಿಕ ಸಂಬಂಧಗಳು, ಭೂ ಸಂಬಂಧಗಳು, ವೈವಾಹಿಕ ಸಂಬಂಧಗಳನ್ನು ತೆಗೆದುಕೊಂಡರೂ ಅವುಗಳ ಬೆಳವಣಿಗೆ ಜಾತಿ ಪರಿದಿಯ ಮಿತಿಯಲ್ಲೇ ಇರುತ್ತದೆ. ಶಾಲೆಯಲ್ಲಿ ಸರ್ವಜನಾಂಗದ ತೋಟದಂತೆ ಕಲೆತು ಬೆರೆತು ಕಲಿಯುವ ಮಕ್ಕಳು ಶಾಲೆ ಮುಗಿದ ತಕ್ಷಣ ಹೊರಡುವುದು ಎಲ್ಲಿಗೆ? ಜಾತಿ ಆಧಾರಿತವಾಗಿ ಪ್ರತೇಕವಾಗಿರುವ ತಮ್ಮ ಜಾತಿ ವಾಸಸ್ಥಾನಗಳಿಗೆ. ಅವು ಎಲ್ಲ ರೀತಿಯಲ್ಲೂ ಪ್ರತ್ಯೇಕ ಜಗತ್ತುಗಳೇ ಆಗಿವೆ. ಒಂದಕ್ಕೊಂದು ತೆರೆದುಕೊಳ್ಳಲು ಸಾಧ್ಯವಾಗದಷ್ಟು ಬಿಗಿಯಾಗಿವೆ. ಮಕ್ಕಳು ಬೆಳೆದಂತೆ ಜಾತಿ ಪ್ರಜ್ಞೆ ಕೂಡ ಬಲಿಯುತ್ತ ಹೋಗುತ್ತದೆ. ಜಾತಿ ಪರೀದಿ ದಾಟಿ ಏನು ಬೆಳೆದಿದೆ ಇಲ್ಲಿ?

ಜಾತಿ ಸಮಸ್ಯೆ ಅಂದಾಕ್ಷಣ ದಲಿತ ಮತ್ತು ಸವರ್ಣೀಯರ ಸಂಘರ್ಷ ಅಂತ ಭಾವಿಸಬೇಕಿಲ್ಲ. ಬ್ರಾಹ್ಮಣ ಒಳ ಪಂಗಡಗಳ ಒಳಗೇ ಮೇಲರಿಮೆಗಾಗಿ ಎಷ್ಟು ಸಂಘರ್ಷ ಇದೆ ಎಂಬುದನ್ನು ನಾವು ತಿಳಿಯಬೇಕು. ವೈಶ್ಯ, ಶೂದ್ರ ಸಮುದಾಯಗಳು ಒಳ ಪಂಗಡಗಳಲ್ಲಿ ತಮ್ಮ ತಮ್ಮ ಶ್ರೇಷ್ಠತೆಗಾಗಿ ನಡೆಸುವ ಕಚ್ಚಾಟಗಳನ್ನು ನಾವು ಗಮನಿಸಬೇಕು. ದಲಿತರ ಒಳ ಪಂಗಡಗಳಲ್ಲಿರುವ ಪ್ರತ್ಯೇಕತೆಗಳನ್ನು ನೋಡಬೇಕು. ಇವೆಲ್ಲವೂ ಭಾರತೀಯರನ್ನೂ ಪ್ರತಿ ವಿಷಯದಲ್ಲೂ ಸಾವಿರಾರು ಪ್ರತ್ಯೇಕ ಸಮುದಾಯಗಳನ್ನಾಗಿ ಬೇರ್ಪಡಿಸಿ ವಿಕಾಸಗೊಳಿಸಿವೆ. ಹೀಗಾಗಿ ಇಲ್ಲಿ ಭೀಕರವಾದ ಅಸಮಾನತೆ ಎಲ್ಲ ಹಂತದಲ್ಲೂ ತಾಂಡವಾಡುತ್ತಿರುವುದರಿಂದ ಇದಕ್ಕೆಲ ಜಾತಿ ವ್ಯವಸ್ಥೆಯೇ ಕಾರಣವಾಗಿರುವುರಿಂದ, ಎಲ್ಲವೂ ಜಾತಿ ಆಧಾರಿತವಾಗಿರುವುದರಿಂದ ನಾನು ವಿಷಯಾಧಾರಿತವಾಗಿ ಮಾತನಾಡುವಾಗ ಜಾತಿ ಬಿಟ್ಟು ಮಾತನಾಡಲು ಸಾಧ್ಯವಿಲ್ಲ.

ಇನ್ನೂ ಬ್ರಾಹ್ಮಣರನ್ನು ದ್ವೇಷ ಮಾಡುತ್ತಿರಿ ಎಂಬುದು. ನಾನು ಎಂದೂ ಜನರನ್ನು ದ್ವೇಷಿಸುವುದಿಲ್ಲ. ನಿಲುವುಗಳನ್ನು ಟೀಕಿಸುವುದು, ವಿರೋಧಿಸುವುದು ದ್ವೇಷವಾಗುವುದಿಲ್ಲ. ಆಗಬಾರದು. ಹಾಗೇ ನೋಡಿದರೆ ನಾನು ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುವಾಗ ಹೆಚ್ಚು ವರ್ತಮಾನದ ವಾಸ್ತವದ ಬಗ್ಗೆ ಮಾತನಾಡುತ್ತೇನೆ. ಅದರ ಬಗ್ಗೆ ಮಾತನಾಡುವಾಗ ನಾನು ಹೆಚ್ಚು ಟೀಕಿಸಿದ್ದು ಶೂದ್ರ ಸಮುದಾಯಗಳನ್ನು‌. ಜಾತಿ ಕ್ರೌರ್ಯ, ಮತ್ತು ಆಚರಣೆಯಲ್ಲಿ ಯಾರು ಮುಂದಿದ್ದಾರೆ ಎಂಬ ಕನಿಷ್ಠ ತಿಳುವಳಿಕೆ ನನಗಿದೆ. ದಲಿತರೊಂದಿಗೆ ನಡೆದಿರುವ, ನಡೆಯುತ್ತಿರುವ ಅಂತರ್ಜಾತಿ ಮದುವೆಗಳ ಸಂಬಂಧಗಳನ್ನು ಅತಿ ಹೆಚ್ಚು ಉಳಿಸಿಕೊಳ್ಳುತ್ತಿರುವುದು ಬ್ರಾಹ್ಮಣರೇ. ಅತಿ ಕ್ರೂರವಾಗಿ ಅಂತ್ಯಗೊಳ್ಳುತ್ತಿರುವ ಸಂಬಂಧಗಳು ಶೂದ್ರರೊಂದಿಗಿನ ಸಂಬಂಧಗಳೇ ಆಗಿವೆ. ಆದಾಗ್ಯೂ ಕೂಡ ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುವಾಗ ಅದರ ಹುಟ್ಟು, ಬೆಳವಣಿಗೆ, ಆಚರಣೆ ಕುರಿತು ಮಾತನಾಡಲೇ ಬೇಕು. ಅಲ್ಲಿ ನಾವು ಬ್ರಾಹ್ಮಣರ ಕುರಿತು ಅಲ್ಲದಿದ್ದರೂ ಬ್ರಾಹ್ಮಣ್ಯದ ಕುರಿತು ಮಾತನಾಡಲೇ ಬೇಕಾಗುತ್ತದೆ. ಅದು ಆ ಸಮುದಾಯವೇ ಹುಟ್ಟು ಹಾಕಿದಂಥ ಒಂದು ಸಿದ್ದಾಂತ. ಅದರ ಹುಟ್ಟನ್ನು ಅವರಿಂದ ಬೇರ್ಪಡಿಸಿ ಮಾತನಾಡಲು ಸಾಧ್ಯವಿಲ್ಲ ಹಾಗಾಗಿ ಬ್ರಾಹ್ಮಣ್ಯದ ಹುಟ್ಟು ಬೆಳವಣಿಗೆ ಬಗ್ಗೆ ಆ ಸಮುದಾಯವನ್ನು ಬಿಟ್ಟು ಮಾತನಾಡಲು ಸಾಧ್ಯವಿಲ್ಲ. ಅದರ ಅರ್ಥ ಸಮುದಾಯವೊಂದು ಇತಿಹಾಸದ ಒಂದು ಕಾಲಘಟ್ಟದಲ್ಲಿ ನಿರ್ಮಿಸಿದ ವ್ಯವಸ್ಥೆಯೊಂದಕ್ಕೆ ಆ ಸಮುದಾಯದಿಂದ ಬಂದಿರುವ ಈಗಿನ ಜನರೆಲ್ಲರೂ ಪ್ರಾಯಶ್ಚಿತ ಪಡಬೇಕು ಅಥವಾ ಅದರ ಜವಾಬ್ದಾರಿ ಹೊರಬೇಕು ಎಂಬುದು ಅತ್ಯಂತ ತರ್ಕವಿಲ್ಲದ ಮಾತು. ಆದರೆ ಅದರ ಹುಟ್ಟನ್ನು ಕುರಿತು ಮಾತನಾಡುವಾಗ ಆ ಸಮುದಾಯವನ್ನು ಗುರುತಿಸಲೇ ಬೇಕಾಗುತ್ತದೆ. ಈಗಲೂ ಆ ಸಮುದಾಯದ ಜನ ತಮ್ಮ ಪೂರ್ವಜರು ಮಾಡಿದ್ದು ಸರಿಯಾದದ್ದು, ಅದರ ಫಲಾನುಭವ ತಮ್ಮ ಹಕ್ಕು ಎಂದು ಭಾವಿಸುವುದಾದರೆ ಖಂಡಿತ ಅಂತಹ ವ್ಯಕ್ತಿಗಳ ಮನಸ್ಥಿತಿಯನ್ನು ನಾನು ವಿರೋಧಿಸುತ್ತೇನೆ.


ಇದನ್ನೂ ಓದಿ: ಜಾತಿ ಮತ್ತು ಮೀಸಲಾತಿ ಬಗ್ಗೆ ನಟಿ ಕಂಗನಾ ರಣಾವತ್‌ಗೊಂದು ಪತ್ರ


ಮಯನ್ಮಾರದ ಬೌದ್ಧರು ರೋಹಿಂಗ್ಯ ಮುಸಲ್ಮಾನರನ್ನು ನೆಡಸಿಕೊಂಡ ಅಮಾನವೀಯ ರೀತಿಯನ್ನು, ಶ್ರೀಲಂಕಾದ ಬೌದ್ಧರು ನಡೆಸಿದ ತಮಿಳರ ನರಹತ್ಯೆಯನ್ನೂ ನಾನು ಮನುಷ್ಯ ಸಮಾಜ ನಡೆಸಬಾರದ ಕೃತ್ಯಗಳೆಂದೆ ಖಂಡಿಸುತ್ತೇನೆ. ಹಾಗೇ ಬ್ರಾಹ್ಮಣ್ಯವನ್ನೂ, ಒಂದು ಕಾಲಘಟ್ಟದಲ್ಲಿ ಜಾತಿ ತಾರತಮ್ಯವನ್ನು ಹುಟ್ಟು ಹಾಕಿ ಜಾರಿಗೆ ತಂದ ಬ್ರಾಹ್ಮಣರ ಕೃತ್ಯವನ್ನೂ ಕೂಡ ವಿರೋಧಿಸುತ್ತೇನೆ. ನನ್ನ ಸಮುದಾಯದ ಮುಂದಿನ ತಲೆಮಾರಿನ ಜನರು ಒಂದು ವೇಳೆ ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿದ್ದರೂ, ಜಾತಿ ಅಸ್ಥಿತ್ವ ಕಾಣೆಯಾದರೂ, ಅವರು ಇತಿಹಾಸದ ಪುಟಗಳಲ್ಲಿ, ದೇಶದಲ್ಲಿ ಯಾರೂ ಮುಟ್ಟಿಸಿಕೊಳ್ಳದ, ಊರ ಹೊರಗಿಟ್ಟ, ಬದುಕುವ ಎಲ್ಲ ಅವಕಾಶಗಳನ್ನೂ ನಿರಾಕರಿಸಿ ಅತ್ಯಂತ ಕೀಳು ದರ್ಜೆಗೆ ತಳ್ಳಲ್ಪಟ್ಟಂಥ ಜನಸಮುದಾಯಗಳು ಇದ್ದವು ಎಂದು ಓದಿಕೊಳ್ಳಬೇಕಾಗಿ ಬಂದಾಗ, ಆ ಸಮುದಾಯಗಳು ಯಾವವು ಎಂದರೆ ಏನು ಹೇಳುತ್ತೀರಿ? ಆಗ ದಲಿತ ಸಮುದಾಯಗಳನ್ನೇ ಗುರುತಿಸಬೇಕಲ್ಲವೇ? ಆಗ ನಮ್ಮ ಪೀಳಿಗೆ, ಒಂದು ವೇಳೆ ತಮ್ಮ ಸಮುದಾಯಗಳು ಹೀಗೆ ಬದುಕಿದ್ದವು ಎಂಬುದು ತಮ್ಮ ಗೌರವಕ್ಕೆ ಧಕ್ಕೆ ತರುತ್ತದೆ ಎಂದು ವಿರೋಧಿಸಿದರೆ ಇತಿಹಾಸದ ವಾಸ್ತವವನ್ನು ಬದಲಿಸಿ ಬರೆಯಲು ಸಾಧ್ಯವೇ?.

ಮಹಾಲಿಂಗಪ್ಪ ಆಲಬಾಳ. (ಯುವ ಬರಹಗಾರರು, ಸಾಮಾಜಿಕ ಕಾರ್ಯಕರ್ತರು. ಅಭಿಪ್ರಾಯಗಳು ವಯಕ್ತಿಕವಾದವು.)


ಇದನ್ನೂ ಓದಿ: ಭಾರತದ ಜಾತಿ ವೃಕ್ಷದ ವಿಷಕಾರಿ ಹಣ್ಣು ಖೈರ್ಲಾಂಜಿಯನ್ನು ಮರೆಯಬಾರದು…

Also Read: Mob of 200 People from Dominant Castes Attack Dalits in Ainlasari, Odisha

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...

SIR ತಂದಿಟ್ಟ ಸಂಕಷ್ಟ : ದಾಖಲೆ ಹೊಂದಿಸಲು ಅಲೆಮಾರಿಗಳ ಅಲೆದಾಟ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಭಾಗವಾಗಿ ಅನ್‌ಮ್ಯಾಪ್ಡ್ ಮತ್ತು ಅನಾಮಲಿಸ್ ಮತದಾರರಿಗೆ ನೋಟಿಸ್ ನೀಡಿ, ದಾಖಲೆಗಳ ಪರಿಶೀಲನೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 23,45,428 ಅನ್‌ ಮ್ಯಾಪ್ಡ್ (ಪ್ರೊಜೆನಿ ಮ್ಯಾಪಿಂಗ್...

ಸಚಿವ ಸತೀಶ್ ಜಾರಕಿಹೊಳಿ, ಪುತ್ರಿ ಪ್ರಿಯಾಂಕಾ ನಿವಾಸಗಳ ಮೇಲೆ ಇಡಿ ದಾಳಿ: 18ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಪುತ್ರಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸೇರಿದ ನಿವಾಸಗಳು ಮತ್ತು ಆಸ್ತಿಪಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ)...

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...