Homeಚಳವಳಿಇರಾನಿನ ಮೊದಲ ಮಹಿಳಾ ನ್ಯಾಯಮೂರ್ತಿ ಶಿರಿನ್ ಇಬಾದಿಯ ಹೋರಾಟದ ಕಥೆ

ಇರಾನಿನ ಮೊದಲ ಮಹಿಳಾ ನ್ಯಾಯಮೂರ್ತಿ ಶಿರಿನ್ ಇಬಾದಿಯ ಹೋರಾಟದ ಕಥೆ

- Advertisement -
- Advertisement -

ತಮ್ಮ ಸಾಮರ್ಥ್ಯದಿಂದ ಶಿರಿನ್ ಇಬಾದಿ ಇರಾನಿನ ಮೊದಲ ಮಹಿಳಾ ನ್ಯಾಯಮೂರ್ತಿಯಾದರು. 1975ರಲ್ಲಿ ಇಸ್ಲಾಮಿಕ್ ರೆವಲ್ಯೂಶನ್ ಚುನಾವಣೆಯಲ್ಲಿ ಗೆದ್ದು ಬಂದಿತು. ಆಗ ಸಂಪ್ರದಾಯವಾದಿ ಧಾರ್ಮಿಕರು ಮಹಿಳೆಯು ನ್ಯಾಯಾಧೀಶೆಯಾಗಿರುವುದನ್ನು ವಿರೋಧಿಸಿ ಪ್ರತಿರೋಧ ಒಡ್ಡಿದರು. ನ್ಯಾಯಮೂರ್ತಿಯಾಗಿದ್ದವರನ್ನು ನ್ಯಾಯಾಲಯದಲ್ಲೇ ಗುಮಾಸ್ತೆಯಾಗಿರುವಂತೆ ಸೂಚಿಸಿತು.

ಇತ್ತೀಚೆಗೆ ಜೆಎನ್‍ಯುನಲ್ಲಿ ರಾಜಕೀಯ ಮತ್ತು ಮತೀಯ ಶಕ್ತಿಗಳು ಒಗ್ಗೂಡಿ ನಡೆಸಿದ ದಾಳಿಯಲ್ಲಿ ವಿದ್ಯಾರ್ಥಿ ಮುಂದಾಳು ಆಯಿಶಾ ಘೋಶ್ ಮತ್ತು ಇತರ ವಿದ್ಯಾರ್ಥಿಗಳು, ಹಾಗೂ ಪ್ರಾಧ್ಯಾಪಕರೂ ಗಾಯಗೊಂಡರು. ಅದರಂತೆಯೇ 1999ರಲ್ಲಿ ನಾಗರಿಕ ಪೋಷಾಕಿನ ರಾಜಕೀಯ ಶಕ್ತಿಗಳು ಟೆಹ್ರಾನ್ ವಿಶ್ವವಿದ್ಯಾಲಯದ ಹಾಸ್ಟೆಲ್ ಮೇಲೆ ದಾಳಿ ಮಾಡಿದ್ದವು. ಅವರ ಗುರಿ ಧರ್ಮಾತೀತವಾಗಿ ಮಾನವ ಹಕ್ಕುಗಳನ್ನು ಪ್ರತಿಪಾದಿಸುವ ಮತ್ತು ಕಟ್ಟರ್ ಚಾಳಿಯ ರಾಜಕೀಯ ವ್ಯವಸ್ಥೆಯನ್ನು ಪ್ರತಿಭಟಿಸುವ ಯುವ ಸಮೂಹದ ಮೇಲಾಗಿತ್ತು. ವಿದ್ಯಾರ್ಥಿ ದಂಗೆ ಎಂದು ತಿರುಚಲ್ಪಡುವ ಉದ್ದೇಶದಿಂದ ಕರೆಯಲಾದ ಆ ಆಕ್ರಮಣದಲ್ಲಿ ರಕ್ಷಣಾ ಸಿಬ್ಬಂದಿಯು ಇಜ್ಜತ್ ಇಬ್ರಾಹಿಂ ನಿಜಾಬ್ ಎಂಬ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಂದಿದ್ದೇ ಅಲ್ಲದೇ ಪೊಲೀಸರೆನಿಸಿಕೊಂಡವರೇ ಅತ್ಯಂತ ಹಿಂಸಾತ್ಮಕ ದಾಳಿಯನ್ನು ವಿದ್ಯಾರ್ಥಿಗಳ ಮೇಲೆ ನಡೆಸಿದರು. ಇಬ್ರಾಹಿಂನನ್ನು ಕೊಂದವರಾರೂ ವಿಚಾರಣೆಗೆ ಒಳಪಡಲಿಲ್ಲ ಮತ್ತು ಆ ಪೊಲೀಸರೂ ಕೂಡಾ ಕಾನೂನಿನಿಂದ ತಪ್ಪಿಸಿಕೊಂಡರು. ಇಬ್ರಾಹಿಂನ ಮನೆಯವರ ಪರವಾಗಿ ನಿಂತು ಪ್ರಕರಣವನ್ನು ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಹೋರಾಡಿದ್ದು ಶಿರಿನ್ ಇಬಾದಿ.

ಇಬ್ರಾಹಿಂನ ತಂದೆ ತಾಯಿ ಮತ್ತು ಕುಟುಂಬದ ಇತರ ಸದಸ್ಯರು ಶವವನ್ನೂ ಕೂಡಾ ನೋಡಲು ಬಿಡದಂತೆ ಗುಂಪುಗಳು ಅವರ ಮೇಲೆ ಕಲ್ಲುಗಳನ್ನು ತೂರಾಡುತ್ತಾ ದಾಳಿ ಮಾಡಿತ್ತು. ಅದಕ್ಕಾಗಿ ನೀವು ಮಗನ ಸಮಾಧಿಗೆ ಹೋಗಬೇಡಿ ಎಂದು ಸರ್ಕಾರ ಅವರ ಮೇಲೆ ನಿಷೇಧ ಹೇರಿದ್ದು ದುರದೃಷ್ಟಕರ.

ಇಂತಹ ಪ್ರಕರಣಗಳಿಗೆ ಬೆಂಬಲವಾಗಿ ಹೋರಾಡುವ ಮಾನವಹಕ್ಕುಗಳ ನ್ಯಾಯವಾದಿಯಾಗಿದ್ದ ಮತ್ತು ನೊಬಲ್ ಶಾಂತಿ ಪ್ರಶಸ್ತಿ ವಿಜೇತರಾದ ಎಪ್ಪತ್ತೆರಡು ವರ್ಷದ ಶಿರಿನ್ ಇಬಾದಿ ರಾಜಕೀಯ ಹೋರಾಟಗಾರ್ತಿ. ಪ್ರಜಾಪ್ರಭುತ್ವ ಮತ್ತು ಮಾನವಹಕ್ಕುಗಳಿಗಾಗಿ ಇರಾನಿನಲ್ಲಿ ಹೋರಾಡುತ್ತಿದ್ದಾರೆ. ಅದರಲ್ಲೂ ಮಹಿಳೆ, ಮಕ್ಕಳು ಮತ್ತು ನಿರ್ಗತಿಕ ವಲಸೆಗಾರರ ಹಕ್ಕುಗಳಿಗಾಗಿ ಹೋರಾಡಿದವರು. ಡಿಫೆಂಡರ್ಸ್ ಆಫ್ ಹ್ಯೂಮನ್ ರೈಟ್ಸ್ ಸೆಂಟರನ್ನು ಸ್ಥಾಪಿಸಿದರು. ನೊಬಲ್ ಪ್ರಶಸ್ತಿಯನ್ನು ಪಡೆದ ಮೊದಲ ಮುಸ್ಲಿಂ ಮಹಿಳೆ, ಅದರಲ್ಲೂ ಮೊದಲ ಇರಾನಿ ಮಹಿಳೆ (2003) ಅವರಾಗಿದ್ದರು. ಆದರೆ ಅವರು ಪಡೆದ ನೊಬಲ್ ಪ್ರಶಸ್ತಿ ಸಂಪ್ರದಾಯವಾದಿ ಮಾಧ್ಯಮಗಳಿಗೂ ಮತ್ತು ಸರಕಾರಕ್ಕೇನೂ ಖುಷಿಯಾಗಲಿಲ್ಲ. ಬದಲಾಗಿ ಇದೇ ಮೊದಲ ಬಾರಿಗೆ ಇರಾನಿ ಸರಕಾರವು ಪ್ರಶಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತು. ಟೆಹ್ರಾನಿನಲ್ಲಿ ನೆಲೆಸಿದ್ದ ಶಿರಿನ್ ಸರ್ಕಾರದ ಆಡಳಿತವನ್ನು ಟೀಕಿಸಿ ಅಲ್ಲಿನ ಜನರ ಉಪದ್ರವ ತಡೆಯಲಾರದೇ ಗಡಿಪಾರಾಗಿ ಇಂಗ್ಲೆಂಡಿನಲ್ಲಿ ಆಶ್ರಯ ಪಡೆದಿದ್ದರು. ಫೋಬ್ಸ್ ಪತ್ರಿಕೆ ಗುರುತಿಸಿದ್ದ ನೂರು ಪ್ರಭಾವಿ ಮಹಿಳೆಯರಲ್ಲಿ ಇವರೂ ಒಬ್ಬರು.

ತಮ್ಮ ಸಾಮರ್ಥ್ಯದಿಂದ ಇವರು ಇರಾನಿನ ಮೊದಲ ಮಹಿಳಾ ನ್ಯಾಯಮೂರ್ತಿಯಾದರು. 1975ರಲ್ಲಿ ಇಸ್ಲಾಮಿಕ್ ರೆವಲ್ಯೂಶನ್ ಚುನಾವಣೆಯಲ್ಲಿ ಗೆದ್ದು ಬಂದಿತು. ಆಗ ಸಂಪ್ರದಾಯವಾದಿ ಧಾರ್ಮಿಕರು ಮಹಿಳೆಯು ನ್ಯಾಯಾಧೀಶೆಯಾಗಿರುವುದನ್ನು ವಿರೋಧಿಸಿ ಪ್ರತಿರೋಧ ಒಡ್ಡಿದರು. ನ್ಯಾಯಮೂರ್ತಿಯಾಗಿದ್ದವರನ್ನು ನ್ಯಾಯಾಲಯದಲ್ಲೇ ಗುಮಾಸ್ತೆಯಾಗಿರುವಂತೆ ಸೂಚಿಸಿತು. ಆದರೆ ಶಿರಿನ್ ಮತ್ತು ಇತರ ಮಹಿಳಾ ನ್ಯಾಯಮೂರ್ತಿಗಳು ಕರ್ಮಠರ ವಿರುದ್ಧ ಪ್ರತಿಭಟನೆ ಮಾಡಿದರು. ಇವರ ಪ್ರತಿಭಟನೆಗೆ ಪ್ರತಿಯಾಗಿ ಆಡಳಿತ ವ್ಯವಸ್ಥೆಯು ನ್ಯಾಯಮೂರ್ತಿಗಳಾಗುವ ಬದಲು ಸ್ವಲ್ಪ ಉನ್ನತಸ್ಥಾನವಾದ ಕಾನೂನುತಜ್ಞರ ಪದವಿಗೆ ಇವರನ್ನು ಸೀಮಿತಗೊಳಿಸಿತು. ಸ್ವಯಂನಿವೃತ್ತಿ ಘೋಷಿಸಿಕೊಂಡ ಶಿರಿನ್ ಬದಲಾಗದ ಆಡಳಿತ ವ್ಯವಸ್ಥೆಯಿಂದ ಹೊರಗೆ ಬಂದರು. ಆದರೆ ಅವರು ನ್ಯಾಯವಾದಿಯಾಗಿ ಮುಂದುವರಿಯಲು ಅವರಿಗೆ ಅವಕಾಶ ಕೊಡಲಿಲ್ಲ. ಅದಕ್ಕಾಗಿ ಅವರು ಸಲ್ಲಿಸುತ್ತಿದ್ದ ಅರ್ಜಿಗಳನ್ನು ಪದೇಪದೇ ತಿರಸ್ಕರಿಸಲಾಯಿತು. ಆದರೆ ಅವರು 1993ರಲ್ಲಿ ತಮ್ಮ ವಕೀಲರ ಕಚೇರಿಯನ್ನು ತೆರೆದಿದ್ದರು. ನ್ಯಾಯವಾದಿಯಾಗಿ ತಾವು ತಿರಸ್ಕೃತರಾಗಿದ್ದ ಆ ಸಮಯವನ್ನು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯಲು ಮತ್ತು ಪುಸ್ತಕ ಬರೆಯಲು ಉಪಯೋಗಿಸಿಕೊಂಡರು.

ವಕೀಲೆಯಾಗಿ ಕೇಸುಗಳನ್ನು ಅವರು ತೆಗೆದುಕೊಂಡಿದ್ದು ಹೆಚ್ಚಾಗಿ ಮಕ್ಕಳ ಮತ್ತು ಹೆಂಗಸರ ಕುರಿತಾದ ಅಂತರಾಷ್ಟ್ರೀಯ ಪ್ರಕರಣಗಳನ್ನು ಮತ್ತು ಪತ್ರಿಕೆಗಳು ಎದುರಿಸುತ್ತಿದ್ದ ಪ್ರಕರಣಗಳನ್ನು. ಜೊತೆಯಲ್ಲಿ ಮಾನವ ಹಕ್ಕಿನ ವಿಷಯವಾಗಿ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದರು. ಟೆಹರಾನಿನ ಯುನಿಸೆಫ್ ಪ್ರಾಯೋಜಕತ್ವದಲ್ಲಿ ಅನೇಕ ಯೋಜನೆಗಳನ್ನು ಮಾಡಿದ್ದಾರೆ. ಮಕ್ಕಳ ಮತ್ತು ಮಾನವ ಹಕ್ಕುಗಳ ಕುರಿತಾಗಿ ತಿಳಿವಳಿಕೆ ನೀಡಲು ಅನೇಕ ವೇದಿಕೆಗಳನ್ನು ಬಳಸಿಕೊಳ್ಳುತ್ತಾರೆ. ಹಾಗೆಯೇ ನೀಡುತ್ತಾರೆ ಕೂಡಾ.

ಇದರಿಂದಾಗಿ ಇವರಿಗೆ ಇರುವ ಜೀವ ಬೆದರಿಕೆ ಅಷ್ಟಿಷ್ಟಲ್ಲ. ಒಂದಲ್ಲಾ ಒಂದು ಬಗೆಯ ಆಕ್ರಮಣಕ್ಕೆ ತುತ್ತಾಗುತ್ತಲೇ ಇರುತ್ತಾರೆ. ಜೊತೆಗೆ ಇವರ ಕುಟುಂಬವೂ ಕೂಡ ಭೀತಿಯ ಜೀವನವನ್ನು ಸಾಗಿಸುತ್ತಿದೆ. ಸರ್ಕಾರ, ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಮತ್ತು ಮತೀಯ ನಾಗರಿಕರು ಎಲ್ಲರೂ ಇವರ ಮತ್ತು ಇವರಂತಹ ಮಾನವ ಹಕ್ಕುಗಳ ಹೋರಾಟಗಾರರ ವಿರುದ್ಧವೇ ಇದ್ದಾರೆ.

ಶಿರಿನ್ ಇಬಾದಿಯವರು ಮಾಡುವ ದ್ರೋಹಗಳಿವು ಎಂದು ಆರೋಪಿಸುವವರ ಪಟ್ಟಿಯಲ್ಲಿ ಏನೇನಿವೆ ನೋಡಿ.

1. ಇರಾನಿನ ಅಲ್ಪಸಂಖ್ಯಾತರಾಗಿರುವ ಬಹಾಯಿ ಶ್ರದ್ಧೆಯುಳ್ಳವರೊಂದಿಗೆ ಸಂಪರ್ಕವಿದೆ ಮತ್ತು ಅವರ ನಾಗರಿಕ ಹಕ್ಕುಗಳಿಗೆ ಹೋರಾಡುತ್ತಾರೆ.
2. ಸಲಿಂಗ ಕಾಮವನ್ನು ಸಮರ್ಥಿಸಿ ಸಲಿಂಗ ಕಾಮಿಗಳನ್ನು ಕಾನೂನಾತ್ಮಕವಾಗಿ ರಕ್ಷಿಸಲು ಮುಂದಾಗುತ್ತಾರೆ.
3. ಹಿಜಾಬ್ ಧರಿಸದೆಯೇ ಹೊರಗೆ ಬರುತ್ತಾರೆ ಮತ್ತು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಸುತ್ತಾಡುತ್ತಾರೆ.
4. ಇಸ್ಲಾಂ ಕಾನೂನು ವಿಧಿಸುವ ಶಿಕ್ಷೆಗಳನ್ನು ಪ್ರಶ್ನಿಸುತ್ತಾರೆ.
5. ಇವರ ಮಗಳು ನರ್ಗೀಸ್ ಬಹಾಯಿ ಶ್ರದ್ಧೆಯನ್ನು ಅಂಗೀಕರಿಸಿ ಇಸ್ಲಾಮಿಕ್ ರಿಪಬ್ಲಿಕ್ ಪ್ರಕಾರ ಶಿಕ್ಷಾರ್ಹ ಅಪರಾಧವನ್ನು ಮಾಡಿದ್ದಾಳೆ.
ಇವುಗಳನ್ನು ಮುಂದಿಟ್ಟುಕೊಂಡು ಇರಾನಿ ಸರ್ಕಾರವು ಶಿರಿನ್‍ರವರ ಮಾನವ ಹಕ್ಕುಗಳ ಕಾರ್ಯಾಲಯವನ್ನು ಮುಚ್ಚಿಸಿತು. ತನ್ನ ಮೇಲಾಗುತ್ತಿರುವ ಎಲ್ಲಾ ಬಗೆಯ ದಾಳಿಗಳನ್ನೂ ಎದುರಿಸುತ್ತಾ ಶಿರಿನ್ ತಮ್ಮ ಹೋರಾಟಗಳನ್ನು ಮುಂದುವರೆಸಿದ್ದಾರೆ. 2018ರ ಸಂದರ್ಶನವೊಂದರಲ್ಲಿ ಅವರು ಹೇಳಿದ್ದೇನೆಂದರೆ, “ಇರಾನಿನಲ್ಲಿ ಇಸ್ಲಾಮಿಕ್ ರಿಪಬ್ಲಿಕನ್ನು ಯಾರೂ ಹೇಗೂ ಸರಿಪಡಿಸಲಾಗದು” ಎಂದು. ಇದು ಹತಾಶಾ ಭಾವವೋ ಅಥವಾ ಹದಿನೆಂಟನೆಯ ಶತಮಾನದ ಅಂತ್ಯದಿಂದ ನಡೆಯುತ್ತಿರುವ ಹೋರಾಟದ ಮುಂದುವರಿದ ಭಾಗವಾಗಿ ನುಡಿದ ಅನುಭವವೋ – ಗೊತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...

ದಟ್ಟಾರಣ್ಯದೊಳಗೆ ಮೂರು ದಿನಗಳನ್ನು ಕಳೆದಿದ್ದು ಹೇಗೆ..ದಾರಿ ತಪ್ಪಿದ ಬಳಿಕ ಏನಾಯ್ತು? ನಾಪತ್ತೆ ವಿಚಾರ ಬಿಚ್ಚಿಟ್ಟ ಶರಣ್ಯ

ಕಳೆದ ಗುರುವಾರ (ಏಪ್ರಿಲ್ 2, 2026) ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ, ಮೂರು ದಿನಗಳ ಬಳಿಕ, ಅಂದರೆ ನಾಪತ್ತೆಯಾದ ನಾಲ್ಕನೇ ದಿನ ಭಾನುವಾರ (ಏಪ್ರಿಲ್ 4,...

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...