Homeಕರ್ನಾಟಕವೇಶ್ಯಾವಾಟಿಕೆ ಸಂಘಟಿತ ಅಪರಾಧ, ಇದನ್ನು ತಡೆಯಲು ಮುಂದಾಗಬೇಕು- ಸ್ಟ್ಯಾನ್ಲಿ

ವೇಶ್ಯಾವಾಟಿಕೆ ಸಂಘಟಿತ ಅಪರಾಧ, ಇದನ್ನು ತಡೆಯಲು ಮುಂದಾಗಬೇಕು- ಸ್ಟ್ಯಾನ್ಲಿ

ತುಮಕೂರು ಕ್ಯಾತ್ಸಂದ್ರದ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ರಾಶಿ ರಾಶಿ ಕಾಂಡೋಮ್‌ಗಳ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಹೈಟೆಕ್ ವೇಶ್ಯಾವಾಟಿಕೆ ಜಾಲವೊಂದು ಬಯಲಿಗೆ ಬಂದಿದೆ.

- Advertisement -
- Advertisement -

ತುಮಕೂರು ಜಿಲ್ಲೆ ಕ್ಯಾತ್ಸಂದ್ರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದೆರಡು ವಾರಗಳ ಹಿಂದೆ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ರಾಶಿ ರಾಶಿ ಕಾಂಡೋಮ್‌ಗಳ ವಿಚಾರ ಜನರಲ್ಲಿ ಗೊಂದಲ ಮೂಡಿಸಿತ್ತು. ಇದು ನಗರದಲ್ಲಿ ನಡೆಯುತ್ತಿರುವ ಹೈಟೆಕ್ ವೇಶ್ಯಾವಾಟಿಕೆಯ ಪರಿಣಾಮ ಎಂದು ಇದೀಗ ತಿಳಿದುಬಂದಿದೆ.

ಕ್ಯಾತ್ಸಂದ್ರದ ನಂದಿ ಡಿಲೆಕ್ಸ್ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಕಂಡು ಬಂದಿದೆ. ಸಾಮಾಜಿಕ ಕಾರ್ಯಕರ್ತರು ಮತ್ತು ಒಡನಾಡಿ ಸಂಸ್ಥೆಯ ಮುಖ್ಯಸ್ಥರಾದ ಕೆ.ವಿ.ಸ್ಟ್ಯಾನ್ಲಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಐವರು ಪಿಂಪ್‌ಗಳನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.

“ಇಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ಹೊಸದಲ್ಲ. ತುಂಬಾ ವರ್ಷಗಳಿಂದಲೂ ನಡೆಯುತ್ತಿದೆ. ಇವೆಲ್ಲ ಸಂಘಟಿತ ಅಪರಾಧಗಳು. ತಮ್ಮ ಸುತ್ತಮುತ್ತ ಇಂತಹ ದಂಧೆ ನಡೆಯುತ್ತಿದೆ ಎಂದು ತಿಳಿಯದ ಅಮಾಯಕ ಸಮಾಜ ಇದಲ್ಲ. ಮಾಧ್ಯಮ, ಪೊಲೀಸರು, ಸಂಘಟನೆ ನಡೆಸುವವರು, ಲಾಯರ್‌ಗಳು ಎಲ್ಲರೂ ಇದರೊಳಗೆ ಇರ್ತಾರೆ” ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹೇಳುತ್ತಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೊ ಮಾಡಿ ಹರಿಬಿಟ್ಟ ಆರೋಪಿಗಳು

ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಲೈಂಗಿಕವಾಗಿ ಶೋಷಿಸಲ್ಪಟ್ಟ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸುವುದು, ಅವರಿಗೆ ಪುನರ್ವಸತಿ ಕಲ್ಪಿಸುವುದು, ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿರುವ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರು ನಾನುಗೌರಿ.ಕಾಂ ಜೊತೆ ತುಮಕೂರಿನಲ್ಲಿನ ನಡೆದ ದಾಳಿ ಬಗ್ಗೆ ಮಾತನಾಡಿದ್ದಾರೆ.

“ಕಳೆದೆರಡು ವಾರಗಳ ಹಿಂದೆ ಕ್ಯಾತ್ಸಂದ್ರ-ಬಟವಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಾಂಡೋಮ್ ಪ್ರಕರಣದಿಂದ ಇಲ್ಲಿನ ವೇಶ್ಯಾವಾಟಿಕೆ ಬಗ್ಗೆ ಸುಳಿವು ದೊರೆಯಿತು. ಇದೇ ಗುಮಾನಿಯಲ್ಲಿ ತಳ ಮಟ್ಟದಲ್ಲಿ ತನಿಖೆ ನಡೆಸಿದದೆವು. ಇಲ್ಲಿಗೆ 2-3 ಬಾರಿ ಬಂದು ಪರೀಕ್ಷಿಸಿದೆವು. ಇಂದು (ಮಂಗಳವಾರ) ಖಚಿತ ಮಾಹಿತಿ  ಮೇರೆಗೆ ಪೊಲೀಸರೊಂದಿಗೆ ದಾಳಿ ನಡೆಸಿದ್ದೇವೆ” ಎಂದರು.

“ತುಮಕೂರು ರಾಷ್ಟ್ರೀಯ ಹೆದ್ದಾರಿಯು ಬೆಂಗಳೂರು, ಮಂಗಳೂರು ಮತ್ತು ಉತ್ತರ ಕರ್ನಾಟಕವನ್ನು ಲಿಂಕ್ ಮಾಡುವ ಜಾಗ. ಹೇವಿ ಟ್ರಕ್‌ಗಳು ಇಲ್ಲಿ ಸಂಚರಿಸುತ್ತವೆ. ರಾಷ್ಟ್ರೀಯ ಹೆದ್ದಾರಿ ಬೇರೆ. ಹೀಗಾಗಿ ಇಲ್ಲಿ ಹೆಣ್ಣು ಮಕ್ಕಳನ್ನು ಇಟ್ಟುಕೊಂಡು, ಶೋಷಿಸಿ ವ್ಯಾಪಾರ ಮಾಡುತ್ತಾರೆ. ಹಲವು ವರ್ಷಗಳಿಂದ ಇದು ಇದೆ. ಇದೊಂದು ದೊಡ್ಡ ದಂಧೆ ಇದು” ಎಂದರು.

“ಹಣ ಸಂಪಾದನೆಗೆ ಹೆಣ್ಣು ಮಕ್ಕಳನ್ನು ಬಳಸುವುದು, ಅವರ ಮೂಲಕ ಹಣ ಸಂಪಾದಿಸುವುದು ಅಮಾನವೀಯ. ಒಬ್ಬೊಬ್ಬ ಹೆಣ್ಣು ಮಕ್ಕಳು ಪ್ರತಿದಿನ 10, 15, 18 ಗಂಡಸರನ್ನು ನಿಭಾಯಿಸಬೇಕು. ಇದಕ್ಕಾಗಿ ಇವರನ್ನು ಹಿಂಸೆಗೆ ನೂಕಲಾಗುತ್ತದೆ. ಹೆದರಿಸಿ, ಬೆದರಿಸಿ ಇಂತಹ ಮಾನಸಿಕ ಸ್ಥಿತಿಯನ್ನು ಮಹಿಳೆಯರಲ್ಲಿ ಸೃಷ್ಟಿಸುತ್ತಾರೆ. ವಿಳಾಸವಿಲ್ಲದ ಉತ್ತರ ಭಾರತ, ಬಾಂಗ್ಲಾದ ಮಹಿಳೆಯರನ್ನು ಇಂತಹ ಕೆಲಸಗಳಿಗೆ ಬಳಸಲಾಗುತ್ತದೆ” ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ನಿಲ್ಲಬೇಕು, ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು: ಸೈಕ್ಲಿಂಗ್ ಜಾಗೃತಿ ಮೂಡಿಸುತ್ತಿರುವ ಕಿರಣ್

“ರಾಜ್ಯದಲ್ಲಿ ಹೊಸ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅಡಗುದಾಣಗಳನ್ನು ನಿರ್ಮಿಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ. ಇದು ಮುಂಬೈ ಮಾದರಿಯ ವೇಶ್ಯಾವಾಟಿಕೆ. ಇದನ್ನು ಒಡನಾಡಿ ಸಂಸ್ಥೆ 15 ವರ್ಷಗಳ ಹಿಂದೆ ಕಂಡು ಹಿಡಿದಿತ್ತು. ದಾಳಿ ನಡೆಯುವಾಗ ಇಲ್ಲಿ ಅಡಗುದಾಣ ಇದೆ ಎಂಬುದು ತಿಳಿಯುವುದು ಇಲ್ಲ. ಅವರ ಮಾಹಿತಿದಾರರು ಹಲವು ಕಡೆಗಳಲ್ಲಿ ಇರುತ್ತಾರೆ. ಪೊಲೀಸರು, ನಾವುಗಳು ದಾಳಿಗೆ ಹೋಗುತ್ತಿರುವ ಮಾಹಿತಿ ದಂಧೆ ನಡೆಸುವವರಿಗೆ ಬೇಗನೆ ತಿಳಿದುಬಿಡುತ್ತದೆ. ನಮ್ಮ ಚಲನವಲನಗಳನ್ನು ಈ ಇವರು ಗಮನಿಸುತ್ತಿರುತ್ತಾರೆ. ಮಾಧ್ಯಮ, ಪೊಲೀಸರು, ಸಂಘಟನೆ ನಡೆಸುವವರು, ಲಾಯರ್‌ಗಳು ಎಲ್ಲರೂ ಇದರ ಲಾಭ ಪಡೆಯಲು ಪ್ರಯತ್ನಿಸುತ್ತಿರುತ್ತಾರೆ” ಎಂದರು.

ಸ್ಟ್ಯಾನ್ಲಿ ಅವರು ತುಮಕೂರಿನ ವಿಚಾರದ ಬಗ್ಗೆ ವಿವರಸಿದ್ದು ಹೀಗೆ, “ಕಾಂಡೋಮ್‌ಗಳ ಸುದ್ದಿಯಿಂದ ನಾವು ಇದರ ಜಾಡು ಹಿಡಿದೆವು. ಕ್ಯಾತ್ಸಂದ್ರದ ನಂದಿ ಲಾಡ್ಜ್‌, ನಾಲ್ಕು ಅಂತಸ್ತಿನ ಕಟ್ಟಡ. ಉಳಿಯಲು ಅಷ್ಟು ಯೋಗ್ಯವಲ್ಲದ ಅದು, ಹಣ ಮುದ್ರಿಸುವ ಟಂಕಸಾಲೆಯಾಗಿದೆ. ಒಂದು ರೂಮ್‌ನಿಂದ ದಿನಕ್ಕೆ 10, 20 ಸಾವಿರಕ್ಕೂ ಹೆಚ್ಚು ಗಳಿಸುತ್ತಾರೆ. ರೂಮ್‌ಗಳನ್ನು ಮಾರ್ಪಡಿಸಿದ್ದಾರೆ. ಲಾಡ್ಜ್‌ನ ಮೂರನೇ ಮಹಡಿಯಲ್ಲಿ ಒಂದು ಗೇಟ್ ಇದೆ ಅದನ್ನು ಕ್ಲೋಸ್ ಮಾಡಿ, ಅಲ್ಲಿರುವ ಎಲ್ಲಾ ಹುಡುಗಿರನ್ನು ಮೊದಲೇ ರಚನೆ ಮಾಡಿರುವ ಅಡಗುದಾಣಗಳಲ್ಲಿ ಬಚ್ಚಿಡಲಾಗುತ್ತದೆ. ಈ ಅಡಗುದಾಣಗಳು ವಿಚಿತ್ರವಾಗಿರುತ್ತವೆ. ಕಬೋರ್ಡ್, ಟಿವಿಯ ಹಿಂದೆ, ಡ್ರೈನೇಜ್‌ನಲ್ಲಿಯೂ ಅಡಗುದಾಣಗಳು ಇರುತ್ತವೆ. ಇವುಗಳನ್ನ ಒಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ರಿಸ್ಕ್ ತೆಗೆದುಕೊಳ್ಳಬೇಕು ಅಷ್ಟೆ. ಇಲ್ಲಿ ಒಂದು ಟೇಬಲ್‌ ತರಹದ ರಚನೆಯಲ್ಲಿ ಅಡಗುದಾಣವಿತ್ತು. ಸದ್ಯ ಪೊಲಿಸರು ಐವರು ಪಿಂಪ್‌ಗಳನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಒಬ್ಬ ಮಹಿಳೆಯನ್ನು ಪಿಂಪ್‌ಗಳು ಆಟೋದಲ್ಲಿ ಕರೆದುಕೊಂಡು ಪರಾರಿಯಾಗಿದ್ದಾರೆ” ಎಂದರು.

“ಇಂದು ಸಿಕ್ಕಿಹಾಕಿಕೊಂಡವರಲ್ಲಿ ಇಬ್ಬರನ್ನು ಈ ಮೊದಲು ಅರೆಸ್ಟ್ ಮಾಡಲಾಗಿತ್ತು. ಜಾಮೀನಿನ ಮೇಲೆ ಹೊರ ಬಂದು ಮತ್ತೆ ಇದೆ ಕೆಲಸದಲ್ಲಿ ತೊಡಗುತ್ತಾರೆ. ಇವರಿಗೆ ಭಯ, ಮುಜುಗುರ ಇಲ್ಲ. ಇವರಿಗಾಗಿ ಒಂದು ಸಪೋರ್ಟ್ ಸಿಸ್ಟಮ್ ಇದೆ. ಎಲ್ಲರೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದು ಸಂಘಟಿತ ಅಪರಾಧ. ಇದಕ್ಕೆ ಐಟಿಪಿಎ ಸೆಕ್ಷನ್ ಸಾಕಾಗುವುದಿಲ್ಲ. ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ 2000 (KCOCA Act, 2000) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಇದನ್ನು ಕೆಲವೇ ಕೆಲವು ಅಧಿಕಾರಿಗಳು ಬಳಸಿದ್ದಾರೆ. ರಾಜ್ಯದಲ್ಲಿ ವೇಶ್ಯಾವಾಟಿಕೆ ನೆಟ್‌ವರ್ಕ್ ದೊಡ್ಡ ಕ್ಯಾನ್ಸರ್‌ ತರ ಬೆಳೆದಿದೆ. ಮನಸ್ಸು ಮಾಡಿದರೆ ಈ ಜಾಲವನ್ನು ಹಿಡಿಯಬಹುದು” ಎಂದು ಸ್ಟ್ಯಾನ್ಲಿ ಅಭಿಪ್ರಾಯ ಪಟ್ಟರು.

ಹೆಣ್ಣು ಮಕ್ಕಳ ಜೀವನದಲ್ಲಿ ದೌರ್ಜನ್ಯ ನಡೆಸುವ ಈ ಪಿಂಪ್‌ಗಳು ಕೋಟ್ಯಾಂತರ ರೂಪಾಯಿ ಆದಾಯ ಗಳಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. “ಒಬ್ಬೊಬ್ಬ ಕಿಂಗ್ ಪಿಂಪ್ 150, 175 ಕೋಟಿ ಬೆಲೆ ಬಾಳುತ್ತಾರೆ. ಇವರು ಮುಂದೊಂದು ದಿನ ನಮ್ಮನ್ನು ಆಳುವವರಾಗುತ್ತಾರೆ. ಮಂಗಳೂರಿನಲ್ಲಿ ಒಬ್ಬ ಪಿಂಪ್ 175 ಕೋಟಿ ಬೆಲೆ ಬಾಳುತ್ತಾನೆ. ಆತ ಎಂಎಲ್‌ಎ ಆಗಲು ಕೂಡ ಪ್ರಯತ್ನಿಸಿದ್ದ. ಇನ್ನೊಬ್ಬ ಬೆಂಗಳೂರಿನ ಪಿಂಪ್ ರಾಜಕಾರಣಿಯ ಆಶ್ರಯದಲ್ಲಿದ್ದಾನೆ. ಇವರೆಲ್ಲಾ ತುಂಬಾ ಅಪಾಯಕಾರಿ. ನಮಗೆ ಜನರ ಬೆಂಬಲ ಇರೋದ್ರಿಂದ ನಾವು ಈ ಕೆಲಸದಲ್ಲಿ ಮುಂದುವರೆಯತ್ತಿದ್ದೇವೆ” ಎಂದರು.

ಮುಂದುವರಿದು, “ಇಂತಹ ಅಡಗುತಾಣಗಳನ್ನು ನಿರ್ಮಿಸಿಕೊಂಡಿರುವ ಕಟ್ಟಡಗಳನ್ನು ನಾಶಗೊಳಿಸಲು, ಕೆಡವಲು ಈಗಾಗಲೇ ಆದೇಶವಿದೆ. ಕಟ್ಟಡಗಳನ್ನು ಕೆಡವಿ, ತನಿಖೆ ನಡೆಸಲ ರಾಜ್ಯ ಮಾನವ ಹಕ್ಕುಗಳ ಆಯೋಗ ಆದೇಶ ನೀಡಿದೆ. ಎಲ್ಲ ಅಧಿಕಾರಿಗಳ ಬಗ್ಗೆ ಇದರ ಆರ್ಡರ್ ಕಾಪಿ ಇದೆ ಕ್ರಮ ಕೈಗೊಳ್ಳಬೇಕು ಅಷ್ಟೆ. ಒಂದೇ ಜಾಗದಲ್ಲಿ ಪುನರಾವರ್ತಿತ ಅಪರಾಧಗಳು ಮತ್ತು ಕಟ್ಟಡದ ನಕ್ಷೆ ಬದಲಿಸಿದ ಆರೋಪ ಸೇರಿ ಹಲವು ಅಪರಾಧಗಳಿಗೆ ಕಾರಣವಾಗುತ್ತದೆ. ಹಾಗಾಗಿ ಇದಕ್ಕೆ ಇರುವ ಕಾನೂನು ಬಳಸಿ ತೀವ್ರವಾದ  ಕ್ರಮ ತೆಗೆದುಕೊಳ್ಳಬೇಕು. ಮಹಿಳೆಯರನ್ನು ಮಾನವೀಯ ನೆಲೆಯಲ್ಲಿ ನೋಡಬೇಕು” ಎಂದರು.

ಮೈಸೂರಿನ ಒಡನಾಡಿ… ಒಂದು ಸಾಮಾಜಿಕ, ಸರ್ಕಾರೇತರ ಸಂಸ್ಥೆ. ಈ ಸಂಸ್ಥೆ ಲೈಂಗಿಕವಾಗಿ ಶೋಷಿಸಲ್ಪಟ್ಟ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸುವುದು, ಅವರಿಗೆ ಪುನರ್ವಸತಿ ಕಲ್ಪಿಸುವುದು, ಮಹಿಳೆಯರ ಸಬಲೀಕರಣ, ಇತ್ಯಾದಿ ಕೆಲಸಗಳನ್ನು ಮಾಡುತ್ತಿದೆ. ಈ ಸಂಸ್ಥೆಯನ್ನು 1984ರಲ್ಲಿ ಕೆ. ವಿ ಸ್ಟಾನ್ಲಿ ಮತ್ತು ಎಂ. ಎಲ್. ಪರಶುರಾಮ ಅವರು ಪ್ರಾರಂಭಿಸಿದರು. ಅದನ್ನು 1993 ರಲ್ಲಿ ಅಧಿಕೃತ ಸಂಸ್ಥೆಯಾಗಿ ನೋಂದಾಯಿಸಲಾಗಿದೆ.


ಇದನ್ನೂ ಓದಿ: ಹತ್ರಾಸ್ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೆ 1 ವರ್ಷ – ಸಂಪೂರ್ಣ ವಿವರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...