“ಸುಪ್ರೀಂ ಕೋರ್ಟ್ ಜಾಮೀನು ವಿಚಾರಣೆ ನ್ಯಾಯಾಲಯವಾಗಿ ಮಾರ್ಪಾಟ್ಟಿದೆ” ಎಂದು ಸೋಮವಾರ ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಟೀಕಿಸಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿಗಳಿದ್ದ ಪೀಠವು ಕೊಲೆ ಯತ್ನದ ಆರೋಪಿ ಬಿಜೆಪಿ ನಾಯಕ ನಿತೇಶ್ ರಾಣೆ, ಸಹ ಆರೋಪಿ ಗೋತ್ಯಾ ಸಾವಂತ್‌ಗೆ ತುರ್ತು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಮನವಿಯನ್ನು ವಿಚಾರಣೆ ನಡೆಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಕನ್ನಡದಲ್ಲಿ ಮಾತನಾಡಲು ಅರ್ಜಿದಾರನನ್ನು ಹುರಿದುಂಬಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ
ಸುಪ್ರೀಂಕೋರ್ಟ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜಾಮೀನು ಅರ್ಜಿ ಸಲ್ಲಿಕೆಯಾಗುತ್ತಿದ್ದು, ಮುಖ್ಯ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣಾ ನ್ಯಾಯಾಲಯವಾಗಿ ಬದಲಾಗಿದೆ ಎಂದು ವಿಚಾರಣೆಯ ಸಂದರ್ಭದಲ್ಲಿ ಎನ್.ವಿ. ರಮಣ ವಿಷಾದ ವ್ಯಕ್ತಪಡಿಸಿದರು.
2021 ಡಿಸೆಂಬರ್ ನಲ್ಲಿ ಶಿವಸೇನೆ ಸದಸ್ಯನೊಬ್ಬನ ಮೇಲೆ ನಡೆದ ಕೊಲೆ ಪ್ರಯತ್ನದಲ್ಲಿ ರಾಣೆ ಹೆಸರು ಕೇಳಿಬಂದಿತ್ತು.ಇದರ ಅನ್ವಯ ಸೆಷನ್ಸ್ ಕೋರ್ಟ್, ಬಾಂಬೆ ಹೈಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿದ್ದು, ಈಗ ಸುಪ್ರೀಂಕೋರ್ಟ್ ಮಹಾರಾಷ್ಟ್ರದ ವಿಧಾನಸಭಾ ಸದಸ್ಯ ನಿತೀಶ್ ರಾಣೆಯ 10 ದಿನಗಳ ಜಾಮೀನು ಅರ್ಜಿಗೆ ಸಮ್ಮತಿ ಸೂಚಿಸಿದೆ.
ಇದನ್ನೂ ಓದಿ: ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ನಾಯಕನಾಗುವ ಹುರುಪಿನಲ್ಲಿರುವ ರಿಷಬ್ ಪಂತ್


