Homeಮುಖಪುಟಗೋವಾ ಚುನಾವಣೆ: ನಿರುದ್ಯೋಗಿಗಳಿಗೆ ಭತ್ಯೆ, ಸ್ಥಳೀಯರಿಗೆ 80% ಮೀಸಲಾತಿ - ಕೇಜ್ರಿವಾಲ್ ಘೋಷಣೆ

ಗೋವಾ ಚುನಾವಣೆ: ನಿರುದ್ಯೋಗಿಗಳಿಗೆ ಭತ್ಯೆ, ಸ್ಥಳೀಯರಿಗೆ 80% ಮೀಸಲಾತಿ – ಕೇಜ್ರಿವಾಲ್ ಘೋಷಣೆ

- Advertisement -
- Advertisement -

ಮುಂದಿನ ವರ್ಷ ಗೋವಾದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷ(ಎಎಪಿ) ಸ್ಪರ್ಧಿಸಲು ತಯಾರಾಗಿದೆ. ಅದಕ್ಕಾಗಿ ಪಕ್ಷವು ಈಗಾಗಲೆ ಸಿದ್ದತೆ ಪ್ರಾರಂಭಿಸಿದ್ದು, ತಾವು ಅಧಿಕಾರಕ್ಕೆ ಬಂದರೆ, ನಿರುದ್ಯೋಗ ಭತ್ಯೆ ₹ 3,000 ಮತ್ತು ಸ್ಥಳೀಯರಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ 80% ದಷ್ಟು ಮೀಸಲಾತಿ ನೀಡುತ್ತೇವೆ ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಮಂಗಳವಾರ ಘೋಷಿಸಿದ್ದಾರೆ.

ಇದೇ ರೀತಿಯ ಭರವಸೆಗಳನ್ನು ಉತ್ತರಾಖಂಡದ ಮತದಾರರಿಗೆ ಕೂಡಾ ಭಾನುವಾರ ಕೇಜ್ರಿವಾಲ್ ನೀಡಿದ್ದರು. ತಮ್ಮ ಪಕ್ಷಕ್ಕೆ ಮತಚಲಾಯಿಸಿದರೆ ಭ್ರಷ್ಟಾಚಾರದ ವಿರುದ್ಧ ಹೋರಾಡಲಿದ್ದು, ಪ್ರತಿ ಮನೆಯಿಂದ ಕನಿಷ್ಠ ಒಬ್ಬ ನಿರುದ್ಯೋಗಿ ಉದ್ಯೋಗ ಪಡೆಯುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ಅರವಿಂದ ಕೇಜ್ರಿವಾಲ್ ಮರು ಆಯ್ಕೆ

“ಗೋವಾ ಒಂದು ಸುಂದರ ರಾಜ್ಯ … ಜನರು ಒಳ್ಳೆಯವರು … ಮತ್ತು ದೇವರು ಗೋವಾಕ್ಕೆ ಎಲ್ಲವನ್ನೂ ಕೊಟ್ಟಿದ್ದಾನೆ. ಆದರೆ ರಾಜಕಾರಣಿಗಳು ಮತ್ತು ಪಕ್ಷಗಳು ಲೂಟಿ ಮಾಡಿದ್ದಾರೆ. ನಾವು ಈ ಲೂಟಿಯನ್ನು ನಿಲ್ಲಿಸಬೇಕು.ಇದಕ್ಕಾಗಿ ಒಂದು ವಿಸ್ತೃತವಾದ ಯೋಜನೆಯನ್ನು ಮಾಡಿದ್ದೇವೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ರಾಜ್ಯದ ಹಣಕಾಸು ಪರಿಸ್ಥಿತಿಯ ಮೇಲೆ ಕೊರೊನಾ ಪ್ರಭಾವವನ್ನು ಎತ್ತಿ ತೋರಿಸಿದ ಕೇಜ್ರಿವಾಲ್, ಇದರಿಂದಾಗಿ ತೊಂದರೆಗೊಳಗಾದ ಜನರಿಗೆ ನಿರುದ್ಯೋಗ ಭತ್ಯೆಗಳು, ಗಣಿಗಾರಿಕೆ ಉದ್ಯಮದ ಮೇಲೆ ನಿರ್ಬಂಧಗಳು ಮತ್ತು ನಿಷೇಧದಿಂದಾಗಿ ಉದ್ಯೋಗ ಕಳೆದುಕೊಂಡವರಿಗೆ ತಿಂಗಳಿಗೆ ₹ 5,000 ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ವಿಪಕ್ಷ ನಾಯಕರು ನಮ್ಮ ಕೆಲಸವನ್ನು ಹೊಗಳುತ್ತಿದ್ದಾರೆ-ಸಿಧು ಹೇಳಿಕೆಗೆ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ

 

ಗೋವಾದ ಹಾಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, “ಮುಖ್ಯಮಂತ್ರಿ ಪ್ರಮೋದ್‌ ಸಾವಂತ್ ಅವರು ಗೋವಾದಲ್ಲಿ ನೀರನ್ನು ಉಚಿತ ಮಾಡಿದ್ದಾರೆ ಎಂದು ನಾನು ಕೇಳಿದ್ದೇನೆ. ಇದು ಒಳ್ಳೆಯ ಸುದ್ದಿ, ಆದರೆ ಇದನ್ನು ನಾವು ನಾಲ್ಕು ವರ್ಷಗಳ ಹಿಂದೆ ದೆಹಲಿಯಲ್ಲಿ ಮಾಡಿದ್ದೆವು. ಅವರು ಮನೆ ಬಾಗಿಲಿಗೆ ನೀರು ವಿತರಣೆಯನ್ನು ಆರಂಭಿಸಿದ್ದಾರೆ ಎಂದು ನಾನು ಕೇಳಿದೆ… ಇದನ್ನು ನಾವು ಮೂರು ವರ್ಷಗಳ ಹಿಂದೆಯೆ ದೆಹಲಿಯಲ್ಲಿ ಮಾಡಿದ್ದೇವೆ” ಎಂದು ಹೇಳಿದ್ದಾರೆ.

‘‘ಪ್ರಮೋದ್‌ ಸಾವಂತ್ ಅವರು ಗೋವಾದಲ್ಲಿ ‘ದೆಹಲಿ ಮಾದರಿ’ಯನ್ನು ನಕಲು ಮಾಡುತ್ತಿದ್ದಾರೆ…ಮೂಲ ಪಕ್ಷವಾದ ಆಮ್ ಆದ್ಮಿಯೇ ಇರಬೇಕಾದರೆ… ನಕಲು ಮಾಡುವವರ ಅಗತ್ಯವೇನು?” ಎಂದು ಕೇಜ್ರಿವಾಲ್ ಹೇಳಿದ್ದಾರೆ.

300 ಯೂನಿಟ್ ವಿದ್ಯುತ್ ಉಚಿತ ಮತ್ತು ಮತದಾರರಿಗೆ 24 ಗಂಟೆಗಳ ವಿದ್ಯುತ್ ಪೂರೈಕೆಯ ಭರವಸೆಯನ್ನು ನೀಡಿದ್ದಾರೆ. ಕೇಜ್ರಿವಾಲ್ ಅವರು ಈ ಮಾದರಿಯನ್ನು ದೆಹಲಿಯಲ್ಲಿ ಇದನ್ನು ಕಾರ್ಯರೂಪಕ್ಕೆ ತಂದಿದ್ದು, ಉತ್ತರಾಖಂಡ್ ಮತ್ತು ಪಂಜಾಬ್ ಮತದಾರರಿಗೆ ಕೂಡಾ ಇದೇ ಭರವಸೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ಪೆಗಾಸಸ್ ಹಗರಣ: ಕೇಜ್ರಿವಾಲ್ ಸಹಾಯಕ, ಜಾರಿ ನಿರ್ದೇಶನಾಲಯದ ಅಧಿಕಾರಿ ಮೇಲೂ ಗೂಢಚರ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ 20,000 ನಾಗರಿಕರಿಂದ ಚುನಾವಣಾ ಆಯೋಗಕ್ಕೆ ಪತ್ರ

0
ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗೈದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸುಮಾರು 20,000 ಮಂದಿ ಚುನಾವಣಾ ಆಯೋಗಕ್ಕೆ ಎರಡು ಪ್ರತ್ಯೇಕ ಪತ್ರಗಳನ್ನು...